ವಾಣಿಜ್ಯ ತೆರಿಗೆ ಆದಾಯ ಖೋತಾ : ಕೋವಿಡ್ 19 ವೈರಸ್ ಎಫೆಕ್ಟ್ ಭೀತಿ
ಅಬಕಾರಿ ಹೊರತುಪಡಿಸಿ ಉಳಿದ ಮೂರು ತೆರಿಗೆ ಮೂಲದ ಆದಾಯ ಕಡಿತ
Team Udayavani, Apr 2, 2020, 6:32 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೆಂಗಳೂರು: ಆರ್ಥಿಕ ಶಿಸ್ತು ಪಾಲನೆ ಮೂಲಕ ಪ್ರತಿವರ್ಷ ಬಹುಪಾಲು ಗುರಿ ತಲುಪುತ್ತಿದ್ದ ವಾಣಿಜ್ಯ ತೆರಿಗೆ ಆದಾಯದಲ್ಲಿ ಕಳೆದ 2019-20ನೇ ಸಾಲಿನಲ್ಲಿ ಸುಮಾರು 3,908 ಕೋ. ರೂ. ಖೋತಾ ಉಂಟಾಗಿದೆ. ಮಾ. 31ಕ್ಕೆ ಮುಕ್ತಾಯವಾದ ಕಳೆದ ಹಣಕಾಸು ವರ್ಷದಲ್ಲಿ ಅಬಕಾರಿ ತೆರಿಗೆ ಮಾತ್ರ ನಿಗದಿತ ಗುರಿ ತಲುಪಿ ಹೆಚ್ಚುವರಿಯಾಗಿ 450 ಕೋ. ರೂ. ಆದಾಯ ಸಂಗ್ರಹಿಸಿದೆ.
ಮುದ್ರಾಂಕ ಮತ್ತು ನೋಂದಣಿ ಹಾಗೂ ಸಾರಿಗೆ ತೆರಿಗೆ ಗುರಿಯಲ್ಲಿ ಕ್ರಮವಾಗಿ 600 ಕೋ. ರೂ. ಹಾಗೂ 450 ಕೋ. ರೂ. ಕಡಿತವಾಗಿದೆ. ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಲಾಕ್‌ಡೌನ್ ವ್ಯವಸ್ಥೆ ಮುಂದುವರಿದರೆ ತೆರಿಗೆ ಆದಾಯದಲ್ಲಿ ಇನ್ನಷ್ಟು ಖೋತಾ ಆಗಲಿದೆ.
ಗುರಿ ತಲುಪದ ವಾಣಿಜ್ಯ ತೆರಿಗೆ
ಜಿಎಸ್‌ಟಿ ಸಂಗ್ರಹದಲ್ಲೂ ಶೇ.14ರಷ್ಟು ಪ್ರಗತಿ ಸಾಧಿಸಿರುವ ಕಾರಣ 2019-20ನೇ ಸಾಲಿನಲ್ಲೂ ನಿಗದಿತ 76,046 ಕೋ.ರೂ. ತೆರಿಗೆ ಸಂಗ್ರಹ ನಿರೀಕ್ಷೆಯಿತ್ತು. ಅದರಂತೆ ವಾಣಿಜ್ಯ ತೆರಿಗೆ ಮೂಲದಿಂದ 72,138 ಕೋ.ರೂ. ಸಂಗ್ರಹವಾಗಿದೆ.
ವಾಣಿಜ್ಯ ತೆರಿಗೆ ಗುರಿ ತಲುಪಲು ವಿಫಲವಾಗಿರುವುದಕ್ಕೆ ಕೇಂದ್ರ ಸರಕಾರದ ಪರಿಹಾರ ಮೊತ್ತ ಕಡಿತವೇ ಕಾರಣವಾಗಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಕಳೆದ ಸಾಲಿನಲ್ಲಿ ಜಿಎಸ್‌ಟಿ ಪರಿಹಾರವಾಗಿ ಕೇಂದ್ರ 4,500 ಕೋ. ರೂ. ನೀಡಬೇಕಿತ್ತು. ಆದರೆ ಕೊನೆ ಕ್ಷಣದವರೆಗೆ 4,500 ಕೋ. ರೂ. ಬಿಡುಗಡೆಯಾಗದ ಕಾರಣ ವಾಣಿಜ್ಯ ತೆರಿಗೆಯಡಿ ನಿಗದಿತ ಗುರಿ ತಲುಪುವಲ್ಲಿ ಹಿನ್ನಡೆಯಾಗಿದೆ.
ಅಬಕಾರಿ: ಗುರಿ ಮೀರಿದ ಸಾಧನೆ
ಅಬಕಾರಿ ತೆರಿಗೆ ಆದಾಯದಿಂದ ಕಳೆದ ಸಾಲಿನಲ್ಲಿ 20,750 ಕೋ. ರೂ. ನಿರೀಕ್ಷಿಸಲಾಗಿತ್ತು. ಕಳೆದ ಮಾ. 16ರಂದೇ ನಿಗದಿತ ಗುರಿಯಷ್ಟು ತೆರಿಗೆ ಸಂಗ್ರಹವಾಗಿದ್ದು, ಮಾ. 24ರ ವರೆಗೆ 21,400 ಕೋ. ರೂ. ಸಂಗ್ರಹವಾಗಿದ್ದು, ಆ ಮೂಲಕ ಗುರಿ ಮೀರಿದ ಸಾಧನೆ ದಾಖಲಿಸಿದೆ.
ಗುರಿ ತಲುಪುವಲ್ಲಿ ವಿಫಲ
ಮುದ್ರಾಂಕ ಮತ್ತು ನೋಂದಣಿ ಶುಲ್ಕ ಹಾಗೂ ಸಾರಿಗೆ ತೆರಿಗೆ ಮೂಲದಿಂದ ನಿಗದಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಮುದ್ರಾಂಕ ಮತ್ತು ನೋಂದಣಿ ಶುಲ್ಕದಡಿ ನಿರೀಕ್ಷಿತ ಆದಾಯದಲ್ಲಿ 600 ಕೋ.ರೂ. ಖೋತಾ ಆಗಿದೆ. ಸಾರಿಗೆ ತೆರಿಗೆ ಮೂಲದಿಂದ ನಿಗದಿತ ಗುರಿಯಲ್ಲಿ 450 ಕೋ. ರೂ. ಸಂಗ್ರಹಿಸುವಲ್ಲಿ ಇಲಾಖೆ ವಿಫಲವಾಗಿದೆ.
1,000 ಕೋ. ರೂ. ಖೋತಾ
ಲಾಕ್‌ಡೌನ್ ವ್ಯವಸ್ಥೆ ಜಾರಿಯಿಂದಾಗಿ ಕಳೆದ ಸಾಲಿನಲ್ಲಿ ಮೂರೂ ತೆರಿಗೆ ಮೂಲದಿಂದ ಸುಮಾರು 1,000 ಕೋ. ರೂ. ತೆರಿಗೆ ಆದಾಯ ಖೋತಾ ಆಗಿದೆ ಎಂದು ಮೂಲಗಳು ಹೇಳಿವೆ. ಸಾಮಾನ್ಯವಾಗಿ ಆರ್ಥಿಕ ವರ್ಷದ ಕೊನೆ ಹಂತದ ಮಾರ್ಚ್ ತಿಂಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಹೆಚ್ಚಾಗಿರುತ್ತದೆ.
ಆದರೆ ಮಾ.15ರಿಂದ ಆಯ್ದ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡಿದ್ದು ಬಳಿಕ ಲಾಕ್‌ಡೌನ್ ವ್ಯವಸ್ಥೆಯಿಂದಾಗಿ ಆಸ್ತಿ ನೋಂದಣಿ ಸ್ಥಗಿತಗೊಂಡಿದ್ದು, ಸುಮಾರು 400 ಕೋ. ರೂ. ಆದಾಯ ಕೈತಪ್ಪಿದಂತಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಮಾ. 24ರ ಮಧ್ಯರಾತ್ರಿಯಿಂದ ಮದ್ಯ ಮಾರಾಟ ಸಂಪೂರ್ಣ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಸುಮಾರು 300 ಕೋ. ರೂ. ಆದಾಯ ಖೋತಾ ಆಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಎಸ್-4 ಮಾದರಿಯ ವಾಹನ ಮಾರಾಟ ಹೆಚ್ಚಾದರೆ ಉತ್ತಮ ತೆರಿಗೆ ಆದಾಯ ಸಂಗ್ರಹವಾಗುವ ನಿರೀಕ್ಷೆ ಇತ್ತಾದರೂ ಅದೂ ಸಾಧ್ಯವಾಗಿಲ್ಲ ಎನ್ನುತ್ತವೆ ಸಾರಿಗೆ ಇಲಾಖೆ ಮೂಲಗಳು.
– ಎಂ. ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.