ಹಿಂದಿ ಚಿತ್ರರಂಗದಲ್ಲಿ ದೀಪಿಕಾ ಪಡುಕೋಣೆ 15 ವರ್ಷ: ಬಿಡುವಿಲ್ಲದ ಪ್ರಯಾಣ
ಲಿಸ್ಟ್ ನಲ್ಲಿ "ಪಠಾಣ್", "ಪ್ರಾಜೆಕ್ಟ್ ಕೆ" "ಫೈಟರ್" ನಂತಹ ಬಿಗ್ ಬಜೆಟ್ ಚಿತ್ರಗಳು
Team Udayavani, Feb 3, 2022, 12:41 PM IST
ಮುಂಬಯಿ : 2022 ರಲ್ಲಿ ಹಿಂದಿ ಚಿತ್ರರಂಗದಲ್ಲಿ 15 ವರ್ಷಗಳನ್ನು ಪೂರೈಸಿರುವ ನಟಿ ದೀಪಿಕಾ ಪಡುಕೋಣೆ , ಖಾಲಿ ಹಾಳೆ ಮತ್ತು ತಮ್ಮ ಕೌಶಲ್ಯಗಳ ಬಗ್ಗೆ ಖಚಿತವಾಗಿರುವವರ ನಡುವೆ, ನಾನು ಎರಡರ ಮಿಶ್ರಣವಾಗಲು ಬಯಸುತ್ತೇನೆ ಎಂದು ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಮಾಡೆಲಿಂಗ್ ಮೂಲಕ ವೃತ್ತಿ ಜೀವನ ಆರಂಭಿಸಿದ ದೀಪಿಕಾ 2006 ರಲ್ಲಿ ಉಪೇಂದ್ರ ನಾಯಕನಾಗಿ ನಟಿಸಿದ ಕನ್ನಡ ಚಲನಚಿತ್ರ “ಐಶ್ವರ್ಯ” ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
2007 ರ ಪುನರ್ಜನ್ಮದ ಪ್ರಣಯ ಕಥೆ “ಓಂ ಶಾಂತಿ ಓಂ” ನೊಂದಿಗೆ ಶಾರುಖ್ ಖಾನ್ ಅವರೊಂದಿಗೆ ನಟಿಸಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಆ ಬಳಿಕ “ಲವ್ ಆಜ್ ಕಲ್”, “ಕಾಕ್‌ಟೈಲ್”, “ಪಿಕು”, “ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ”, ಪದ್ಮಾವತ್” ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. .
“ನನ್ನ ಪ್ರಯಾಣ ಯಾವಾಗಲೂ ಮುಂದುವರಿಯುತ್ತದೆ ಎಂದು ನಾನು ಭಾವಿಸುತ್ತೇನೆ.ಇಲ್ಲಿ ತುಂಬಾ ಕಲಿಕೆ, ಸಂಸ್ಕರಣೆ, ತಿಳುವಳಿಕೆ, ಬೆಳೆಯುವುದು ಮತ್ತು ವ್ಯಕ್ತಿತ್ವ ವಿಕಸನಗೊಳ್ಳುತ್ತಿದೆ. ನಾನು ವ್ಯಕ್ತಿಯಾಗಿ ಮತ್ತು ವೃತ್ತಿಪರರಾಗಿ ವಿಕಸನಗೊಳ್ಳಲು ಆಶಿಸುತ್ತೇನೆ” ಎಂದು
ದೀಪಿಕಾ ಹೇಳಿದ್ದಾರೆ.
2018 ರಲ್ಲಿ ತಮ್ಮದೇ ಆದ ನಿರ್ಮಾಣ ಕಂಪನಿ ಕಾ ಪ್ರೊಡಕ್ಷನ್ಸ್ ಅನ್ನು ಸ್ಥಾಪಿಸಿ, ಅದರ ಅಡಿಯಲ್ಲಿ ಅವರು “ಛಪಾಕ್” (2020) ಮತ್ತು “83” (2021) ಚಿತ್ರಗಳನ್ನು ನಿರ್ಮಿಸಿ, ನಟಿಸಿದರು. ಉದ್ಯಮಿಯೂ ಆಗಿರುವ ಪಡುಕೋಣೆ ಅವರು ಲೈವ್ ಲವ್ ಲಾಫ್ ಫೌಂಡೇಶನ್‌ನ ಸಂಸ್ಥಾಪಕರಾಗಿದ್ದಾರೆ, ಇದು ಭಾರತದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತದೆ.
36 ರ ಹರೆಯದ ನಟಿ , ಹಾಲಿವುಡ್ ಚಲನಚಿತ್ರ “XXX: ರಿಟರ್ನ್ ಆಫ್ ಕ್ಸಾಂಡರ್ ಕೇಜ್” (2017) ನಲ್ಲಿ ಸಹ ನಟಿಸಿದ್ದಾರೆ.
ಮುಂದಿನ ಚಿತ್ರ “ಗೆಹ್ರಯಾನ್”, ಆಧುನಿಕ-ದಿನದ ಸಂಬಂಧಗಳ ಮೇಲಿನ ಕಥಾ ಹಂದರ . ಇದರಲ್ಲಿ ಸಿದ್ಧಾಂತ್ ಚತುರ್ವೇದಿ, ಅನನ್ಯ ಪಾಂಡೆ ಮತ್ತು ಧೈರ್ಯ ಕರ್ವಾ ಸಹ ನಟಿಸಿದ್ದಾರೆ, ನಾಸಿರುದ್ದೀನ್ ಶಾ ಮತ್ತು ರಜತ್ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಶಕುನ್ ಬಾತ್ರಾ ನಿರ್ದೇಶನದಲ್ಲಿ, ಪಡುಕೋಣೆ ಅಲಿಶಾ ಪಾತ್ರವನ್ನು ನಿರ್ವಹಿಸುತ್ತಿದ್ದು, ಚಿತ್ರದಲ್ಲಿ ಅವರನ್ನು ಅವರು “ಮಾನವ” ಎಂದು ಸರಳವಾಗಿ ವಿವರಿಸಿದ್ದಾರೆ ಮಾತ್ರವಲ್ಲದೆ ಚಿತ್ರವು ಎಲ್ಲಾ ರೀತಿಯ ಜನರ ಬಗ್ಗೆ ಪ್ರೇಕ್ಷಕರಲ್ಲಿ ಸಹಾನುಭೂತಿ ಮೂಡಿಸುವ ಪ್ರಯತ್ನವಾಗಿದೆ ಎಂದರು.
“ಗೆಹ್ರಾಯನ್” ನಂತರ, ನನ್ನ ಲಿಸ್ಟ್ ನಲ್ಲಿ “ಪಠಾಣ್”, “ಪ್ರಾಜೆಕ್ಟ್ ಕೆ” ಮತ್ತು “ಫೈಟರ್” ನಂತಹ ಚಿತ್ರಗಳಿವೆ ಎಂದು ತಿಳಿಸಿದರು.
“ಓಂ ಶಾಂತಿ ಓಂ”, “ಚೆನ್ನೈ ಎಕ್ಸ್‌ಪ್ರೆಸ್” ಮತ್ತು “ಹ್ಯಾಪಿ ನ್ಯೂ ಇಯರ್” ಎಂಬ ಮೂರು ಚಿತ್ರಗಳ ಬಳಿಕ ಶಾರುಖ್ ಖಾನ್ ರೊಂದಿಗೆ “ಪಠಾಣ್” ಮತ್ತೆ ಒಂದುಗೂಡಿಸುತ್ತಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಮತ್ತು ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಈ ಚಿತ್ರವು 2022 ರ ಅಂತ್ಯದ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
“ನಾವು ಈಗ ‘ಪಠಾಣ್’ ಮುಗಿಸುವ ಪ್ರಕ್ರಿಯೆಯಲ್ಲಿದ್ದೇವೆ, ಅದು ಈ ವರ್ಷದ ಅಂತ್ಯದ ವೇಳೆಗೆ ಬಿಡುಗಡೆಯಾಗಲಿದೆ. ನಾಗ್ ಅಶ್ವಿನ್ ಅವರ ವೈಜ್ಞಾನಿಕ ಚಿತ್ರ “ಪ್ರಾಜೆಕ್ಟ್ ಕೆ” ಯಲ್ಲಿ “ಬಾಹುಬಲಿ” ಸ್ಟಾರ್ ಪ್ರಭಾಸ್ ಎದುರು ಕಾಣಿಸಿಕೊಂಡಿದ್ದೇನೆ. ಆನಂದ್ ನಿರ್ದೇಶನದ “ಫೈಟರ್” ನಲ್ಲಿ ಅವರು ಹೃತಿಕ್ ರೋಷನ್ ಅವರೊಂದಿಗೆ ನಟಿಸಿರುವ ಬಗ್ಗೆ ತಿಳಿಸಿದರು.
“ನಾನು ಎರಡು ತಿಂಗಳ ಹಿಂದೆ ಪ್ರಭಾಸ್ ಅವರೊಂದಿಗೆ ‘ಪ್ರಾಜೆಕ್ಟ್ ಕೆ’ ಪ್ರಾರಂಭಿಸಿದೆ, ನಾವು ಅದನ್ನು ಬಹು ಭಾಷೆಗಳಲ್ಲಿ ಮಾಡುತ್ತಿದ್ದೇವೆ. ಇದು ಪ್ಯಾನ್ ಇಂಡಿಯಾ ಚಿತ್ರ. ಇನ್ನೆರಡು ತಿಂಗಳಲ್ಲಿ ‘ಫೈಟರ್’ ಚಿತ್ರೀಕರಣ ಆರಂಭಿಸಲಿದ್ದೇನೆ. ಇವೆಲ್ಲವೂ ವಿಭಿನ್ನ ನಟರು, ಕಥೆಗಳು ಮತ್ತು ನಿರ್ದೇಶಕರೊಂದಿಗೆ, ನಾನು ಅವರೆಲ್ಲರನ್ನೂ ಎದುರು ನೋಡುತ್ತಿದ್ದೇನೆ, ”ಎಂದು ದೀಪಿಕಾ ತಮ್ಮ ಬಿಡುವಿಲ್ಲದ ಪಟ್ಟಿಯನ್ನು ಮುಂದಿಟ್ಟರು.
2012ರಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಡೇಟಿಂಗ್ ಆರಂಭಿಸಿದ್ದ ದೀಪಿಕಾ 2018ರ ನವೆಂಬರ್ ನಲ್ಲಿ,ಇಟಲಿಯ ಲೇಕ್ ಕೊಮೊದಲ್ಲಿ ಕೊಂಕಣಿ ಮತ್ತು ಸಿಂಧಿ ಸಾಂಪ್ರದಾಯಗಳಲ್ಲಿ ವಿವಾಹವಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್ ಮಲಿಕ್; ಇಲ್ಲಿದೆ ಫೋಟೋಸ್
ಹಲವು ಬಾರಿ ಸಾಯುವ ಬಗ್ಗೆ ಯೋಚಿಸಿದ್ದೆ.. #MeToo ಆರೋಪದ ಬಗ್ಗೆ ನಿರ್ದೇಶಕ ಸಾಜಿದ್ ಮಾತು
Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.