Deepavali Bonus: ಚುನಾವಣೆ ಘೋಷಣೆಗೂ ಮುನ್ನ ʼಮಹಾʼ ಸರಕಾರದಿಂದ ನೌಕರರಿಗೆ ಬೋನಸ್!
ಮಹಿಳಾ ಮತದಾರರ ಮನ ಸೆಳೆಯಲು ನೀತಿ ಸಂಹಿತೆ ಜಾರಿಗೂ ಮೊದಲೇ ಸಹಾಯಧನ ನೀಡಿದ ಏಕನಾಥ ಶಿಂಧೆ ಸರಕಾರ
Team Udayavani, Oct 15, 2024, 7:12 PM IST
ಮುಂಬಯಿ: ಕೇಂದ್ರ ಚುನಾವಣ ಆಯೋಗ (CEC) ವಿಧಾನಸಭಾ ಚುನಾವಣೆಗೆ (Assembly Election) ದಿನಾಂಕ ಘೋಷಿಸುವ ಮೊದಲೇ ಮಹಾರಾಷ್ಟ್ರ(Maharashtra) ಸರ್ಕಾರವು ಕೆಳ ಹಂತದ ಸರ್ಕಾರಿ ನೌಕರರು, ಶಿಶುವಿಹಾರದ ಶಿಕ್ಷಕರು, ಆಶಾ ಕಾರ್ಯಕರ್ತೆಯರಿಗೆ ದೀಪಾವಳಿ ಬೋನಸ್ ಘೋಷಿಸಿದೆ.
ಚುನಾವಣ ಆಯೋಗ ದಿನಾಂಕ ಘೋಷಿಸುವ ಕೆಲವೇ ನಿಮಿಷಗಳ ಮೊದಲು ಈ ಬೆಳವಣಿಗೆ ನಡೆದಿದ್ದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಯ ಎಲ್ಲಾ ಉದ್ಯೋಗಿಗಳಿಗೆ 28,000 ರೂ.ಗಳ ದೀಪಾವಳಿ ಬೋನಸನ್ನು ನೀತಿ ಸಂಹಿತೆ ಜಾರಿಯಾಗುವ ಮೊದಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಘೋಷಿಸಿದ್ದಾರೆ. ಇದು ಕಳೆದ ವರ್ಷ ಘೋಷಿಸಿದ ಬೋನಸ್‌ಗಿಂತ 3,000 ರೂ. ಹೆಚ್ಚಳವಾಗಿದೆ.
ಲಡ್ಕಿ ಬೆಹನ್ ಫಲಾನುಭವಿಗಳಿಗೆ ಹೆಚ್ಚುವರಿ ಹಣ:
ಲಡ್ಕಿ ಬೆಹನ್ ಯೋಜನೆಯ ಮಹಿಳಾ ಫಲಾನುಭವಿಗಳಿಗೆ 2024ರ ದೀಪಾವಳಿ ಬೋನಸ್ ಅಂಗವಾಗಿ 4 ಮತ್ತು 5 ನೇ ಕಂತಿನಲ್ಲಿ ರೂ. 3,000 ಬ್ಯಾಂಕ್ ಖಾತೆಗಳಿಗೆ ನೇರ ಜಮಾ ಮಾಡುವುದಾಗಿ ಸರ್ಕಾರ ಹೇಳಿದೆ. ಲಡ್ಕಿ ಬೆಹನ್ ಯೋಜನೆಯು ವಾರ್ಷಿಕ 2.5 ಲಕ್ಷ ರೂ.ಕ್ಕಿಂತ ಕಡಿಮೆ ಆದಾಯವಿರುವ ಕುಟುಂಬದ ಮಹಿಳೆಯರು ಮಾಸಿಕವಾಗಿ 1,500 ರೂ. ಸಹಾಯಧನ ಪಡೆಯುತ್ತಿದ್ದರು.
ಶಿಂಧೆ ಸರಕಾರದಿಂದ ಮಹಿಳಾ ಮತದಾರರ ಗುರಿ:
ಆಡಳಿತಾರೂಢ ಮಹಾಯುತಿ ಮತ್ತು ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ (ಎಂವಿಎ) ನಡುವೆ ತೀವ್ರ ಪೈಪೋಟಿ ಏರ್ಪಟ್ಟಿರುವುದರಿಂದ ಚುನಾವಣೆ ವರ್ಷದಲ್ಲಿ ಏಕನಾಥ್ ಶಿಂಧೆ ಸರಕಾರವು ಮಹಿಳೆಯರು, ವೃದ್ಧರು ಮತ್ತು ಯುವಕರ ಗುರಿಯಾಗಿಸಿ ಸರ್ಕಾರ ಎಂಟು ಪ್ರಮುಖ ಕಲ್ಯಾಣ ಯೋಜನೆಗಳ ಅನಾವರಣಗೊಳಿಸಿದೆ. ವರ್ಷಕ್ಕೆ ಮೂರು ಉಚಿತ ಸಿಲಿಂಡರ್ ಹಾಗೂ ತೀರ್ಥಕ್ಷೇತ್ರಗಳಿಗೆ ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣ, ಆರ್ಥಿಕವಾಗಿ ಸಬಲರಲ್ಲದ ಉಚಿತ ಔದ್ಯೋಗಿಕ ಶಿಕ್ಷಣವನ್ನು ಘೋಷಿಸಿದೆ.
ಮಹಾನಗರದ ಮತದಾರರ ಸೆಳೆಯಲು ರಾಜ್ಯ ಸರಕಾರವು ಮುಂಬೈಗೆ ಪ್ರವೇಶಿಸುವ ಲಘು ಮೋಟಾರು ವಾಹನಗಳು ಇನ್ನು ಮುಂದೆ ಯಾವುದೇ ಟೋಲ್ ಪಾವತಿಸುವ ಅಗತ್ಯವಿಲ್ಲ ಎಂದು ಸೋಮವಾರ ಮುಖ್ಯಮಂತ್ರಿ ಶಿಂಧೆ ಘೋಷಿಸಿದ್ದರು. ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೂಡ ಪ್ರಸ್ತಾವಿತ ಶೇ.10 ಪ್ರಯಾಣ ದರ ಏರಿಕೆ ರದ್ದುಗೊಳಿಸಿದೆ.
ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 48 ಸ್ಥಾನಗಳಲ್ಲಿ 31 ಸ್ಥಾನ ಮಹಾ ವಿಕಾಸ್ ಅಘಾಡಿ (ಎಂವಿಎ) ಗೆದ್ದಿತ್ತು. ಈ ಸೋಲಿನ ನಂತರ ಮಹಾಯುತಿ ಮೈತ್ರಿಕೂಟಕ್ಕೆ ವಿಧಾನಸಭೆ ಚುನಾವಣೆಯು ನಿರ್ಣಾಯಕವಾಗಿವೆ. ಮಹಾರಾಷ್ಟ್ರದ ವಿಧಾನಸಭೆಗೆ ನ.20ರಂದು ಮತದಾನ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
Adani Group: ಲಂಚ, ಸತ್ಯ ಮರೆಮಾಚಿದ ಕಾರಣಕ್ಕೆ ಗೌತಮ್ ಅದಾನಿ ವಿರುದ್ದ ಅಮೆರಿಕದಲ್ಲಿ ಕೇಸು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.