ರೋಬೋಟ್ ಬಳಕೆಗೆ ಕೋವಿಡ್ ವೇಗ
ಕೋವಿಡ್ ಬಳಿಕದ ಜೀವನ ನಿಜವಾದ ಸವಾಲು; ಮಾನವ ಶಕ್ತಿಯ ಬದಲು ಬರಲಿದೆ ಯಾಂತ್ರಿಕ ಶಕ್ತಿ
Team Udayavani, Apr 24, 2020, 9:36 AM IST
ಸಾಂದರ್ಭಿಕ ಚಿತ್ರ
ಮಣಿಪಾಲ: ಜಗತ್ತು ಈಗಾಗಲೇ ಸಂಕಟಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದೆ. ಕೊರೊನಾ ತಂದಿಟ್ಟ ಜೀವನ ಸಂಕಟ ಮತ್ತು ಜನಜೀವನದ ಬುಡವೇ ಅಲುಗಾಡುವ ಪರಿಸ್ಥಿತಿ. ಇಡೀ ಜಗತ್ತೇ ಸ್ತಬ್ಧವಾಗಿದೆ. ಓಡಾಟ ಇಲ್ಲ, ವ್ಯವಹಾರ ಇಲ್ಲ. ಪರಿಣಾಮವಾಗಿ ಕೈಯಲ್ಲಿ ಬಿಡಿಗಾಸು ಉಳಿಸಿಕೊಳ್ಳಲು ಪ್ರಯತ್ನಿಸಬೇಕಾದ ಸಂದಿಗ್ಧತೆ. ಕಂಪೆನಿಗಳ ವ್ಯವಹಾರ ಸ್ಥಗಿತಗೊಂಡು ಉದ್ಯೋಗ ನಷ್ಟ ಭೀತಿ ಒಂದು ಕಡೆ. ಅತ್ತ ಕೃಷಿ ಮತ್ತು ಸಣ್ಣಪುಟ್ಟ ಉದ್ಯೋಗ ನೋಡಿಕೊಳ್ಳು ತ್ತಿದ್ದವರು ಮಾರುಕಟ್ಟೆ ಇಲ್ಲದೇ ಮನೆಯಲ್ಲಿಯೇ ಕುಳಿತುಕೊಳ್ಳಲೇಬೇಕಾದ ಅನಿವಾರ್ಯ ಪರಿಸ್ಥಿತಿ. ಈಗ ಜಗತ್ತಿನಲ್ಲಿ ಅಗತ್ಯ ಸೇವೆಗಳ ಸಾಲಿನಲ್ಲಿ ಗುರುತಿಸಿಕೊಳ್ಳುವ ಆರೋಗ್ಯ ಸೇರಿದಂತೆ ಕೆಲವೊಂದು ಕ್ಷೇತ್ರಗಳು ಮಾತ್ರ ಉಳಿದುಕೊಂಡಿವೆ.
ಆದರೆ, ಸಾಕಪ್ಪ… ಕೋವಿಡ್ ಒಮ್ಮೆ ಹೋದರೆ ಸಾಕು ಎಂದು ನಾವು ಹೇಳುವ ಹಾಗಿಲ್ಲ ಸದ್ಯದ ಪರಿಸ್ಥಿತಿ. ಕೋವಿಡ್ ಬಳಿಕ ವೈದ್ಯಕೀಯ ಕ್ಷೇತ್ರಗಳಿಗೆ ರೋಬೋಟ್‌ಗಳ ಪರಿಚಯವಾಗಿವೆ. ಕೆಲವು ಆಸ್ಪತ್ರೆಗಳಲ್ಲಿ ನರ್ಸ್‌ಗಳ ಬದಲು ಇವುಗಳು ಕೆಲಸ ಮಾಡುತ್ತಿವೆ. ರೋಗಿಗಳಿಗೆ ಔಷಧ-ಆಹಾರ ಪೂರೈಸಲು ಡ್ರೋನ್‌ಗಳು ನೆರವಾ ಗುತ್ತಿವೆ. ಇದರರ್ಥ ಕೋವಿಡ್ ದ ಬಳಿಕ ಜಾಗತಿಕ ಮಾರುಕಟ್ಟೆಯಲ್ಲಿ ಬಹುದೊಡ್ಡ ಪ್ರಯೋಗಗಳೇ ಸಂಭವಿಸಲಿವೆ. ಸದ್ಯದ ಪರಿಸ್ಥಿತಿಯಲ್ಲಿ ಜೀವ ಉಳಿಸಿಕೊಳ್ಳುವುದಕ್ಕೆ ಆದ್ಯತೆ ಆಗಿದೆ. ಬಳಿಕ ದಿನಗಳಲ್ಲಿ ಜೀವನ ಉಳಿಸಿಕೊಳ್ಳುವುದಕ್ಕೆ ನಾವು ಸಂಕಟಪಡಬೇಕಾಗಿದೆ. ನಾಲ್ಕು ಗೋಡೆಗಳ ನಡುವೆ ಕುಳಿತು ನೀವು ಒಂಟಿಯಾಗಿರುವಾಗ ಮಾತನಾಡಲು- ಬೆರೆಯಲು ಮನುಷ್ಯ ಬೇಕೆ ವಿನಃ ಕಬ್ಬಿಣ ಅಥವ ಲೋಹಗಳ ವಸ್ತುಗಳಿಂದ ಭಾವನೆಯನ್ನು ಅರಿತುಕೊಳ್ಳುವುದು ಕಷ್ಟ. ಆದರೆ ಮುಂದಿನ ದಿನಗಳಲ್ಲಿ ಅವುಗಳೇ ಜಗತ್ತನ್ನು ಲೀಡ್ ಮಾಡಲಿವೆ.
ಕಚೇರಿಗಳಲ್ಲಿ ಮಾನವ ಸಂಪನ್ಮೂಲಗಳ ಬದಲು ರೋಬೋಟ್ ಬರಲಿವೆ. ನೀವು ಕೊಟ್ಟ ಕೆಲಸಗಳನ್ನು ಅವುಗಳು ಮಾಡುತ್ತಾ ಹೋಗಲಿವೆ. ಆದರೆ ಭಾವನೆಯನ್ನು ಅರಿತುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಸದ್ಯ ಕೋವಿಡ್-19 ಅಂತಹ ಸಾಧ್ಯತೆಯನ್ನು ಬಲವಾಗಿ ಪ್ರತಿಪಾದಿಸುತ್ತಿದೆ. ಮುಂಬರುವ ದಶಕಗಳಲ್ಲಿ ರೋಬೋಟ್‌ಗಳನ್ನು ಜಗತ್ತಿನ ಬಹುತೇಕ ರಾಷ್ಟ್ರಗಳು ಕಾಣಲಿವೆ. ಅಮೆರಿಕದಲ್ಲಿ ಮೂರನೇ ಒಂದು ಭಾಗದಷ್ಟು ಕಾರ್ಮಿಕರನ್ನು 2030ರ ವೇಳೆಗೆ ಯಾಂತ್ರೀಕೃತಗೊಂಡ ಮತ್ತು ರೋಬೋಟ್‌ಗಳಾಗಿ ಬದಲಾಯಿಸಲಾಗುತ್ತದೆ. ಅವುಗಳು ಮಾನವ ಕೆಲಸಗಾರರಿಗಿಂತ ಅಗ್ಗ.
ವಾಲ್ಮಾರ್ಟ್ ಪ್ರಯೋಗ
ದೊಡ್ಡ ಮತ್ತು ಸಣ್ಣ ಕಂಪನಿಗಳು ಸಾಮಾಜಿಕ ಅಂತರವನ್ನು ಪಾಲಿಸಲು ಸಿಬಂದಿಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ. ಬದಲಾಗಿ ರೋಬೋಟ್‌ಗಳನ್ನು ಹೇಗೆ ಬಳಸಬೇಕು ಎಂಬುದರತ್ತ ಕಾರ್ಯಪ್ರವೃತವಾಗಿದೆ. ಅಮೆರಿಕದ ಅತಿದೊಡ್ಡ ಚಿಲ್ಲರೆ ವ್ಯಾಪಾರ ಸಂಸ್ಥೆ ವಾಲ್ಮಾರ್ಟ್ ತನ್ನ ಮಹಡಿಗಳನ್ನು ಸðಬ್ ಮಾಡಲು ರೋಬೋಟ್‌ಗಳನ್ನು ಬಳಸುತ್ತಿದೆ.
ರೋಬೋಟ್ ಕಾರ್ಮಿಕರಿಗೆ ಬೇಡಿಕೆ
ದ. ಕೊರಿಯಾದಲ್ಲಿ ತಾಪಮಾನ ಅಳೆಯಲು, ಕೈಗಳಿಗೆ ಸ್ಯಾನಿ ಟೈಸರ್ ನೀಡಲು ರೋಬೋಟ್‌ಗಳನ್ನು ಬಳಸಲಾಗುತ್ತದೆ. 2021ರ ಸುಮಾರಿಗೆ ರೋಬೋಟ್ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಕೋವಿಡ್-19 ಬಳಿಕ ವ್ಯವಹಾರಗಳು ಪುನಃ ತೆರೆದಾಗ ಈ ತಂತ್ರಜ್ಞಾನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಿ ಕೊಳ್ಳುವ ಸಾಧ್ಯತೆ ಇದೆ. ರೆಸ್ಟೋರೆಂಟ್‌ಗಳಲ್ಲಿ ಬಳಸಲಾಗುತ್ತಿವೆ.
ಮೆಕ್‌ಡೊನಾಲ್ಡ್‌ಲ್ಡ್ ಏನು ಮಾಡಿದೆ ಗೊತ್ತ
ಮೆಕ್‌ಡೊನಾಲ್ಡ್‌ಲ್ಡ್ ನಂತಹ ತ್ವರಿತ ಆಹಾರ ಸೇವಾ ಸಂಸ್ಥೆ ರೋಬೋಟ್‌ಗಳ ಮೂಲಕ ಅಡುಗೆಯವರು ಮತ್ತು ಲೈನ್‌ಸೇಲ್‌ಗಳಿಗೆ ಬಳಸಲಾಗುವ ಸಾಧ್ಯತೆಯನ್ನು ನೋಡುತ್ತಿದೆ. ಈಗಾಗಲೇ ಗೋದಾಮುಗಳಲ್ಲಿ, ಅಮೆಜಾನ್ ಮತ್ತು ವಾಲ್ಮಾರ್ಟ್ ರೋಬೋರ್ಟ್‌ಗಳನ್ನು ಈಗಾಗಲೇ ಬಳಸಲಾಗುತ್ತಿದೆ. ಗೂಗಲ್ ಮತ್ತು ಫೇಸ್‌ಬುಕ್ ತಮ್ಮಲ್ಲಿನ ಸೂಕ್ತವಲ್ಲದ ಪೋಸ್ಟ್‌ಗಳನ್ನು ತೆಗೆದುಹಾಕಲು ಕೃತಕ ಬುದ್ಧಿಮತ್ತೆಯನ್ನು ಈಗಾಗಲೇ ಅವಲಂಬಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.