London:ಭಾರತೀಯ ರಾಯಭಾರ ಕಚೇರಿ ಹೊರಗೆ ತ್ರಿವರ್ಣ ಧ್ವಜಕ್ಕೆ ಖಲಿಸ್ತಾನಿ ಬೆಂಬಲಿಗರಿಂದ ಬೆಂಕಿ
ಆರೋಪಿಗಳ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುವಂತೆ ಭಾರತ ಸರ್ಕಾರ ಬ್ರಿಟನ್ ಗೆ ಮನವಿ ಮಾಡಿಕೊಂಡಿದೆ.
Team Udayavani, Oct 4, 2023, 1:26 PM IST
ಲಂಡನ್: ಲಂಡನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೊರಭಾಗದಲ್ಲಿ ಖಲಿಸ್ತಾನಿ ಬೆಂಬಲಿಗರು ಗಾಂಧಿ ಜಯಂತಿ ದಿನ(ಅಕ್ಟೋಬರ್ 2)ದಂದು ಪ್ರತಿಭಟನೆ ನಡೆಸಿದ್ದು, ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಭಾರತದ ತ್ರಿವರ್ಣ ಧ್ವಜಕ್ಕೆ ಬೆಂಕಿಹಚ್ಚಿ ಅಟ್ಟಹಾಸ ಮೆರೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Vitla: ನಿಯಂತ್ರಣ ತಪ್ಪಿ ಪಲ್ಟಿಯಾದ ಗ್ರಾನೈಟ್ ಲಾರಿ; ಐವರು ಕಾರ್ಮಿಕರ ಕೈಕಾಲು ಛಿದ್ರ
ಬ್ರಿಟನ್ ನ ದಲ್ ಖಾಲ್ಸಾ ಮುಖಂಡ, ಖಲಿಸ್ತಾನಿ ಬೆಂಬಲಿಗ ಗುರ್ ಚರಣ್ ಸಿಂಗ್ ಭಾರತದ ತ್ರಿವರ್ಣ ಧ್ವಜದ ಮೇಲೆ ಗೋ ಮೂತ್ರ ಸಂಪಡಿಸಿರುವುದಾಗಿ ವರದಿ ವಿವರಿಸಿದೆ. ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಬ್ರಿಟಿಷ್ ಗೋವಿನ ಮೂತ್ರ ಕುಡಿಯುವಂತೆ ಸಿಂಗ್ ಸವಾಲು ಹಾಕಿದ್ದು, ಘಟನೆಗೆ ಸಂಬಂಧಪಟ್ಟಂತೆ ಈತನನ್ನು ಬಂಧಿಸಲಾಗಿದೆಯೇ ಎಂಬುದು ಖಚಿತವಾಗಿಲ್ಲ ಎಂದು ವರದಿ ಹೇಳಿದೆ.
ಸ್ಕಾಟ್ ಲ್ಯಾಂಡ್ ನ ಗ್ಲಾಸ್ಕೋ ಗುರುದ್ವಾರದೊಳ ಪ್ರವೇಶಿಸಲು ಖಲಿಸ್ತಾನಿ ಬಂಡುಕೋರರನ್ನು ಬ್ರಿಟನ್ ನಲ್ಲಿರುವ ಭಾರತದ ರಾಯಭಾರ ಕಚೇರಿಯ ಕಮಿಷನರ್ ವಿಕ್ರಮ್ ದೊರೆಸ್ವಾಮಿ ತಡೆದಿರುವುದನ್ನು ವಿರೋಧಿಸಿ ಈ ಪ್ರತಿಭಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುವಂತೆ ಭಾರತ ಸರ್ಕಾರ ಬ್ರಿಟನ್ ಗೆ ಮನವಿ ಮಾಡಿಕೊಂಡಿದೆ.
ಬ್ರಿಟನ್ ನಲ್ಲಿರುವ ದಲ್ ಖಾಲ್ಸಾ ಮುಖಂಡ ಸಿಂಗ್ ಸಿಖ್ ಫಾರ್ ಜಸ್ಟೀಸ್ ಜತೆ ನಿಕಟ ಸಂಪರ್ಕ ಹೊಂದಿದ್ದು, ಈತನ ಹೇಳಿಕೆ ಮತ್ತು ನಡವಳಿಕೆಗಳು ತೀವ್ರ ವಿವಾದಕ್ಕೆ ಎಡೆಮಾಡಿಕೊಡುತ್ತಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.