Dengue: ಹುಣಸೂರು ಆಸ್ಪತ್ರೆಯಲ್ಲಿ 10 ಹಾಸಿಗೆಯ ಪ್ರತ್ಯೇಕ ವಾರ್ಡ್ ಮೀಸಲು
ಜ್ವರಕ್ಕೆ ಸ್ವಯಂಚಿಕಿತ್ಸೆ ಮಾಡಿಕೊಳ್ಳದಂತೆ ಸಾರ್ವಜನಿಕರಲ್ಲಿ ಡಿಎಚ್‌ಒ ಡಾ.ಕುಮಾರಸ್ವಾಮಿ ಮನವಿ
Team Udayavani, Jul 5, 2024, 10:29 PM IST
ಹುಣಸೂರು (ಮೈಸೂರು ಜಿಲ್ಲೆ) : ಡೆಂಗ್ಯೂ ಚಿಕಿತ್ಸೆಗೆ ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಹತ್ತು ಹಾಸಿಗೆಗಳನ್ನು ಮೀಸಲಿರಿಸಿ, ಪ್ರತ್ಯೇಕ ವಾರ್ಡ್, ಅಗತ್ಯ ಔಷಧ ದಾಸ್ತಾನು ಇಡಬೇಕೆಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಮಹದೇವ ಸ್ವಾಮಿಯವರಿಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಸೂಚಿಸಿದರು.
ಡೆಂಗ್ಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದ ಅವರು ವಾರ್ಡ್‌ಗಳಿಗೆ ಭೇಟಿ ನೀಡಿ ರೋಗಿಗಳೊಂದಿಗೆ ಚರ್ಚಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಮೈಸೂರು ನಂತರ ಹುಣಸೂರು ಅತಿ ಹೆಚ್ಚು ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದು, ಈಗಾಗಲೇ ಆರೋಗ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ ಎಂದರು.
ಹುಣಸೂರು ತಾಲೂಕಿನಲ್ಲಿ ಜು.5ರ ಶುಕ್ರವಾರ 10 ಪ್ರಕರಣ ಸೇರಿದಂತೆ ಒಟ್ಟು 96 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 13 ಪ್ರಕರಣ ಸಕ್ರಿಯವಾಗಿದೆ. ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ಪ್ರಕರಣಗಳು ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ, ಆದರೂ ಹುಣಸೂರಿನಲ್ಲಿ ಇತರೆ ಸಾಮಾನ್ಯ ಜ್ವರ ಪ್ರಕರಣ ಹೆಚ್ಚು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆಂದರು.
10 ಹಾಸಿಗೆಗಳ ತೀವ್ರ ನಿಗಾ ಘಟಕ ಆರಂಭ:
ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಡೆಂಗ್ಯೂ ಚಿಕಿತ್ಸೆಗೆ ತುರ್ತು ನಿಗಾ ಘಟಕ, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ 5 ಹಾಸಿಗೆ ಸಿದ್ಧತೆಗೆ ಆದೇಶಿಸಲಾಗಿದೆ. ಇದಲ್ಲದೆ ಡೆಂಗಿ ಜ್ವರ ಚಿಕಿತ್ಸೆಗೆ ದಿನದ ೨೪ಗಂಟೆ ನಿಗಾವಹಿಸಲು ಹೆಚ್ಚುವರಿ ವೈದ್ಯರನ್ನು ನಿಯೋಜಿಸಿದ್ದು, ಇವರೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕರು ಹಾಗೂ ಸಮುದಾಯ ಆರೋಗ್ಯ ಸಿಬ್ಬಂದಿ ನಿಯೋಜಿಸಲು ಸೂಚಿಸಿದರು.
ಆರೋಗ್ಯ ಇಲಾಖೆ ಸುಪರ್ಧಿಯಲ್ಲಿರುವ ಮೈಸೂರು ಜಿಲ್ಲಾ ಔಷಧಿ ದಾಸ್ತಾನು ಗೋದಾಮಿನಲ್ಲಿ ವಿವಿಧ ಕಾಯಿಲೆಗಳಿಗೆ ಸಂಬಅಧಿಸಿದ ಅಗತ್ಯ ೪೬೩ ವಿವಿಧ ಔಷಧಿಗಳು ದಾಸ್ತಾನು ಮಾಡಲಾಗಿದೆ, ಹುಣಸೂರು ಆಸ್ಪತ್ರೆಗೆ ಕೊರತೆ ಇರುವ ಔಷಧಿ ಸರಬರಾಜು ಮಾಡಲು ಬೇಡಿಕೆ ಸಲ್ಲಿಸುವಂತೆ ಆಡಳಿತಾಧಿಕಾರಿಗೆ ಸೂಚಿಸಿದ್ದೇನೆಂದರು.
ಆಡಳಿತಾಧಿಕಾರಿಗೆ ತರಾಟೆ:
ಆಸ್ಪತ್ರೆಯ ತುರ್ತು ಚಿಕಿತ್ಸಾ ವಾರ್ಡ್ ನಲ್ಲಿ ಅವಧಿ ಮೀರಿದ್ದ ಔಷಧಿ ಹಾಗೂ ಗ್ಲೂಕೋಸ್ ದಾಸ್ತಾನು ವೀಕ್ಷಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಮಹದೇವಸ್ವಾಮಿಯ ತರಾಟೆಗೊಳಪಡಿಸಿ ಔಷಧಿ ದಾಸ್ತಾನು ಸಮರ್ಪಕವಾಗಿ ನಿರ್ವಹಿಸಬೇಕು, ವಾರ್ಡ್‌ಗಳಲ್ಲಿ ಸ್ವಚ್ಛತೆ ಕಾಪಾಡಬೇಕೆಂದು ಸೂಚಿಸಿದರು. ಡಿಎಚ್ ಒರೊಂದಿಗೆ ಡಾ.ಗಿರೀಶ್,ಡಾ.ಗುರುಮಲ್ಲಪ್ಪ ಜೊತೆಯಲ್ಲಿದ್ದರು.
ಸ್ವಯಂ ಚಿಕಿತ್ಸೆ ಪ್ರಾಣಕ್ಕೆ ಕುತ್ತು:
ಆರೋಗ್ಯ ಸಿಬ್ಬಂದಿ ನಾಗೇಂದ್ರ ಜ್ವರಕ್ಕೆ ಸ್ವಯಂ ಚಿಕಿತ್ಸೆ ಮಾಡಿಕೊಂಡು ಹೆಚ್ಚಾದ ನಂತರ ಆಸ್ಪತ್ರೆಗೆ ದಾಖಲಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಮುಂದೆ ಹೀಗಾಗದಂತೆ ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕು. ಡೆಂಗ್ಯೂ, ಮಲೇರಿಯಾ, ಟೈಫಾಯ್ಡ್ ಮತ್ತಿತರ ಜ್ವರಕ್ಕೆ ಹೆಚ್ಚಿನ ಚಿಕಿತ್ಸೆ, ವಿಶ್ರಾಂತಿ ಬೇಕಿದ್ದು, ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಡಿಎಚ್‌ಒ ಸಾರ್ವಜನಿಕರಲ್ಲಿ ಮನವಿ ಮಾಡಿದರು.
8 ಕೋಟಿ ರೂ. ಅನುದಾನ ಬಿಡುಗಡೆ:
ಅನುದಾನ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿರುವ ಸರಕಾರಿ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಪೂರ್ಣಗೊಳಿಸಲು ಸರಕಾರ ಎಂಟು ಕೋಟಿ ಬಿಡುಗಡೆ ಮಾಡಿದ್ದು, ಶೀಘ್ರ ಉಳಿಕೆ ಕಾಮಗಾರಿ ಮುಗಿಸಿ, ಇಲ್ಲಿನ ಆಸ್ಪತ್ರೆ ಸ್ಥಳಾಂತರಿಸಿ ಅಲ್ಲೇ ಚಿಕಿತ್ಸೆ ಆರಂಭಿಸುವುದಾಗಿ ಡಿಎಚ್‌ಒ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.