ಕೋವಿಡ್ ಸೋಂಕಿನ ಮೂಲ ಪತ್ತೆ ಹಚ್ಚಬಲ್ಲಿರಾ?
Team Udayavani, May 25, 2020, 5:20 PM IST
ಸೋಂಕಿನ ಮೂಲ ಪತ್ತೆ ಹಚ್ಚುವ ಕೆಲಸ ಪಡೆಯಲು ಅಗತ್ಯ ಮಾಹಿತಿ ನಮಗೆ ಗೊತ್ತಿದೆಯೇ?
ಬೇಡಿಕೆಗಳಲ್ಲಿ ವ್ಯತ್ಯಾಸವಿದ್ದರೂ ಅಮೆರಿಕದ ಹಲವು ರಾಜ್ಯಗಳು ಸಾವಿರಾರು ಜನರನ್ನು ಸೋಂಕಿನ ಮೂಲ ಪತ್ತೆ ಹಚ್ಚುವ ಕಾರ್ಯಕ್ಕೆ ಬಳಸಿಕೊಳ್ಳುತ್ತಿವೆ. ಕೋವಿಡ್ ಹರಡುವುದನ್ನು ನಿಯಂತ್ರಿಸಲು, ವೇಗವನ್ನು ತಗ್ಗಿಸಲು, ಸಮುದಾಯದಲ್ಲಿ ಹರಡುವುದನ್ನು ತಡೆಗಟ್ಟಲು ಈ ಹೆಜ್ಜೆ ಅನಿವಾರ್ಯವೆನಿಸಿದೆ. ಈಗ ಪರಿಣತರ ಕೊರತೆ ಇರುವುದರಿಂದ, ಈ ಕುರಿತು ಪರ್ಯಾಪ್ತ ಮಾಹಿತಿ ಇರುವ ಜನರನ್ನೇ ಬಳಸಿಕೊಳ್ಳಲಾಗುತ್ತಿದೆ.
ಸೋಂಕಿನ ಮೂಲ ಪತ್ತೆ ಹಚ್ಚುವ ಕೆಲಸಕ್ಕೆ ಡಿಪ್ಲೊಮಾ ಪದವಿ ಸಾಕು ಎಂದು ತಜ್ಞರು ಹೇಳುತ್ತಾರೆ. ಅಂಥವರ ತಂಡವನ್ನು ಸಾರ್ವಜನಿಕ ಆರೋಗ್ಯ ಇಲಾಖೆಯ ಸಿಬಂದಿ ಮುನ್ನಡೆಸಬೇಕಾಗುತ್ತದೆ. ಅಮೆರಿಕದಲ್ಲಿ ಲಾಕ್‌ಡೌನ್ ಪರಿಣಾಮವಾಗಿ ಕೆಲಸ ಕಳೆದುಕೊಂಡ ಸಾವಿರಾರು ಯುವಜನರಿಗೆ ಈ ಕೆಲಸ ಉತ್ತಮ ಅವಕಾಶವೆನಿಸಿದೆ.
ಸೋಂಕಿನ ಮೂಲ ಪತ್ತೆಯ ಆನ್‌ಲೈನ್ ಶಿಕ್ಷಣ ಒದಗಿಸುವ ಜಾನ್ಸ್ ಹಾಪ್ಕಿನ್ಸ್ ಬೂಮ್‌ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಸಂಸ್ಥೆಯ ಸಹಾಯಕ ವಿಜ್ಞಾನಿ ಡಾ| ಎಮಿಲಿ ಗರ್ಲಿ ಅವರ ಪ್ರಕಾರ, ಸೋಂಕಿನ ಮೂಲವನ್ನು ಪತ್ತೆ ಮಾಡುವುದು ದೊಡ್ಡ ಕೆಲಸವಲ್ಲ. ಆದರೆ, ಸೋಂಕುಪೀಡಿತನಾಗಿರುವ ವ್ಯಕ್ತಿಗೆ ಈ ಕುರಿತು ವಿವರಿಸಿ, ಮನೆಯಲ್ಲಿ ಏಕಾಂತ ವಾಸದಲ್ಲಿರಬೇಕು ಎಂದು ಹೇಳುವುದು ಅತಿ ಪ್ರಯಾಸದ ಕಾರ್ಯ. ಅದರಲ್ಲೂ ಆತನ ದುಡಿಮೆಯಿಂದಲೇ ಮನೆ ನಡೆಯಬೇಕಿದ್ದ ಸಂದರ್ಭದಲ್ಲಿ ಇದು ಕರುಳು ಕಿತ್ತು ಬಾಯಿಗೆ ಕೊಡುವಂತಾಗುತ್ತದೆ ಎನ್ನುತ್ತಾರೆ.
ಗರ್ಲಿ ಅವರು ಆರು ತಾಸಿನ ಕೋರ್ಸನ್ನು ಜನರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಇದರಲ್ಲಿ ವೈರಸ್ ಹೇಗೆ ಹರಡುತ್ತದೆ ಎನ್ನುವ ತಾಂತ್ರಿಕ ಅಂಶಗಳ ಜತೆಗೆ ಸೋಂಕಿತರ ಜತೆಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡು, ಸೋಂಕಿನ ಅಪಾಯವನ್ನು ಹೇಗೆ ಪರಿಣಾಮಕಾರಿಯಾಗಿ ವಿವರಿಸಬೇಕೆಂಬುದನ್ನು ಕಲಿಸುತ್ತದೆ. ಅವರ ಕೋರ್ಸ್‌ನಿಂದಲೇ ಪ್ರೇರಣೆ ಪಡೆದು, ಇಲ್ಲೊಂದು ಪ್ರಶ್ನಾವಳಿಯನ್ನು ರಚಿಸಲಾಗಿದೆ. ಈ ಮೂಲಕ ಸೋಂಕು ಮೂಲ ಪತ್ತೆಯ ಪ್ರಮುಖ ಅಂಶಗಳು ನಿಮಗೆಷ್ಟು ಗೊತ್ತು ಎನ್ನುವುದು ಅರಿವಿಗೆ ಬರುತ್ತದೆ.
1. ಪ್ರಾಥಮಿಕ ಸಂಪರ್ಕ ಎಂದರೇನು?
– ರೋಗದ ಲಕ್ಷಣಗಳು ಕಂಡುಬರುವ 48 ಗಂಟೆಗಳ ಮೊದಲು ವ್ಯಕ್ತಿ,
– ಮನೆಯಲ್ಲಿ ರೋಗಿಯ ಜತೆಗೆ ವಾಸ್ತವ್ಯ ಅಥವಾ ಅವರು ಸಹೋದ್ಯೋಗಿಯಾಗಿದ್ದರೆ.
– ಯಾರೊಂದಿಗಾದರೂ ಆರು ಅಡಿಗೂ ಕಡಿಮೆ ಅಂತರದಲ್ಲಿ 15 ನಿಮಿಷಗಳಿಗೂ ಹೆಚ್ಚು ಕಾಲ ಇದ್ದರೆ
– ಯಾರ ಜತೆಗಾದರೂ ಐದು ನಿಮಿಷಗಳಿಗಿಂತ ಹೆಚ್ಚು ಕಾಲ ಸಂಪರ್ಕದಲ್ಲಿದ್ದರೆ ಸೋಂಕಿನ ಸಾಧ್ಯತೆ ಹೆಚ್ಚು.
2. ಐಸೊಲೇಶನ್ ಹಾಗೂ ಕ್ವಾರಂಟೈನ್ ನಡುವಿನ ವ್ಯತ್ಯಾಸವೇನು?
– ಎರಡರ ಅರ್ಥವೂ ಒಂದೇ. ಶಬ್ದಗಳನ್ನು ಬೇಕಿದ್ದರೂ ಬದಲಾಯಿಸಬಹುದು.
– ಐಸೋಲೇಶನ್ (ಏಕಾಂತವಾಸ) ಎಂದರೆ ಎಲ್ಲರಿಗಿಂತ ದೂರವಾಗಿ ವಾಸಿಸುವುದು. ಕ್ವಾರಂಟೈನ್‌ನಲ್ಲಿದ್ದವರು ಹೊರಗೆ ಬರಬಹುದಾದರೂ ಲಕ್ಷಣಗಳನ್ನು ಗಮನಿಸುತ್ತಿರಬೇಕು.
– ಸೋಂಕು ದೃಢಪಟ್ಟವರನ್ನು ಏಕಾಂತ ವಾಸಕ್ಕೆ ಕಳುಹಿಸಲಾಗುತ್ತದೆ. ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ. ಎರಡೂ ಪ್ರಕರಣಗಳಲ್ಲಿ ನೀವು ಇತರರಿಂದ ಅಂತರ ಕಾಪಾಡುವುದು ಮುಖ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.