ದ.ಕ., ಉಡುಪಿ: “112′ ನೆರವಿಗೆ 42 ಸಾವಿರಕ್ಕೂ ಅಧಿಕ ಕರೆ
ವ್ಯಾಪಕಗೊಂಡ "112 ತುರ್ತು ಸಹಾಯವಾಣಿ' ಸೇವೆ
Team Udayavani, May 2, 2023, 7:20 AM IST
ಮಂಗಳೂರು: ಪೊಲೀಸ್ ಸೇರಿದಂತೆ ಯಾವುದೇ ತುರ್ತು ಸಹಾಯಕ್ಕಾಗಿ ಅಸ್ತಿತ್ವಕ್ಕೆ ಬಂದಿರುವ “112 ತುರ್ತು ಸ್ಪಂದನೆ ಸಹಾಯ ವ್ಯವಸ್ಥೆ’ಯ(ಇಆರ್‌ಎಸ್‌ಎಸ್- ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಂ) ಸೇವೆ ವ್ಯಾಪಕಗೊಂಡಿದೆ.
ಈ ಹಿಂದೆ ಇದ್ದ “100′ ಸಹಾಯವಾಣಿಯ ಬದಲು ಈಗ “112′ ಇಆರ್‌ಎಸ್‌ಎಸ್ ಕಾರ್ಯನಿರ್ವಹಿಸುತ್ತಿದೆ. ಆರಂಭದಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಸೇವೆಗಳು ಮಾತ್ರ ದೊರೆಯುತ್ತಿದ್ದ “112’ನಲ್ಲಿ ಈಗ ಪೊಲೀಸ್ ಸೇವೆಯ ಜತೆಗೆ ಅಗ್ನಿಶಾಮಕ ಹಾಗೂ ಇತರ ವಿಪತ್ತುಗಳಿಗೆ ಸಂಬಂಧಿಸಿದ ಸೇವೆ ಸೇರ್ಪಡೆಗೊಳಿಸಲಾಗಿದೆ. ಸೇವೆಗಳನ್ನು ಆಯಾ ಇಲಾಖೆಗೆ ವರ್ಗಾಯಿಸಲಾಗುತ್ತಿದೆ.
42,721 ಕರೆ
ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ 112 ಸಹಾಯವಾಣಿಗೆ ಈ ಹಿಂದೆ ದಿನಕ್ಕೆ ಸರಾಸರಿ 30 ಕರೆಗಳು ಬರುತ್ತಿದ್ದರೆ ಈಗ 40ಕ್ಕೆ ಏರಿದೆ. ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ದಿನಕ್ಕೆ ಸರಾಸರಿ 20ರಿಂದ 25, ಉಡುಪಿ ಜಿಲ್ಲೆಯಲ್ಲಿ ದಿನಕ್ಕೆ ಸರಾಸರಿ 10 -15 ಕರೆಗಳು ಬರುತ್ತಿದ್ದುದು ಈಗ 20ರಿಂದ 25ಕ್ಕೇರಿವೆ.
ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ 2020ರ ನ. 14ರಂದು ಈ ಸೇವೆ ಆರಂಭಗೊಂಡಿದ್ದು ಇದುವರೆಗೆ 10,369ಕ್ಕೂ ಅಧಿಕ ಕರೆಗಳಿಗೆ ಸ್ಪಂದಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 2020ರ ಡಿಸೆಂಬರ್‌ನಲ್ಲಿ 112 ಸೇವೆ ಆರಂಭಗೊಂಡಿದ್ದು 8,928ಕ್ಕೂ ಅಧಿಕ ಕರೆಗಳಿಗೆ ಹಾಗೂ ಮಂಗಳೂರು ಕಮಿಷನರೆಟ್‌ನಲ್ಲಿ 2020ರ ಡಿಸೆಂಬರ್‌ನಿಂದ ಇದುವರೆಗೆ 23,424 ಕರೆಗಳಿಗೆ ಸ್ಪಂದಿಸಲಾಗಿದೆ. ಎರಡು ಜಿಲ್ಲೆಗಳಲ್ಲಿ ಇದುವರೆಗೆ ಒಟ್ಟು 42,721 ಕರೆಗಳಿಗೆ ಸ್ಪಂದಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ 112ಗೆ ಬಂದಿರುವ ಕರೆಗಳ ಪೈಕಿ ಕೌಟುಂಬಿಕ ಕಲಹ ಸೇರಿದಂತೆ ಗಲಾಟೆಗಳು (ಶೇ. 40), ಜಾಗದ ತಕರಾರು (ಶೇ. 30), ಅಪಘಾತ (ಶೇ. 20), ಕಳ್ಳತನ (ಶೇ. 3) ಮೊದಲಾದವುಗಳಿಗೆ ಸಂಬಂಧಿಸಿದ ಕರೆಗಳು ಸೇರಿವೆ.
ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 10, ಮಂಗಳೂರು ಕಮಿಷನರೆಟ್‌ನಲ್ಲಿ 19 ಮತ್ತು ಉಡುಪಿ ಜಿಲ್ಲಾ ಪೊಲೀಸ್ ವ್ಯಾಪ್ತಿ ಯಲ್ಲಿ 12 ಇಆರ್‌ಎಸ್‌ಎಸ್ ವಾಹನಗಳು 112 ಸೇವೆಯಡಿ ಕಾರ್ಯನಿರ್ವಹಿಸುತ್ತಿವೆ. “ರೆಸ್ಪಾನ್ಸ್ ಟೈಮ್’ (ಕರೆ ಸ್ವೀಕರಿಸಿದ ಘಟನೆ ನಡೆದ ಸ್ಥಳ ತಲುಪುವ ಸಮಯ) ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ ಸರಾಸರಿ 11 ನಿಮಿಷ, ಉಡುಪಿ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 15-20 ನಿಮಿಷ, ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ 15-17 ನಿಮಿಷವಿದೆ.
ಸಂಪರ್ಕ ಹೇಗೆ?
ದಿನದ 24 ಗಂಟೆಯೂ ಸೇವೆ ದೊರೆಯುತ್ತದೆ. ಸೇವೆ ಪಡೆಯಲು 112ಗೆ ಕರೆ ಮಾಡಬಹುದು ಅಥವಾ ಛಿrss112kಠಿkಃksಟ.ಜಟv.ಜಿn ಇ-ಮೇಲ್ ಮಾಡಬಹುದು ಅಥವಾ “112 ಐNಈಐಅ’ ಮೊಬೈಲ್ ಆ್ಯಪ್ ಮೂಲಕ ಸಂಪರ್ಕಿಸಬಹುದು.
112 ಬಳಕೆ ಹೆಚ್ಚಳ
112 ಸಹಾಯವಾಣಿ ಬಳಕೆ ವ್ಯಾಪಕವಾಗಬೇಕೆಂಬ ಉದ್ದೇಶದಿಂದ ದಿನಕ್ಕೆ 100ಕ್ಕೂ ಅಧಿಕ ಕಡೆಗಳಲ್ಲಿ ತಿಳಿವಳಿಕೆ ಕಾರ್ಯಕ್ರಮಗಳನ್ನು ಕೂಡ ನಡೆಸಲಾಗುತ್ತಿದೆ. ಈಗ 112ಗೆ ಬರುವ ಕರೆಗಳ ಸಂಖ್ಯೆ ಹೆಚ್ಚಾಗಿದೆ. ಸಾರ್ವಜನಿಕರು ನಮಗೆ ನೇರವಾಗಿ 112ಗೆ ಮಾಹಿತಿ ನೀಡಬಹುದು.
– ಕುಲದೀಪ್ ಕುಮಾರ್ ಆರ್.ಜೈನ್, ಪೊಲೀಸ್ ಆಯುಕ್ತರು, ಮಂಗಳೂರು
– ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.