Cyclone Fengal: ಫೈಂಜಾಲ್‌ಗೆ 3 ಬಲಿ: ಪುದುಚೇರಿಯಲ್ಲಿ 30 ವರ್ಷದಲ್ಲೇ ಗರಿಷ್ಠ ಮಳೆ!
24 ಗಂಟೇಲಿ 46 ಸೆಂ.ಮೀ. ಮಳೆ, ಚಂಡಮಾರುತ ದುರ್ಬಲ, ತ.ನಾಡಿನ ವಿಲ್ಲುಪುರಂನಲ್ಲಿ 49 ಸೆಂ.ಮೀ. ಮಳೆ, 2 ಜಿಲ್ಲೆಗಳಲ್ಲಿ ಇಂದೂ ಶಾಲೆಗಳಿಗೆ ರಜೆ
Team Udayavani, Dec 2, 2024, 7:30 AM IST
ಪುದುಚೇರಿ/ಚೆನ್ನೈ: ಪುದುಚೇರಿ ಕರಾವಳಿ ಸಮೀಪ ಶನಿವಾರ ರಾತ್ರಿಯೇ ಅಪ್ಪಳಿಸಿರುವ ಫೈಂಜಾಲ್ ಚಂಡಮಾರುತ ಭಾನುವಾರ ದುರ್ಬಲಗೊಂಡಿದ್ದರೂ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಮಳೆಯ ಅಬ್ಬರ ಮಾತ್ರ ತಗ್ಗಿಲ್ಲ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪುದುಚೇರಿ ಅಕ್ಷರಶಃ ನಲುಗಿದ್ದು, ಕಳೆದ 30 ವರ್ಷಗಳಲ್ಲೇ ಅತ್ಯಧಿಕ ಅಂದರೆ 46 ಸೆಂ.ಮೀ. ಮಳೆ ಕೇವಲ 24 ಗಂಟೆಗಳ ಅವಧಿಯಲ್ಲಿ ಸುರಿದಿದೆ. 2004ರ ಅ.31ರಂದು ಸುರಿದ 21 ಸೆಂ.ಮೀ. ಮಳೆಯೇ ಈ ಹಿಂದಿನ ಅತ್ಯಧಿಕ ಮಳೆಯಾಗಿತ್ತು.
3 ಸಾವು:
ಸೈಕ್ಲೋನ್‌ನಿಂದಾಗಿ ಭಾರೀ ಮಳೆ, ಪ್ರವಾಹ ಉಂಟಾಗಿದ್ದು ಚೆನ್ನೈನಲ್ಲಿ ವಿದ್ಯುತ್ ಅವಘಡಗಳಿಂದಾಗಿಯೇ ಪ್ರತ್ಯೇಕ ಘಟನೆಗಳಲ್ಲಿ 3 ಮಂದಿ ಮೃತಪಟ್ಟಿದ್ದಾರೆ. ಭಾರೀ ಬಿರುಗಾಳಿಯ ಪರಿಣಾಮ ಎರಡೂ ರಾಜ್ಯಗಳಲ್ಲಿ ಹಲವು ಮರಗಳು ಧರೆಗುರುಳಿದ್ದು, ಮಳೆಯಿಂದಾಗಿ ಅನೇಕ ತಗ್ಗುಪ್ರದೇಶಗಳು, ಕರಾವಳಿ ತೀರ ಪ್ರದೇಶಗಳು ಮುಳುಗಡೆಯಾಗಿವೆ. ಭಾರತೀಯ ಸೇನೆಯೂ ನೆರವಿಗೆ ಧಾವಿಸಿದ್ದು, ದೋಣಿಗಳ ಮೂಲಕ ಜನರನ್ನು ರಕ್ಷಿಸಿವೆ. ಪುದುಚೇರಿಯ 3 ಭಾಗಗಳಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 200 ಮಂದಿಯನ್ನು ಯೋಧರು ರಕ್ಷಿಸಿದ್ದಾರೆ.
ಧಾರಾಕಾರ ಮಳೆ:
ತ.ನಾಡಿನ ವಿಲ್ಲುಪುರಂನಲ್ಲಿ 24 ಗಂಟೆಗಳ ಅವಧಿಯಲ್ಲಿ ಅತ್ಯಧಿಕ ಅಂದರೆ 49 ಸೆಂ.ಮೀ., ನೆಮ್ಮೆಲಿಯಲ್ಲಿ 46 ಸೆಂ.ಮೀ., ವನೂರಿನಲ್ಲಿ 41 ಸೆಂ.ಮೀ. ಮಳೆಯಾಗಿದೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಾಹಿತಿ ನೀಡಿದ್ದಾರೆ. ಸಿಎಂ ಸ್ಟಾಲಿನ್ ಮತ್ತು ಡಿಸಿಎಂ ಉದಯನಿಧಿ ಸ್ಟಾಲಿನ್ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದಾರೆ.
ವಿಮಾನ ಕಾರ್ಯಾಚರಣೆ ಪುನಾರಂಭ:
ಚಂಡಮಾರುತದ ಹಿನ್ನೆಲೆಯಲ್ಲಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರವನ್ನು 16 ಗಂಟೆ ಕಾಲ ಸ್ಥಗಿತಗೊಳಿಸಲಾಗಿತ್ತು. ಭಾನುವಾರ ಬೆಳಗ್ಗೆಯಿಂದ ಸಂಚಾರ ಪುನಾರಂಭಗೊಂಡಿದೆ. ಇದೇ ವೇಳೆ, ವೆಲ್ಲೂರು, ತಿರುವಣ್ಣಾಮಲೈ ಜಿಲ್ಲೆಗಳಲ್ಲಿ ಸೋಮವಾರವೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಲ್ಯಾಂಡಿಂಗ್ ವೇಳೆ ಓಲಾಡಿದ ವಿಮಾನ: ವಿಡಿಯೋ ವೈರಲ್
ಭಾರೀ ಬಿರುಗಾಳಿಯ ನಡುವೆಯೇ ಚೆನ್ನೈನಲ್ಲಿ ಇಂಡಿಗೋ ವಿಮಾನವೊಂದು ಲ್ಯಾಂಡಿಂಗ್‌ಗೆ ಪ್ರಯತ್ನಿಸಿದ್ದು, ಈ ವೇಳೆ ಗಾಳಿಯ ಹೊಡೆತಕ್ಕೆ ಸಿಲುಕಿ ವಿಮಾನವು ಓಲಾಡಿದ ಘಟನೆ ನಡೆದಿದೆ. ರನ್‌ವೇಗಿಂತ ಕೆಲವೇ ಅಡಿ ಎತ್ತರದಲ್ಲಿ ವಿಮಾನವು ಎಡಕ್ಕೆ ವಾಲಿದ್ದು, ಕೂಡಲೇ ಪೈಲಟ್ ವಿಮಾನವನ್ನು ಲ್ಯಾಂಡ್ ಮಾಡದೇ ಮತ್ತೆ ಹಾರಿಸಿದ್ದಾರೆ. ಈ ವೇಳೆ ವಿಮಾನ ಓಲಾಡುತ್ತಿರುವ ಆತಂಕಕಾರಿ ವಿಡಿಯೋ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Survival: ಜನಸಂಖ್ಯೆ ಕುಸಿತ ತಡೆಗೆ ಮೂರು ಮಕ್ಕಳನ್ನು ಪಡೆಯಿರಿ: ಮೋಹನ್ ಭಾಗವತ್
Scraps: ಜಗನ್ ಸರ್ಕಾರ ರಚಿಸಿದ್ದ ವಕ್ಫ್ ಬೋರ್ಡ್ ವಿಸರ್ಜನೆ: ಆಂಧ್ರ ಸರ್ಕಾರ ಘೋಷಣೆ
Maharashtra Govt. Formation: ಹೊಸ ಸಿಎಂಗೆ ಸಂಪೂರ್ಣ ಸಹಕಾರ ನೀಡುವೆ: ಏಕನಾಥ ಶಿಂಧೆ
Controversy Statement: ಬಾಂಗ್ಲಾ-ಭಾರತ ನಡುವೆ ವ್ಯತ್ಯಾಸ ಕಾಣುತ್ತಿಲ್ಲ: ಮೆಹಬೂಬಾ ವಿವಾದ
Book Release: ಟಿಪ್ಪು ಅತ್ಯಂತ ಸಂಕೀರ್ಣ ವ್ಯಕ್ತಿ: ವಿದೇಶಾಂಗ ಸಚಿವ ಜೈಶಂಕರ್
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Football: ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ಘರ್ಷಣೆ… 100ಕ್ಕೂ ಹೆಚ್ಚು ಸಾ*ವು
ವಿಮಾನದಲ್ಲಿ ತಾಂತ್ರಿಕ ದೋಷ: ಅನ್ನ ಆಹಾರವಿಲ್ಲದೆ 13 ಗಂಟೆ ಕುವೈತ್‌ನಲ್ಲೇ ಪ್ರಯಾಣಿಕರು ಬಾಕಿ
Tumkur: ಬಸ್ ಪಲ್ಟಿಯಾಗಿ ಮೂವರು ಸಾವು
Survival: ಜನಸಂಖ್ಯೆ ಕುಸಿತ ತಡೆಗೆ ಮೂರು ಮಕ್ಕಳನ್ನು ಪಡೆಯಿರಿ: ಮೋಹನ್ ಭಾಗವತ್
ICC Chairman: ಐಸಿಸಿಗೆ ನೂತನ ಸಾರಥಿ ಜಯ್ ಶಾ; ಅಧಿಕಾರ ಸ್ವೀಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.