ಗಗನ ಕುಸುಮವಾಯಿತೇ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೇಡಿಕೆ
ವಂಡ್ಸೆ ಹೋಬಳಿ: ಸಾಕಷ್ಟು ಮನವಿ ಸಲ್ಲಿಸಿದ್ದರೂ ಶಿಕ್ಷಣಾಭಿಮಾನಿಗಳಿಗೆ ಅಸಮಾಧಾನ
Team Udayavani, Mar 5, 2022, 5:55 AM IST
ವಂಡ್ಸೆ: ಕುಂದಾಪುರ, ಬೈಂದೂರು ತಾಲೂಕಿನಲ್ಲಿ ಕೇವಲ ಮೂರು ಸರಕಾರಿ ಪದವಿ ಕಾಲೇಜುಗಳಿವೆ. ವಂಡ್ಸೆಯ ಹೋಬಳಿ ಕೇಂದ್ರಕ್ಕೊಂದು ಪ್ರಥಮದರ್ಜೆ ಕಾಲೇಜು ಅಗತ್ಯ ಎನ್ನುವ ಬೇಡಿಕೆ ವಂಡ್ಸೆಯಲ್ಲಿ ಪ.ಪೂ. ಕಾಲೇಜು ಆರಂಭವಾದ ಕೆಲವೇ ವರ್ಷಗಳಲ್ಲಿ ಕೇಳಿ ಬಂದಿತ್ತು. ಇತ್ತೀಚೆಗಿನ ವರ್ಷಗಳಲ್ಲಿ ಈ ವಿಚಾರವಾಗಿ ವಂಡ್ಸೆ ಭಾಗಕ್ಕೆ ಪ್ರಥಮ ದರ್ಜೆ ಕಾಲೇಜಿಗೆ ಆಗ್ರಹಿಸಿ ಸಾಕಷ್ಟು ಮನವಿಗಳು ಕೂಡ ಸರಕಾರಕ್ಕೆ ತಲುಪಿವೆ. ಆದರೆ ವಂಡ್ಸೆ ಭಾಗಕ್ಕೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಾತ್ರ ಗಗನ ಕುಸುಮವಾಗಿಯೇ ಉಳಿದುಕೊಂಡಿದೆ. ವಂಡ್ಸೆಯ ನೆಂಪುವಿನಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ಹತ್ತಿರ ಪದವಿ ಕಾಲೇಜು ಆರಂಭಿಸಲು ಮೂಲ ವ್ಯವಸ್ಥೆಗಳಿದ್ದು ಸಂಬಂಧಪಟ್ಟ ಇಲಾಖೆಯ ಅ ಧಿಕಾರಿಗಳು ಪರಿಶೀಲನೆ ನಡೆಸಿದ್ದರು. ರಾಜ್ಯಮಟ್ಟದ ಅ ಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರಿಂದ ಪ್ರಥಮ ದರ್ಜೆ ಕಾಲೇಜು ಮಂಜೂರಾತಿಯಾಯಿತು ಎಂದೇ ಜನ ನಂಬಿದ್ದರು. ಆದರೆ ಈ ಬಗ್ಗೆ ಯಾವುದೇ ಬೆಳವಣಿಗೆಗಳು ಮುಂದೆ ಕಂಡು ಬಾರದಿರುವುದು ಶಿಕ್ಷಣಾಭಿಮಾನಿಗಳಿಗೆ ತೀವ್ರ ಬೇಸರ ಮೂಡಿಸಿದೆ.
ಸಾಕಷ್ಟು ವರ್ಷಗಳಿಂದ ಈ ಭಾಗದ ಜನಪ್ರತಿನಿಧಿಗಳು ಇಲ್ಲಿ ಪದವಿ ಕಾಲೇಜು ಸ್ಥಾಪನೆಯ ಬಗ್ಗೆ ಸರಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದಾರೆ.
ಈ ಭಾಗದ ಗ್ರಾ.ಪಂ. ಗ್ರಾಮಸಭೆಗಳಲ್ಲಿ ಕಾಲೇಜಿನ ಆವಶ್ಯಕತೆಯ ಬಗ್ಗೆ ನಿರ್ಣಯ ಮಾಡಿ ಸರಕಾರಕ್ಕೆ ಕಳುಹಿಸುವ ಕೆಲಸ ಕೂಡ ಆಗಿದೆ. ಸರಕಾರ ಮಟ್ಟದಿಂದ ಹೊಸ ಪದವಿ ಕಾಲೇಜುಗಳಿಗೆ ಅನುಮತಿ ನೀಡದಿರುವುದು ಈ ಹಿನ್ನಡೆಗೆ ಕಾರಣವಾಗಿದೆ.
ನೆಂಪುವಿನಲ್ಲಿ ಸರಕಾರಿ ಪ.ಪೂ. ಕಾಲೇಜು ಇದೆ. ಕೆರಾಡಿಯಲ್ಲಿ ವರಸಿದ್ಧಿ ವಿನಾಯಕ ಪ.ಪೂ. ಕಾಲೇಜು ಇದೆ. ಕೊಲ್ಲೂರಿನಲ್ಲಿಯೂ ಮೂಕಾಂಬಿಕಾ ಪ.ಪೂ. ಕಾಲೇಜು ಇದೆ. ಈ ಎಲ್ಲ ಕಾಲೇಜುಗಳಲ್ಲಿ ಪ.ಪೂ. ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳು ಪ್ರಸ್ತಾವಿತ ನೆಂಪುವಿನಲ್ಲಿ ಪದವಿ ಕಾಲೇಜು ಆದರೆ ಇಲ್ಲಿಗೆ ಬರುತ್ತಾರೆ. ಎಲ್ಲ ದೃಷ್ಟಿಯಿಂದಲೂ ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ ನೆಂಪುವಿನಲ್ಲಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಯಾದರೆ ಅನುಕೂಲವಾಗುತ್ತದೆ ಎಂದು ವಿದ್ಯಾಭಿಮಾನಿಗಳು ತಿಳಿಸುತ್ತಾರೆ.
ಇವತ್ತು ಈ ಭಾಗದ ವಿದ್ಯಾರ್ಥಿಗಳು ಪದವಿ ಶಿಕ್ಷಣಕ್ಕೆ ಹೋಗಬೇಕಾದರೆ ಕುಂದಾಪುರ ಬೈಂದೂರು, ಶಂಕರನಾರಾಯಣಕ್ಕೆ ಹೋಗಬೇಕು. ಪ್ರಸ್ತುತ ಸರಕಾರಿ ಕಾಲೇಜು ಇರುವುದು ಶಂಕರನಾರಾಯಣ, ಬೈಂದೂರು, ಕೋಟೇಶ್ವರದಲ್ಲಿ ಮಾತ್ರ. ಕೊಲ್ಲೂರಿನಿಂದ ಈಚೆಯ ವಿದ್ಯಾರ್ಥಿಗಳು ಸರಕಾರಿ ಡಿಗ್ರಿ ಕಾಲೇಜಿಗೆ ಹೋಗಬೇಕಾದರೆ ಬೈಂದೂರು, ಕೋಟೇಶ್ವರಕ್ಕೆ ಹೋಗಬೇಕು. ಕುಂದಾಪುರಕ್ಕೆ ಹೋಗಿ ಅಲ್ಲಿಂದ ಇನ್ನೊಂದು ಬಸ್ ಮೂಲಕ ಕೋಟೇಶ್ವರ ತಲುಪಬೇಕಾಗುತ್ತದೆ. ಇನ್ನೂ ಶಂಕರನಾರಾಯಣಕ್ಕೆ ಈ ಮಾರ್ಗದಿಂದ ಬಸ್ ವ್ಯವಸ್ಥೆ ಕೂಡ ಸರಿಯಾಗಿಲ್ಲ. ಇಲ್ಲಿ ಪದವಿ ಕಾಲೇಜು ಆದರೆ ಈ ಪರಿಸರದ ಎಲ್ಲ ವಿದ್ಯಾರ್ಥಿಗಳು ಪದವಿ ಶಿಕ್ಷಣ ದೊರಕುತ್ತದೆ. ಈ ಬಗ್ಗೆ ವಿದ್ಯಾಭಿಮಾನಿಗಳು ಪದವಿ ಕಾಲೇಜಿನ ಕನಸಿಗೆ ಬೆಂಬಲ ನೀಡಿ, ಸಂಬಂ ಧಿಸಿದವರ ಮೇಲೆ ಒತ್ತಡ ತರಬೇಕಾದ ಆವಶ್ಯಕತೆ ಇದೆ. ಕುಗ್ರಾಮ ಪ್ರದೇಶಗಳನ್ನು ಹೊಂದಿರುವ ಈ ಪರಿಸರಕ್ಕೆ ಪ್ರಥಮ ದರ್ಜೆ ಕಾಲೇಜಿನ ಅವಶ್ಯವಿದೆ.
ಶಿಕ್ಷಣ ಸಚಿವರ ಗಮನಕ್ಕೆ ತರಲಾಗಿದೆ
ನೆಂಪುವಿನಲ್ಲಿ ಸರಕಾರಿ ಪದವಿ ಕಾಲೇಜು ಆರಂಭಕ್ಕೆ ಸ್ಥಳೀಯರು, ವಿದ್ಯಾಭಿಮಾನಿಗಳು ಬೇಡಿಕೆ ಇಟ್ಟಿದ್ದು ಆ ಬಗ್ಗೆ ಶಿಕ್ಷಣಸಚಿವರ ಗಮನಕ್ಕೂ ತರಲಾಗಿದೆ. ಕೊಲ್ಲೂರು ಸಹಿತ ಈ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ.
-ಬಿ.ಎಂ.ಸುಕುಮಾರ ಶೆಟ್ಟಿ,, ಶಾಸಕರು, ಬೈಂದೂರು ಕ್ಷೇತ್ರ.
ಆಸುಪಾಸಿನ ವಿದ್ಯಾರ್ಥಿಗಳಿಗೆ ಅನುಕೂಲ
ನೆಂಪುವಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಬಳಿ ಸರಕಾರಿ ಪದವಿ ಕಾಲೇಜು ಆರಂಭಿಸುವುದು ಸೂಕ್ತ. ಇದರಿಂದ ಆಸುಪಾಸಿನ ವಿದ್ಯಾರ್ಥಿಗಳಿಗೆ ಅನುಕೂಲ. ಕೋಟೇಶ್ವರ,ಕುಂದಾಪುರ, ಬೈಂದೂರು ಮುಂತಾದೆಡೆಗೆ ತೆರಳುವುದು ತಪ್ಪುತ್ತದೆ.
-ಉದಯಕುಮಾರ್ ಶೆಟ್ಟಿ, ಅಧ್ಯಕ್ಷರು, ವಂಡ್ಸೆ.ಗ್ರಾ.ಪಂ.
ಒಂದೇ ಸೂರಿನಡಿ ಪರಿಪೂರ್ಣ ಸೌಲಭ್ಯ
ಸರಕಾರಿ ಪ.ಪೂ. ಕಾಲೇಜು ಹೊಂದಿರುವ ನೆಂಪು ಪರಿಸರ ಪದವಿ ಕಾಲೇಜು ಆರಂಭಕ್ಕೆ ಯೋಗ್ಯವಾಗಿದೆ.ಅಲ್ಲದೇ ಒಂದೇ ಸೂರಿನಡಿ ಪರಿಪೂರ್ಣ ಸೌಲಭ್ಯ ಶಿಕ್ಷಣ ಒದಗಿಸಿದಂತಾಗುವುದು.
–ಶಿಕ್ಷಣಾಭಿಮಾನಿಗಳು, ನೆಂಪು
– ಡಾ| ಸುಧಾಕರ ನಂಬಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಟವರ್‌ನ ಬುಡದಲ್ಲೇ ನೆಟ್‌ವರ್ಕ್ ಇಲ್ಲ!
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
ಭಾರತ ಮಾತೆಗೆ ಕಿರೀಟ ತೊಡಿಸಿದ ಸರಕಾರ:’ವಿಶ್ವಾರ್ಪಣಮ್’ನಲ್ಲಿ ಪಲಿಮಾರು ಶ್ರೀ ಅಭಿಮತ
Udupi;ಗೀತಾರ್ಥ ಚಿಂತನೆ 146: ಚಾರ್ವಾಕ ಬಿಟ್ಟು ಉಳಿದೆಲ್ಲ ಮತಗಳಲ್ಲಿ ಪುಣ್ಯಪಾಪ ಕಲ್ಪನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.