ಕೋವಿಡ್ ಗೆಲ್ಲಲು ಸಿದ್ಧತೆ : ಉಳ್ಳಾಲ, ಮೂಡುಬಿದಿರೆಯಲ್ಲಿ ಸರ್ವ ಪ್ರಯತ್ನ ನಡೆದಿದೆ
Team Udayavani, May 15, 2021, 6:30 AM IST
ಮೂಡುಬಿದಿರೆ ಕ್ಷೇತ್ರದಲ್ಲಿ ಹಲವು ಸಂಘಟನೆಗಳು ಹಾಗೂ ಸಂಸ್ಥೆಗಳು ಕೊರೊನಾ ಎದುರಿಸಲು ಸಿದ್ಧವಾಗಿದ್ದರೆ, ಉಳ್ಳಾಲದಲ್ಲಿ ಗ್ರಾಮೀಣ ಕಾರ್ಯ ಪಡೆಯ ಕಾರ್ಯ ದಕ್ಷತೆಗೇ ಹೆಚ್ಚು ಒತ್ತು ಕೊಡಲಾಗಿದೆ. ಈ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಮುಂಜಾಗ್ರತೆಗೆ ಹೆಚ್ಚು ಒತ್ತು ನೀಡಲಾಗಿದೆ.
ಯು.ಟಿ. ಖಾದರ್, ಶಾಸಕರು, ಉಳ್ಳಾಲ :
1. ನಿಮ್ಮ ಕ್ಷೇತ್ರದಲ್ಲಿ ಕೋವಿಡ್ 19ರ ವಿಷಮ ಪರಿಸ್ಥಿತಿ ನಿಭಾವಣೆಗೆ ಪೂರ್ವಸಿದ್ಧತೆ ಹೇಗೆ ನಡೆದಿದೆ?
ವಾರ್ಡ್, ಗ್ರಾಮ ಮಟ್ಟದ ಟಾಸ್ಕ್ಪೋರ್ಸ್ ರಚಿಸಲಾಗಿದೆ.ಪ್ರತೀ ಪಂಚಾಯತ್/ವಾರ್ಡ್ ವ್ಯಾಪ್ತಿಗೆ ಒಂದು ವಾಹನವನ್ನು ಮೀಸಲಿ ಡಲಾಗಿದೆ. ಕೊರೊನಾ ಪರೀಕ್ಷೆಗೆ ಆರೋಗ್ಯ ಕೇಂದ್ರಕ್ಕೆ ಹೋದ ದಿನವೇ ಆಯಾ ಪ್ರದೇಶದ ಟಾಸ್ಕ್ಪೋರ್ಸ್‌ಗೆ ಮಾಹಿತಿ ನೀಡಿ ಸಂಬಂಧ ಪಟ್ಟವರು ಪರೀಕ್ಷಾ ವರದಿ ಬರುವವರೆಗೆ ಬೇರೆಲ್ಲೂ ತಿರುಗಾಡದಂತೆ ಸೂಚಿಸಿ ಸೋಂಕು ಹರಡದಂತೆ ಎಚ್ಚರ ವಹಿಸಲಾಗಿದೆ. ಟ್ರೇಸಿಂಗ್ ಮಾಡುವ ಹೊಣೆಯನ್ನು ಆಯಾ ಭಾಗದ ಶಿಕ್ಷಕರಿಗೆ ವಹಿಸಲಾಗಿದೆ. ಉಳ್ಳಾಲ ನಗರಸಭೆ, ಸೋಮೇಶ್ವರ ಪುರಸಭೆ ಹಾಗೂ ಪ್ರತೀ ಪಂಚಾಯತ್‌ನಲ್ಲಿ ವಾರ್‌ರೂಂ ಗಳು ಕಾರ್ಯ ನಿರತವಾಗಿವೆ.
2. ಜಿಲ್ಲಾಡಳಿತ, ತಾಲೂಕು ಆಡಳಿತ ಹೊರತುಪಡಿಸಿ ದಂತೆ ಸ್ಥಳೀಯರನ್ನು ಒಗ್ಗೂಡಿಸಿ ಪರ್ಯಾಯ ವ್ಯವಸ್ಥೆ (ಪ್ಲ್ರಾನ್ ಬಿ) ರೂಪಿಸಿದ್ದೀರಾ?
ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೊಪತಿಕ್ ಆಸ್ಪತ್ರೆಯ ಸಹಯೋಗದಲ್ಲಿ ಸುಸಜ್ಜಿತ 60 ಬೆಡ್‌ಗಳ ಕೇರ್ ಸೆಂಟರ್ ಅನ್ನು ಆರಂಭಿಸಲಾಗಿದೆ. ಅಲ್ಲಿ ಉಚಿತ ಚಿಕಿತ್ಸೆ, ಆಹಾರ ವ್ಯವಸ್ಥೆ ಇರಲಿದೆ. ನೋಡಲ್ ಸೆಂಟರ್ ಆದ ದೇರಳಕಟ್ಟೆಯ ಬೆಳ್ಮ ಗ್ರಾ.ಪಂಗೆ ಸಂಪರ್ಕಿ ಸಿದರೆ ಕೇರ್ ಸೆಂಟರ್‌ಗೆ ದಾಖಲಿಸಲಾಗುತ್ತದೆ. 100 ಬೆಡ್‌ಗಳ ಸಾಮರ್ಥಯದ ಕೊಣಾಜೆ ವಿ.ವಿ. ಮಹಿಳಾ ಹಾಸ್ಟೆಲ್ ಅನ್ನು ಕೂಡ ಕೋವಿಡ್ ಕೇರ್ ಸೆಂಟರ್‌ಗೆ ಮೀಸಲಿಡಲಾಗಿದೆ.
3. ಸೋಂಕು ಹರಡದಂತೆ ಜನರಲ್ಲಿ ಜಾಗೃತಿ ಮೂಡಿ ಸುವ ಕೆಲಸವನ್ನು ಹೇಗೆ ಮಾಡುತ್ತಿದ್ದೀರಿ? ಖುದ್ದಾಗಿ ವಿಶೇಷ ಕ್ರಮಗಳನ್ನು ಕೈಗೊಂಡಿದ್ದೀರಾ?
ಕೊರೊನಾ ಬಂದ ಬಳಿಕ ಚಿಕಿತ್ಸೆ ಒದಗಿಸುವ ಮೊದಲು, ಕೊರೊನಾ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದೇ ಮುಖ್ಯ. ಒಬ್ಬ ಪಾಸಿಟಿವ್ ವ್ಯಕ್ತಿಯಿಂದ ಸುಮಾರು 22 ಮಂದಿಗೆ ಅದು ಹರಡ ಬಹುದು. ಹಾಗಾಗಿ ಪರೀಕ್ಷೆ ಮಾಡಿದವರು, ಪಾಸಿಟಿವ್ ಬಂದವರು ಆದಷ್ಟು ಪ್ರತ್ಯೇಕವಾಗಿ ಇರುವಂತೆ ಮಾಡುವ ಬಗ್ಗೆ ಹೆಚ್ಚು ಆದ್ಯತೆ ನೀಡಿದ್ದೇವೆ. ಜನತೆಗೆ ಲಸಿಕೆ ಪಡೆಯುವಲ್ಲಿ ಸಹಾಯ ಮಾಡಲು ಉಳ್ಳಾಲ ನಗರಸಭೆಯ ವಾರ್‌ರೂಂನಲ್ಲಿ ಪ್ರತ್ಯೇಕ ಹೆಲ್ಪ್ಲೈನ್ ಆರಂಭಿಸಲಾಗಿದೆ.
4. ಪ್ರತಿ ಜಿಲ್ಲೆಯಲ್ಲೂ ಸಾಮಾನ್ಯವಾಗಿ ಕೇಳಿ ಬರು ತ್ತಿರುವ ಸಮಸ್ಯೆ ಆಕ್ಸಿಜನ್ ಕೊರತೆ, ಹಾಸಿಗೆಗಳ ಕೊರತೆ- ನಿಮ್ಮಲ್ಲಿ ಯಾವ ಕ್ರಮ ಕೈಗೊಂಡಿದ್ದೀರಿ?
ಸದ್ಯಕ್ಕೆ ಆಕ್ಸಿಜನ್, ವೆಂಟಿಲೇಟರ್ ಕೊರತೆ ಇಲ್ಲ. ವೆನಾÉಕ್ ಸರಕಾರಿ ಆಸ್ಪತ್ರೆಯಲ್ಲಿ ಒಟ್ಟು 350 ಬೆಡ್‌ಗಳನ್ನು ಸಿದ್ಧಪಡಿಸಲಾಗಿದೆ. ಜತೆಗೆ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಯೇನಪೋಯ ಆಸ್ಪತ್ರೆಯ ಸಹಭಾಗಿತ್ವದಲ್ಲಿ 40 ಆಕ್ಸಿಜನ್‌ಯುಕ್ತ ಬೆಡ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಜತೆಗೆ ಕೆ.ಎಸ್.ಹೆಗ್ಡೆ, ಯೇನಪೋಯ ಹಾಗೂ ಕಣಚೂರು ಖಾಸಗಿ ಮೆಡಿಕಲ್ ಕಾಲೇಜಿನ ಒಟ್ಟು ಬೆಡ್‌ಗಳ ಪೈಕಿ ಶೇ.50ನ್ನು ಕೊರೊನಾ ಸೋಂಕಿತರಿಗಾಗಿ ಮೀಸಲಿಡಲಾಗಿದೆ.
5. ಲಾಕ್‌ಡೌನ್ ಹಿನ್ನೆಲೆಯಲ್ಲಿ ನಿಮ್ಮ ಕ್ಷೇತ್ರದಲ್ಲಿ ಸಂಕಷ್ಟಕ್ಕೀಡಾಗಿರುವ ಬಡ ಕುಟುಂಬ ಗಳು/ಕೂಲಿ ಕಾರ್ಮಿಕರ ನೆರವಿಗೆ ಏನು ಮಾಡುತ್ತಿದ್ದೀರಿ?
ಗ್ರಾಮೀಣ ಭಾಗದಲ್ಲಿ ಆಯಾ ಸ್ಥಳೀಯ ಪಕ್ಷದ ಅಥವಾ ದಾನಿಗಳ ಮೂಲಕ ನೆರವು ನೀಡಲಾಗುತ್ತಿದೆ. ಹಲವು ಸಂಘಟನೆಯವರು ನಿರ್ವಸಿತರು ಹಾಗೂ ಬಡವರಿಗೆ ನೆರವಾಗುತ್ತಿದ್ದಾರೆ.
6. ಕ್ಷೇತ್ರದ ಯುವ/ಸಮುದಾಯ ಸಂಘಟನೆ ಗಳನ್ನು ಕಠಿನ ಪರಿಸ್ಥಿತಿಗೆ ಸಜ್ಜುಗೊಳಿಸಿದ್ದೀರಾ?
ಜನಶಿಕ್ಷಣ ಟ್ರಸ್ಟ್‌ನಿಂದ ಜನ ಜಾಗೃತಿ ಮೂಡಿಸಲಾಗುತ್ತಿದೆ. ಉಳ್ಳಾಲ ಹೆಲ್ಪ್ ಇಂಡಿಯಾ ಫೌಂಡೇಶನ್ ಸೇರಿದಂತೆ ಹಲವು ಸಂಘಟನೆಗಳು ಮಾಸ್ಕ್, ಆಹಾರ ಒದಗಿಸುತ್ತಿವೆ. ಯುಟಿಕೆ ಕೋವಿಡ್ ಕೇರ್ ಎಂಬ ಯುನಿಟ್ ಆರೋಗ್ಯ ಸಂಬಂಧಿತ ನೆರವು ನೀಡುತ್ತಿದೆ.
7. ಜನರು ಕೊರೊನಾ ಸಂಕಷ್ಟ ಸಂಬಂಧ ಯಾವುದೇ ಕ್ಷಣದಲ್ಲಿ ನಿಮ್ಮನ್ನು ಸಂಪರ್ಕಿಸ ಬಹುದೇ?
ಮೊ.ಸಂಖ್ಯೆ 7996664000/7090777777.
***
ಯು.ಟಿ. ಖಾದರ್, ಶಾಸಕರು, ಉಳ್ಳಾಲ:
1. ನಿಮ್ಮ ಕ್ಷೇತ್ರದಲ್ಲಿ ಕೋವಿಡ್ 19ರ ವಿಷಮ ಪರಿಸ್ಥಿತಿ ನಿಭಾವಣೆಗೆ ಪೂರ್ವಸಿದ್ಧತೆ ಹೇಗೆ ನಡೆದಿದೆ?
ಮೂಡುಬಿದಿರೆ ತಾಲೂಕು ವ್ಯಾಪ್ತಿ ಹಾಗೂ ಮೂಲ್ಕಿಗೆ ಒಳಗೊಂ ಡಂತೆ ಗ್ರಾಮ/ವಾರ್ಡ್ ಪಡೆಗಳನ್ನು ಪ್ರತ್ಯೇಕವಾಗಿ ರಚಿಸಿ ಅದರ ಮೂಲಕ ಆಯಾಯ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಶಾಸಕರ ಕಚೇರಿ ಸೇವಕದಲ್ಲಿ ವಾರ್‌ರೂಂ ಮಾಡಲಾಗಿದೆ.
2. ಜಿಲ್ಲಾಡಳಿತ, ತಾಲೂಕು ಆಡಳಿತ ಹೊರತುಪಡಿಸಿ ದಂತೆ ಸ್ಥಳೀಯರನ್ನು ಒಗ್ಗೂಡಿಸಿ ಪರ್ಯಾಯ ವ್ಯವಸ್ಥೆ (ಪ್ಲ್ರಾನ್ ಬಿ) ರೂಪಿಸಿದ್ದೀರಾ?
ಸ್ಕೌಟ್ಸ್ ಹಾಗೂ ಗೈಡ್ಸ್‌ನ ಕನ್ನಡ ಭವನದಲ್ಲಿ ವೈದ್ಯರು, ದಾದಿಯರು ಒಳಗೊಂಡ ಕೋವಿಡ್ ಕೇರ್ ಸೆಂಟರ್ ಆರಂಭಿಸ ಲಾಗಿದೆ. ಆಳ್ವಾಸ್ ಸಂಸ್ಥೆಯ ನೇತೃತ್ವದ ಹೆಲ್ತ್ ಸೆಂಟರ್, ವಾರ್ ರೂಂ ಹಾಗೂ ಮೂಡುಬಿದ್ರೆ ಪುರಸಭೆ ಇದರ ಜಂಟಿ ನೇತೃತ್ವ ವಹಿಸಿಕೊಂಡಿದೆ. ಜತೆಗೆ ಪಾಸಿಟಿವ್ ಬಂದವರ ಆರೈಕೆಗಾಗಿ 50 ವಿಶೇಷ ಬೆಡ್ ವ್ಯವಸ್ಥೆಗಳನ್ನು ಮಾಡಲಾಗಿದೆ.
3. ಸೋಂಕು ಹರಡದಂತೆ ಜನರಲ್ಲಿ ಜಾಗೃತಿ ಮೂಡಿ ಸುವ ಕೆಲಸವನ್ನು ಹೇಗೆ ಮಾಡುತ್ತಿದ್ದೀರಿ? ಖುದ್ದಾಗಿ ವಿಶೇಷ ಕ್ರಮಗಳನ್ನು ಕೈಗೊಂಡಿದ್ದೀರಾ?
ಗ್ರಾಮ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರ ತಂಡವನ್ನು ಕೊರೊನಾ ಹಿನ್ನೆಲೆಯಲ್ಲಿ ವಿಶೇಷವಾಗಿ ನೆರವಾಗುವಂತೆ ಮಾರ್ಗದರ್ಶನ ನೀಡಲಾಗುತ್ತಿದೆ. ಜತೆಗೆ ಟಾಸ್ಕ್ಪೋರ್ಸ್ ಮೂಲಕವೇ ಅರಿವು ಮೂಡಿಸಲಾಗುತ್ತಿದೆ.
4. ಪ್ರತಿ ಜಿಲ್ಲೆಯಲ್ಲೂ ಸಾಮಾನ್ಯವಾಗಿ ಕೇಳಿ ಬರು ತ್ತಿರುವ ಸಮಸ್ಯೆ ಆಕ್ಸಿಜನ್ ಕೊರತೆ, ಹಾಸಿಗೆಗಳ ಕೊರತೆ- ನಿಮ್ಮಲ್ಲಿ ಯಾವ ಕ್ರಮ ಕೈಗೊಂಡಿದ್ದೀರಿ?
ಆಕ್ಸಿಜನ್ ಸಮಸ್ಯೆ ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಇಲ್ಲ. ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿಯೂ ಆಕ್ಸಿಜನ್ ಲಭ್ಯವಿದೆ. ಕೆಐಓಸಿಎಲ್ ವತಿಯಿಂದ ಮೂಡುಬಿದ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ವಾಗಲಿದೆ. 50 ಬೆಡ್‌ಗಳನ್ನು ಕೂಡ ಇಲ್ಲಿ ಜೋಡಿಸುವ ಕೆಲಸ 10 ದಿನದೊಳಗೆ ನಡೆಯಲಿದೆ. ಈ ಮೂಲಕ ಆಸ್ಪತ್ರೆ ಮೇಲ್ದರ್ಜೆಗೇರಲಿದೆ.
5. ಲಾಕ್‌ಡೌನ್ ಹಿನ್ನೆಲೆಯಲ್ಲಿ ನಿಮ್ಮ ಕ್ಷೇತ್ರದಲ್ಲಿ ಸಂಕಷ್ಟಕ್ಕೀಡಾಗಿರುವ ಬಡ ಕುಟುಂಬ ಗಳು/ಕೂಲಿ ಕಾರ್ಮಿಕರ ನೆರವಿಗೆ ಏನು ಮಾಡುತ್ತಿದ್ದೀರಿ?
ಕ್ಷೇತ್ರ ವ್ಯಾಪ್ತಿಯಲ್ಲಿ ಬಡ ಕುಟುಂಬ ಅಥವಾ ಕೂಲಿ ಕಾರ್ಮಿಕರಿಗೆ ನೆರವಾಗಲು ವಾರ್ ರೂಂನಲ್ಲಿ ಪ್ರತ್ಯೇಕ ಟೀಮ್ ಮಾಡಲಾಗಿದೆ. ಮೆಡಿಸಿನ್ ವಿತರಣೆ, ಆ್ಯಂಬುಲೆನ್ಸ್ ನೆರವು ಸೇರಿದಂತೆ ಎಲ್ಲಾ ರೀತಿಯ ನೆರವು ಒದಗಿಸಲಾಗುತ್ತಿದೆ.
6. ಕ್ಷೇತ್ರದ ಯುವ/ಸಮುದಾಯ ಸಂಘಟನೆ ಗಳನ್ನು ಕಠಿನ ಪರಿಸ್ಥಿತಿಗೆ ಸಜ್ಜುಗೊಳಿಸಿದ್ದೀರಾ?
ಸದ್ಯ ಅನುಷ್ಠಾನದಲ್ಲಿರುವ ಟಾಸ್ಕ್ಪೋರ್ಸ್‌ನಲ್ಲಿ ಆಯಾ ವಾರ್ಡ್/ಗ್ರಾಮ ವ್ಯಾಪ್ತಿಯ ಸಂಘಟನೆಯ ನಿಗದಿತ ಜನರನ್ನು ಆದ್ಯತೆಯಾಗಿ ಬಳಸಿಕೊಳ್ಳಲಾಗಿದೆ. ಈ ಮೂಲಕ ಲಸಿಕೆ ಹಾಗೂ ಕೊರೊನಾ ಹತೋಟಿಯ ನಿಟ್ಟಿನಲ್ಲಿ ಪೂರಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉಳಿದವುಗಳ ನೆರವು ಕೋರಿಲ್ಲ.
7. ಜನರು ಕೊರೊನಾ ಸಂಕಷ್ಟ ಸಂಬಂಧ ಯಾವು ದೇ ಕ್ಷಣದಲ್ಲಿ ನಿಮ್ಮನ್ನು ಸಂಪರ್ಕಿಸ ಬಹುದೇ?
ಕ್ಷೇತ್ರದ ಜನರು ವಾರ್ ರೂಂ ನ 6360917104 ನಂಬರಿಗೆ ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್ ಚೌಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಫೆ.21ರಂದು ತೆರೆಗೆ ಬರಲಿದೆ ʼವಿಷ್ಣು ಪ್ರಿಯಾʼ
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.