ಮೋದಿ ಪಂಚಾಮೃತ ಸೂತ್ರ

2030ರೊಳಗೆ ಭಾರತವನ್ನು ಮಾಲಿನ್ಯ ಮುಕ್ತಗೊಳಿಸಲು 5 ಕ್ರಮಗಳ ಘೋಷಣೆ

Team Udayavani, Nov 2, 2021, 6:30 AM IST

ಮೋದಿ ಪಂಚಾಮೃತ ಸೂತ್ರ

ಹೊಸದಿಲ್ಲಿ: “2030ರ ಹೊತ್ತಿಗೆ ಭಾರತವನ್ನು ಇಂಗಾಲ ಹೊರಸೂಸುವಿಕೆಯಿಂದ ಮುಕ್ತ ರಾಷ್ಟ್ರವಾಗಿನ್ನಾಗಿಸಲಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ, ಜಾಗತಿಕ ಸಮುದಾಯಕ್ಕೆ ವಾಗ್ಧಾನ ನೀಡಿದ್ದಾರೆ. ಅದನ್ನು ಸಾಧಿಸಲು ಐದು ಕ್ರಮಗಳನ್ನು ಅನುಸರಿಸುವುದಾಗಿ ಘೋಷಿಸಿದ್ದಾರೆ.

ಸ್ಕಾಟ್ಲೆಂಡ್‌ನ‌ ಗ್ಲಾಸ್ಗೋ ನಲ್ಲಿ ರವಿವಾರದಿಂದ ಆರಂಭವಾದ ಎರಡು ದಿನಗಳ ವಿಶ್ವಸಂಸ್ಥೆಯ 26ನೇ ಜಾಗತಿಕ ಪರಿಸರ ಸಂರಕ್ಷಣ ಸಮ್ಮೇಳನದಲ್ಲಿ (26ನೇ ಕಾನ್ಫರೆನ್ಸ್‌ಆಫ್ ಪಾರ್ಟೀಸ್‌- ಕಾಪ್‌ 26) ಮಾತನಾಡಿದ ಅವರು, “ಪಂಚಮೃತ ಸೂತ್ರದ ಅಡಿಯಲ್ಲಿ, ಜೈವಿಕವಲ್ಲದ ಇಂಧನಗಳ (ನಾನ್‌- ಫಾಸಿಲ್‌ ಫ್ಯೂಯೆಲ್ಸ್‌) ಬಳಕೆಯ ಪ್ರಮಾಣವನ್ನು 500 ಗಿಗಾ ವ್ಯಾಟ್‌ಗಳಿಗೆ ಹೆಚ್ಚಿಸುವುದು. ನವೀಕರಿಸಬಹುದಾದ ಇಂಧನಗಳನ್ನು ಈಗಿರುವ ಪ್ರಮಾಣಕ್ಕಿಂತ ಶೇ.50ರಷ್ಟು ಹೆಚ್ಚಿಸುವುದು. ಇಂಗಾಲದ ಹೊರಸೂಸುವಿಕೆಯ ಪ್ರಮಾಣವನ್ನು 1 ಬಿಲಿಯನ್‌ ಟನ್‌ನಷ್ಟು ಇಳಿಸುವುದು. ದೇಶದ ವಾಯುಮಂಡಲಕ್ಕೆ ನಾನಾ ಮಾರ್ಗಗಳಿಂದ ಸೇರುವ ಇಂಗಾಲದ ಪ್ರಮಾಣವನ್ನು ಶೇ.40ಕ್ಕೆ ಇಳಿಸುವುದು ಹಾಗೂ 2070ರ ಹೊತ್ತಿಗೆದೇಶದ ಇಂಗಾಲ ಹೊರಸೂಸುವಿಕೆಯನ್ನು ಶೇ. 100ರಷ್ಟು ಮುಕ್ತವಾಗಿಸುವ ಗುರಿಯನ್ನು ಹೊಂದಲಾಗಿದೆ’
ಎಂದು ತಿಳಿಸಿದ್ದಾರೆ.

ಅಲ್ಲದೆ, ಪರಿಸರ ಸಂರಕ್ಷಣೆಯೇ ನಮ್ಮೆಲ್ಲರ ಮೂಲ ಮಂತ್ರವಾಗಲಿ ಎಂದಿರುವ ಅವರು, ಸರ್ವೇ ಸುಖೀನೋ ಭವಂತು ಎಂಬ ಆಶಯದಡಿ ವಿಶ್ವದ ಎಲ್ಲರೂ ಸುಖವಾಗರಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ:ದೀಪಾವಳಿಗೆ ಅಯೋಧ್ಯೆಯಲ್ಲಿ 12 ಲಕ್ಷ ದೀಪ

ನಿಸರ್ಗ ಸಂರಕ್ಷಣೆಗೆ ಬದ್ಧ: ಪರಿಸರ ಸಂರಕ್ಷಣೆಗೆ ಭಾರತ ಬದ್ಧವಾಗಿದೆ. ಕ್ಲೀನ್‌ ಇಂಡಿಯಾ ಮಿಷನ್‌ ಹಾಗೂ ಉಜ್ವಲ ಯೋಜನಾದಂತಹ ಕಾರ್ಯಕ್ರಮಗಳ ಮೂಲಕ ಭಾರತೀ ಯರಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿ ಸುತ್ತಿರುವುದರ ಜತೆ ವಿಶ್ವಸಂಸ್ಥೆಯು ನಿಗದಿಪಡಿಸಿರುವ ಪರಿಸರ ಸಂರಕ್ಷಣೆಯ ಗುರಿಗಳನ್ನು ಈಡೇರಿಸುವ ನಿಟ್ಟಿನಲ್ಲಿ ಭಾರತ ಕಾರ್ಯ ನಿರ್ವಹಿಸುತ್ತಿದೆ ಎಂದಿದ್ದಾರೆ.

ಭಾರತೀಯ ರೈತರಿಗೆ ತೊಂದರೆ: ತಾಪಮಾನ ಹೆಚ್ಚಳದ ದುಷ್ಪರಿಣಾಮದಿಂದಾಗಿ ಆಗುತ್ತಿರುವ ಹವಾಮಾನ ವೈಪ ರೀತ್ಯಗಳು ಭಾರತದ ರೈತರ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ ಅವರು, ಅವರ ಬಿತ್ತನೆ ಹಾಗೂ ಫ‌ಸಲು ಅವಧಿಗಳನ್ನು ಏರುಪೇರಾಗಿಸಿದೆ ಎಂದಿದ್ದಾರೆ.

ಸಂಸದೆ ಗೋಸಲ್‌ ಭೇಟಿ
ಸ್ಕಾಟ್ಲೆಂಡ್‌ನ‌ ಸಂಸತ್ತಿಗೆ ಚುನಾಯಿತ ರಾಗಿರುವ ಮೊದಲ ಭಾರತ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ರುವ ಪಾಮ್‌ ಗೋಸಲ್‌, ಅವರು ಕಾಪ್‌ 26 ಸಭೆಯಲ್ಲಿ ಪ್ರಧಾನಿ ಮೋದಿ ಯವರನ್ನು ಭೇಟಿ ಮಾಡಿದರು. ಈ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಮೋದಿಯರನ್ನು ಜಗತ್ತಿನ ವಿವಿಧ ದೇಶಗಳ ನಾಯಕರ ಜತೆಗೆ ನೋಡಲು ಖುಷಿಯಾಗುತ್ತದೆ ಎಂದಿದ್ದಾರೆ.

ಪಾರಂಪರಿಕ ಕೃಷಿಗೆ ಒತ್ತು
ಇದೇ ವೇಳೆ, ಹಲವಾರು ದೇಶಗಳಲ್ಲಿ ಹಿಂದಿನ ಜನರು ರೂಢಿಯಲ್ಲಿಟ್ಟು ಕೊಂಡಿದ್ದ ಪರಿಸರ ಸ್ನೇಹಿ ಕೃಷಿಯನ್ನು ಪುನಃ ಅವಲಂಬಿಸುವ ಅವಶ್ಯಕತೆ ಈಗ ತುರ್ತಾಗಿ ಆಗಬೇಕಿದೆ ಎಂದು ಮೋದಿ ಕರೆ ನೀಡಿದ್ದಾರೆ. “ಅನೇಕ ಸಾಂಪ್ರದಾಯಿಕ ಸಮುದಾಯಗಳು ಪರಿಸರ ಸ್ನೇಹಿ ಕೃಷಿ ಪದ್ಧತಿ ಹಾಗೂ ಜೀವನ ವಿಧಾನಗಳನ್ನು ಅನುಸರಿಸುತ್ತಿದ್ದವು. ಈಗಲೂ ಹಲವಾರು ಕಡೆ ಅಂಥ ಕೃಷಿ ಪದ್ಧತಿಗಳನ್ನು ಕಾಣು ತ್ತಿದ್ದೇವೆ. ಅವನ್ನು ನಾವು ಪುನಃ ಅಳವಡಿಸಿ ಕೊಳ್ಳಬೇಕಿದೆ. ಅಲ್ಲದೆ, ಆ ಕೃಷಿ ಜ್ಞಾನಗಳು ಅಳಿದು ಹೋಗದಂತೆ ಎಚ್ಚರಿಕೆ ವಹಿ ಸಬೇಕಿದ್ದು, ಆ ಎಲ್ಲಾ ಜ್ಞಾನವನ್ನು ಶಾಲಾ ಪಠ್ಯದ ಮೂಲಕ ವಿದ್ಯಾರ್ಥಿಗಳಿಗೆ ಕಲಿಸಿ ಕೊಡಬೇಕಿದೆ. ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವಂಥ ಜ್ಞಾನವನ್ನೂ ನಾವಿಂದು ನಮ್ಮ ಮಕ್ಕಳಿಗೆ ತಿಳಿಸಿಕೊಡಬೇಕಿದೆ’ ಎಂದು ಅವರು ಕರೆ ನೀಡಿದ್ದಾರೆ.

ಜೇಮ್ಸ್‌ಬಾಂಡ್‌ ರೀತಿ ಕೆಲಸ ಅಗತ್ಯ: ಬೋರಿಸ್‌
“ಪರಿಸರ ನಾಶದಿಂದಾಗಿ ಜಗತ್ತು ಹಲವಾರು ವಿಪತ್ತುಗಳಿಗೆ ಈಡಾಗಿದೆ. ಈ ಸಂದರ್ಭದಲ್ಲಿ ಜೇಮ್ಸ್‌ ಬಾಂಡ್‌ ಸಿನಿಮಾಗಳಲ್ಲಿ ನಾಯಕ ಹೇಗೆ ಕ್ಷಿಪ್ರಗತಿಯಲ್ಲಿ ದುಷ್ಟರ ವಿರುದ್ಧ ಹೋರಾಡಿ ಜಯ ಗಳಿಸುತ್ತಾನೋ ಹಾಗೆಯೇ, ಜಗತ್ತಿನ ಎಲ್ಲಾ ನಾಯಕರೂ ಹೋರಾಟ ನಡೆಸಿ, ಜಗತ್ತನ್ನು ಕಾಪಾಡಬೇಕು’ ಎಂದು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಆಗ್ರಹಿಸಿದ್ದಾರೆ. “ಕಾಪ್‌ 26’ನಲ್ಲಿ ಮಾತನಾಡಿದ ಅವರು, “ಪರಿಸರ ಸಂರಕ್ಷಣೆ ಗಾಗಿ ಕ್ಷಿಪ್ರಗತಿಯಲ್ಲಿ ನಾವು ಕಾರ್ಯೋನ್ಮುಖ ರಾಗದಿದ್ದರೆ, ದೊಡ್ಡ ಪ್ರಮಾದ ಗಳನ್ನು ಎದುರಿಸ ಬೇಕಾಗುತ್ತದೆ. ಜಾಗತಿಕ ತಾಪಮಾನ ಈಗಿರುವುದಕ್ಕಿಂತ ಕೇವಲ ಎರಡು ಡಿಗ್ರಿಯಷ್ಟು ಹೆಚ್ಚಾದರೂ ಅದು ವಿಶ್ವದ ಆಹಾರ ಸರಬರಾಜು ವ್ಯವಸ್ಥೆ ಯನ್ನು ನಿಷ್ಕ್ರಿಯಗೊಳಿಸುತ್ತದೆ. ಇನ್ನೊಂದು ಡಿಗ್ರಿ ಜಾಸ್ತಿಯಾ ದರೆ ಭೀಕರವಾದ ಕಾಡ್ಗಿಚ್ಚುಗಳು, ಚಂಡಮಾರುತಗಳನ್ನು ಅನು ಭವಿಸಬೇಕಾಗುತ್ತದೆ. ಇದೇ ಉಷ್ಣಾಂಶ ನಾಲ್ಕು ಡಿಗ್ರಿಯಷ್ಟು ಹೆಚ್ಚಾದರೆ ನಾವು ಪರಸ್ಪರ “ಗುಡ್‌ಬೈ’ ಹೇಳಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ಟಾಪ್ ನ್ಯೂಸ್

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.