ಕೇಂದ್ರ ನೌಕರರ ತುಟ್ಟಿ ಭತ್ತೆ ಏರಿಕೆ : 2020 ಜ.1ರಿಂದ ಮೂರು ಅವಧಿಗೆ ಶೇ. 17ರಷ್ಟು ಹೆಚ್ಚಳ
Team Udayavani, Jul 15, 2021, 7:20 AM IST
ಹೊಸದಿಲ್ಲಿ : ತುಟ್ಟಿ ಭತ್ತೆ ಹೆಚ್ಚಳಕ್ಕಾಗಿ ಒಂದೂವರೆ ವರ್ಷದಿಂದ ಕಾಯುತ್ತಿದ್ದ ಕೇಂದ್ರ ಸರಕಾರಿ ನೌಕರರಿಗೆ ಮೋದಿ ಸರಕಾರ ಸಿಹಿ ಸುದ್ದಿ ನೀಡಿದೆ. 2021ರ ಜು. 1ರಿಂದ ಅನ್ವಯವಾಗುವಂತೆ ಶೇ. 11ರಷ್ಟು ತುಟ್ಟಿ ಭತ್ತೆ ಹೆಚ್ಚಿಸಲಾಗಿದ್ದು, ವೇತನದಲ್ಲಿ ಭಾರೀ ಹೆಚ್ಚಳವಾಗಲಿದೆ. ಮುಂದಿನ ತಿಂಗಳೇ ಹೊಸ ವೇತನವು ಫಲಾನುಭವಿಗಳ ಕೈಸೇರಲಿದೆ.
ಬುಧವಾರ ಪ್ರಧಾನಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೂರು ಕಂತಿನ ತುಟ್ಟಿ ಭತ್ತೆಯನ್ನು ಪುನಃ ಸ್ಥಾಪನೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. 7ನೇ ವೇತನ ಆಯೋಗದ ಅನ್ವಯ ತುಟ್ಟಿ ಭತ್ತೆ ಹೆಚ್ಚಿಸಲಾಗಿದೆ. ಸದ್ಯ ಶೇ. 17ರಷ್ಟು ಇದ್ದು ಶೇ. 28ರಷ್ಟಕ್ಕೆ ಏರಿಸಲಾಗಿದೆ.
ಒಂದೂವರೆ ವರ್ಷದಿಂದ ಏರಿಕೆಯಾಗಿಲ್ಲ
2020ರ ಜ. 1ರಿಂದಲೇ ಡಿಎ ಏರಿಕೆಯಾಗಿಲ್ಲ. ಜು. 1ರಂದು ವರ್ಷದ ಮೊದಲ ಕಂತು ಸೇರಿ ಶೇ. 4ರಷ್ಟು ಏರಿಕೆಗೆ ಕೇಂದ್ರ ನಿರ್ಧರಿಸಿತ್ತು. ಬಳಿಕ 2020ರ ಜುಲೈಯಲ್ಲಿ ಶೇ. 3 ಮತ್ತು 2021ರ ಜನವರಿಯಲ್ಲಿ ಶೇ. 4ರಷ್ಟು ಏರಿಕೆಗೆ ನಿರ್ಧಾರ ಮಾಡಲಾಗಿತ್ತು. ಕೊರೊನಾದಿಂದಾಗಿ ಜಾರಿ ಮಾಡಿಲ್ಲ. ಈಗ ಜು. 1ರಿಂದ ಅನ್ವಯವಾಗುವಂತೆ ಶೇ. 11ರಷ್ಟು ಏರಿಕೆ ಮಾಡಲಾಗಿದೆ. ಅಂದರೆ ಕಳೆದ ಮೂರು ಕಂತುಗಳಲ್ಲಿ ಏರಿಕೆ ಮಾಡಬೇಕಾದುದನ್ನು ಒಂದೇ ಬಾರಿಗೆ ಏರಿಸಿ ಆದೇಶ ಹೊರಡಿಸಲಾಗಿದೆ. ಆದರೆ ಇದಕ್ಕೆ ಅನ್ವಯವಾಗುವಂತೆ ಅರಿಯರ್ಸ್ ನೀಡುವುದಿಲ್ಲ. ಭತ್ತೆ ಹೆಚ್ಚಳದಿಂದಾಗಿ ನೌಕರರು ಮತ್ತು ಪಿಂಚಣಿದಾರರ ಟೇಕ್ ಹೋಂ ವೇತನ ಹೆಚ್ಚಳವಾಗಲಿದೆ ಎಂದು ವಾರ್ತಾ ಮತ್ತು ಪ್ರಚಾರ ಇಲಾಖೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಲೆಕ್ಕಾಚಾರ ಹೇಗೆ ?
ಈಗಷ್ಟೇ ಕೇಂದ್ರ ಸರಕಾರಿ ಹುದ್ದೆಗೆ ಸೇರಿರುವ ನೌಕರನೊಬ್ಬನ ಮೂಲ ವೇತನ 18 ಸಾವಿರ ರೂ. ಇದ್ದರೆ ಹೊಸ ತುಟ್ಟಿಭತ್ತೆ ಅನ್ವಯ 2 ಸಾವಿರ ರೂ. ಹೆಚ್ಚಾಗಿ ಸಿಗಲಿದೆ. ಇದರ ಜತೆ ಹಳೆಯ ಶೇ. 17 ಭತ್ತೆ ಸೇರಿಸಿದರೆ ಮೂಲ ವೇತನ 18 ಸಾವಿರ ರೂ. ಇರುವಾತ ಇನ್ನು 5,040 ಡಿಎ ಪಡೆಯಲು ಅರ್ಹನಾಗುತ್ತಾನೆ. ವರ್ಷಕ್ಕೆ 24 ಸಾವಿರ ರೂ. ಹೆಚ್ಚುವರಿ ಭತ್ತೆ ಪಡೆಯುತ್ತಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್ ವಿರುದ್ಧ ವರ್ಮಾ
New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ
Thane; ಕ್ರಿಮಿನಲ್ ಕೇಸ್ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ
ಹಿರಿಯ ಪರಮಾಣು ವಿಜ್ಞಾನಿ ರಾಜಗೋಪಾಲ್ ಚಿದಂಬರಂ ವಿಧಿವಶ: ಪ್ರಧಾನಿ ಮೋದಿ ಸಂತಾಪ
Tamilnadu: ಪಟಾಕಿ ತಯಾರಿಕೆ ಕಾರ್ಖಾನೆಯಲ್ಲಿ ಸ್ಫೋಟ- ಆರು ಮಂದಿ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.