Cyclone Fengal: ಚಂಡಮಾರುತ ಪರಿಣಾಮ: ರಾಜ್ಯದ ಹಲವೆಡೆ ತೀವ್ರ ಮಳೆಗೆ ಭಾರೀ ಬೆಳೆ ಹಾನಿ
ಕಾಫಿ, ಕಟಾವಾದ ಭತ್ತ, ರಾಗಿ, ಗೋಧಿ ನೀರುಪಾಲು
Team Udayavani, Dec 4, 2024, 7:20 AM IST
ಬೆಂಗಳೂರು/ಹುಬ್ಬಳ್ಳಿ: ಫೈಂಜಾಲ್ ಚಂಡಮಾರುತದ ಪರಿಣಾಮ ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ಜಮೀನಿನಲ್ಲಿ ಕಟಾವು ಮಾಡಿರುವ ಹಾಗೂ ಕಟಾವಿಗೆ ಬಂದಿದ್ದ ಭತ್ತ ಹಾಗೂ ರಾಗಿ ಬೆಳೆಗೆ ನೀರು ನುಗ್ಗಿ ರೈತರಿಗೆ ಭಾರೀ ನಷ್ಟವಾಗಿದೆ.
ಹಲವೆಡೆ ಮಳೆಯಿಂದಾಗಿ ಕಟಾವು ಮಾಡಿರುವ ಹಾಗೂ ಕಟಾವಿಗೆ ಬಂದಿರುವ ರಾಗಿ ಬೆಳೆ ಹಾಳಾಗುತ್ತಿದೆ. ಮಳೆಯಿಂದ ನೆನೆದು ತೆನೆಯ ಭಾರ ಹೆಚ್ಚಾಗಿ ಹೊಲದಲ್ಲೇ ಬೀಳುತ್ತಿದೆ. ರಾಗಿ ಕೊಯ್ಲು ಯಂತ್ರಗಳು ನಿರಂತರ ಮಳೆಯಿಂದ ಜಮೀನಿನೊಳಗೆ ಹೋಗಲು ಸಾಧ್ಯವಾಗದ ಕಾರಣ ಕೆಲವು ರೈತರು ಕೂಲಿ ಕಾರ್ಮಿಕರನ್ನು ಕರೆದು ರಾಗಿ ತೆನೆ ಕಟಾವು ಮಾಡಿಸುತ್ತಿದ್ದಾರೆ. ಮಳೆ ಮುಂದುವರಿದರೆ ದನಕರುಗಳಿಗೂ ಮೇವು ಸಿಗದಂತಾಗಲಿದೆ. ಚಿತ್ರದುರ್ಗ, ಕೊಪ್ಪಳ, ಧಾರವಾಡದಲ್ಲಿ ಬಿಳಿಜೋಳ, ಗೋಧಿ, ಕಡಲೆ, ಕುಸುಬೆ, ಬಳ್ಳಾರಿಯಲ್ಲಿ ಕಟಾವಿಗೆ ಬಂದಿದ್ದ ಭತ್ತದ ಬೆಳೆ ನೆಲಕಚ್ಚಿದೆ.
ಕಾಫಿ ಬೆಳೆಗೂ ಆತಂಕ
ಸಕಲೇಶಪುರ ತಾಲೂಕಿನಲ್ಲಿ ಕೇವಲ ಶೇ. 10 ರಿಂದ 15ರಷ್ಟು ಮಾತ್ರ ಭತ್ತ ಕಟಾವು ಮಾಡಲಾಗಿದ್ದು, ಗದ್ದೆಯಲ್ಲಿ ಕಟಾವು ಮಾಡಿ ಇಟ್ಟಿದ್ದ ಭತ್ತ ಸಂಪೂರ್ಣವಾಗಿ ಮಳೆ ನೀರಿನಿಂದ ನೆನೆದು ಹೋಗಿದೆ. ಅಕಾಲಿಕ ಮಳೆ ಕಾಫಿ ಬೆಳೆ ಗಾರರಲ್ಲೂ ಆತಂಕ ಸೃಷ್ಟಿಸಿದೆ.
ಅರೇಬಿಕಾ ಕಾಫಿ ಕೊಯ್ಲು ಸಮಯ ಇದಾಗಿದ್ದು, ಮಳೆಯಿಂದಾಗಿ ಕಾಫಿ ಕುಯ್ಲು ಮಾಡಲು ಅಡಚಣೆಯುಂಟಾಗಿದೆ. ಕೊçಲಾದ ಕಾಫಿಯನ್ನು ಒಣಗಿಸುವುದೇ ಬೆಳೆಗಾರರಿಗೆ ಸವಾಲಾಗಿದೆ. ರೋಬಸ್ಟ್ ಕಾಫಿ ಅರ್ಧಂಬರ್ಧ ಹಣ್ಣಾಗಿದೆ. ಕೋಲಾರದಲ್ಲಿ ಜಡಿ ಮಳೆಗೆ ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಟೊಮ್ಯಾಟೋ ಬೆಳೆ ಹಾನಿಯಾಗಿದೆ. ಆಲೂಗಡ್ಡೆ, ಕ್ಯಾಪ್ಸಿಕಂ, ಮೆಣಸಿನಕಾಯಿ ಬೆಳೆಗಳಿಗೆ ತೇವಾಂಶ ಹೆಚ್ಚಾಗಿ ಫಂಗಸ್ ವೈರಸ್, ಬಿಳಿ ಸೊಳ್ಳೆ ಮತ್ತು ಅಂಗಮಾರಿ ಕಾಟ ಹೆಚ್ಚಾಗುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಬಸವರಾಜ್ ಗುರಿಕಾರ ಆಯ್ಕೆ
ಜೀವನ ಅತ್ಯಮೂಲ್ಯ, ಮಾದಕ ವ್ಯಸನ ಒಳ್ಳೆಯದಲ್ಲ: ವಿದ್ಯಾರ್ಥಿಗಳಿಗೆ ನಟ ಉಪೇಂದ್ರ ಕಿವಿಮಾತು
Belagavi: ಜೀವ ವಿಮಾ ಪಾಲಿಸಿಯ ಹಣಕ್ಕಾಗಿ ಸಹೋದರನನ್ನೇ ಕೊ*ಲೆ ಮಾಡಿದ ತಮ್ಮ
ಪ್ರವಾಸಿಗರೇ ಗಮನಿಸಿ.. ಈ ನಾಲ್ಕು ದಿನ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ನಿರ್ಬಂಧ
Chikkamagaluru: ಹಣ ನೀಡುವ ವಿಚಾರದಲ್ಲಿ ಕ್ಯಾಷಿಯರ್ ಮತ್ತು ಯುವಕರ ನಡುವೆ ಮಾರಾಮಾರಿ
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
CM, DCM, ಗೃಹಸಚಿವರ ವಿರೋಧ ಪೋಸ್ಟ್ ;10 ಜಿಲ್ಲೆಯ 15 ಠಾಣೆಗಳಲ್ಲಿ ಪ್ರಕರಣ ದಾಖಲು
Mahayuti Claim: ಮಹಾರಾಷ್ಟ್ರಕ್ಕಾಗಿ ನಾವು ಮೂವರು ಒಟ್ಟಾಗಿ ಕೆಲಸ ಮಾಡುತ್ತೇವೆ: ಫಡ್ನವೀಸ್
Dharwad: ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಬಸವರಾಜ್ ಗುರಿಕಾರ ಆಯ್ಕೆ
Dandeli: ಪಿಎಸ್ಐ ಕಿರಣ್ ಪಾಟೀಲ್ ನೇತೃತ್ವದಲ್ಲಿ ಮಿಂಚಿನ ಕಾರ್ಯಾಚರಣೆ
Allu Arjun: ʼಪುಷ್ಪ-2ʼ ಬಳಿಕ ಅಲ್ಲು ಅರ್ಜುನ್ ಮುಂಬರುವ ಸಿನಿಮಾಗಳು ಯಾವುವು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.