ಕೋವಿಡ್-19 ವೈರಸ್‌ : ಕ್ರೀಡೆಯನ್ನು ಊಹಿಸಲು ಅಸಾಧ್ಯ


Team Udayavani, Apr 27, 2020, 6:00 AM IST

ಕೋವಿಡ್-19 ವೈರಸ್‌ : ಕ್ರೀಡೆಯನ್ನು ಊಹಿಸಲು ಅಸಾಧ್ಯ

ಕೋವಿಡ್-19 ವೈರಸ್‌ ಉಂಟುಮಾಡುತ್ತಿರುವ ಹಾನಿಯನ್ನು ಊಹಿಸಲು ಸಾಧ್ಯವಿಲ್ಲ. ಇದು ಕೇವಲ ಭಾರತ ದೇಶಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಪ್ರಬಲ ಹೊಡೆತ ನೀಡುತ್ತಿದೆ. ಕ್ರೀಡೆ ಮಾತ್ರವಲ್ಲದೆ ವಿಶ್ವದ ಪ್ರತಿಯೊಂದು ಚಟುವಟಿಕೆಗೆ ಇದರಿಂದ ಅಪಾರ ಹಾನಿಯಾಗುತ್ತಿದೆ. ಈ ವೈರಸ್‌ನಿಂದ ಪಾರಾಗಲು ಹಲವಾರು ಕಟ್ಟುನಿಟ್ಟಿನ ನಿರ್ಬಂಧವನ್ನು ಸರಕಾರ ವಿಧಿಸಿದೆ. ಭವಿಷ್ಯದಲ್ಲಿಯೂ ವೈರಸ್‌ ಹರಡದಂತೆ ಕ್ರೀಡಾ ಕ್ಷೇತ್ರದಲ್ಲಿಯೂ ಹಲವಾರು ಹೊಸ ನಿಯಮಗಳು ಜಾರಿಗೆ ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇಂತಹ ನಿಯಮಗಳ ಬಗ್ಗೆ ಇಲ್ಲಿ ಅವಲೋಕನ ಮಾಡಲಾಗಿದೆ.

ಮಣಿಪಾಲ: ಕೋವಿಡ್-19 ವೈರಸ್‌ ಸೋಂಕಿನ ಅಪಾಯದಿಂದ ವಿಶ್ವವೇ ಪಾರಾದ ಬಳಿಕ ಸಹಜಜೀವನ ಪುನರಾರಂಭಗೊಂಡ ಬಳಿಕ ಕ್ರೀಡಾ ಕ್ಷೇತ್ರದಲ್ಲಿ ಆಗಬಹುದಾದ ಬದಲಾವಣೆಗಳನ್ನು ಊಹಿಸಲು ಅಸಾಧ್ಯ ವಾಗಿದೆ.

ಕೋವಿಡ್-19 ವೈರಸ್‌ ದಿಂದಾಗಿ ಕ್ರೀಡೆಯಲ್ಲಿ ಕೆಲವು ಹೊಸ ನಿಯಮಗಳು ಜಾರಿಗೆ ಬಂದರೂ ಅಚ್ಚರಿಪಡಬೇಕಾಗಿಲ್ಲ. ಕ್ರಿಕೆಟ್‌ ಕ್ರೀಡೆಯಲ್ಲಿ ಆಟಗಾರರು ಮುಂದಿನ ದಿನಗಳಲ್ಲಿ ಚೆಂಡಿಗೆ ಎಂಜಲು ಸವರುವುದು, ಹಸ್ತಲಾಘವ ಮಾಡುವುದಕ್ಕೆ ಬ್ರೇಕ್‌ ಬೀಳುವ ಸಾಧ್ಯತೆ ಇದೆ ಎಂದು ಕ್ರಿಕೆಟ್‌ ಪಂಡಿತರು ಅಂದಾಜಿಸಿದ್ದಾರೆ. ಇಂತಹ ಕೆಲವೊಂದು ನಿಯಮಗಳು ವಿವಿಧ ಕ್ರೀಡೆಗಳಲ್ಲಿ ಜಾರಿಗೆ ಬಂದರೆ ಕ್ರೀಡಾಕೂಟಗಳನ್ನು ನಡೆಸುವುದಾದರೂ ಹೇಗೆ ಎನ್ನುವ ಪ್ರಶ್ನೆ ಕ್ರೀಡಾಲೋಕದಲ್ಲಿ ಉದಯಿಸಿದೆ.

ಕೋವಿಡ್-19 ವೈರಸ್‌ ಆತಂಕದ ಆರಂಭದ ದಿನಗಳಲ್ಲಿ ನ್ಯೂಜಿಲ್ಯಾಂಡ್‌ ಮತ್ತು ಆಸ್ಟ್ರೇಲಿಯ ತಂಡದ ಆಟಗಾರರು ಹಸ್ತಲಾಘವ ಮಾಡುವ ಬದಲು ಮುಷ್ಟಿಯುದ್ಧದ ಮೂಲಕ ಒಬ್ಬರನ್ನೊಬ್ಬರು ಅಭಿನಂದಿಸಿದ್ದರು. ಇದೀಗ ಭವಿಷ್ಯದಲ್ಲಿ ಚೆಂಡಿಗೆ ಎಂಜಲು ಸವರುವುದನ್ನು ನಿಲ್ಲಿಸುವ ಸಲುವಾಗಿ ಭಾರೀ ಚರ್ಚೆಗಳು ನಡೆಯುತ್ತಿವೆ. ಒಂದು ವೇಳೆ ಈ ಪದ್ಧತಿ ನಿಲ್ಲಿಸಿದರೆ ಹೊಳಪಿಲ್ಲದ ಚೆಂಡಿನಲ್ಲಿ ಬೌಲಿಂಗ್‌ ಮಾಡಿದ ಬೌಲರ್‌ಗಳ ಬೌಲಿಂಗ್‌ ಸ್ವಿಂಗ್‌ ಆಗದೆ ಸಿಕ್ಕಾಪಟ್ಟೆ ರನ್‌ ಬಿಟ್ಟುಕೊಡುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ಪ್ರತಿಯಾಗಿ ಹೊಳಪನ್ನು ಪಡೆಯುವಂತಹ ಪದಾರ್ಥವನ್ನು ಬಳಸುವ ಅನಿವಾರ್ಯ ಬರಬಹುದು. ಇಲ್ಲದಿದ್ದರೆ ನೀರಿನ ಅಂಶವಿರುವ ಪುಟ್ಟ ಸಲಕರಣೆಯನ್ನು ಆಟಗಾರರಿಗೆ ಕೊಡುವ ವ್ಯವಸ್ಥೆಯೂ ಆಗಬಹುದು.

ಇನ್ನು ಸಾಮಾಜಿಕ ಅಂತರದ ನಿಯಮ ಜಾರಿಯಾದರೆ, ಬೌಲರ್‌ಗಳು ವಿಕೆಟ್‌ ಪಡೆದಾಗ ಸಹ ಆಟಗಾರರು ಅಪ್ಪಿಕೊಂಡು ಸಂಭ್ರಮ ಆಚರಿಸುವ ಪರಿಪಾಠಕ್ಕೂ ಪೂರ್ಣವಿರಾಮ ಬೀಳಬಹುದು. ಹಸ್ತಲಾಘವ ಮಾಡಿ ಕಿಸೆಯಲ್ಲಿನ ಸ್ಯಾನಿಟೈಸರ್‌ ತೆಗೆದುಕೊಂಡು ಶುಭ್ರಗೊಳಿಸಿಕೊಳ್ಳುವ ಕಾಲವೂ ಬರಬಹುದು!

ಟೆಸ್ಟ್‌  ನಲ್ಲಿ ಬಲು ಕಷ್ಟ
ಆಸ್ಟ್ರೇಲಿಯದ ವೇಗಿ ಜೋಶ್‌ ಹ್ಯಾಝಲ್‌ವುಡ್‌ ಪ್ರಕಾರ ಬಿಳಿ ಚೆಂಡಿನ ಸೀಮಿತ ಓವರ್‌ಗಳ ಪಂದ್ಯದಲ್ಲಿ ಎಂಜಲು ಒರೆಸದೆ ಯಶಸ್ವಿಯಾಗಬಹುದು. ಆದರೆ ದಿನಕ್ಕೆ 80ಕ್ಕಿಂತ ಅಧಿಕ ಓವರ್‌ಗಳ ಆಟ ನಡೆಯುವ ಟೆಸ್ಟ್‌ ನಲ್ಲಿ ಎಂಜಲು ಒರೆಸುವ ಕ್ರಮಕ್ಕೆ ಕಡಿವಾಣ ಹಾಕಿದರೆ ಬ್ಯಾಟ್ಸ್‌ ಮನ್‌ಗಳಿಗೆ ತಡೆಯೊಡ್ಡುವುದು ಬಲು ಕಷ್ಟ. ಒಂದು ವೇಳೆ ಈ ನಿಯಮವನ್ನು ಟೆಸ್ಟ್‌ನಲ್ಲಿ ಬಳಸಿದ್ದೇ ಆದಲ್ಲಿ ಪ್ರತಿ 20 ಓವರ್‌ಗಳಿಗೆ ಬದಲಿ ಚೆಂಡನ್ನು ಬಳಸಬೇಕಾಗಿ ಬರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕ್ರಿಕೆಟೇತರ ಕ್ರೀಡೆಯ ಭವಿಷ್ಯವೇನು?
ಕ್ರಿಕೆಟ್‌ ಆಟದಲ್ಲಿ ಕೆಲ ಬದಲಾವಣೆ ತಂದರೆ ಅಚ್ಚರಿ ಪಡಬೇಕಿಲ್ಲ. ಆದರೆ ಕ್ರಿಕೆಟ್‌ ಹೊರತುಪಡಿಸಿ ಉಳಿದ ಕ್ರೀಡೆಗಳನ್ನು ಕನಸಿನಲ್ಲಿಯೂ ಊಹಿಸಲು ಸಾಧ್ಯವಿಲ್ಲ. ಯುರೋಪ್‌, ಅಮೆರಿಕಗಳಲ್ಲಿ ಜನಪ್ರಿಯ ಕ್ರೀಡೆಯಾದ ಫ‌ುಟ್ಬಾಲ್‌ನಲ್ಲಿ ಸಾಮಾಜಿಕ ಅಂತರದ ನಿಯಮ ಬಂದರೆ ಬಹಳಷ್ಟು ಬದಲಾವಣೆಗಳಾಗಬಹುದು. ಒಬ್ಬ ಆಟಗಾರ ಗೋಲು ಗಳಿಸಿದಾಗ ಉಳಿದವರು ಆತನ ಮೇಲೆ ಮುಗಿಬಿದ್ದು ಸಂಭ್ರಮಿಸುವ ಪರಿಯು ಇನ್ನು ಇತಿಹಾಸದ ಪುಟ ಸೇರಬಹುದು. ರಗಿº, ಹಾಕಿ, ಕಬಡ್ಡಿ, ಮತ್ತಿತರ ಎಲ್ಲ ಗುಂಪು ಕ್ರೀಡೆಗಳಲ್ಲಿ ಭವಿಷ್ಯದಲ್ಲಿ ಅಚ್ಚರಿಯ ಬದಲಾವಣೆಯಾದರೂ ನಾವು ಅದನ್ನೂ ಒಪ್ಪಲೇಬೇಕಾದ ಸ್ಥಿತಿ ಬರಬಹುದು.

ಸೀಮಿತ ಪ್ರೇಕ್ಷಕರಿಗೆ ಅವಕಾಶ?
ಈಗಾಗಲೆ ಮುಚ್ಚಿದ ಕ್ರೀಡಾಂಗಣದಲ್ಲಿ ಕ್ರೀಡಾಕೂಟವನ್ನು ನಡೆಸುವ ಚಿಂತನೆ ನಡೆಯುತ್ತಿದೆ. ಈ ಮಧ್ಯೆ ಒಂದು ವೇಳೆ ಕೋವಿಡ್-19 ವೈರಸ್‌ ದಿನಗಳಲ್ಲಿ ಪಂದ್ಯ ವೀಕ್ಷಣೆಗೆ ಪ್ರೇಕ್ಷಕರಿಗೆ ಅನುವು ಮಾಡಿಕೊಟ್ಟು ಕೆಲವು ಕಠಿನ ನಿರ್ಬಂಧವನ್ನು ವಿಧಿಸಬಹುದು. ಮೈದಾನಕ್ಕೆ ಬರುವ ಪ್ರೇಕ್ಷಕರನ್ನು ಹಲವು ಸುತ್ತುಗಳ ಭದ್ರತಾ ತಪಾಸಣೆಗಳಿಗೆ ಒಳಪಡಿಸಬಹುದು. ಥರ್ಮಲ್‌ ಸ್ಕ್ರೀನಿಂಗ್‌, ಮಾಸ್ಕ್, ಸ್ಯಾನಿಟೈಸರ್‌ ಬಳಕೆ ಕಡ್ಡಾಯವಾಗಬಹುದು. ಉಳಿದಂತೆ ಕ್ರೀಡಾಂಗಣಗಳ ಗ್ಯಾಲರಿಗಳ ವಿಸ್ತಾರವನ್ನು ಹಿಗ್ಗಿಸಿ, ಆಸನಗಳ ನಡುವಿನ ಅಂತರ ಹೆಚ್ಚಿಸಬಹುದು. ಇದರಿಂದಾಗಿ ಆಗುವ ನಷ್ಟವನ್ನು ಟಿಕೆಟ್‌ಗಳ ಬೆಲೆ ಏರಿಸಿ ಭರಿಸಿಕೊಳ್ಳುವ ಯೋಜನೆಯನ್ನು ಆಯೋಜಕರು ಮಾಡಬಹುದೇನೋ?

ವೈಯಕ್ತಿಕ ಕ್ರೀಡೆಗಳಾದ ಕುಸ್ತಿ, ಕರಾಟೆ, ಬಾಕ್ಸಿಂಗ್‌ಗಳಲ್ಲಿ ಏನು ಮಾಡಬಹುದು ಎಂಬುದು ಕಲ್ಪನೆಗೆ ಮೀರಿದ್ದು. ಕೈ ಕೈ ಮಿಲಾಯಿಸಲಾಗುವ ಈ ಕ್ರೀಡೆಗಳಲ್ಲಿ ಸಾಮಾಜಿಕ ಅಂತರದ ನಿಯಮ ಜಾರಿ ಕಷ್ಟ. ಕಬಡ್ಡಿಯಲ್ಲೂ ಬದಲಾವಣೆ ಕಷ್ಟ! ಅಲ್ಲಿ ಸಾಮಾಜಿಕ ಅಂತರದ ಪ್ರಶ್ನೆಯೇ ಬರುವುದಿಲ್ಲ! ಇದೆಲ್ಲವೂ ಈಗ ಸುಮ್ಮನೆ ಊಹಿಸಿಕೊಳ್ಳುತ್ತಿರುವುದಷ್ಟೇ. ಈಗಾಗಲೇ ಕೆಲ ಪ್ರಮುಖ ಟೂರ್ನಿಗಳನ್ನು ರದ್ದುಪಡಿಸಿ ಅಲ್ಲವೆ ಮುಂದೂಡಿ ಕೆಲ ಕ್ರೀಡಾ ಸಂಸ್ಥೆಗಳು ಭಾರೀ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.

ಟೋಕಿಯೊ ಒಲಿಂಪಿಕ್ಸ್‌ ಮುಂದೂಡಲ್ಪಟ್ಟರೆ ಕ್ರಿಕೆಟ್‌ ಆಸ್ಟ್ರೇಲಿಯ ತನ್ನ ನಷ್ಟವನ್ನು ಭರಿಸುವ ನಿಟ್ಟಿನಲ್ಲಿ ಭಾರತ ವಿರುದ್ಧದ ಐಸಿಸಿ ಟೆಸ್ಟ್‌ ಸರಣಿಯ ನಾಲ್ಕು ಪಂದ್ಯಗಳ ಸರಣಿಯನ್ನು ಐದಕ್ಕೆ ಏರಿಸುವ ಚಿಂತನೆ ನಡೆಸಿದೆ. ಒಂದು ಟೂರ್ನಿ ರದ್ದುಗೊಂಡರೆ ಕೇವಲ ಟೂರ್ನಿಯನ್ನು ಆಯೋಜಿಸಿದ ಕ್ರೀಡಾ ಸಂಸ್ಥೆಗೆ ಮಾತ್ರವಲ್ಲದೆ ಟೂರ್ನಿಗೆ ಬಂಡವಾಳ ಹೂಡಿದ ಪ್ರಸಾರಕರು, ಮಾಲಕರು, ಹೊಟೇಲ್‌ ಉದ್ಯಮಕ್ಕೂ ಭಾರೀ ಹೊಡೆತ ಬೀಳಲಿದೆ. ಒಂದೊಮ್ಮೆ ಎಲ್ಲವೂ ಮೊದಲಿನ ಹಾದಿಗೆ ಬಂದ ಅನಂತರ ಕ್ರೀಡಾ ಸಂಸ್ಥೆಗಳಲ್ಲಿ ಏನೇನು ಚರ್ಚೆಗಳು ನಡೆಯುತ್ತವೆಯೋ ಗೊತ್ತಿಲ್ಲ.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

ICC

Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್‌ ಹಂತಕ್ಕೇರಿದರೆ?

1-sq

Squash event: ಭಾರತದ ಅನಾಹತ್‌,ಮಲೇಷ್ಯಾದ ಚಂದರನ್‌ ಚಾಂಪಿಯನ್‌

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.