ಮಂಗಳೂರು: ಸಂಚಾರ ಮಧ್ಯೆ ಟ್ಯಾಕ್ಸಿ ವಶ ಸಲ್ಲದು: ಡಿಸಿ
Team Udayavani, May 2, 2023, 7:10 AM IST
ಮಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಮತ್ತು ಸಿಬಂದಿಗೆ ಓಡಾಡಲು ಅಗತ್ಯವಾಗಿ ಬೇಕಿರುವ ವಾಹನಗಳ ವ್ಯವಸ್ಥೆಗೆ ಪೊಲೀಸರು ರಸ್ತೆ ಮಧ್ಯೆಯೇ ಪ್ರಯಾಣಿಕರನ್ನು ಇಳಿಸಿ ಕಾರುಗಳನ್ನು ವಶಪಡಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನಗರದ ಕೆಲವೆಡೆ ಟ್ಯಾಕ್ಸಿಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವಾಗಲೇ ಜನರನ್ನು ಇಳಿಸಿ, ವಶಪಡಿಸಿಕೊಂಡಿದ್ದಾರೆ ಎಂದು ಕೆಲವು ಚಾಲಕರು ಆರೋಪಿಸಿ ವಿರೋಧ ಸೂಚಿಸಿದ ಘಟನೆ ಸೋಮವಾರ ಮಂಗಳೂರಿನಲ್ಲಿ ನಡೆದಿದೆ.
“ಸಾರ್ವಜನಿಕರು ಮುಂಚಿತವಾಗಿ ಕಾದಿರಿಸಿರುತ್ತಾರೆ. ಆದರೆ ಹೀಗೆ ಮಾರ್ಗ ಮಧ್ಯೆಯೇ ತಡೆದು ವಶಕ್ಕೆ ಪಡೆಯುತ್ತಿರುವುದು ಬೇಸರ ತರಿಸುತ್ತಿದೆ. ನಾಳೆ-ನಾಡಿದ್ದು ಮದುವೆ ಅಥವಾ ಇತರ ಕಾರ್ಯಕ್ರಮಗಳಿಗೆ ನಮ್ಮ ಕಾರನ್ನು ಕಾದಿರಿಸಿದ್ದಾರೆ. ಹೀಗೆ ಏಕಾಏಕಿ ವಶಕ್ಕೆ ಪಡೆದರೆ ಕಾದಿರಿಸಿದವರಿಗೆ ಏನು ಹೇಳಬೇಕು ಎಂಬುದು ಹಲವು ಚಾಲಕರ ಪ್ರಶ್ನೆ.
ಚುನಾವಣ ಕಾರಣಕ್ಕಾಗಿ ಈಗಾಗಲೇ ವಾಹನ ಗಳನ್ನು ಆರ್‌ಟಿಒಗೆ ನೀಡಲಾಗಿದೆ. ಇದಲ್ಲದೇ ಪ್ರಯಾಣಿಕರು ಸಂಚರಿಸುವಾಗಲೇ ಬಲವಂತವಾಗಿ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ಹೀಗೆ ಪಡೆದುಕೊಂಡ ವಾಹನಗಳ ಚಾಲಕರಿಗೆ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡುವುದಿಲ್ಲ. ಅಧಿಕಾರಿಗಳು ಇನ್ನಷ್ಟು ತೊಂದರೆ ನೀಡಿದರೆ ಮೇ 10ರಂದು ಮತದಾನವನ್ನೇ ಬಹಿಷ್ಕರಿಸುತ್ತೇವೆ.
-ಆನಂದ್ ಕೆ., ಅಧ್ಯಕ್ಷರು, ದ.ಕ. ಜಿಲ್ಲಾ ಟ್ಯಾಕ್ಸಿಮನ್ಸ್, ಮ್ಯಾಕ್ಸಿ ಕ್ಯಾಬ್ ಅಸೋಸಿಯೇಶನ್
ಸರಕಾರಿ ವಾಹನ, ಸರಕಾರಿ ಸ್ವಾಮ್ಯದ ಕಚೇರಿ ವಾಹನ, ಕಂಪೆನಿ, ಕೈಗಾರಿಕೆಗಳ ಅಧೀನದ ವಾಹನವನ್ನು ಚುನಾವಣೆಗೆ ಬಳಸಲಾಗುತ್ತದೆ. ಇದಕ್ಕಿಂತ ಹೆಚ್ಚು ವಾಹನಗಳು ಅಗತ್ಯವಿದ್ದರೆ ಸಾರ್ವಜನಿಕ ವಾಹನ ಗಳನ್ನು ಪಡೆಯಲು ಅವಕಾಶವಿದೆ. ಆದರೆ ಪ್ರಯಾಣಿಕರು ಇದ್ದ ಸಂದರ್ಭದಲ್ಲಿ ವಾಹನಗಳನ್ನು ವಶಕ್ಕೆ ಪಡೆಯಲು ಅವಕಾಶವಿಲ್ಲ.ಈ ಬಗ್ಗೆ ದೂರುಗಳಿದ್ದರೆ ಜಿಲ್ಲಾಡಳಿತವನ್ನು ಸಂಪರ್ಕಿಸಬಹುದು.
– ರವಿಕುಮಾರ್ ಎಂ.ಆರ್. ಜಿಲ್ಲಾಧಿಕಾರಿ, ದ.ಕ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.