2 ಡೋಸ್ ಹಾಕಿದವರಿಗೆ ಸೋಂಕು ತಟ್ಟಿದ್ದರೂ, ಜೀವ ಹಾನಿಯಾಗಿಲ್ಲ: ಏಮ್ಸ್ ಅಧ್ಯಯನದಲ್ಲಿ ಉಲ್ಲೇಖ
Team Udayavani, Jun 4, 2021, 9:10 PM IST
ನವದೆಹಲಿ: ಲಸಿಕೆಯ ಎರಡು ಡೋಸ್ ಹಾಕಿಸಿಕೊಂಡವರಿಗೂ, ಕೊರೊನಾ ಸೋಂಕು ದೃಢಪಟ್ಟಿದೆ. ಆದರೆ, ಯಾರೂ ಅಸುನೀಗಿಲ್ಲ. ಹೀಗೆಂದು ನವದೆಹಲಿಯ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನಡೆಸಿದ ಅಧ್ಯಯನ ತಿಳಿಸಿದೆ.
ಏಪ್ರಿಲ್ ಮತ್ತು ಮೇನ ವಿವರಗಳನ್ನು ಸಂಸ್ಥೆ ಪರಿಶೀಲಿಸಿದೆ. ಎರಡನೇ ಅಲೆ ದೇಶಕ್ಕೆ ಅಪ್ಪಳಿಸಿದ ಬಳಿಕ ನಡೆಸಲಾಗಿರುವ ಮೊದಲ ಆನುವಂಶಿಕ ವಿಶ್ಲೇಷಣೆ (ಜಿನೋಮ್ ಸೀಕ್ವೆನ್ಸ್) ಇದಾಗಿದೆ. ಪೂರ್ಣ ಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಂಡ ವ್ಯಕ್ತಿಗೆ ಕೊರೊನಾ ದೃಢಪಟ್ಟರೆ ಅದನ್ನು “ಬ್ರೇಕ್‌ಥ್ರೂ ಇನೆ#ಕ್ಷನ್’ ಎಂದು ಹೆಸರಿಸಲಾಗಿದೆ. ಅಮೆರಿಕದ ರೋಗಗಗಳ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ನೀಡಿರುವ ವಾಖ್ಯೆಯ ಪ್ರಕಾರ “ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದುಕೊಂಡರೂ ಅವರ ಪೈಕಿ ಕೆಲವರಿಗೆ ಸೋಂಕು ದೃಢಪಟ್ಟು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಆದರೆ ಅವರು ಅಸುನೀಗುವುದಿಲ್ಲ’ ಎಂದು ಹೇಳಿದೆ.
ಅಧ್ಯಯನದಲ್ಲಿ ಕಂಡುಬಂದದ್ದೇನು?
ಸೋಂಕು ದೃಢಪಡುವ ಸಂಖ್ಯೆ ಹೆಚ್ಚಾಗಿದ್ದರೂ, ಪೂರ್ಣ ಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಂಡವರು ಅಸುನೀಗಿರಲಿಲ್ಲ. ಅಧ್ಯಯನಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದ್ದ 63 ಕೇಸುಗಳ ಪೈಕಿ 36 ಪ್ರಕರಣಗಳಲ್ಲಿ ಲಸಿಕೆಯ 2 ಡೋಸ್ ಪಡೆದವರೇ ಆಗಿದ್ದರು. ಇತರ 27 ಮಂದಿ 1 ಡೋಸ್ ಲಸಿಕೆ ಪಡೆವರಾಗಿದ್ದರು. ಹತ್ತು ಮಂದಿ ಕೊವಿಶೀಲ್ಡ್ ಹಾಕಿಸಿಕೊಂಡಿದ್ದರೆ, ಇತರ 53 ಮಂದಿ ಕೊವ್ಯಾಕ್ಸಿನ್ ಪಡೆದುಕೊಂಡಿದ್ದರು. ಸೋಂಕಿನ ಬಿ.1.617 ರೂಪಾಂತರ ದೃಢಪಟ್ಟದ್ದು ಇಲ್ಲಿಯೇ. ನಂತರ ಅದು ಬಿ.1.617.1, ಬಿ.1.617.2 ಮತ್ತು ಬಿ.1.617.3 ಎಂಬ 3 ರೂಪಾಂತರಗಳನ್ನು ಪಡೆದುಕೊಂಡಿತು.
ಇದನ್ನೂ ಓದಿ :ಕೇರಳ: 20 ಸಾವಿರ ಕೋಟಿ ಕೋವಿಡ್ ಬಜೆಟ್ : ವಿತ್ತ ಸಚಿವ ಕೆ.ಎನ್.ಬಾಲಗೋಪಾಲ್ ಹೇಳಿಕೆ
23 ಪ್ರಕರಣಗಳನ್ನು ಪರಿಶೀಲಿಸಿದಾಗ ಬಿ.1.617.2 ರೂಪಾಂತರಿಯೇ ಹೆಚ್ಚಿನ ಪ್ರಮಾಣದಲ್ಲಿ ದೇಶದಲ್ಲಿ ಹಾವಳಿ ಎಬ್ಬಿಸಿದೆ. ಅದರ ಪ್ರಮಾಣವೇ ಶೇ.63 ಆಗಿದೆ ಎಂದು ಏಮ್ಸ್ ನವದೆಹಲಿ ಅಧ್ಯಯನದಲ್ಲಿ ದೃಢಪಟ್ಟಿದೆ. ಬಿ.1.617.1 ಮತ್ತು ಬಿ.1.1.7 ಎಂಬ ರೂಪಾಂತರಿಗಳು ಕ್ರಮವಾಗಿ 4 ಮತ್ತು 1 ಪ್ರಕರಣಗಳಲ್ಲಿ ದೃಢಪಟ್ಟಿವೆ. ಶೇಕಡವಾರು ಹೇಳುವುದಿದ್ದರೆ 11.1 ಮತ್ತು 2.8.
ಬಿ.1.1.7 ರೂಪಾಂತರಿ ಮಹಾರಾಷ್ಟ್ರದಲ್ಲಿ ಕಂಡುಬಂದಿತ್ತು. ಅದುವೇ ದೆಹಲಿಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.
ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ವಯಸ್ಸಿನವರ ಪೈಕಿ ಸರಿಮಾರು ವಯಸ್ಸು 37. ಈ ಪೈಕಿ 41 ಮಂದಿ ಪುರುಷರು ಮತ್ತು 22 ಮಂದಿ ಮಹಿಳೆಯರು. ಇತರ ಆರೋಗ್ಯ ಸಮಸ್ಯೆ ಇರುವವರನ್ನು ಆಯ್ಕೆ ಮಾಡಿಕೊಂಡಿರಲಿಲ್ಲ. ಈ ಗುಂಪಿನಲ್ಲಿ ಬಿ.1.617.2 ರೂಪಾಂತರಿ ಕೂಡ ದೃಢಪಟ್ಟಿತ್ತು. ಆಂಶಿಕವಾಗಿ ಮತ್ತು ಪೂರ್ಣ ಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಂಡವರ ಬಗ್ಗೆಯೂ ಅಧ್ಯಯನ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.