Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
ಸೋತ ಇತಿಹಾಸವಿಲ್ಲದ ಬೆಳ್ಳೂಡಿ ಕಾಳಿ 25ಕ್ಕೂ ಹೆಚ್ಚು ಕಾಳಗಗಳಲ್ಲಿ ಭಾಗಿ, ಟಗರು ಪ್ರೇಮಿಗಳಿಗೆ ಅಪಾರ ಅಚ್ಚುಮೆಚ್ಚು
Team Udayavani, Nov 25, 2024, 9:36 PM IST
ದಾವಣಗೆರೆ: ಅಪಾರ ಅಭಿಮಾನಿಗಳ ಹೊಂದಿ, ಸಾವಿರಾರು ಟಗರು ಪ್ರೇಮಿಗಳ ಪ್ರೀತಿಗೆ ಪಾತ್ರವಾಗಿದ್ದ ಸೋಲಿಲ್ಲದ ಸರದಾರ ಖ್ಯಾತಿಯ ‘ಬೆಳ್ಳೂಡಿ ಕಾಳಿ’ ಟಗರು ಸೋಮವಾರ ಅನಾರೋಗ್ಯದಿಂದ ಅಕಾಲಿಕ ನಿಧನ ಹೊಂದಿದೆ.
ಟಗರು ಕಾಳಗದಲ್ಲಿ ಸೋತ ಇತಿಹಾಸವೇ ಇಲ್ಲದ ‘ಬೆಳ್ಳೂಡಿ ಕಾಳಿ’ಯನ್ನು ಕಂಡರೆ ಟಗರು ಪ್ರೇಮಿಗಳಿಗೆ ಅಪಾರ ಪ್ರೀತಿ. ಕಣದಲ್ಲಿ ಬೆಳ್ಳೂಡಿ ಕಾಳಿಯ ಆಟ ಕಣ್ತುಂಬಿಕೊಳ್ಳಲು ಗುಂಪು ಗುಂಪಾಗಿ ಅಭಿಮಾನಿಗಳು ಜಮಾಯಿಸುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಬೆಳ್ಳೂಡಿ ಕಾಳಿಯದ್ದೇ ಹವಾ ಇತ್ತು. ಬೆಳ್ಳೂಡಿ ಕಾಳಿ ಗತ್ತು ಗಾಂಭೀರ್ಯದಿಂದಲೇ ಕಣಕ್ಕೆ ಪ್ರವೇಶಿಸುತ್ತಿತ್ತು. ಕಣದಲ್ಲಿದ್ದ ಎದುರಾಳಿ ಟಗರು ಹೊಡೆದುರುಳಿಸಿ ಬಹುಮಾನಗಳ ತನ್ನದಾಗಿಸಿಕೊಳ್ಳುತ್ತಿತ್ತು. ಬೆಳ್ಳೂಡಿ ಕಾಳಿಯ ಸಾವು ಸಾವಿರಾರು ಅಭಿಮಾನಿಗಳಿಗೆ ನೋವುಂಟು ಮಾಡಿದೆ.
ರಕ್ತ ಪರೀಕ್ಷೆ ವರದಿ ಬರುವ ಮೊದಲೇ ಮೃತ್ಯು:
ಒಂದು ವಾರದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಬೆಳ್ಳೂಡಿ ಕಾಳಿಗೆ ದಾವಣಗೆರೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಸೋಮವಾರ ಕಾಳಿಯ ರಕ್ತ ಪರೀಕ್ಷೆಯ ವರದಿ ಬರಬೇಕಾಗಿತ್ತು. ಆದರೆ, ವರದಿ ಬರುವುದರೊಳಗೇ ಮೃತಪಟ್ಟಿದೆ. ಬೆಳ್ಳೂಡಿ ಕಾಳಿ 25-30 ಕಾಳಗಗಳಲ್ಲಿ ಭಾಗವಹಿಸಿದ್ದು ಸೋತ ಇತಿಹಾಸವೇ ಇಲ್ಲ. ಬೆಳ್ಳೂಡಿ ಕಾಳಿಯನ್ನು ತಮ್ಮ ಜಮೀನಿನಲ್ಲಿಯೇ ಮಣ್ಣು ಮಾಡುವುದಾಗಿ ಟಗರಿನ ಮಾಲೀಕ ರಾಘವೇಂದ್ರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.