ಕುರ್ಕಾಲು :ಗಿರಿನಗರದ ಒಂದೇ ಕುಟುಂಬದ ಐದು ಮಂದಿಯಲ್ಲಿ ಸೋಂಕು ದೃಢ ; 12 ಮನೆ ಸೀಲ್‌ಡೌನ್
Team Udayavani, Jul 7, 2020, 8:32 PM IST
ಕಾಪು : ಕಾಪು ತಾಲೂಕಿನ ಕುರ್ಕಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಗಿರಿನಗರದ ಒಂದೇ ಕುಟುಂಬದ ಐದು ಮಂದಿಗೆ ಮಂಗಳವಾರ ಕೋವಿಡ್ ಪಾಸಿಟಿವ್ ಧೃಢ ಪಟ್ಟಿದೆ.
ಕುರ್ಕಾಲು ಗಿರಿನಗರದ ಒಂದೇ ಕುಟುಂಬದ 32 ವರ್ಷ ಪ್ರಾಯದ ಗಂಡಸು ಮತ್ತು ಮಹಿಳೆ, 13 ವರ್ಷದ ಬಾಲಕ ಹಾಗೂ 9 ಮತ್ತು 7 ವರ್ಷದ ಬಾಲಕಿಯರಿಗೆ ಕೋವಿಡ್ ಸೋಂಕು ಧೃಢಪಟ್ಟಿದ್ದು ಅವರನ್ನು ಚಿಕಿತ್ಸೆಗಾಗಿ ಉಡುಪಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಂದೇ ಕುಟುಂಬದ ಐದು ಮಂದಿಗೆ ಕೋವಿಡ್ ಧೃಡಪಟ್ಟಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕೋವಿಡ್ ಪಾಸಿಟಿವ್ ಹಿನ್ನೆಲೆಯಲ್ಲಿ ಗಿರಿನಗರ ಕಾಲೊನಿಯಲ್ಲಿ ವಾಸಿಸುತ್ತಿರುವ 64 ಮಂದಿಯ 12 ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಆ ಪ್ರದೇಶವನ್ನು ಕಂಟೈನ್ಮೆಂಟ್ ವಲಯವನ್ನಾಗಿ ಘೋಷಿಸಲಾಗಿದೆ.
ಕುಂದಾಪುರದಿಂದ ಬಂದು ಹೋಗಿದ್ದ ಬಾಲಕಿಯ ಮೂಲಕ ಪ್ರಸಾರ ? : ಕುಂದಾಪುರದಿಂದ ಕುರ್ಕಾಲು ಗಿರಿನಗರಕ್ಕೆ ಆಗಮಿಸಿದ್ದ ಹುಡುಗಿಯೋರ್ವಳು ಮರಳಿ ಕುಂದಾಪುರಕ್ಕೆ ತೆರಳಿದ ಸಂದರ್ಭ ಆಕೆಯನ್ನು ಶೀತ ಜ್ವರ ಕಾಡಿದ ಹಿನ್ನೆಲೆಯಲ್ಲಿ ಆಕೆಯನ್ನು ಅಲ್ಲಿಯೇ ಕೋವಿಡ್ ಟೆಸ್ಟ್‌ಗೆ ಒಳಪಡಿಸಲಾಗಿತ್ತು. ಕೋವಿಡ್ ಟೆಸ್ಟ್ ವೇಳೆ ಬಾಲಕಿಗೆ ಕೋವಿಡ್ ಪಾಸಿಟಿವ್ ಧೃಡಪಟ್ಟಿದ್ದ ಹಿನ್ನೆಲೆಯಲ್ಲಿ ಗಿರಿನಗರ ಕಾಲೊನಿಯ ಒಂದೇ ಕಂಪೌಂಡ್‌ನಲ್ಲಿ ವಾಸಿಸುತ್ತಿರುವ ಒಂದೇ ಕುಟುಂಬದ ಮೂರು ಮನೆಯ 20 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ ಐದು ಮಂದಿಗೆ ಕೋವಿಡ್ ಪಾಸಿಟಿವ್ ಧೃಢ ಪಟ್ಟಿದ್ದು ಉಳಿದವರ ವರದಿಗಾಗಿ ಕಾಯಲಾಗುತ್ತಿದೆ.
ಕುರ್ಕಾಲು ಗ್ರಾಮ ಕರಣಿಕ ಕ್ಲಾರೆನ್ಸ್ ಲೆಸ್ಟರ್ನ್, ಗ್ರಾ.ಪಂ. ಸಿಬಂದಿ ಸತೀಶ್ ಪೂಜಾರಿ, ಆಶಾ ಕಾರ್ಯಕರ್ತೆ ಕಲಾವತಿ, ಎಎನ್‌ಎಂ ಅಶ್ವಿನಿ, ಪೊಲೀಸ್ ಸಿಬಂದಿ ವಿನೋದ್ ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳೀಯರಲ್ಲಿ ಮುಂಜಾಗ್ರತೆಯ ಜೊತೆಗೆ ಎಚ್ಚರ ವಹಿಸುವಂತೆ ಸೂಚನೆ ನೀಡಿದ್ದಾರೆ.
ಕಟಪಾಡಿಯಲ್ಲಿ ಪಾಸಿಟಿವ್ ಪತ್ತೆ
ಕಟಪಾಡಿ: ಮೂಡಬೆಟ್ಟುವಿನಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದ್ದ ಹತ್ತು ವರ್ಷದ ಬಾಲಕಿಗೆ ಮಂಗಳವಾರ ಕೊರೊನಾ ಪಾಸಿಟಿವ್ ಧೃಡ ಪಟ್ಟಿದೆ.
ಮೂಡಬೆಟ್ಟುವಿನ ಮನೆಗೆ ಮಹಾರಾಷ್ಟ್ರದಿಂದ ೭-೮ ಮಂದಿ ಆಗಮಿಸಿದ್ದು ಅವರಲ್ಲಿ ಮೂರು ಮಂದಿಗೆ ಕೊರೊನಾ ಟೆಸ್ಟ್ ನಡೆಸಲಾಗಿತ್ತು. ಇವರಲ್ಲಿ ಬಾಲಕಿಗೆ ಪಾಸಿಟಿವ್ ಬಂದಿದ್ದು ಆಕೆಯನ್ನು ಉಡುಪಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಅವರು ವಾಸಿಸುತ್ತಿದ್ದ ಮನೆಯನ್ನು ಕಂಟೆನ್‌ಮೆಂಟ್ ವಲಯಗಳನ್ನಾಗಿ ಘೋಷಿಸಲಾಗಿದ್ದು, ಸೀಲ್ ಡೌನ್ ಮಾಡಲಾಗಿದೆ.
ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್, ಕಂದಾಯ ಪರಿವೀಕ್ಷಕ ರವಿಶಂಕರ್ ಅವರ ಮಾರ್ಗದರ್ಶನದಲ್ಲಿ ಕುರ್ಕಾಲಿನಲ್ಲಿ ಗ್ರಾಮ ಕರಣಿಕ ಕ್ಲಾರೆನ್ಸ್ ಲೆಸ್ಟರ್ನ್, ಗ್ರಾ.ಪಂ. ಸಿಬಂದಿ ಸತೀಶ್ ಪೂಜಾರಿ, ಆರೋಗ್ಯ ಸಿಬಂದಿಗಳಾದ ಅಶ್ವಿನಿ, ಕಲಾವತಿ, ಪೊಲೀಸ್ ಇಲಾಖೆಯ ವಿನೋದ್, ಕಟಪಾಡಿಯಲ್ಲಿ ಪಿಡಿಒ ಇನಾಯತ್ ಬೇಗ್, ಗ್ರಾಮ ಕರಣಿಕ ಡೇನಿಯಲ್ ಡಿ. ಸೋಜ, ಎಎಸ್ಸೈ ದಯಾನಂದ್, ಆರೋಗ್ಯ ಸಿಬಂದಿಗಳಾದ ಜಯಶ್ರೀ, ಅಮಿತಾ ಮೊದಲಾದವರು ಕಂಟೋನ್ಮೆಂಟ್ ವಲಯಗಳಿಗೆ ಬೇಟಿ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.