ತಿಮಿಂಗಲ ವಾಂತಿ ಅಂಬರ್ಗ್ರಿಸ್ ಮಾರಾಟ ಯತ್ನ ; ಮೂವರ ಬಂಧನ
Team Udayavani, Apr 11, 2022, 11:19 PM IST
ಸಾಗರ: ಬೆಲೆಬಾಳುವ ತಿಮಿಂಗಲ ವಾಂತಿ ಅಂಬರ್ಗ್ರಿಸ್ ಮಾರಾಟಕ್ಕಾಗಿ ಸಾಗಣೆಗೆ ಯತ್ನಿಸುತ್ತಿದ್ದ ಸಂದರ್ಭ ಇಲ್ಲಿನ ಮೂವರನ್ನು ನಗರ ಠಾಣೆ ಪೊಲೀಸರು ಭಾನುವಾರ ಮಾಲು ಸಮೇತ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಶಿವಮೊಗ್ಗ ಜಿಲ್ಲಾ ಪೊಲೀಸರ ಮಾರ್ಗದರ್ಶನದಲ್ಲಿ ಇಲ್ಲಿನ ಪೊಲೀಸರು ರೈಲ್ವೆ ನಿಲ್ದಾಣದ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ತಿಮಿಂಗಿಲ ವಾಂತಿ ಅಕ್ರಮವಾಗಿ ಮಾರಾಟ ಮಾಡುವ ಜಾಲವನ್ನು ಬೇಧಿಸಿದ್ದಾರೆ. ಸ್ಥಳೀಯರಾದ ಅಬ್ದುಲ್ ಯಾನೆ ರಾಮಪ್ಪ(40) ಸಂದೀಪ್ ಜಾನ್ (49)ಮತ್ತು ವಿ.ಜೆ.ರೋಹಿತ್ (42) ಬಂಧಿತ ಆರೋಪಿಗಳು. ಅಕ್ರಮದಲ್ಲಿ ಭಾಗಿಯಾದವರಿಂದ ಮಾಹಿತಿಯನ್ನು ಆಧರಿಸಿ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ತಿಮಿಂಗಲದ ಕರುಳಿನಲ್ಲಿ ಹುಟ್ಟುವ ಘನ ಮೇಣದಂತಹ ಅಂಬರ್ಗ್ರಿಸ್‌ನ್ನು ಸುಗಂಧ ದ್ರವ್ಯ ಹಾಗೂ ಮಾದಕ ವಸ್ತು ತಯಾರಿಕೆಗೆ ಬಳಸಲಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಬಾಳುವ ವಸ್ತು ಇದಾಗಿದ್ದು. ಅರಣ್ಯ ಕಾಯಿದೆ ಅಡಿ ತಿಮಿಂಗಲ ವಾಂತಿ ಮಾರಾಟ ಅಪರಾಧವಾಗಿದೆ.
ಕಾರ್ಯಾಚರಣೆಯಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಿಪ್ರಸಾದ್, ಎಎಸ್‌ಪಿ ವಿಕ್ರಮ ಅಮಾಟೆ ಮಾರ್ಗದರ್ಶನದಲ್ಲಿ ಎಎಸ್‌ಪಿ ರೋಹನ್ ಜಗದೀಶ್, ನಗರ ಪೊಲೀಸ್ ಠಾಣಾ ಸಿಪಿಐ ಕೃಷ್ಣಪ್ಪ, ಕಾರ್ಗಲ್ ಪೊಲೀಸ್ ಇನ್‌ಸ್ಪೆಕ್ಟರ್ ತಿರುಮಲೇಶ್, ಪಿಎಸ್‌ಐ ಟಿ. ಡಿ. ಸಾಗರಕರ್, ಪೊಲೀಸ್ ಅಪರಾಧ ವಿಭಾಗದ ಸಹ ಸಿಬ್ಬಂದಿ ರತ್ನಾಕರ, ಸಂತೋಷ ನಾಯ್ಕ್, ಪ್ರವೀಣ್ ಕುಮಾರ್, ಹಝರತ್ ಅಲಿ, ಶ್ರೀಧರ್, ಹಜರತ್ ಅಲಿ, ಮಲ್ಲೇಶ್, ಈ ಮಿಂಚಿನ ಪೊಲೀಸರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ : ಯಾರಿದು… ರಾಜಸ್ಥಾನವನ್ನು ವಿನ್ ಮಾಡಿಸಿದ ಕುಲದೀಪ್ ಸೇನ್?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.