ದಿನಭವಿಷ್ಯ: ಅಪರಿಚಿತರೊಡನೆ ಅನಾವಶ್ಯಕವಾಗಿ ಸ್ನೇಹಕ್ಕೆ ಅವಕಾಶವನ್ನು ಕೊಡದಿರಿ
Team Udayavani, Feb 10, 2021, 7:31 AM IST
ಮೇಷ: ರಾಜಕೀಯ ವಲಯದಲ್ಲಿ ಆಗಾಗ ನಿಮ್ಮ ವರ್ಚಸ್ಸು ಕಳೆಗುಂದಲಿದೆ. ಆರೋಗ್ಯದ ಮೇಲೆ ನಕಾರಾತ್ಮಕ ಪ್ರಭಾವ ಉಂಟು ಮಾಡಲಿದೆ. ಅಪರಿಚಿತರೊಡನೆ ಅನಾವಶ್ಯಕವಾಗಿ ಸ್ನೇಹಕ್ಕೆ ಅವಕಾಶವನ್ನು ಕೊಡದಿರಿ.
ವೃಷಭ: ಆಗಾಗ ಆತಂಕಗಳನ್ನು ಸೃಷ್ಟಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದಕ್ಕೆಲ್ಲಾ ರಾಹು ಗ್ರಹದ ಪ್ರತಿಕೂಲತೆಯು ಕಾರಣವಾಗಲಿದೆ. ಮಾನಸಿಕ ಅಸ್ಥಿರತೆಯು ಉದ್ವೇಗಕ್ಕೆ ಕಾರಣವಾಗಲಿದೆ. ಕಿರು ಸಂಚಾರವಿದೆ.
ಮಿಥುನ: ವ್ಯಾಪಾರ, ವ್ಯವಹಾರದಲ್ಲಿ ಯಾರನ್ನೂ ನಂಬದಂತಹ ಪರಿಸ್ಥಿತಿಯು ಉದ್ಭವವಾಗಲಿದೆ. ಕಾರ್ಯ ರಂಗದಲ್ಲಿ ಹೊಸಬರು ನಿಮ್ಮನ್ನು ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ. ಅನೇಕ ರೀತಿಯಲ್ಲಿ ವಿರೋಧಿಗಳು ಕಿರುಕುಳ ನೀಡಿಯಾರು.
ಕರ್ಕ: ಬಿಡುವಿನ ವೇಳೆಯಲ್ಲಿ ಕೆಲವೊಂದು ವಿಚಾರಗಳಲ್ಲಿ ಆದಾಯ ತರುವ ನಿರ್ದಿಷ್ಟ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿರಿ. ವಿದ್ಯಾರ್ಥಿಗಳಿಗಂತೂ ಏಕಾಗ್ರತೆ ಅಸಾಧ್ಯ ಅನಿಸಬಹುದು. ಆತ್ಮಸ್ಥೈರ್ಯ ಹಾಗೂ ಪರಿಶ್ರಮ ಅಗತ್ಯವಿದೆ.
ಸಿಂಹ: ಹಣಕಾಸಿನ ವಿಚಾರದಲ್ಲಿ ಹಲವು ದಾರಿಗಳು ತೆರೆದರೂ ಖರ್ಚುವೆಚ್ಚಗಳು ಅಧಿಕವಾಗಿ ತೋರಿಬರಲಿದೆ. ವೃತ್ತಿರಂಗದಲ್ಲಿ ನಿಮ್ಮ ನಡೆ ಎಚ್ಚರಿಕೆಯದಾಗಿರಲಿ. ಸಾಂಸಾರಿಕವಾಗಿ ಸಂತೋಷ, ತೃಪ್ತಿ ಇದ್ದರೂ ಉದ್ವೇಗವಿರುತ್ತದೆ.
ಕನ್ಯಾ: ಇತರರ ಸಾಲಕ್ಕೆ ಜಾಮೀನುದಾರರಾಗಿ ನಿಲ್ಲಬೇಡಿರಿ. ವಂಚನೆಗೆ ಅಸ್ಪದವಾದೀತು. ರಾಜಕೀಯ ವರ್ಗದವರಿಗೆ ಯಶಸ್ಸು ತೋರಿಬರಲಿದೆ. ಹಿರಿಯರ ಆರೋಗ್ಯಭಾಗ್ಯಕ್ಕಾಗಿ ಚಿಕಿತ್ಸೆಯ ಖರ್ಚು ತರುವುದು.
ತುಲಾ: ವೈವಾಹಿಕ ಭಾಗ್ಯಕ್ಕಾಗಿ ಯೋಗ್ಯ ವಯಸ್ಕರು ಹೊಂದಿಕೊಳ್ಳಬೇಕಾದೀತು. ಪ್ರಯತ್ನಬಲದಿಂದ ಹಿಡಿದ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ ಇರುತ್ತದೆ. ಇತರ ವ್ಯವಹಾರಗಳಲ್ಲಿ ಲಾಭದಾಯಕ ಆದಾಯ ಕಂಡುಬರಲಿದೆ.
ವೃಶ್ಚಿಕ: ದೂರ ಸಂಚಾರದಲ್ಲಿ ಕಾರ್ಯನುಕೂಲವಾಗಿ ಸಮಾಧಾನಕ್ಕೆ ಕಾರಣವಾಗಲಿದೆ. ತೀರ್ಥಕ್ಷೇತ್ರದ ಭೇಟಿ ಇರುತ್ತದೆ. ಕೆಲವೊಂದು ಅಶುಭ ಗ್ರಹಗಳ ನಡೆಯ ಸಂದರ್ಭದಿಂದ ತುಸುಮಟ್ಟಿನ ಏರುಪೇರು ಕಂಡುಬಂದೀತು.
ಧನು: ಗುರುವಿನ ಲಾಭಸ್ಥಾನದಿಂದ ವ್ಯಾಪಾರ, ವ್ಯವಹಾರ, ವಾಣಿಜ್ಯೋದ್ಯಮಿಗಳಿಗೆ, ಶಿಕ್ಷಣ ತಜ್ಞರಿಗೆ ಇದು ಉತ್ತಮ ಕಾಲವಾಗಿದೆ. ಅವಿವಾಹಿತರು ಮಂಗಲಕಾರ್ಯವನ್ನು ಶೀಘ್ರವಾಗಿ ಮುಗಿಸುವ ಚಿಂತನೆ ಮಾಡಿಯಾರು.
ಮಕರ: ಸರಕಾರಿ ಉದ್ಯೋಗಿಗಳಿಗೆ ಮುನ್ನಡೆ ಕಂಡು ಬರುವುದು. ಅಲರ್ಜಿಯಿಂದ ಆರೋಗ್ಯ ಸ್ಥಿತಿಯಲ್ಲಿ ಏರುಪೇರು ಕಂಡುಬರಲಿದೆ. ಬಾಳಸಂಗಾತಿಯ ಕಿರಿಕಿರಿಗಳು ಆಗಾಗ ತಲೆತಿನ್ನಲಿವೆ. ಎಲ್ಲಾ ಸಮಸ್ಯೆಗಳನ್ನು ಎದುರಿಸುವುದು.
ಕುಂಭ: ಗೃಹದಲ್ಲಿ ಶಾಂತಿ, ಸಮಾಧಾನಗಳು ಗೋಚರಕ್ಕೆ ಬರಲಿದೆ. ಆರ್ಥಿಕ ಬಿಕ್ಕಟ್ಟು ಆಗಾಗ ಆತಂಕ ತಂದರೂ ಧನಾಗಮನ ಇದ್ದೇ ಇರುತ್ತದೆ. ಚಿಕ್ಕಪುಟ್ಟ ಬಂಡವಾಳದವರಿಗೆ ಸ್ವಲ್ಪ ಲಾಭವಿರುತ್ತದೆ. ಕುಟುಂಬದಲ್ಲಿ ನೆಮ್ಮದಿ ಇರುತ್ತದೆ.
ಮೀನ: ದೈವಾನುಗ್ರಹವು ಹೆಚ್ಚಿನ ಆತ್ಮವಿಶ್ವಾಸವನ್ನು ನೀಡಲಿದೆ. ಇಳಿತಗಳ್ಳೋ ವಿಳಂಬಗಳ್ಳೋ ಆಗಾಗ ಕಾಣಿಸಿ ಕೊಂಡರೂ ಹಂತಹಂತವಾಗಿ ನೆಮ್ಮದಿ ಪಡೆಯಲಿದ್ದೀರಿ. ವೃತ್ತಿರಂಗದಲ್ಲಿ ಲವಲವಿಕೆ, ಉತ್ಸಾಹ ಕಂಡುಬರಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.