ಔಷಧೀಯವಾಗಿಯೂ ಅತ್ಯಂತ ಉಪಯುಕ್ತ; ಕದಳಿ ಎಂಬ ಕಲ್ಪವೃಕ್ಷ
ಆಧುನಿಕ ವಿಜ್ಞಾನ ಸಂಶೋಧನೆಯಲ್ಲೂ ಸಾಬೀತಾದ ವಿಶೇಷ ತಳಿ
Team Udayavani, Aug 27, 2021, 12:34 PM IST
ಬಾಳೆ ಹಣ್ಣು ಸಾಂಪ್ರದಾಯಿಕ ಆಚರಣೆಗಳು, ಪೂಜೆ ಪುರಸ್ಕಾರ, ಆಹಾರ ಪದ್ಧತಿಗಳಲ್ಲಿ, ಔಷಧವಾಗಿಯೂ ಅತ್ಯಂತ ಪ್ರಮುಖವಾಗಿ ಬಳಕೆಯಾಗುವ ಹಣ್ಣು. ಕದಳೀ ಫಲ ಎಂಬ ಸಂಸ್ಕತ ಹೆಸರನ್ನು ಹೊಂದಿರುವ, ಮ್ಯುಸಾ ಪ್ಯಾರಾಡಿಸಿಯಾಕಾ ಎಂಬ ವೈಜ್ಞಾನಿಕ ಹೆಸರುಳ್ಳುಕದಳಿ ಬಾಳೆಹಣ್ಣು ಎಲ್ಲ ಕಾಲಗಳಲ್ಲೂ ದೊರೆಯುವ ಹಣ್ಣು. ಇದು ಆಹಾರ ರೂಪದಲ್ಲಿ ಮಾತ್ರವಲ್ಲದೆ ಔಷಧೀಯವಾಗಿಯೂ ಅತ್ಯಂತ ಉಪಯುಕ್ತ.
ಸಸಾರಜನಕ, ಸಿ ಜೀವಸತ್ವ ಹಾಗೂ ಪೊಟ್ಯಾಶಿಯಂಗಳನ್ನು ವಿಪುಲವಾಗಿ ಹೊಂದಿರುವುದರಿಂದ ಔಷಧಕ್ರಮದಲ್ಲೂ ವ್ಯಾಪಕವಾಗಿ ಬಳಕೆಯಾಗಿ ಯಶಸ್ಸುಗೊಂಡ, ಆಧುನಿಕ ವಿಜ್ಞಾನ ಸಂಶೋಧನೆಯಲ್ಲೂ ಸಾಬೀತಾದ ವಿಶೇಷ ತಳಿ.
ಎಡೆಬೆಳೆ
ಕರಾವಳಿ ಭಾಗದಲ್ಲಿ ಕದಳಿ ಬಾಳೆಕೃಷಿ ನೇಂದ್ರ, ಕ್ಯಾವಂಡಿಶ್‌ಗಳಂತೆ ಮುಖ್ಯ ಬೆಳೆಯಾಗಿ ಬೆಳೆಯದೆ ಎಡೆಬೆಳೆಯಾಗಿ ಅಥವಾ ಉಪಬೆಳೆಯಾಗಿ ರೈತರಿಗೆ ಸಹಾಯಕವಾಗಿತ್ತು. ಆದರೆ ವಾಣಿಜ್ಯ ಬೆಳೆಯಾಗಿ ಬೆಳೆಸುವ ಬಾಳೆ ತಳಿಗಳ ಮಧ್ಯೆಕದಳಿ ಬಾಳೆಯನ್ನು ಬೆಳೆಸುವವರು ವಿರಳವಾಗಿದ್ದಾರೆ.
ಕದಳಿಯಲ್ಲೂ ಉಪತಳಿ
ಕದಳಿ ಬಾಳೆಯಲ್ಲೂ ನೈಕದಳಿ,ಕಾವಿರಕದಳಿ, ಏಲಕ್ಕಿಕದಳಿ ಮೊದಲಾದ ಉಪ ತಳಿಗಳಿವೆ. ಸಂಪೂರ್ಣವಾಗಿ ಉಪಯೋಗಕಾರಿಯಾಗಿರುವ ತೆಂಗಿನ ಮರಕ್ಕೆ ಹೇಗೆಕಲ್ಪವೃಕ್ಷ ಎಂಬ ಹೆಸರಿದೆಯೋಕದಳಿ ಬಾಳೆ ಗಿಡಕ್ಕೂ ಈ ಹೆಗ್ಗಳಿಕೆ ಇದೆ. ಕದಳಿ ಬಾಳೆ ಹಣ್ಣು ಆಚರಣೆ -ಅನುಸರಣೆಯಲ್ಲಿ ಮುಖ್ಯವಾಗಿರುವಂತೆ ಸಂಪೂರ್ಣ ಕದಳಿ ಬಾಳೆ ಗಿಡವೇ ಉಪಯುಕ್ತವಾಗಿ ಗುರುತಿಸಿಕೊಂಡಿದೆ.ಕದಳಿ ಬಾಳೆ ಗಿಡಗಳಿದ್ದರೆ ರೋಗ ದೂರ ಎಂಬುದು ಹಿರಿಯರಿಂದಲೇ ಬಂದ ಮಾತು.
ಕದಳಿ ಬಾಳೆಗಿಡದ ನಾರು ಹಗ್ಗವಾಗಿ ಬಳಸಲು ಅತ್ಯಂತ ಸೂಕ್ತ. ಇದರ ದಂಡು (ತಿರುಳು), ಬಾಳೆ ಹೂ (ಪೂಂಬೆ) ಪದಾರ್ಥಕ್ಕೆ ಬಳಕೆಯಾಗುತ್ತದೆ. ದಂಡಿನಿಂದ ಮಾಡಿದ ಔಷಧವನ್ನು ಹೊಟ್ಟೆಯಲ್ಲಿರುವ ಕಲ್ಮಶ ಹೊರಹಾಕಲು, ಸಕ್ಕರೆ ಕಾಯಿಲೆಗೆ ಔಷಧವಾಗಿ ಬಳಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.