Desi Swara: ಇಮೋಜಿ… ಭಾವನೆಗಳ ನವರೂಪವೋ ಅಥವಾ ಗತ ಕಾಲದ ಭಾಷೆಯೋ…

ಸೋಶಿಯಲ್‌ ಮೀಡಿಯಾ ಪೀಡಿತ ಇಮೋಜಿಪೀಡಿಯ

Team Udayavani, Jul 20, 2024, 3:10 PM IST

Desi Swara: ಭಾವನೆಗಳ ನವರೂಪವೋ ಅಥವಾ ಗತ ಕಾಲದ ಭಾಷೆಯೋ…..

ಹರಪ್ಪ – ಮೊಹೆಂಜೋದಾರೋ ಬಗ್ಗೆ ಕೇಳಿದ್ದೀರಾ? ಭಾರತದ ಸಿಂಧೂ ನಾಗರಿಕತೆಯ ಅಚ್ಚಳಿಯದ ವಿಚಾರವೇ ಈ ಎರಡು ಸ್ಥಳಗಳು. ವಿಂಗಡನೆಯಾದ ಅನಂತರ ಇಂದು ಈ ಪ್ರದೇಶಗಳು ಪಾಕಿಸ್ಥಾನದಲ್ಲಿದೆ. ಈ ವಿಷಯ ಜೇಬಿನಲ್ಲಿ ಇರಿಸಿಕೊಳ್ಳಿ. ಈಗ ಏಕ್ದಂ ಆಧುನಿಕ ಜಗತ್ತಿಗೆ ಬರೋಣ. API ಅಂದ್ರೆ ಗೊತ್ತಾ? ಬೇಡಾ ಬಿಡಿ, ಎರಡೋ ಮೂರೋ ಕಂಪ್ಯೂಟರ್‌ ಅಪ್ಲಿಕೇಶನ್‌’ಗಳು ತಮ್ಮೊಳಗೆ ಮಾತನಾಡಿಕೊಳ್ಳುವುದೇ ಈ API. ಇಲ್ಲಿನ ಸೂಕ್ಷ್ಮ ವಿಷಯ ಎಂದರೆ APIಗಳನ್ನು ಒಳ ವಿಚಾರಗಳನ್ನು ಅಡಗಿಸಲು ಮಾಡುವ ತಂತ್ರಾಂಶ.

ಇವೆಲ್ಲ ಮಾತುಗಳು ಏಕೆ? ಮೇಲೆ ಹೇಳಿದ ವಿಷಯಗಳನ್ನು ಒಂದೇ ದಾರದಲ್ಲಿ ಹೊಳೆಯುವ. ಅಂದಿನ ಹರಪ್ಪ – ಮೊಹೆಂಜೋದಾರೋ ಆಗಲಿ ಇಂದಿನ APIಗಳಾಗಲಿ ಬಳಸಿದ್ದು ಅಥವಾ ಬಳಸುವುದೇ ಭಿನ್ನ ಭಾಷೆ. ಈ ಭಾಷೆ ಹೇಗೆ ಅಂದ್ರೆ, ಅರ್ಥವಾಗುವವರಿಗೆ ಅರ್ಥವಾಗುತ್ತದೆ, ಇಲ್ಲವಾದವರಿಗೆ ಇಲ್ಲ. ಹರಪ್ಪ – ಮೊಹೆಂಜೋದಾರೋದಲ್ಲಿ ಬಳಸಿದ್ದು ಚಿಹ್ನೆ ಭಾಷೆ. ಅದನ್ನು ನೋಡಿ ಅರ್ಥೈಸಿಕೊಳ್ಳಬಲ್ಲವರು ಅರ್ಥ ಮಾಡಿಕೊಳ್ಳುತ್ತಾರೆ. ಅರ್ಥವಾಗದೆ ಇದ್ದವರಿಗೆ ಇಂದಿಗೂ ಅರ್ಥವಾಗಿಲ್ಲ.

ನಾವು ದಿನನಿತ್ಯದಲ್ಲಿ ಬಳಸುವ ಚಿಹ್ನೆ ಭಾಷೆಯು ಮಗದೊಬ್ಬರಿಗೆ ರವಾನೆಯಾಗುವ ಹಿಂದೆ ಮಾನವರಿಗೆ ಅರ್ಥವಾಗದ ಭಾಷೆಯೇ ಇರೋದು. ಕೆಲವೊಮ್ಮೆ ಒಂದು ಅಪ್ಲಿಕೇಶನ್‌ನಿಂದ ಕಳುಹಿಸಿದ ಈ API ಸಂದೇಶ ಮಗದೊಂದು ಅಪ್ಲಿಕೇಶನ್‌ಗೆ ಅರ್ಥವಾಗುವುದಿಲ್ಲ. ಅದೆಲ್ಲ ಸರಿ ಹರಪ್ಪ – ಮೊಹೆಂಜೋದಾರೋ ಮತ್ತು APIಗೂ ಏನು ಸಂಬಂಧ? ಇನ್ನೂ ಇದೆ ಅನ್ನಿಸಿದೆ ತಾನೇ?

ಗೂಗಲ್‌ನಲ್ಲಿ ಹರಪ್ಪ – ಮೊಹೆಂಜೋದಾರೋ ನಿಖರವಾಗಿ ಎಲ್ಲಿದೆ ಅಂತ ನೋಡಿದಾಗ ಕಂಡಿದ್ದು ಆಫ್ಘಾನಿಸ್ಥಾನ ಮತ್ತು ಭಾರತದ ನಡುವೆ ಪಾಕಿಸ್ಥಾನದಲ್ಲಿದೆ ಅಂತ. ಏನೀಗ? ಅದೇ API ಅರ್ಥಾತ್‌ ಆಫ್ಘಾನಿಸ್ಥಾನ – ಪಾಕಿಸ್ಥಾನ – ಇಂಡಿಯಾ ಅಲ್ವೇ? ಏನಂತೀರಾ? ಮಿಕ್ಕ ಹೊಲಿಗೆ ನಿಮಗೆ ಬಿಟ್ಟಿದ್ದು.

ಈಗ ಇಂದಿನ ವಿಷಯಕ್ಕೆ ಬರೋಣ. ಇಮೋಜಿಪೀಡಿಯ ಎಂದರೇನು? ಸರಳವಾಗಿಯೇ ಹೇಳೋಣ ಅಥವಾ ತಿಳಿದುಕೊಳ್ಳೋಣ ಬನ್ನಿ. ಇಮೋಜಿಪೀಡಿಯಾ ಎಂಬುದು ದೊಡ್ಡ ಡಬ್ಬ ಅಥವಾ ಬಿನ್‌ ಎಂದುಕೊಳ್ಳಿ. ಅಲ್ಲಿ, ಇಮೋಜಿ ಎಂಬ ವಿಚಾರವನ್ನು ಹುಟ್ಟುಹಾಕಿದವರು ಮೊದಲಿಗೆ ಒಂದಿಷ್ಟು ಸುರಿದರು. ಅನಂತರ ಯಾರು ಯಾರು ಹೊಸತಾಗಿ ರಚನೆ ಮಾಡಿದರೋ ಎಲ್ಲರೂ ಅಲ್ಲಿಗೆ ಹಾಕಲು ಆರಂಭಿಸಿದರು. ಹಾಗಂತ ಆ ಡಬ್ಬ ಕುಪ್ಪೆತೊಟ್ಟಿಯಲ್ಲ. ನಾವು ರಚಿಸಿದ ಇಮೋಜಿಯನ್ನು ಅಲ್ಲಿಗೆ ಹಾಕುತ್ತೇವೆ ಅಂಬುದೂ ಸಾಧ್ಯವಿಲ್ಲ. ಎಮೋಜಿಗಳನ್ನು ಸೃಷ್ಟಿಸಲೆಂದೇ ಜನಕನೊಬ್ಬನಿದ್ದಾನೆ, ಅವನು ನೋಡಿಕೊಳ್ಳುತ್ತಾನೆ. ನಾವು ಬಳಕೆದಾರರು ಮಾತ್ರ.

ಈ ಇಮೋಜಿಗಳು ಸೃಷ್ಟಿ ಆಗಿದ್ದಾದರೂ ಯಾಕೆ? ಪ್ರಶ್ನೆ ತಪ್ಪು ಬಿಡಿ. ಈ ಸೃಷ್ಟಿ ಎಂಬುದು ಸ್ಮಾರ್ಟ್‌ ಜಗತ್ತಿಗೆ ಬಂದು ಒಂದಷ್ಟು ವರ್ಷಗಳಾಗಿರಬಹುದು ಅಷ್ಟೇ ಆದರೆ ಮೇಲೆ ಹೇಳಿದಂತೆ ಕ್ರಿ.ಪೂ. 8,000 ವರ್ಷಗಳಷ್ಟು ಹಳತು ಈ ಮೂಕಭಾಷೆ ಅಥವಾ ಚಿಹ್ನೆ ಭಾಷೆ. ಅಂದು ಸಂವಹನೆ ಎಂಬುದು ಇರಲಿಲ್ಲ ಹಾಗಾಗಿ ಹುಟ್ಟಿದ್ದು ಈ ಭಾಷೆ. ಅಂದಿಗೆ ಈ ಬಳಕೆ ಬಲು ಮುಖ್ಯವಾಗಿತ್ತು. ಅಂದಿನ ದಿನಗಳಲ್ಲಿ ಬದುಕುಳಿಯುವಿಕೆ ಎಂಬುದು ಮುಖ್ಯವಾಗಿತ್ತು. ಹಾಗಾಗಿ ಚಿಹ್ನೆ ಭಾಷೆಯ ಮೂಲಕ ಬಹುಶ: ಇಂಥಾ ಕಡೆ ನೀರಿದೆ, ಅಥವಾ ಅಪಾಯವಿದೆ, ಇಂಥಾ ಕಡೆಯಿಂದ ತಪ್ಪಿಸಿಕೊಳ್ಳಬಹುದು ಎಂದೋ ಬಳಕೆ ಇದ್ದಿರಬಹುದು. ಇಂದು ಇಮೋಜಿ ಎಂಬುದು ಸೋಂಬೇರಿ ಭಾಷೆ ಎನ್ನಲೂ ಅಡ್ಡಿಯಿಲ್ಲ.

ಇಮೋಜಿ ಜಗತ್ತನ್ನು ಮೊದಲಿಗೆ ಸರಳವಾಗಿ ನೋಡುವ. ಒಂದು ಸೋಶಿಯಲ್‌ ಮೀಡಿಯಾ ಆಪ್‌ನಲ್ಲಿ ಈ ಬಳಕೆ ಬಲು ಹೆಚ್ಚು. ಏನೋ ವಿಷಯ ಇಷ್ಟವಾದರೆ ಲೈಕ್‌ ಒತ್ತುವುದರಿಂದ ಹಿಡಿದು ಶುರುವಾಗುತ್ತದೆ. ಹೆಬ್ಬೆಟ್ಟು, ಕೆಂಪು ಹೃದಯ, ನಮಸ್ಕಾರ ಇತ್ಯಾದಿಗಳು ದಿನನಿತ್ಯದ ಥಟ್ಟನೆ ಬಳಕೆಯ ಇಮೋಜಿಗಳು. ಅಂದ ಹಾಗೆ ನಗೆ ಮೊಗ, ಜೋರಾದ ನಗು, ಒಂದು ಹನಿ ಕಣ್ಣೀರು ಬಿಂದು, ಜೋರಾದ ಅಳು ಇತ್ಯಾದಿಗಳೂ ಇವೆಯಲ್ಲ ಅಂತ ಪ್ರಶ್ನೆ ಕೇಳಿದರೆ ಸರಳ ಉತ್ತರ, ಅವು “ಸ್ಪೈಲಿ’ಗಳು. ಕೀಬೋರ್ಡ್‌ ಬಳಸಿ ಚಿತ್ರ ಮೂಡಿಸಬಹುದಾದರೆ ಅದು “ಎಮೋಟಿಕಾನ್‌’. ವಾಟ್ಸ್‌ಆ್ಯಪ್‌ನ ಒಂದು ಉದಾಹರಣೆ ತೆಗೆದುಕೊಂಡರೆ ಅಲ್ಲೊಂದು “ಇಮೋಜಿ’ ಸಾಗರವೇ ಇದೆ. ಮೊದಲಿಗೆ ಕೀಬೋರ್ಡ್‌ ಜತೆಗೆ ಬೊಚ್ಚುಬಾಯಿ ಐಕಾನ್‌ ಇದೆ. ಅದರ ಮೇಲೆ ಕ್ಲಿಕ್‌ ಮಾಡಿದರೆ ಸಾಕು ಆ ಸಾಗರದಲ್ಲಿ ಧುಮುಕಿದ ಹಾಗೆಯೇ ಸರಿ.

ನಾನಾ ಭಾವನೆಗಳ ಹಳದಿ ಬಣ್ಣದ – ಮೂಗಿಲ್ಲದ – ಕಿವಿಯಿಲ್ಲದ ಮೊಗಗಳು ಪ್ರಮುಖ. ಅದು ಬಿಟ್ಟರೆ ಮಿಕ್ಕಂತೆ ಸಾಮಾನ್ಯವಾಗಿ ಕಡಿಮೆ ಬಳಕೆಯಾಗುವ ಐಕಾನ್‌ಗಳು. ಇಲ್ಲಿ ಹಲವಾರು ಪ್ರಶ್ನೆಗಳು ಇವೆ. ಹಳದೀ ಮೊಗವೆ ಏಕೆ? ಬಿಳಿ ಮೊಗ, ಕರಿಮೊಗ, ಕಂದು ಮೊಗ, ಕೆಂಪು ಮಿಶ್ರಿತ ಬಿಳಿ ಇತ್ಯಾದಿಗಳು ನಾನಾ ದೇಶಗಳ ಮೊಗಗಳನ್ನು ತಿಳಿಸಿಬಿಡುತ್ತದೆ. ಕಪ್ಪು ಎಂದ ಕೂಡಲೇ ಆಫ್ರಿಕಾ ಎಂದು ತಲೆಗೆ ಬಂದುಬಿಡುತ್ತದೆ. ಅದರಂತೆಯೇ ಅಮೆರಿಕ, ಇಂಗ್ಲೆಂಡ್‌ ಮೊಗಗಳು ಇತ್ಯಾದಿ. ಈ ಬಣ್ಣಗಳನ್ನು ಬಳಸಿದಾಗ ಆಯಾ ದೇಶದವರಿಗೆ ಉರಿ ಕಿತ್ತೋದು ಸಹಜ. ನಾ ಕಂಡಂತೆ ಯಾವುದೇ ದೇಶದ ಜನತೆಯ ಮುಖವು ಹಳದಿ ಬಣ್ಣದ ಮೊಗ ಇರಲಿಕ್ಕಿಲ್ಲ, ಹಾಗಾಗಿ ಎಮೋಜಿಗಳಿಗೆ ಹಳದಿ ಬಣ್ಣ. ಚರ್ಮದ ಬಣ್ಣ ಎಂಬ ಸೂಕ್ಷ್ಮವನ್ನು ದಾಟಿದ್ದಾಯ್ತು. ಪಂಚೇಂದ್ರಿಯ ವಿಷಯದಲ್ಲೂ ಒಂದನ್ನು ಗೆದ್ದಾಯ್ತು.

ಸರ್ವೇ ಸಾಮಾನ್ಯವಾಗಿ ಭಾವನೆಗಳ ವಿಷಯದಲ್ಲಿ ಮೂಗಿನ ಬಳಕೆ ಇರುವುದಿಲ್ಲ. ಇದ್ದರೂ ಅದು ಬಲು ಕಡಿಮೆ. ಏನೋ ಒಂದು ದುರ್ವಾಸನೆ ಇದ್ದಾಗ, ಸುವಾಸನೆ ಇದ್ದಾಗ ಎಂಬ ಭಾವನೆಗಳು ಇರುವಾಗ ಮಾತ್ರ ಇದರ ಬಳಕೆ. ನಗು, ಅಳು ಇತ್ಯಾದಿಗಳಲ್ಲಿ ಇದರ ಬಳಕೆ ಇಲ್ಲ. ಹಾಗಾಗಿ ಎಮೋಜಿಗಳಲ್ಲಿ ಇದರ ಬಳಕೆ ಕಡಿಮೆ ಮತ್ತು ಅನವಶ್ಯಕ. ಇದೇ ಸಾಲಿಗೆ ಸೇರೋದು ಕಿವಿ. ಕಿವಿಯನ್ನು ಮುಚ್ಚಲು ಕೈಗಳು ಬೇಕು. ಕಿವಿಗಳ ಬಳಕೆ ಎಮೋಜಿಗಳಲ್ಲಿ ಆವಶ್ಯಕತೆಯೇ ಇಲ್ಲ. ಇನ್ನು ಉಳಿದಿದ್ದು ಕಣ್ಣು ಮತ್ತು ನಾಲಿಗೆ. ಈ ಎರಡು ಅಂಗಗಳ ಬಳಕೆಯೇ ಇಮೋಜಿಗಳಲ್ಲಿ ಪ್ರಮುಖ. ಎಂಥಾ ಸೂಕ್ಷ್ಮತೆ ಅಡಗಿದೆ ಅಲ್ಲವೇ?

ಇಂದಿನ ಜಗತ್ತು ತ್ವರಿತ ಜಗತ್ತು. ಹಲವಾರು ವರ್ಷಗಳ ಹಿಂದೆಯೇ ಈ ಪಿಡುಗು ಮೆಸೇಜಿಂಗ್‌ ಅಥವಾ ಎಸ್‌.ಎಂ.ಎಸ್‌ ರೂಪದಲ್ಲಿ ಬಂದಿತ್ತು. ಯಾರೋ ಒಬ್ಬ ಮಹನೀಯರು ಹರಿಪಾದ ಸೇರಿದರು ಎಂದರೆ ಫಟಾಫಟ್‌ ಅಂತ ರಿಪ್‌ ಎಂಬ ಪಿಡುಗು. ಧೀಮಂತ ಆತ್ಮಕ್ಕೆ ಶಾಂತಿ ಕೋರಲೂ ಸಮಯವಿಲ್ಲದ ಜನ. ಇಂದು ಈ ಪಿಡುಗು ಕೊಂಚ ಮುಂದುವರೆದು ಎಸ್‌.ಎಂ.ಎಸ್‌ ರೂಪದ ಜತೆ ಇಮೋಜಿಯೂ ಸೇರಿದೆ. ರಿಪ್‌ ಎಂದು ಬರೆದು ಒಂದು ನಮನದ ಚಿತ್ರ ಒತ್ತುವುದು. ಎರಡು ಮೂರು ಡಿಗ್ರಿಗಳನ್ನು ಹೆಸರಿಗೆ ನೇತುಹಾಕಿಕೊಂಡು ನಾಲ್ಕಕ್ಷರ ಬರೆಯಲೂ ಸಮಯವಿಲ್ಲದೆ ಶಿಲಾಯುಗಕ್ಕೆ ಹೋಗುತ್ತಿದ್ದೇವೆಯೇ?
ಭಾವನೆಗಳನ್ನು ಬಳಸಲು ಒಂದು ಉತ್ತಮ ಸಾಧನ ಈ ಇಮೋಜಿಗಳು. ಅದೇ ದುರ್ಬಳಕೆಯಾದರೆ ಪೀಡೆಯೇ ಆಗುತ್ತದೆ.

ಕೆಲವೊಮ್ಮೆ ಎಂಥಾ ದುರ್ಗತಿ ಎಂದರೆ ಕವನ ಮತ್ತು ಲೇಖನಗಳ ತುಂಬಾ ಇಮೋಜಿ ತುಂಬಿಸಿ ಅದನ್ನೇ ಭಾವನಾ ಸಮುದ್ರವಾಗಿರಿಸುತ್ತಾರೆ. ಒಂದು ಕವನ ಮತ್ತು ಲೇಖನದಲ್ಲಿ ಪದಗಳು ಆಡಬೇಕು, ಭಾವನೆಗಳನ್ನು ಚೆಲ್ಲಬೇಕು. ಆ ಪದಗಳೇ ಸುವಾಸನೆ ಹರಡಬೇಕು, ರುಚಿಸಬೇಕು. “ಮೂಡಣ ರಂಗಸ್ಥಳದಲಿ ನೆತ್ತರ ಮಾಡುವನು ಕುಣಿದಾಡುವನು’ ಎಂಬ ಸಾಲುಗಳನ್ನು ಓದಿದಾಗ ಆ ಚಿತ್ರಣ ಮನಸ್ಸಿನಲ್ಲಿ ಕುಣಿಯುತ್ತದೆ. ಅಂದೆಂದೋ ಬರೆದ ಸಾಲುಗಳು ಇಂದಿಗೂ ಮನಸ್ಸಿನಲ್ಲಿ ಉಳಿದಿದೆ ಅದು ಪದಗಳಿಂದ ಮಾತ್ರ ಎಮೋಜಿಗಳಿಂದ ಅಲ್ಲ. ಎಮೋಜಿಗಳ ಬಳಕೆ ತಪ್ಪಲ್ಲ. ಆದರೆ ಅದೇ ಓವರ್‌ಡೋಸ್‌ ಆದರೆ ಪದಗಳು ಸೋಲುತ್ತವೆ. ಅಕ್ಷರಗಳು ಸೊರಗಬಾರದು. ಎಲ್ಲಿ ಎಮೋಜಿಗಳು ಬೇಕೋ ಅಲ್ಲಿ ಬಳಸೋಣ, ಎಲ್ಲೆಡೆ ಬಳಸಿ ನಮ್ಮ ಜ್ಞಾನವನ್ನು ಬಲಿ ಕೊಡುವುದು ಬೇಡ.

*ಶ್ರೀನಾಥ್‌ ಭಲ್ಲೇ, ರಿಚ್ಮಂಡ್‌

ಟಾಪ್ ನ್ಯೂಸ್

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.