5 ತಿಂಗಳಿನಿಂದ ಮಂಗಳೂರು ಸೆಂಟ್ರಲ್ ನಿಲ್ದಾಣ ಸ್ತಬ್ಧ
ಬೆಂಗಳೂರು-ಮಂಗಳೂರು ಸಂಚಾರ ಪುನರಾರಂಭಕ್ಕೆ ಬೇಡಿಕೆ
Team Udayavani, Aug 17, 2020, 12:20 PM IST
ಮಂಗಳೂರು: ಶತಮಾನದ ಇತಿಹಾಸವಿರುವ, ಸದಾ ಪ್ರಯಾಣಿಕರಿಂದ ಗಿಜಿಗುಡುತ್ತಿದ್ದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವು ಕೋವಿಡ್ ಕಾರಣದಿಂದಾಗಿ ಕಳೆದ 5 ತಿಂಗಳಿನಿಂದ ಎಂದಿನ ರೈಲುಗಳ ಓಡಾಟ
ವಿಲ್ಲದೆ ಸ್ತಬ್ಧವಾಗಿದೆ. ಇದೀಗ ಬೆಂಗಳೂರು -ಮಂಗಳೂರು ನಡುವೆ ಸ್ಥಗಿತಗೊಂಡಿರುವ ರೈಲುಗಳ ಪೈಕಿ ಕನಿಷ್ಠ ಒಂದನ್ನಾದರೂ ಪುನರಾರಂಭಿಸುವಂತೆ ಪ್ರಯಾಣಿಕರಿಂದ ಆಗ್ರಹ ಕೇಳಿಬರುತ್ತಿದೆ.
ಕೋವಿಡ್ ಲಾಕ್‌ಡೌನ್ ಪೂರ್ವದಲ್ಲಿ ಮಂಗಳೂರು ಸೆಂಟ್ರಲ್‌ನಿಂದ ದಿನಂಪ್ರತಿ 27 ರೈಲುಗಳು ದೇಶದ ವಿವಿಧ ಭಾಗಗಳಿಗೆ ಸಂಚರಿಸುತ್ತಿದ್ದವು. ದಿನವೊಂದಕ್ಕೆ ಸುಮಾರು 30,000 ಪ್ರಯಾಣಿಕರ ಆಗಮನ -ನಿರ್ಗಮನ ಇತ್ತು. ಸರಕು ಸಾಗಾಟ ರೈಲುಗಳು, ರೈಲ್ವೇ ಅಂಚೆ ಸೇವೆಗಳು ಚಾಲನೆಯಲ್ಲಿದ್ದವು. ಮಾರ್ಚ್ 21ರಂದು ಲಾಕ್‌ಡೌನ್ ಘೋಷಣೆಯಾದ ಬಳಿಕ ಇವೆಲ್ಲವೂ ಸ್ಥಗಿತಗೊಂಡಿವೆ. ಇನ್ನು ಮಂಗಳೂರು ಜಂಕ್ಷನ್‌ನಿಂದ ಎರ್ನಾಕುಳಂ ಮೂಲಕ ಹೊಸದಿಲ್ಲಿಗೆ ತೆರಳುವ ಮಂಗಳಾ ಎಕ್ಸ್ ಪ್ರಸ್ ಹಾಗೂ ತಿರುವನಂತಪುರದಿಂದ ಮುಂಬಯಿಗೆ ಹೋಗುವ ನೇತ್ರಾವತಿ ಎಕ್ಸ್ ಪ್ರಸ್ ಮಾತ್ರ ಸದ್ಯಕ್ಕೆ ಸಂಚರಿಸುತ್ತಿವೆ. ಕೆಲವು ಗೂಡ್ಸ್ ರೈಲುಗಳು ಕೂಡ ಈ ನಿಲ್ದಾಣದ ಮೂಲಕ ಹಾದು ಹೋಗುತ್ತಿವೆ.
ಸಂಚಾರ ಆರಂಭಕ್ಕೆ ಬೇಡಿಕೆ
ಲಾಕ್‌ಡೌನ್ ಪೂರ್ವದಲ್ಲಿ ಮಂಗಳೂರು- ಬೆಂಗಳೂರು ನಡುವೆ 4 ರೈಲುಗಳ ಸಂಚಾರ ವಿತ್ತು. ಇದೀಗ ಲಾಕ್‌ಡೌನ್ ತೆರವಾಗಿ ಹೆಚ್ಚಿನ ಚಟುವಟಿಕೆಗಳಿಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆಯೂ ರಾಜ್ಯದಲ್ಲಿ ಬೆಂಗಳೂರು-ಬೆಳಗಾವಿ, ಬೆಂಗಳೂರು-ಮೈಸೂರು ಭಾಗದಲ್ಲಿ ರೈಲುಗಳ ಸಂಚಾರ ಆರಂಭಿಸಿದೆ.
ಇತ್ತ ಚಾರ್ಮಾಡಿ ಹಾಗೂ ಸಂಪಾಜೆ ಘಾಟಿ ರಸ್ತೆಗಳಲ್ಲಿ ಭೂಕುಸಿತ ಸಂಭವಿಸಿರುವುದರಿಂದ ಬಸ್‌ಗಳ ಸಂಚಾರ ವ್ಯತ್ಯಯವಾಗಿವೆ. ಬೆಂಗಳೂರು-ಮಂಗಳೂರಿಗೆ ಪ್ರಮುಖ ಸಂಪರ್ಕ ಸೇತು ಆಗಿರುವ ಶಿರಾಡಿ ಘಾಟಿ ರಸ್ತೆಯಲ್ಲೂ ಮಳೆಗಾಲದಲ್ಲಿ ಅಲ್ಲಲ್ಲಿ ಭೂಕುಸಿತಗಳಾಗುತ್ತವೆ. ಹೀಗಾಗಿ ಮಂಗಳೂರು-ಬೆಂಗಳೂರು ಮಧ್ಯೆ ಕನಿಷ್ಠ ಒಂದು ರೈಲು ಸಂಚಾರವನ್ನು ಆರಂಭಿಸ ಬೇಕೆಂದು ಕಳೆದ ಎರಡು ತಿಂಗಳುಗಳಿಂದ ಪ್ರಯಾಣಿಕರು, ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿಕರ ಅಭಿವೃದ್ಧಿ ಸಂಘದ ಸಲಹೆಗಾರ ಅನಿಲ್ ಹೆಗ್ಡೆ, ರೈಲು ಬಳಕೆದಾರರ ಸಂಘಟನೆಗಳು ರೈಲ್ವೇ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಕೋರಿಕೆ ಬಂದರೆ ಪರಿಶೀಲನೆ
ಪ್ರಸ್ತುತ ದೇಶದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಒಟ್ಟು 12,700 ರೈಲುಗಳ ಪೈಕಿ ಕೇವಲ 230 ರೈಲುಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ತುರ್ತು ರೈಲು ಸಂಚಾರ ಆವಶ್ಯಕತೆಯಿದ್ದರೆ ಆಯಾಯ ರಾಜ್ಯಗಳಿಂದ ರೈಲ್ವೇ ಇಲಾಖೆಗೆ ಕೋರಿಕೆ ಬರಬೇಕು. ಮಂಗಳೂರಿನಿಂದ ಬೆಂಗಳೂರಿಗೆ ರೈಲು ಸಂಚಾರದ ತುರ್ತು ಆವಶ್ಯಕತೆಯ ಬಗ್ಗೆ ರಾಜ್ಯ ಸರಕಾರದಿಂದ ಕೋರಿಕೆ ಬಂದರೆ ಪರಿಶೀಲಿಸಲಾಗುವುದು.
– ಸುರೇಶ್ ಅಂಗಡಿ, ರೈಲ್ವೇ ಖಾತೆ ರಾಜ್ಯ ಸಚಿವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್‌ಮೆಂಟ್, ಮಾಲ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು
Kulur: ಗೈಲ್ ಪೈಪ್‌ಲೈನ್ ಕಾಮಗಾರಿ; ಹೆದ್ದಾರಿ ಕುಸಿತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.