ದಶಾ ಸಂಧಿ ಕಾಲ ಎಂದರೇನು? ಮೂರು ದಶಾ ಸಂಧಿಗೆ ಹೆಚ್ಚು ಪ್ರಾಮುಖ್ಯತೆ
ಆಶ್ಲೇಷ, ಜ್ಯೇಷ್ಠ, ರೇವತಿ, ಬುಧ ದಶಾ 17 ವರ್ಷ.
Team Udayavani, Sep 23, 2021, 1:24 PM IST
ಜ್ಯೋತಿಷ್ಯ ಶಾಸ್ತ್ರದಲ್ಲಿ ಮುಂದೆ ಸಂಭವಿಸುವ ಘಟನೆಗಳನ್ನು ತಿಳಿಯಲು ಉಪಯೋಗಿಸುವ ಒಂದು ಪದ್ಧತಿ ದಶಾ ಕಾಲ. ಜ್ಯೋತಿಷ್ಯ ಶಾಸ್ತ್ರಜ್ಞರು ಹಲವಾರು ಬಗೆಯ ದಶಾ ಪದ್ಧತಿಗಳನ್ನು ಆಧಾರವಾಗಿಟ್ಟುಕೊಂಡು ಭವಿಷ್ಯವನ್ನು ನುಡಿಯುತ್ತಾರೆ. ಅವುಗಳಲ್ಲಿ ವಿಂಶೋತ್ತರಿ ದಶಾ, ಸಮ ಸಪ್ತಕ ದಶಾ, ಅಷ್ಟೋತ್ತರಿ ದಶಾ, ಸ್ಥಿರ ದಶಾ, ದ್ವಾದಶೋತ್ತರ ದಶಾ, ಶೋಡಶೋತ್ತರಿ ದಶಾ, ಮಂಡೂಕ ದಶಾ, ಹೀಗೆ ಹಲವಾರು ದಶಾ ಪದ್ಧತಿಗಳಿವೆ.
ಈ ಎಲ್ಲಾ ದಶಾ ಪದ್ಧತಿಗಳಲ್ಲಿ ಪರಾಶರ ಮುನಿಗಳ ಹೋರಾ ಶಾಸ್ತ್ರದಲ್ಲಿ ವಿಂಶೋತ್ತರಿ (120) ದಶಾ ಪದ್ಧತಿಯು ತುಂಬಾ ಶ್ರೇಷ್ಠವಾದದ್ದು ಮತ್ತು ಕರಾರುವಕ್ಕಾದ ಭವಿಷ್ಯವನ್ನು ನಿರ್ಧರಿಸುವ ದಶಾ ಪದ್ಧತಿ. ವಿಂಶೋತ್ತರಿ, ಹೆಸರೇ ಹೇಳುವ ಹಾಗೆ 120 ವರ್ಷ, ಅಂದರೆ ಒಬ್ಬ ವ್ಯಕ್ತಿಯ ಜೀವಿತಾವಧಿಯನ್ನು 120 ವರ್ಷಕ್ಕೆ ನಿರ್ಧರಿಸಿ ಅದನ್ನು ಪೂರ್ಣಾಯು ಎಂದು ಹೇಳುವುದು ಜ್ಯೋತಿಷ್ಯದಲ್ಲಿ ವಾಡಿಕೆ.
ಈ 120 ವರ್ಷಗಳನ್ನು ನವಗ್ರಹಗಳು ವ್ಯಕ್ತಿಯ ಪ್ರಾರಬ್ಧ ಕರ್ಮಕ್ಕೆ ಅನುಗುಣವಾಗಿ ಶುಭ, ಅಶುಭ ಫಲಗಳನ್ನು ನಿರ್ಧರಿಸುತ್ತದೆ. ವ್ಯಕ್ತಿಯ ಜನ್ಮನಕ್ಷತ್ರದ ಅಧಿಪತಿಯ ಮೂಲಕ ಜಾತಕನ ದಶಾ ಪ್ರಾರಂಭವಾಗುತ್ತದೆ.
ಉದಾಹರಣೆಗೆ: ಕೇತುವಿನ ನಕ್ಷತ್ರಗಳಾದ ಅಶ್ವಿನಿ, ಮಘ, ಮೂಲ ನಕ್ಷತ್ರಗಳಲ್ಲಿ ಹುಟ್ಟಿರುವ ವ್ಯಕ್ತಿಗೆ ಮೊದಲಿಗೆ ಕೇತು ದಶಾ ಪ್ರಾರಂಭವಾಗುತ್ತದೆ. ಕೇತು ದಶಾ ಕಾಲ 7 ವರ್ಷ.
ಅದೇ ರೀತಿ ಭರಣಿ, ಪೂರ್ವ ಪಾಲ್ಗುಣಿ, ಪೂರ್ವಾಷಾಢ, ಶುಕ್ರದಶಾ, 20 ವರ್ಷ
ಕೃತ್ತಿಕ, ಉತ್ತರ, ಉತ್ತರಾಷಾಢ, ರವಿ ದಶಾ 6 ವರ್ಷ
ರೋಹಿಣಿ, ಹಸ್ತ, ಶ್ರಾವಣ, ಚಂದ್ರದಶಾ 10 ವರ್ಷ
ಮೃಗಶಿರಾ, ಚಿತ್ರಾ, ಧನಿಷ್ಠಾ, ಕುಜದಶಾ 7 ವರ್ಷ
ಆದ್ರಾ, ಸ್ವಾತಿ, ಶತಭಿಷಾ, ರಾಹುದಶಾ 18 ವರ್ಷ
ಪುನರ್ವಸು, ವಿಶಾಖ, ಪೂರ್ವಭಾದ್ರ, ಗುರುದಶಾ 16 ವರ್ಷ
ಪುಷ್ಯ, ಅನುರಾಧ, ಉತ್ತರಭಾದ್ರಾ, ಶನಿದಶಾ 19 ವರ್ಷ
ಆಶ್ಲೇಷ, ಜ್ಯೇಷ್ಠ, ರೇವತಿ, ಬುಧ ದಶಾ 17 ವರ್ಷ.(ಶಿಷ್ಠ ದಶಾ ಲೆಕ್ಕಾಚಾರ ಹೊರತುಪಡಿಸಿ) ಹೀಗೆ ಒಟ್ಟು 120 ವರ್ಷ ದಶಾ ಕಾಲದಲ್ಲಿ ಒಂದು ದಶಾ ಕಾಲ ಮುಗಿದು ಇನ್ನೊಂದು ದಶಾ ಕಾಲ ಹಿಡಿಯುವ ಸಮಯವೇ ದಶಾ ಸಂಧಿ ಕಾಲ.
ಇವುಗಳಲ್ಲಿ ಮೂರು ದಶಾ ಸಂಧಿ ಕಾಲವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೆಚ್ಚಾಗಿ ಪ್ರಾಮುಖ್ಯತೆ ಕೊಡಲಾಗಿದೆ. ಮತ್ತು ಸಂಧಿ ಶಾಂತಿ ಪರಿಹಾರಗಳನ್ನು ಆ ಕಾಲದಲ್ಲಿ ಮಾಡುವುದು ಪದ್ಧತಿ. ಅವುಗಳೆಂದರೆ…
ಕುಜ-ರಾಹು ದಶಾ ಸಂಧಿ, ಕುಜ ದಶಾ ಕಾಲ ಮುಗಿದು ರಾಹುದಶಾ ಹಿಡಿಯುವ ಸಮಯ. ರಾಹು, ಬೃಹಸ್ಪತಿ ದಶಾಸಂಧಿ, ರಾಹು ದಶಾ ಮುಗಿದು, ಗುರು ದಶಾ ಹಿಡಿಯುವ ಸಮಯ. ಅದೇ ರೀತಿ ಶುಕ್ರಾಧಿಪತ್ಯ ಸಂಧಿ, ಶುಕ್ರ ದಶಾ ಮುಗಿದು, ರವಿ ದಶಾ ಹಿಡಿಯುವ ಸಮಯ. ಈ ಮೂರು ದಶಾ ಸಂಧಿಗಳಲ್ಲಿ ಕುಜರಾಹು ಸಂಧಿಯು ತುಂಬಾ ಕೆಟ್ಟದ್ದು, ಏಕೆಂದರೆ ಕುಜ, ರಾಹು ಎರಡೂ ಕ್ರೂರ ಮತ್ತು ಅಶುಭ ಗ್ರಹಗಳು. ಅದೂ ಅಲ್ಲದೇ ಕುಜ, ರಾಹು ಒಬ್ಬರಿಗೊಬ್ಬರು ಶತ್ರುಗಳಾಗಿದ್ದು, ಸಂಧಿ ಕಾಲದಲ್ಲಿ ಅಶುಭ ಫಲಗಳನ್ನು ನೀಡುತ್ತದೆ ಎಂಬುದು ಜ್ಯೋತಿಷ್ಯ ಶಾಸ್ತ್ರಜ್ಞರ ಅಭಿಮತ.
ರವೀಂದ್ರ. ಐರೋಡಿ (ಜ್ಯೋತಿಷ್ಯ ವಿಶಾರದಾ)
ಬಿಎಸ್ಸಿ, ಎಲ್ ಎಲ್ ಬಿ
ಜ್ಯೋತಿಷ್ಯ ವಿಶ್ಲೇಷಕರು, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Astrology 2024: 2024ರಲ್ಲಿ ಮಿಶ್ರ ಫಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?
ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?
ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…
ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?
ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.