ಕೋವಿಡ್ ಲಕ್ಷಣ ಮುನ್ನವೇ ಶ್ವಾಸಕೋಶಕ್ಕೆ ಹಾನಿ
Team Udayavani, Apr 28, 2021, 6:45 AM IST
ಕೋವಿಡ್‌ನ ಎರಡನೇ ಅಲೆಯ ವಿರುದ್ಧ ದೇಶದಲ್ಲಿ ಸಮರ ಮುಂದುವರಿದಿದೆ. ಈ ಬಾರಿ ಕೊರೊನಾ ವೈರಸ್ ಜನರ ಶ್ವಾಸಕೋಶದ ಮೇಲೆ ಹೆಚ್ಚು ಮಾರಣಾಂತಿಕ ದಾಳಿ ನಡೆಸುತ್ತಿದೆ. ಕೊರೊನಾ ಲಕ್ಷಣಗಳು ಗೋಚರಿಸುವ ಮೊದಲೇ ಶೇ. 25 ಜನರಿಗೆ ಶ್ವಾಸ ಕೋ ಶಕ್ಕೆ ಹಾನಿಯಾಗುವ ಸಂದರ್ಭಗಳಿವೆ.
ಕೋವಿಡ್-19 ಹೊಂದಿರುವ ಸುಮಾರು ಶೇ. 60ರಿಂದ 65ರಷ್ಟು ರೋಗಿಗಳು ಸಾಮಾನ್ಯವಾಗಿ ಉಸಿ ರಾಡಲು ತೊಂದರೆ ಅನುಭವಿಸುತ್ತಾರೆ. ಅವರಲ್ಲಿನ ಆಮ್ಲಜನಕದ ಮಟ್ಟವು ಶೀಘ್ರವಾಗಿ ಕಡಿಮೆಯಾಗುತ್ತಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಕೃತಕ ಉಸಿರಾ ಟದ ವ್ಯವಸ್ಥೆ ಮಾಡಲಾಗುತ್ತದೆ.
ಎಕ್ಸ್‌ರೇ, ಸಿಟಿ ಸ್ಕ್ಯಾನ್ ಅಗತ್ಯ
ಆಮ್ಲಜನಕದ ಕೊರತೆಯಿಂದಾಗಿ ಬಳಲುವ ರೋಗಿಗಳ ಪರಿಸ್ಥಿತಿ ತುಂಬಾ ಗಂಭೀರವಾಗಿರುತ್ತದೆ. ಈ ಪ್ರಕರಣಗಳಲ್ಲಿ ಕೆಲವು ಆರಂಭಿಕ ಲಕ್ಷಣಗಳು ಕಂಡುಬರುತ್ತವೆ. ತ್‌ಕ್ಷಣ ಈ ರೋಗಲಕ್ಷಣಗಳ ಗೋಚರಿಸುವಿಕೆಯ ಮೇಲೆ ಶ್ವಾಸಕೋಶವನ್ನು ಪರೀಕ್ಷಿಸಲು ಎಕ್ಸ್‌ರೇ ಮತ್ತು ಸಿಟಿ ಸ್ಕ್ಯಾನ್ ಮಾಡಿಸಬೇಕಾಗುತ್ತದೆ. ಇಲ್ಲದಿದ್ದರೆ ಇದು ಪತ್ತೆಯಾಗುವುದಿಲ್ಲ.
ನೆಗೆಟಿವ್ ರಿಪೋರ್ಟ್ ಬಂದರೂ..
ಕೆಲವೊಂದು ಸಾರಿ ನೆಗೆಟಿವ್ ವರದಿ ಬರುತ್ತದೆ. ಜತೆಗೆ ಕೆಲವೊಮ್ಮೆ ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಹಾಗಾಗಿ ಈ ಸಂದರ್ಭ ನೀವು ಪರೀಕ್ಷೆ ನಡೆಸಿದಾಗ ವರದಿ ನಕರಾತ್ಮಕವಾಗಿದ್ದರೂ ಸಿಟಿ ಸ್ಕ್ಯಾನ್ ವರದಿಯು ಅವರ ಶ್ವಾಸಕೋಶಕ್ಕೆ ಹಾನಿಯಾಗಿದೆ ಎಂದು ತೋರಿಸುತ್ತದೆ. ಮತ್ತೂಂದೆಡೆ ತಮ್ಮ ದೇಹದಲ್ಲಿ ಯಾವುದೇ ರೋಗಲಕ್ಷಣಗಳನ್ನು ಗೊತ್ತಾಗದ ರೋಗಿಗಳೂ ಇರುತ್ತಾರೆ.
ಕ್ಷೀಣಿಸಬಹುದು ಆರೋಗ್ಯ
ವೈದ್ಯರ ಪ್ರಕಾರ, 2ರಿಂದ 3 ದಿನಗಳಲ್ಲಿ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವವರ ಸ್ಥಿತಿ ತುಂಬಾ ಕೆಟ್ಟದಾಗುತ್ತದೆ. ಅಂಥ ರೋಗಿಗಳ ಶ್ವಾಸಕೋಶಗಳು ಸಹ ಹಾನಿಗೊ ಳಗಾಗುತ್ತವೆ. ಅವರನ್ನು ತಡಮಾಡದೆ ಆಸ್ಪತ್ರೆಗೆ ಸೇರಿಸಬೇಕು. 45 ವರ್ಷ ದೊಳಗಿನ ಜನರಲ್ಲಿ ಕೊರೊನಾ ಸೋಂಕು ಹೆಚ್ಚು ಶ್ವಾಸಕೋಶದ ಸಮಸ್ಯೆಯನ್ನು ಉಂಟು ಮಾಡುತ್ತಿವೆ. ಆದ್ದರಿಂದ ಯಾವುದೇ ರೋಗಲಕ್ಷಣಗಳು ಅಥವಾ ದೇಹದಲ್ಲಿ ಯಾವುದೇ ಬದಲಾವಣೆಗಳಿದ್ದಲ್ಲಿ ಪರೀಕ್ಷೆಯನ್ನು ಮಾಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.