ಕಾರಜೋಳ, ಅಶ್ವಥ್ ನಾರಾಯಣ್, ಲಕ್ಷ್ಮಣ ಸವದಿಗೆ ಡಿಸಿಎಂ ಪಟ್ಟ
ಸಚಿವರ ಖಾತೆ ಹಂಚಿಕೆ ಅಂತಿಮ ಪಟ್ಟಿ ಬಿಡುಗಡೆ
Team Udayavani, Aug 26, 2019, 8:16 PM IST
ಬೆಂಗಳೂರು : ಬಿಜೆಪಿ ಸರಕಾರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ 17 ಸಚಿವರ ಖಾತೆ ಹಂಚಿಕೆಯ ಅಂತಿಮ ಪಟ್ಟಿ ಬಿಡುಗಡೆಗೊಂಡಿದೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವರ ಖಾತೆ ಹಂಚಿಕೆಯ ಗೊಂದಲ ಕೊನೆಗೂ ಅಂತ್ಯಕಂಡಿದೆ.
ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ್ ಹಾಗೂ ಲಕ್ಷ್ಮಣ್ ಸವದಿ ಸೇರಿ ಮೂವರಿಗೆ ಉಪಮುಖ್ಯಮಂತ್ರಿ ಪಟ್ಟ ಲಭಿಸಿದೆ. ಇದರೊಂದಿಗೆ ಡಿಸಿಎಂ ಪಟ್ಟ ಯಾರಿಗೆ ಒಲಿಯುತ್ತದೆ ಎಂಬ ಕುತೂಹಲಕ್ಕೆ ತೆರೆಬಿದ್ದಂತಾಗಿದೆ.
ಹಣಕಾಸು, ಇಂಧನ, ಜಲಸಂಪನ್ಮೂಲ, ಆಹಾರ ಮತ್ತು ನಾಗರಿಕ ಇಲಾಖೆ, ಅರಣ್ಯ, ವಾರ್ತಾ ಮತ್ತು ಪ್ರಸಾರ ಇಲಾಖೆ ,ಸಹಕಾರ, ರೇಷ್ಮೆ , ತೋಟಗಾರಿಕಾ ಇಲಾಖೆ, ಬೆಂಗಳೂರು ನಗರಾಭಿವೃದ್ಧಿ, ಬಂಧಿಖಾನೆ ಇಲಾಖೆ, ಗುಪ್ತಚರ , ಸಕ್ಕರೆ ಇಷ್ಟು ಖಾತೆಗಳು ಮುಖ್ಯಮಂತ್ರಿಗಳ ಬಳಿ ಉಳಿದಿದೆ .
ಯಾರಿಗೆ ಯಾವ ಖಾತೆ :
ಕೆಎಸ್ ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಬಸವರಾಜ ಬೊಮ್ಮಾಯಿ – ಗೃಹ ಸಚಿವ
ಗೋವಿಂದ ಕಾರಜೋಳ – ಲೋಕೋಪಯೋಗಿ, ಸಮಾಜ ಕಲ್ಯಾಣ ಇಲಾಖೆ
ಅಶ್ವಥ್ ನಾರಾಯಣ – ಉನ್ನತ ಶಿಕ್ಷಣ, ಐಟಿ /ಬಿಟಿ , ವಿಜ್ಞಾನ ಮತ್ತು ತಂತ್ರಜ್ಞಾನ
ಜಗದೀಶ್ ಶೆಟ್ಟರ್– ಬೃಹತ್ ಮತ್ತು ಮಧ್ಯಮ ಕೈಗಾರಿಕೆ
ಲಕ್ಷ್ಮಣ ಸವದಿ – ಸಾರಿಗೆ ಸಚಿವ
ಆರ್.ಅಶೋಕ್– ಕಂದಾಯ
ವಿ.ಸೋಮಣ್ಣ– ವಸತಿ
ಜೆಸಿ ಮಾಧುಸ್ವಾಮಿ – ಕಾನೂನು, ಸಣ್ಣ ನೀರಾವರಿ
ಶಶಿಕಲಾ ಜೊಲ್ಲೆ– ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಕೋಟ ಶ್ರೀನಿವಾಸ ಪೂಜಾರಿ – ಬಂದರು ಮತ್ತು ಮೀನುಗಾರಿಕೆ
ಸಿಸಿ ಪಾಟೀಲ್– ಗಣಿ ಮತ್ತು ಭೂವಿಜ್ಞಾನ
ಸುರೇಶ್ ಕುಮಾರ್ – ಪ್ರಾಥಮಿಕ, ಪ್ರೌಢ ಶಿಕ್ಷಣ
ಪ್ರಭು ಚೌಹಾಣ್ – ಪಶು ಸಂಗೋಪನೆ
ಹೆಚ್ ನಾಗೇಶ್ – ಅಬಕಾರಿ
ಶ್ರೀರಾಮುಲು – ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಸಿ ಟಿ ರವಿ – ಪ್ರವಾಸೋದ್ಯಮ, ಕನ್ನಡ ಮತ್ತು ಸಾಹಿತ್ಯ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್
Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!
MUST WATCH
ಹೊಸ ಸೇರ್ಪಡೆ
Bunts Hostel, ಕರಂಗಲ್ಪಾಡಿ ಜಂಕ್ಷನ್: ಶಾಶ್ವತ ಡಿವೈಡರ್ ನಿರ್ಮಾಣ ಕಾಮಗಾರಿ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.