ಲಕ್ನೋ-ಡೆಲ್ಲಿ ಫೈಟ್; ಎರಡೂ ತಂಡಗಳು ಇನ್ನಷ್ಟು ಬಲಿಷ್ಠ
ಸ್ಟೋಯಿನಿಸ್, ನೋರ್ಜೆ, ವಾರ್ನರ್ ಎಂಟ್ರಿ
Team Udayavani, Apr 7, 2022, 8:05 AM IST
ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ -ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ಗುರುವಾರದ ಮೇಲಾಟ ಹೆಚ್ಚು ಬಲಿಷ್ಠಗೊಳ್ಳಲಿದೆ. ಕಾರಣ, ಎರಡೂ ತಂಡಗಳಿಗೆ ಕೆಲವು ಸ್ಟಾರ್ ಆಟಗಾರರ ಸೇರ್ಪಡೆ.
ಲಕ್ನೋ ತಂಡಕ್ಕೆ ಮಾರ್ಕಸ್ ಸ್ಟಾಯಿನಿಸ್, ಡೆಲ್ಲಿ ತಂಡಕ್ಕೆ ಡೇವಿಡ್ ವಾರ್ನರ್ ಮತ್ತು ಅನ್ರಿಚ್ ನೋರ್ಜೆ ಸೇರಿಕೊಳ್ಳುವುದು ಖಾತ್ರಿಗೊಂಡಿರುವುದರಿಂದ ಇತ್ತಂಡಗಳ ಜೋಶ್ ಕೂಡ ಅಷ್ಟೇ ಮಟ್ಟದಲ್ಲಿ ಹೆಚ್ಚುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಕೆ.ಎಲ್.ರಾಹುಲ್-ರಿಷಭ್ ಪಂತ್ ತಂಡಗಳ ನಡುವಿನ ಮೇಲಾಟ ಅಭಿಮಾನಿಗಳಲ್ಲೂ ಕುತೂಹಲ ಹೆಚ್ಚಿಸಿದೆ.ಇವರಿಬ್ಬರೂ ಸ್ವಂತ ಬ್ಯಾಟಿಂಗ್ ಬಲದಿಂದ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದರೂ ತಾರಾ ಆಟಗಾರರ ಆಗಮನದಿಂದ ಇಡೀ ತಂಡದ ಮನೋಬಲವೇ ಬದಲಾಗುವುದರಲ್ಲಿ ಅನುಮಾನವಿಲ್ಲ.
ಇಲ್ಲಿ ಹೆಚ್ಚಿನ ಲಾಭವಾಗುವುದು ಡೆಲ್ಲಿ ತಂಡಕ್ಕೆ. ಎರಡರಲ್ಲಿ ಒಂದನ್ನಷ್ಟೇ ಗೆದ್ದಿರುವ ಪಂತ್ ಪಡೆಗೆ ಕಾಂಗರೂ ನಾಡಿನ ಇನ್‌ಫಾರ್ಮ ಬ್ಯಾಟರ್ ವಾರ್ನರ್ ಮತ್ತು ಹರಿಣಗಳ ದೇಶದ ಘಾತಕ ವೇಗಿ ನೋರ್ಜೆ ಸೇವೆ ಲಭಿಸಿವುದರಿಂದ ಎರಡೂ ವಿಭಾಗಗಳಲ್ಲೂ ತಂಡ ಬಲಿಷ್ಠಗೊಳ್ಳಲಿದೆ.
“ಡೇವಿಡ್ ವಾರ್ನರ್ ಅವರ ಕ್ವಾರಂಟೈನ್ ಪೂರ್ತಿಗೊಂಡಿದೆ. ಹೀಗಾಗಿ ಆಯ್ಕೆಗೆ ಲಭ್ಯರಾಗಿದ್ದಾರೆ. ಹಾಗೆಯೇ ನೋರ್ಜೆ ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಅವರೂ ಆಡಲು ಸಜ್ಜಾಗಿದ್ದಾರೆ’ ಎಂಬುದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಶೇನ್ ವಾಟ್ಸನ್ ಹೇಳಿದ್ದಾರೆ. ಆಗ ವಾರ್ನರ್‌ಗಾಗಿ ಟಿಮ್ ಸೀಫರ್ಟ್, ಹಾಗೆಯೇ ನೋರ್ಜೆಗಾಗಿ ರೋವ¾ನ್ ಪೊವೆಲ್ ಅಥವಾ ಮುಸ್ತಫಿಜುರ್ ರೆಹಮಾನ್ ಜಾಗ ಬಿಡಬೇಕಾಗುತ್ತದೆ.
ಇತ್ತ ಸ್ಟಾಯಿನಿಸ್ ಅವರಿಗಾಗಿ ಆಂಡ್ರ್ಯೂ ಟೈ ಅಥವಾ ಎವಿನ್ ಲೆವಿಸ್ ಲಕ್ನೋ ತಂಡದಿಂದ ಹೊರಗುಳಿಯಬೇಕಾಗಬಹುದು. ಸ್ಟಾಯಿನಿಸ್ ಯಾವುದಾದರೊಂದು ವಿಭಾಗದಲ್ಲಿ ಕ್ಲಿಕ್ ಆದರೂ ರಾಹುಲ್ ಬಳಗಕ್ಕೆ ಅದರಿಂದ ಲಾಭವೇ ಆಗಲಿದೆ. ಕಳೆದ ಪಂದ್ಯದ ಮೂಲಕ ಜೇಸನ್ ಹೋಲ್ಡರ್ ಆಡಲಾರಂಭಿಸಿದ್ದು ಕೂಡ ಲಕ್ನೋದ ಅದೃಷ್ಟ ವನ್ನು ತೆರೆದಿರಿಸಿದೆ.
ಇದನ್ನೂ ಓದಿ:ಐಪಿಎಲ್ : ಏಕಪಕ್ಷೀಯವಾಗಿ ಗೆದ್ದ ಕೋಲ್ಕತ್ತ ನೈಟ್ ರೈಡರ್ಸ್
ಲಕ್ನೋಗೆ ಒಲಿಯುತ್ತಿದೆ ಲಕ್
ಮೊದಲ ಪಂದ್ಯದಲ್ಲಿ ಮತ್ತೊಂದು ನೂತನ ತಂಡವಾದ ಗುಜರಾತ್‌ಗೆ ಶರಣಾಗಿದ್ದ ಲಕ್ನೋ, ಅನಂತರದ ಎರಡೂ ಮುಖಾಮುಖಿಗಳಲ್ಲಿ ತನ್ನ ಲಕ್ ಸಾಬೀತುಪಡಿಸಲಾರಂಭಿಸಿದೆ. ಚೆನ್ನೈ ವಿರುದ್ಧ 6 ವಿಕೆಟ್ ಹಾಗೂ ಕಳೆದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ 12 ರನ್ನುಗಳ ರೋಚಕ ಜಯ ಸಾಧಿಸಿದೆ. ಆದರೆ ಡೆಲ್ಲಿ ಸವಾಲು ಇವೆರಡಕ್ಕಿಂತ ಮಿಗಿಲಾದುದು!
ಲಕ್ನೋಗೆ ಬ್ಯಾಟಿಂಗ್ ಚಿಂತೆ
ಲಕ್ನೋ ಬ್ಯಾಟಿಂಗ್ ವಿಭಾಗ ಕೆ.ಎಲ್. ರಾಹುಲ್, ದೀಪಕ್ ಹೂಡಾ ಮತ್ತು ಯುವ ಬ್ಯಾಟರ್ ಆಯುಷ್ ಬದೋನಿ ಅವರನ್ನು ಹೆಚ್ಚು ಅವಲಂಬಿಸಿದೆ. ಚೆನ್ನೈ ವಿರುದ್ಧ ಸಿಡಿದ ಡಿ ಕಾಕ್, ಲೆವಿಸ್ ಸ್ಥಿರ ಪ್ರದರ್ಶನ ನೀಡಬೇಕಾದ ಅಗತ್ಯವಿದೆ. ಆದರೆ ಮನೀಷ್ ಪಾಂಡೆ ಅವರ ಸತತ ವೈಫಲ್ಯ ಚಿಂತಿಸುವಂತೆ ಮಾಡಿದೆ. ಕೃಣಾಲ್ ಪಾಂಡ್ಯ ಬ್ಯಾಟ್ ಕೂಡ ಮುಷ್ಕರ ಹೂಡಿದೆ. ಒಟ್ಟಾರೆ ಲಕ್ನೋ ಬ್ಯಾಟಿಂಗ್ ಯೂನಿಟ್ ನೂತನ ಜೋಶ್ ಪಡೆದರೆ ಸ್ಪರ್ಧೆ ಹೆಚ್ಚು ರೋಚಕಗೊಳ್ಳಲಿದೆ.
ಬ್ಯಾಟಿಂಗ್‌ಗೆ ಹೋಲಿಸಿದರೆ ಲಕ್ನೋ ಬೌಲಿಂಗ್ ದುರ್ಬಲ. ಭರವಸೆಯ ದಾಳಿ ಸಂಘಟಿಸುತ್ತಿರುವುದು ರವಿ ಬಿಷ್ಣೋಯಿ ಮಾತ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.