Dakshina Kannada: ಪೊಲೀಸರಿಂದ “ಸ್ಪೀಡ್ ಡಿಟೆಕ್ಷನ್ ರಾಡಾರ್ ಗನ್’ ಪ್ರಯೋಗ
ರಾಡಾರ್ ಗನ್ ಕನಿಷ್ಠ 100 ಮೀಟರ್ ಅಂತರದಲ್ಲಿ ವಾಹನಗಳ ವೇಗ ಪತ್ತೆ ಹಚ್ಚಲಿದೆ
Team Udayavani, Jul 30, 2024, 6:10 AM IST
ಮಂಗಳೂರು: ಅಪಘಾತ ಗಳನ್ನು ತಡೆಯಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹೊರಡಿಸಿರುವ ವಾಹನಗಳ ವೇಗಮಿತಿ ಅಧಿಸೂಚನೆಯಂತೆ ದ.ಕ. ಜಿಲ್ಲಾ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, ಸೋಮವಾರ ಹಲವು
ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ರಾಡಾರ್ ಗನ್ ಬಳಕೆ
ವಾಹನಗಳ ವೇಗ ಪತ್ತೆ ಮಾಡುವುದಕ್ಕಾಗಿ ಜಿಲ್ಲಾ ಪೊಲೀಸರಿಗೆ 5 “ಮೊಬೈಲ್ ಸ್ಪೀಡ್ ಡಿಟೆಕ್ಷನ್ ರಾಡಾರ್ ಗನ್’ಗಳನ್ನು ಒದಗಿಸಲಾಗಿದೆ. ಇದನ್ನು ಬಳಸಿಕೊಂಡು ಕಾರ್ಯಾಚರಣೆ ಆರಂಭಿಸಲಾಗಿದೆ. ಈ ರಾಡಾರ್ ಗನ್ ಕನಿಷ್ಠ 100 ಮೀಟರ್ ಅಂತರದಲ್ಲಿ ವಾಹನಗಳ ವೇಗವನ್ನು ಪತ್ತೆ ಹಚ್ಚುತ್ತದೆ.
ನಗರದಲ್ಲೂ ಆರಂಭ
ಮಂಗಳೂರು ನಗರ ಭಾಗ ಸಹಿತ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲೂ ಇಂಥ ಗನ್‌ಗಳನ್ನು ಬಳಸಿ ವಾಹನಗಳ ವೇಗವನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸುವ ಕಾರ್ಯಾ ಚರಣೆಯನ್ನು ಆರಂಭಿಸಲಾಗಿದೆ. ಈಗಾಗಲೇ 10ಕ್ಕೂ ಅಧಿಕ ಪ್ರಕರಣ
ದಾಖಲಿಸಿಕೊಳ್ಳಲಾಗಿದೆ. ಕಮಿಷನ ರೆಟ್ ವ್ಯಾಪ್ತಿಗೆ ಇಂತಹ 3 ಗನ್‌ಗಳನ್ನು ಒದಗಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಪೀಡ್ ಡಿಟೆಕ್ಷನ್ ರಾಡಾರ್ ಗನ್ ಕೆಮರಾ: ಬಂಟ್ವಾಳ ಪೊಲೀಸರಿಂದ ಕಾರ್ಯಾಚರಣೆ
* 62 ಪ್ರಕರಣ ದಾಖಲು, 65 ಸಾ. ರೂ.ದಂಡ ವಸೂಲು
ಬಂಟ್ವಾಳ: ಮಿತಿ ಮೀರಿದ ವೇಗದಿಂದಲೇ ಶೇ. 99ರಷ್ಟು ಅಪಘಾತಗಳು ಉಂಟಾಗುತ್ತಿವೆ ಎಂಬ ವರದಿ ಬೆನ್ನಲ್ಲೇ ಪೊಲೀಸ್ ಇಲಾಖೆ ವಾಹನಗಳ ವೇಗ ನಿಯಂತ್ರಣಕ್ಕೆ ಸಿದ್ಧತೆ ನಡೆಸಿದ್ದು, ಸೋಮವಾರ ಬಂಟ್ವಾಳ ಸಂಚಾರ ಪೊಲೀಸರು ರಾ.ಹೆ.75ರ ತುಂಬೆ ರಾಮಲ್‌ಕಟ್ಟೆ ಭಾಗದಲ್ಲಿ ಹೊಸ ತಂತ್ರಜ್ಞಾನವಾಗಿರುವ ಸ್ಪೀಡ್ ಡಿಟೆಕ್ಷನ್ ರಾಡಾರ್ ಗನ್ ಕೆಮರಾ ಮೂಲಕ ವಾಹನಗಳ ವೇಗವನ್ನು ಪತ್ತೆ ಹಚ್ಚಿ ದಂಡ ವಸೂಲಿ ಮಾಡಿದರು.
ಬಂಟ್ವಾಳ ಸಂಚಾರ ಠಾಣೆ ಪಿಎಸ್‌ಐ ಸುತೇಶ್ ಕೆ.ಪಿ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಮೊದಲ ದಿನ 62 ಪ್ರಕರಣಗಳು ದಾಖಲಾಗಿದ್ದು, 65 ಸಾವಿರ ರೂ. ದಂಡ ವಸೂಲಿ ಆಗಿದೆ. ಮುಂದೆ ವಿವಿಧ ಭಾಗಗಳಲ್ಲಿ ಆಯಾಯ ರಸ್ತೆಯ ಗರಿಷ್ಠ ವೇಗದ ಮಿತಿಯ ಆಧಾರದಲ್ಲಿ ದಂಡ ವಸೂಲಿ ಕಾರ್ಯ ನಡೆಯಲಿದೆ.
ವೇಗ ಮಿತಿ ಫಲಕ ಇಲ್ಲ!
ಬಂಟ್ವಾಳ ಪೊಲೀಸರು ದಂಡ ವಿಧಿಸಿದ ಹೆದ್ದಾರಿ ಪ್ರದೇಶದಲ್ಲಿ ವೇಗದ ಮಿತಿ 50 ಕಿ.ಮೀ.ಆಗಿದ್ದು, ಆದರೆ ಬಹುತೇಕ ಫಲಕಗಳು ಕಿತ್ತು ಹೋಗಿದ್ದು, ಇರುವ ಫಲಕಗಳಲ್ಲಿ ಕೊಳೆ ತುಂಬಿ ಸರಿಯಾಗಿ ಕಾಣುವುದೇ ಇಲ್ಲ. ಫಲಕಗಳನ್ನು ಸರಿಯಾಗಿ ಪ್ರದರ್ಶಿಸದೆ ದಂಡ ವಸೂಲಿ ಮಾಡಿರುವುದು ಸರಿಯೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.