ಕೋವಿಡ್ : ನಾಯಿ- ಬೆಕ್ಕುಗಳಿಂದ ಬರಬಹುದೇ?
Team Udayavani, Apr 23, 2020, 10:45 AM IST
ಮಣಿಪಾಲ: ಕೋವಿಡ್ ಸೊಂಕು ನಾಯಿ ಮತ್ತು ಬೆಕ್ಕುಗಳಿಂದ ಹರಡಬಹುದೇ ಎಂಬ ಪ್ರಶ್ನೆಗಳು, ಅನುಮಾನಗಳು ಹೆಚ್ಚಾಗುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವಂತೆಯೇ ಬಾವಲಿಗಳಿಂದ ಈ ವೈರಸ್ ಚೀನದಲ್ಲಿ ಆರಂಭವಾಗಿರುವ ಸಾಧ್ಯತೆ ಇದೆ ಎಂದಿದೆ. ಪ್ರಾಣಿಗಳಿಂದ ವೈರಸ್ ಮನುಷ್ಯರಿಗೆ ಹರಡಿದ ಕುರಿತು ಈ ತನಕ ಯಾವುದೇ ಪ್ರಕರಣ ವರದಿಯಾಗಿಲ್ಲ.
ಆದರೆ ಪ್ರಾಣಿಗಳಲ್ಲಿ ವೈರಸ್ ಕಾಣಿಸಿಕೊಂಡ ಕುರಿತು ಘಟನೆಗಳು ವರದಿಯಾಗುತ್ತಿವೆ. ಫೆಬ್ರವರಿಯಲ್ಲಿ ಹಾಂಗ್‌ಕಾಂಗ್‌ನಲ್ಲಿ ಸಾಕು ನಾಯಿಯೊಂದರಲ್ಲಿ ಕೋವಿಡ್ ವೈರಸ್ ಪತ್ತೆಯಾಗಿತ್ತು. ಆದರೆ ವೈರಸ್‌ನ ತೀವ್ರತೆ ಮನುಷ್ಯರಲ್ಲಿದ್ದಷ್ಟು ಇರಲಿಲ್ಲ. ಹಾಂಗ್‌ಕಾಂಗ್‌ನಲ್ಲಿನ ಕೃಷಿ, ಮೀನುಗಾರಿಕೆ ಮತ್ತು ಸಂರಕ್ಷಣಾ ಇಲಾಖೆ (ಎಎಫ್ಸಿಡಿ) ಪರೀಕ್ಷೆಗಳ ಪ್ರಕಾರ ನಾಯಿಯಲ್ಲಿ ಪತ್ತೆಯಾದ ಸೋಂಕು ಮಾನವನಿಂದ ಪ್ರಾಣಿಗಳಿಗೆ ಹರಡುವ ಸಾಧ್ಯತೆಯಿದೆ. ಆದರೆ ಶ್ವಾನದ ಅನಾರೋಗ್ಯದಲ್ಲಿ ರೋಗ ಲಕ್ಷಣಗಳು ಕಂಡುಬಂದಿರಲಿಲ್ಲ. ಆದರೆ ಬಳಿಕ ಶ್ವಾನದ ಮಾಲಕನಲ್ಲಿ ಸೋಂಕು ದೃಢಪಟ್ಟಿತ್ತು. ಚೀನದ ಸಂಶೋಧನೆಯ ಪ್ರಕಾರ ಬೆಕ್ಕಿನಿಂದ ಸೋಂಕು ಸುಲಭವಾಗಿ ಮುನುಷ್ಯರಿಗೆ ಹರಡಬಹುದಂತೆ. ಅಂಥ ಸಾಧ್ಯತೆ ಕಡಿಮೆ ಎಂದಿದೆ. ಬೆಕ್ಕುಗಳಿಗೆ ಮನುಷ್ಯರಿಂದ ಸೋಂಕು ಹರಡಬಹುದು.
ಈ ಮಧ್ಯೆ, ಬೆಲ್ಜಿಯಂನಲ್ಲಿ ಬೆಕ್ಕಿಗೆ ಕೋವಿಡ್ ಸೋಂಕು ತಗಲಿದೆ ಎಂದು ವರದಿಯಾಗಿದ್ದು, ಕ್ವಾರಂಟೈನ್ ವಿಧಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯಂತೆ ಕೋವಿಡ್ ಸೋಂಕು ಪ್ರಾಣಿಗಳಲ್ಲಿ ಕಾಣಿಸಿಕೊಂಡ ಕುರಿತು ಯಾವುದೇ ವರದಿಗಳು ಇಲ್ಲ. ಆದರೆ ಪ್ರಾಣಿಗಳಿಗೂ ಇವುಗಳು ಹರಡುವ ಸಾಧ್ಯತೆ ಇದೆ. ಆದ ಕಾರಣ ಸಾಕು ಪ್ರಾಣಿಗಳನ್ನು ಮುಟ್ಟುವ, ಆಹಾರ ನೀಡುವ ಸಂದರ್ಭ ಸರಿಯಾಗಿ ಸೋಪು ಬಳಸಿ ಕೈತೊಳೆಯುವಂತೆ ಸಲಹೆ ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.