Dasara: ಶ್ರೀರಂಗಪಟ್ಟಣ ದಸರಾಗೆ ಯಾವುದೇ ತಡವಾಗಿಲ್ಲ: ಸಚಿವ ಚಲುವರಾಯಸ್ವಾಮಿ
ಕುಮಾರಸ್ವಾಮಿ ಕಥೆ ನಿಮಗೂ ಗೊತ್ತಿದೆ, ಜನ ಕೊಟ್ಟಿರುವ ಜವಾಬ್ದಾರಿ ಎಚ್‌ಡಿಕೆ ನಿಭಾಯಿಸಲಿ
Team Udayavani, Oct 5, 2024, 2:01 AM IST
ಶ್ರೀರಂಗಪಟ್ಟಣ: ದಸರಾ ಜಂಬೂ ಸವಾರಿಗೆ ಚಾಲನೆ ನೀಡಲು ಯಾವುದೇ ತಡವಾಗಿಲ್ಲ, ಕುಂಭಲಗ್ನದಲ್ಲಿ ದಸರಾ ಉದ್ಘಾಟಿಸಿದ್ದೇವೆ ಎಂದು ಶ್ರೀರಂಗಪಟ್ಟಣದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ ನೀಡಿದರು.
ಜಂಬೂಸವಾರಿ ತಡವಾಗಿ ಆರಂಭವಾದ ವಿಚಾರ ಕುರಿತು ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮೈಸೂರಿಗಿಂತ ಮೊದಲು ಶ್ರೀರಂಗಪಟ್ಟಣದಲ್ಲಿ ದಸರಾ ಮೊದಲು ಆರಂಭವಾಯಿತು. ಈ ಬಾರಿ ಹೆಚ್ಚು ಆಕರ್ಷಣೀಯವಾಗಿ 4ದಿನಗಳ ಕಾಲ ಆಚರಣೆ ಮಾಡಲಾಗುತ್ತಿದೆ. ಕಳೆದ 16 ವರ್ಷಗಳಿಂದ ಶ್ರೀರಂಗಪಟ್ಟಣದಲ್ಲಿ ಮತ್ತೇ ಆರಂಭಗೊಂಡಿರುವುದು ಈ ಭಾಗದ ಜನರಿಗೆ ಸಂತಸ ನೀಡಿದೆ ಎಂದರು.
ಮೈಸೂರಿನಲ್ಲಿ ಚಾಮುಂಡೇಶ್ವರಿ ಬಳಿ ಒಂದು ವರ್ಷ ಕಾಲಾವಕಾಶ ಕೇಳಿದ ವಿಚಾರವಾಗಿ ಮಾತನಾಡಿದ ಸಚಿವರು, ಮುಂದಿನ ವರ್ಷ ದಸರಾ ನಿರ್ವಿಘ್ನವಾಗಿ ಮಾಡಲು ಅವಕಾಶ ಕೊಡವ್ವ ಎಂದು ಕೇಳಿಕೊಂಡಿದ್ದಾರೆ. ಬೇರೇ ಅರ್ಥ ಬೇಡ ಎಂದರು. ಅಧಿಕಾರ ಹಂಚಿಕೆ ವಿಚಾರ ನಮ್ಮಲ್ಲಿ ಚರ್ಚೆ ಇಲ್ಲ. ನಾನು ಮುಂದುವರಿಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದರು.
ಈಗ ಸಿಎಂ ಬದಲಾವಣೆ ಚರ್ಚೆ ಇಲ್ಲ. ಆರ್.ಅಶೋಕ್ ಮೊದಲು ರಾಜೀನಾಮೆ ಕೊಡಲಿ. ಅವರ ವಿಚಾರಕ್ಕೂ ಸಿದ್ದರಾಮಯ್ಯ ವಿಚಾರಕ್ಕೂ ವ್ಯತ್ಯಾಸವಿದೆ. ವಿರೋಧ ಪಕ್ಷ ನಾಯಕತ್ವಕ್ಕೆ ಮೊದಲು ರಾಜೀನಾಮೆ ಕೊಡಲಿ. ಕಾನೂನು ಏನಿದೆ ಅದರ ಪ್ರಕಾರ ನಮ್ಮ ನಾಯಕರು ನಡೆದುಕೊಳ್ತಾರೆ. ಅಶೋಕ್ ಅವರದು ಏನಿದೆ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ.
ಚನ್ನಪಟ್ಟಣ ಉಪಚುನಾವಣೆಗೆ ಹಣಕ್ಕೆ ಬೇಡಿಕೆ ವಿಚಾರವಾಗಿ, ದೂರು ಆಗಿದೆ, ತನಿಖೆ ಆಗಲಿ. ಗೊತ್ತಿಲ್ಲದೆ ಮಾತನಾಡಲು ನಾನು ಕುಮಾರಸ್ವಾಮಿ ಅಲ್ಲ. ಕುಮಾರಸ್ವಾಮಿ ಕಥೆ ನಿಮಗೂ ಗೊತ್ತಿದೆ, ಜನ ಕೊಟ್ಟಿರುವ ಜವಾಬ್ದಾರಿ ಎಚ್‌ಡಿಕೆ ನಿಭಾಯಿಸಲಿ. ಉಡಾಫೆ ಮಾತುಗಳನ್ನ ಕುಮಾರಸ್ವಾಮಿ ಬಿಡಲಿ ಎಂದು ಮಾರ್ಮಿಕವಾಗಿ ಹೇಳಿದರು.
136 ಶಾಸಕರು ಸಿದ್ದರಾಮಯ್ಯ ಪರ
136 ಜನ ಶಾಸಕರು, ಸಚಿವರು, ಹೈಕಮಾಂಡ್, ಸಿದ್ದರಾಮಯ್ಯ ಪರವಿದ್ದಾರೆ. ಕೆಲ ವಿರೋಧ ಪಕ್ಷದ ನಾಯಕರೇ ಸಿದ್ದರಾಮಯ್ಯ ಪರ ಮಾತನಾಡ್ತಾರೆ ಎಂದು ಸಚಿವ ಹೇಳಿದರು. ರಾಜೀನಾಮೆ ಸುಮ್ಮನೆ ಕೇಳಲಾಗಲ್ಲ. ಇವರು ರಾಜೀನಾಮೆ ಕೊಡುತ್ತಾರಾ ಎಂದು ಜಿ.ಟಿ.ದೇವೇಗೌಡ ಹೇಳಿದ್ದಾರೆ. ಈಗಲಾದರೂ ಈ ವಿಚಾರ ವಿಜಯೇಂದ್ರ, ಅಶೋಕ್ ಕುಮಾರಸ್ವಾಮಿ ಅವರಿಗೆ ಅರ್ಥ ಆಗಿದೆ ಅನಿಸುತ್ತಿದೆ.
ಪ್ರಕ ರಣ, ಕೇಸು,ಯಾರ ಯಾರ ಮೇಲೆ ಇದೆ ಅರ್ಥ ಮಾಡಿಕೊಳ್ಳಲಿ.ಸಿದ್ದರಾಮಯ್ಯ ಪರೋಕ್ಷ ಪ್ರಭಾವವಿದೆ ಎಂದು ದೂರು ಕೊಟ್ಟಿದ್ದಾರೆ. ನೇರವಾಗಿ ಅದರ ಹೊಣೆ ಹೊತ್ತ ಅಶೋಕ್, ವಿಜಯೇಂದ್ರ, ಕುಮಾರಸ್ವಾಮಿ ಇದರಲ್ಲಿದ್ದಾರೆ. ಅವರ ಹೆಸರ ತಳುಕು ಹಾಕಿಕೊಳ್ತಿಲ್ಲ. ಕೇವಲ ಸಿದ್ದರಾಮಯ್ಯ ಹೆಸರು ಮಾತ್ರ ಕೇಳಿ ಬರ್ತಿದೆ. ವಿರೋಧ ಪಕ್ಷದ ನಾಯಕರೇ ಹೇಳಿದ ಮೇಲೆ ಅವರ ಪಕ್ಷದ ನಾಯಕರು ಅರ್ಥ ಮಾಡಿಕೊಳ್ಳಲಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.