ಲಸಿಕೆ; ಪುರುಷರೇ ಮುಂದು ; ದೇಶಾದ್ಯಂತ ವ್ಯಾಕ್ಸಿನೇಶನ್‌ ನಲ್ಲಿ ಹಿಂದುಳಿದ ಮಹಿಳೆಯರು

Team Udayavani, Jun 9, 2021, 3:34 AM IST

ಲಸಿಕೆ; ಪುರುಷರೇ ಮುಂದು ; ದೇಶಾದ್ಯಂತ ವ್ಯಾಕ್ಸಿನೇಶನ್‌ ನಲ್ಲಿ ಹಿಂದುಳಿದ ಮಹಿಳೆಯರು

ಹೊಸದಿಲ್ಲಿ: ದೇಶದಲ್ಲಿ ಕೊರೊನಾ ವಿರುದ್ಧದ ಲಸಿಕೆ ಅಭಿಯಾನ ಆರಂಭವಾದಾಗಿನಿಂದ ಈವರೆಗೆ ಲಸಿಕೆ ಪಡೆದವರ ಪೈಕಿ ಪುರುಷರೇ ಮುಂದಿದ್ದಾರೆ. ಮಹಿಳೆಯರು ಈ ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ಹಿಂದುಳಿದಿದ್ದಾರೆ. ಹೀಗೆಂದು ಕೇಂದ್ರ ಸರಕಾರದ ದತ್ತಾಂಶಗಳೇ ತಿಳಿಸಿವೆ.

ಲಸಿಕೆ ಸ್ವೀಕರಿಸಿದ ಒಟ್ಟು ಜನಸಂಖ್ಯೆಯ ಪೈಕಿ ಶೇ.54ರಷ್ಟು ಮಂದಿ ಪುರುಷರಾಗಿದ್ದು, 10.1 ಕೋಟಿ ಪುರುಷರು ವ್ಯಾಕ್ಸಿನ್‌ (ಭಾಗಶಃ ಅಥವಾ ಪೂರ್ಣ) ಪಡೆದುಕೊಂಡಿದ್ದಾರೆ. ಇವರಿಗೆ ಹೋಲಿಸಿದರೆ ಮಹಿಳೆಯರ ಶೇಕಡಾವಾರು ಶೇ.17ರಷ್ಟು ಕಡಿಮೆಯಿದೆ. ದಿಲ್ಲಿ, ಉತ್ತರಪ್ರದೇಶದಂಥ ಕೆಲವು ರಾಜ್ಯಗಳಲ್ಲಿ ಅಸಮಾನತೆ ಹೆಚ್ಚಿದ್ದರೆ, ಕೇರಳ ಮತ್ತು ಛತ್ತೀಸ್‌ಗಢದಲ್ಲಿ ಪುರುಷರಿಗಿಂತ ಹೆಚ್ಚು ಮಹಿಳೆಯರು ಲಸಿಕೆ ಪಡೆದುಕೊಂಡಿದ್ದಾರೆ ಎಂದು “ರಾಯಿಟರ್ಸ್‌’ ವರದಿ ಮಾಡಿದೆ.

ಏಕೆ ಹೀಗೆ?: ಪಟ್ಟಣಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಪುರುಷರು ಕೆಲಸಕ್ಕಾಗಿ ಹೊರಹೋಗುವ ಕಾರಣ, ಸ್ತ್ರೀಯರಿಗಿಂತ ಮುನ್ನ ತಾವೇ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೇ, ಮಹಿಳೆಯರು ಲಸಿಕೆ ಪಡೆಯುವುದರಿಂದ ಅವರ ಋತು ಚಕ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಹಾಗೂ ಫ‌ಲವತ್ತತೆ ಕುಂದುತ್ತದೆ ಎಂಬ ವದಂತಿಗಳು ಹೆಣ್ಣು ಮಕ್ಕಳು ಲಸಿಕೆಯಿಂದ ದೂರವುಳಿಯಲು ಕಾರಣ ಎಂದು ಗುಜರಾತ್‌ನ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಸರಕಾರವೇನು ಮಾಡಬೇಕು?: ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಕುರಿತು ಜನಜಾಗೃತಿ ಹೆಚ್ಚಿಸುವ ಕೆಲಸವನ್ನು ಸರಕಾರಗಳು ಮಾಡಬೇಕು, ಲಸಿಕೆಯ ಮಹತ್ವವನ್ನು ತಿಳಿಸಿ ಅದನ್ನು ಪಡೆಯುವಂತೆ ಉತ್ತೇಜನ ನೀಡಬೇಕು. ಮನೆ ಮನೆಗೆ ತೆರಳಿ ಲಸಿಕೆ ನೀಡುವ ಕೆಲಸವಾಗಬೇಕು ಎನ್ನುವುದು ತಜ್ಞರ ಅಭಿಪ್ರಾಯ. ಈವರೆಗೆ ದೇಶದಲ್ಲಿ 233.7 ದಶಲಕ್ಷ ಡೋಸ್‌ ಲಸಿಕೆಯನ್ನು ವಿತರಿಸಲಾಗಿದೆ.

ಹೊಸ ರೂಪಾಂತರಿ ಪತ್ತೆ: ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಬಿ.1.1.28.2 ಎಂಬ ಹೊಸ ರೂಪಾಂತರಿ ಪತ್ತೆಯಾಗಿದ್ದು, ಅಪಾಯಕಾರಿಯಾಗಿರುವ ಸಾಧ್ಯತೆಯಿದೆ ಎಂದು ಪುಣೆಯ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿ ಹೇಳಿದೆ. ಬ್ರೆಜಿಲ್‌ ಯುಕೆಯಿಂದ ಭಾರತಕ್ಕೆ ಬಂದ ಪ್ರಯಾಣಿಕರಲ್ಲಿ ಈ ರೂಪಾಂತರಿ ಕಂಡುಬಂದಿದೆ.

ಸಂಸದರಿಗೆ ಸ್ಪೀಕರ್‌ ಪತ್ರ: ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ನೀವು ಕೈಗೊಂಡಿರುವ ಕೊರೊನಾ ಪರಿಹಾರ ಕಾರ್ಯಗಳ ವಿವರವನ್ನು ಸಲ್ಲಿಸಿ ಎಂದು ಸಂಸತ್‌ ಸದಸ್ಯರಿಗೆ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಪತ್ರ ಬರೆದಿದ್ದಾರೆ.

ಟಾಪ್ ನ್ಯೂಸ್

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

adani (2)

Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ

Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್‌ ಬಗ್ಗೆ ಸುಪ್ರೀಂ ಹೇಳಿದ್ದೇನು?

Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್‌ ಬಗ್ಗೆ ಸುಪ್ರೀಂ ಹೇಳಿದ್ದೇನು?

Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ

Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ

Viral Video: ನೀರಿನಿಂದ ಜಿಗಿದು ಹಾವನ್ನೇ ಬೇಟೆಯಾಡಲು ಹೋದ ಮೀನು… ಕೊನೆಗೆ ಆಗಿದ್ದೇನು?

Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.