ಹೊಗಳಿಸಿಕೊಂಡು ಬಕೆಟ್ ಹಿಡಿಯುವ ರಾಜಕಾರಣಿ ನಾನಲ್ಲ : ಸಿಟಿ ರವಿ
Team Udayavani, Nov 3, 2020, 4:59 PM IST
ಚಿಕ್ಕಮಗಳೂರು : ಅಧಿಕಾರಕ್ಕೋಸಕರ ಬಕೆಟ್ ಹಿಡಿದು ರಾಜಕಾರಣಿ ನಾನಲ್ಲ ಅಧಿಕಾರಕ್ಕೆ ಅಂಟಿಕೊಳ್ಳುವ ಜಾಯಮಾನನೂ ನನ್ನದಲ್ಲ ಒಂದು ವೇಳೆ ಅಧಿಕಾರಕೊಸ್ಕರ ಬಕೆಟ್ ಹಿಡಿಯುವ ಕೆಲಸ ಮಾಡುತ್ತಿದ್ದರೆ 2012ಕ್ಕೂ ಮೊದಲೇ ಮಂತ್ರಿಯಾಗುತ್ತಿದೆ ಎಂದು ಸಚಿವ ಸಿಟಿ ರವಿ ಹೇಳಿದರು.
ಚಿಕ್ಕಮಗಳೂರಿನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು ಮಂತ್ರಿ ಸ್ಥಾನ ನನಗೆ ಸಿಕ್ಕಿರುವ ಅಧಿಕಾರ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನನಗೆ ಸಿಕ್ಕಿರುವ ಜವಾಬ್ದಾರಿ ಈ ಎರಡರಲ್ಲಿ ಜವಾಬ್ದಾರಿಯ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಹಾಗಾಗಿ ಅಧಿಕಾರದ ವ್ಯಾಮೋಹ ಜವಾಬ್ದಾರಿಯ ಕೆಲಸಕ್ಕೆ ಹಿನ್ನೆಡೆ ಆಗಬಾರದು, ನನ್ನ ರಾಜಿನಾಮೆಯನ್ನು ಅಂಗೀಕರಿಸುವಂತೆ ನಿನ್ನೆ ಕೂಡ ಸಿಎಂ ಅವರಲ್ಲಿ ಕೇಳಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಆರ್.ಆರ್.ನಗರ 25 ಸಾವಿರ, ಶಿರಾ 10 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತೇವೆ :
ಆರ್.ಆರ್.ನಗರ ಹಾಗೂ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಕಾಂಗ್ರೆಸ್ ಖಂಡಿತ ಸೋಲು ಅನುಭವಿಸುತ್ತದೆ . ಆರ್.ಆರ್.ನಗರ 25 ಸಾವಿರ, ಶಿರಾ 10 ಸಾವಿರಕ್ಕೂ ಅಧಿಕ ಮತಗಳಿಂದ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು, ಕಾಂಗ್ರೆಸ್ ಚುನಾವಣೆಯಲ್ಲಿ ಸೋತರೆ ಇವಿಎಂ ಮೇಲೆ ದೂರು ಹೊರೆಸುತ್ತಾರೆ, ಚುನಾವಣೆಯಲ್ಲಿ ಗೆದ್ರೆ ಜನಾದೇಶ, ಸೋತ್ರೆ ಇವಿಎಂ ಅಂತಾರೆ ಈ ರೀತಯ ಜನರನ್ನ ನೀವೆಲ್ಲೂ ನೋಡಲು ಸಾಧ್ಯವಿಲ್ಲ ಕಾಂಗ್ರೆಸ್ಸಿಗೆ ಇದೊಂದು ಕೆಟ್ಟ ಖಾಯಿಲೆ ಎಂದರು.
ಇದನ್ನೂ ಓದಿ:ಗಿನ್ನಿಸ್ ದಾಖಲೆಯ ಮೂಲಕ ಜಿಲ್ಲೆಯ ಕೀರ್ತಿಯನ್ನು ಬಾನೆತ್ತರಕ್ಕೆ ಹಾರಿಸಿದ ಸುರೇಶ್ ಯಾದವ್
ಅತ್ತೆ-ಸೊಸೆ ತಾಯಿ ಮಕ್ಕಳಂತೆ ಚೆನ್ನಾಗಿರಲಿ:
ಡಿ.ಕೆ.ರವಿ ತಾಯಿ ಸೊಸೆ ಕುಸುಮಾಳನ್ನ ಗೆಲ್ಲಿಸಿ ಎಂಬ ಹೇಳಿಕೆಗೆ ಪ್ರತಿಕ್ರೀಯಿಸಿದ ಸಿಟಿ.ರವಿ ಅತ್ತೆ-ಸೊಸೆ ಜಗಳವಾಡಲಿ ಎಂದು ಹೇಳೂದು ಇಲ್ಲ, ಬಯಸೂದು ಇಲ್ಲ ಅತ್ತೆ-ಸೊಸೆ ತಾಯಿ ಮಕ್ಕಳಂತೆ ಚೆನ್ನಾಗಿರಲಿ, ನಮಗೆ ಯಾರ ಮೇಲೂ ವ್ಯಕ್ತಿಗತವಾದ ವಿರೋಧವೂ ಇಲ್ಲ , ದ್ವೇಷವೂ ಇಲ್ಲ ನಮ್ಮ ತಾತ್ವಿಕ ಹೋರಾಟ ಕಾಂಗ್ರೆಸ್, ಜೆಡಿಎಸ್ ವಿರುದ್ಧ. ನಾವು ನಮ್ಮ ಪಕ್ಷಗೆಲ್ಲಬೇಕೆಂದು ಬಯಸುತ್ತೇವೆ, ಅತ್ತೆ-ಸೊಸೆ ತಾಯಿ ಮಕ್ಕಳಂತೆ ಇರಬೇಕೆಂಬುದು ನಮ್ಮ ಬಯಕೆ ಮುಖ ನೋಡಲ್ಲ ಅಂತಿದ್ದೋರು ನೋಡುವಂತಾಗಿರೋದು ಸಂತೋಷದ ಸಂಗತಿ ಎಂದರು.
ಇದನ್ನೂ ಓದಿ:ಹಿರಿಯ ನಟ ಎಚ್.ಜಿ ಸೋಮಶೇಖರ್ ನಿಧನ
ಬಿಹಾರದಲ್ಲಿ ಬಿಜೆಪಿ ಸಿಂಗಲ್ ಲಾರ್ಜಸ್ಟ್ ಪಾರ್ಟಿ:
ಬಿಹಾರದಲ್ಲಿ ಬಿಜೆಪಿ ಸಿಂಗಲ್ ಲಾರ್ಜಸ್ಟ್ ಪಾರ್ಟಿ ಎನ್ನಲಾಗುತ್ತಿದೆ, ಅಲ್ಲದೆ ಆತಂರಿಕ ವರದಿಯ ಪ್ರಕಾರ ನಿತೀಶ್ ನೇತೃತ್ವದ ಎನ್.ಡಿ.ಎ ಅಧಿಕಾರಕ್ಕೆ ಬರುತ್ತೆ ಎನ್ನುತ್ತಿದೆ, ಜನರಿಗೆ ಕೇಂದ್ರದ ಯೋಜನೆಯ ಲಾಭ ತಲುಪಿದೆ ಇದರಿಂದ ಸೈಲೆಂಟ್ ಓಟರ್ಸ್, ಮಹಿಳೆಯರು ಬಿಜೆಪಿಗೆ ಮತ ಹಾಕುತ್ತಾರೆ, ಗೂಂಡ ರಾಜ್ಯ ಕಂಡವರಿಗೆ ನಿತೀಶ್ ನೇತೃತ್ವದಲ್ಲಿ ಕಾನೂನು ಸುವ್ಯವಸ್ಥೆ, ಕೆಲಸ ಆಗ್ತಿರೋದು ಮತವಾಗಿ ಪರಿಣಮಿಸಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.