Danger Dengue: ಡೆಂಗ್ಯೂ ನಿರ್ಮೂಲನೆಗೆ ದೇಶೀಯ ಔಷಧ ಸಿದ್ಧ!
ಪಂಜಾಬ್‌ನಲ್ಲಿ 3ನೇ ಬಾರಿ ಪ್ರಾಯೋಗಿಕ ಪರೀಕ್ಷೆ, ಸಂಶೋಧನೆಗೆ ಪನೇಸಿಯಾ, ಐಸಿಎಂಆರ್ ಸಹಭಾಗಿತ್ವ
Team Udayavani, Aug 15, 2024, 7:20 AM IST
ಹೊಸದಿಲ್ಲಿ: ಈ ಬಾರಿ ದೇಶಾದ್ಯಂತ ಕಾಣಿಸಿಕೊಂಡು ಸಾವು ನೋವಿಗೆ ಕಾರಣವಾಗಿರುವ ಡೆಂಗ್ಯೂ ಕಾಯಿಲೆಯನ್ನು ನಿರ್ಮೂಲನೆ ಮಾಡಲು ಕೇಂದ್ರ ಸರಕಾರ ಬಲವಾದ ಹೆಜ್ಜೆಯಿಟ್ಟಿದೆ.
ಐಸಿಎಂಆರ್ ಸಹಭಾಗಿತ್ವದಲ್ಲಿ ಪ್ಯಾನಸೀಯ ಬಯೋಟೆಕ್ ಸಂಸ್ಥೆಯು ದೇಶೀಯವಾಗಿಯೇ ಔಷಧವೊಂದನ್ನು ಸಿದ್ಧಪಡಿಸಿದೆ. ಈ ಔಷಧದ 3ನೇ ಹಂತದ ಪ್ರಾಯೋಗಿಕ ಪರೀಕ್ಷೆ ಸದ್ಯ ಜಾರಿಯಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹೇಳಿದ್ದಾರೆ.
ಡೆಂಗ್ಯೂಆಲ್ ಎಂದು ಹೆಸರಿಸಲ್ಪಟ್ಟಿ ರುವ ಔಷಧವನ್ನು ಹರಿಯಾಣದಲ್ಲಿ 3ನೇ ಹಂತದ ಪರೀಕ್ಷೆ ನಡೆಸಲಾಗಿದೆ. ದೇಶದ 18 ರಾಜ್ಯಗಳ 19 ಪ್ರದೇಶಗಳಲ್ಲಿ 10335 ಮಂದಿಗೆ ರೋಗನಿರೋಧಕ ಚುಚ್ಚುಮದ್ದನ್ನು ನೀಡಲಾಗುತ್ತದೆ ಎಂದು ನಡ್ಡಾ ಹೇಳಿದ್ದಾರೆ.
ವಿಶೇಷವೇನು?: ಸದ್ಯ ಭಾರತದಲ್ಲಿ 4 ಡೆಂಗ್ಯೂ ತಳಿಗಳು ತೀವ್ರವಾಗಿವೆ. ಅವುಗಳಿಗೆ ಯಾವುದೇ ದೇಶೀಯ ಚಿಕಿತ್ಸೆಗಳೂ ಭಾರತದಲ್ಲಿ ಲಭ್ಯವಿಲ್ಲ. ಈ ನಾಲ್ಕೂ ತಳಿಗಳಿಗೆ ಸಡ್ಡು ಹೊಡೆಯಬಲ್ಲ ಸಾಮರ್ಥ್ಯವನ್ನು ಡೆಂಗ್ಯೂಆಲ್ ಹೊಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಡ್ಡಾ, ಡೆಂಗ್ಯೂ ವಿರುದ್ಧ ಭಾರತದಲ್ಲಿ ಮೊದಲ ಬಾರಿಗೆ ಔಷಧ ಸಿದ್ಧಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.