![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Dec 2, 2023, 5:05 PM IST
ಲ್ಯಾಂಡ್ ಆಫ್ ಲೈಟ್ಸ್ ಎಂದು ಖ್ಯಾತಿ ಹೊಂದಿರುವ ಪ್ಯಾರಿಸ್ ಬೆಳಕಿನ ನಗರ. ಜತೆಗೆ ಹೆಚ್ಚು ಹೆಚ್ಚು ಪ್ರವಾಸಿಗರನ್ನು ತನ್ನ ಪ್ರಸಿದ್ಧ ಹಾಗೂ ವರ್ಣರಂಜಿತ ನಗರಗಳಿಂದಲೇ ಕೈಬೀಸಿ ಕರೆಯುತ್ತದೆ. ಪ್ಯಾರಿಸ್ ನಗರವನ್ನು ಕಂಡಾಗ ನೆನಪಗಾಗಿದ್ದು ನಮ್ಮ ಮೈಸೂರು ನಗರಿ. ಸಾಂಸ್ಕೃತಿಕ ನಗರವೆಂದೇ ಖ್ಯಾತಿಯಾಗಿರುವ ಮೈಸೂರು ಎಷ್ಟೇ ಜನರಿಂದ ಕೂಡಿದ್ದರು, ತನ್ನೊಳಗಿನ ಪ್ರಶಾಂತತೆಯನ್ನು ಉಳಿಸಿಕೊಂಡಿದೆ. ಹಾಗೆಯೇ ಪ್ಯಾರಿಸ್ ಹೆಚ್ಚು ಹೆಚ್ಚು ಪ್ರವಾಸಿಗರಿಂದ ಕೂಡಿದ್ದರೂ ಬೀಸುವ ತಣ್ಣನೆಯ ಗಾಳಿ ಮನಸ್ಸಿಗೆ ಹಿತವೆನ್ನಿಸುವ ಭಾವವನ್ನು ನೀಡುತ್ತದೆ.
“ಕಲೆಯ ಆಗರ ಪ್ಯಾರಿಸ್’ ಎಂಬ ತಲೆಬರಹದ ಅಡಿ ಪುಸ್ತಕದಲ್ಲಿದ್ದ ಪಾಠವೊಂದನ್ನು ಕನ್ನಡ ಶಿಕ್ಷಕಿಯಾಗಿ ಮಕ್ಕಳಿಗೆ ಬೋಧಿಸಿದಾಗ ಪ್ಯಾರಿಸ್ ಎಂಬ ನಗರಕ್ಕೆ ಖು¨ªಾಗಿ ಹೋಗುವ ಯಾವ ಸುಳಿವೂ ಇರಲಿಲ್ಲ. ಜೀವನದ ತಿರುವುಗಳು ಮೈಸೂರಿನಿಂದ ಲಂಡನ್, ಜರ್ಮನಿ, ಪ್ಯಾರಿಸ್‌ನಂತಹ ದೇಶಗಳ ಮಣ್ಣಿನಲ್ಲಿ ತಿರುಗಾಡುವ ಅವಕಾಶಗಳನ್ನು ತೆರೆದಿಟ್ಟಾಗ ಪ್ಯಾರಿಸ್‌ನ ಐಫೆಲ್ ಟವರ್ ಮತ್ತು ಮೊನಾಲಿಸಾ ಚಿತ್ರಗಳ ಬಗೆಗೆ ಇದ್ದ ಕುತೂಹಲ ಕಾರಂಜಿಯಾಯಿತು.
ಹಲವು ಭಾರೀ ಪ್ಯಾರಿಸ್ ಪ್ರಯಾಣ ಮಾಡಬೇಕೆಂದಾಗ ಕಾರಣಾಂತರಗಳಿಂದ ಕೈಗೂಡದೆ ಕಾತರತೆ ಹೆಚ್ಚಿಸಿತ್ತು. ಮಾತೃಭೂಮಿ ತೊರೆದು ಕರ್ಮಭೂಮಿಯಾದ ಜರ್ಮನಿಯಲ್ಲಿ ದಶಕಗಳು ಕಳೆದರೂ ಪ್ರತೀ ಗಳಿಗೆ ನಮ್ಮೂರಿನ ನೆನಪು ನಮ್ಮೊಡನೆ ಉಸಿರಾಡುತಿರುತ್ತದೆ. ಕಡೆಗೂ ಜರ್ಮನಿ ಇಂದ ಕಾರಿನಲ್ಲಿಯೇ 5-6 ತಾಸುಗಳ ಪ್ರಯಾಣ ಮಾಡಿ ಪ್ಯಾರಿಸ್ ತಲುಪಿದಾಗ ಹೆಜ್ಜೆ-ಹೆಜ್ಜೆಗೂ ಮೈಸೂರನ್ನೇ ನೆನಪಿಸಿತು.
ಅಲ್ಲಿನ ಜನಜಂಗುಳಿ, ರಸ್ತೆ ಬದಿಯಲ್ಲಿದ್ದ ಪುಟ್ಟ ಪುಟ್ಟ ಪೆಟ್ಟಿ ಅಂಗಡಿಗಳು, ಫುಟ್‌ಪಾತ್‌ಗಳಲ್ಲಿ ಚಿಕ್ಕ ನೆಲಹಾಸು ಹಾಕಿ ಗೊಂಬೆ, ಕೀ ಚೈನ್, ಪ್ಲಾಸ್ಟಿಕ್ ಐಫೆಲ್ ಟವರ್‌ಗಳನ್ನು ಮಾರುತ್ತಿದ್ದವರು, ಚಿತ್ರ ಕಲೆಗಳ ಮಾರಾಟ, ಐಫೆಲ್ ಟವರ್ ಕೆಳಗೆ ಹಾಗೂ ಅಕ್ಕ-ಪಕ್ಕ ಅದರ ಇರುವಿಕೆ ಬಗ್ಗೆ ಅಂತಹ ವಿಶೇಷವೇನೂ ವ್ಯಕ್ತಪಡಿಸದೆ ಪ್ರತಿನಿತ್ಯ ಸೈಕಲ್, ಕಾರುಗಳಲ್ಲಿ ಓಡಾಡುವ ಜನಜಂಗುಳಿ ಮೈಸೂರು ಅರಮನೆಯ ಅತೀ ಸಮೀಪ ಕಳೆದ ನನ್ನ ಬಾಲ್ಯ ನೆನಪಿಸುತ್ತಿತ್ತು. ವಿಶ್ವವಿಖ್ಯಾತ ಅರಮನೆ ನೋಡಲು ಅದೆಷ್ಟೋ ದೂರದಿಂದ ಬರುತ್ತಿದ್ದ ಜನರ ನಡುವೆ ನಾವು ದಿನವೂ ಅರಮನೆ ನೋಡುತ್ತಿದ್ದು, ಅದರ ಬಗೆಗೆ ಇದ್ದ ಒಂದು ನಿರ್ಲಿಪ್ತ ಭಾವ, ನಾವು ಹಲವಾರು ಮೈಲಿ ಸವೆಸಿ ಐಫೆಲ್ ಟವರ್ ನೋಡಲು ಹೋದಾಗ ಅಲ್ಲೇ ಇದ್ದವರಲ್ಲಿ ಇಣುಕುತ್ತಿತ್ತು.
ಐರನ್ ಲೇಡಿ ಐಫೆಲ್ ಟವರ್:
ಪ್ಯಾರಿಸ್‌ನಲ್ಲಿರುವ 2ನೇ ಎತ್ತರದ ಕಬ್ಬಿಣದ ಗೋಪುರ. ಇದರಲ್ಲಿ 3 ಅಂತಸ್ತುಗಳಿದ್ದು ಕಬ್ಬಿಣದ ನೂರಾರು ಮೆಟ್ಟಿಲುಗಳ ನಡುವೆ ನಡೆದು ಹೋಗುವುದು ಒಂದಾದರೆ ಅದರ ತುತ್ತ ತುದಿಯಿಂದ ಪೂರ್ಣ ಪ್ಯಾರಿಸ್‌ನ ಪಕ್ಷಿ ನೋಟ ನೋಡುವುದೊಂದು ರೋಚಕ. 100 ವರ್ಷಗಳಾದರೂ ಸಲ್ಪವೂ ತುಕ್ಕುಹಿಡಿಯದ ಕಬ್ಬಿಣದ 984 ಅಡಿಗೂ ಎತ್ತರವಾಗಿರುವ ಗೋಪುರ ಬೆಳಗಿನಲ್ಲಿ ಮತ್ತು ಸಂಜೆಯಾದ ಅನಂತರ ಕಣ್ತುಂಬಿಕೊಳ್ಳುವ ಎರಡರ ಅನುಭವವೂ ವಿಭಿನ್ನ. ಗಂಟೆಗೊಮ್ಮೆ ಮಿಂಚುವ ಗೋಪುರ ಮನದೊಳಗೆ ಮಿಂಚುಹುಳ ಹರಿಸುತ್ತಾ ವಾರಾಂತ್ಯದಿ 1 ಗಂಟೆಗಳ ಕಾಲ ಮಿಂಚುವ ಮೈಸೂರ ಬೆಳಕಿನ ಅರಮನೆಯ ನೆನಪಿಸುತ್ತಿತ್ತು. ಗೋಪುರದ ಒಳಗೆ ಪ್ರಪಂಚದ ಅತೀ ಎತ್ತರದ ಕಟ್ಟಡಗಳ ಪಟ್ಟಿ ಮಾಡಿ ಅಲ್ಲಿ ಭಾರತದ ಹೆಸರು ನೋಡುವುದು ಮನದೊಳಗೆ ಪುಳಕ ಹರಿಸಿದರೆ, ಕೆಳಗೆ ಹರಿಯುವ ಸೈನ್ ನದಿ ಮೈಗೆ ತಂಪೆರೆಯುತ್ತದೆ.
ಆರ್ಕ್ ದಿ ಟ್ರೀಮೆ:(arc de triomphe): ನಮ್ಮ ಇಂಡಿಯಾ ಗೇಟ್ ಅನ್ನೇ ನೆನಪಿಸುವ ಆರ್ಕ್ ದಿ ಟ್ರೀಮೆ ಒಳ-ಹೊರ ಭಾಗದ ಗೋಡೆಗಳಲ್ಲಿ ಫ್ರೆಂಚ್ ರೆವೊಲ್ಯೂಶನ್‌ನ ಯುದ್ಧದಲ್ಲಿ ಮಡಿದ ವೀರರ ಹೆಸರುಗಳನ್ನು ಒಳಗೊಂಡು ಅವರಿಗೆ ಗೌರವ ಸಮರ್ಪಿಸಿದೆ. ಪ್ರಪಂಚದ ಉದ್ದದ ಆರ್ಕ್ ಆಗಿರುವ ಇದರ ಸುತ್ತಲೂ 12 ರಸ್ತೆಗಳಿಗೆ ದಾರಿಯಾಗಿ ವೃತ್ತಾಕಾರದಲ್ಲಿರುವುದು ಮೈಸೂರಿನ ಹಾರ್ಡಿಂಜ್ ಸರ್ಕಲ್‌ನನ್ನೇ ನೆನಪಿಸುತ್ತ ಇತ್ತು.
ಲೌವ್ರೆ ಮ್ಯೂಸಿಯಂ: ಇದು ಪ್ರಪಂಚದಲ್ಲಿರುವ ಅತೀ ದೊಡ್ಡ ವಸ್ತು ಸಂಗ್ರಹಾಲಯ. ವಿಶ್ವವಿಖ್ಯಾತ ಲಿಯೊನಾರ್ಡೊ ಡಾ ವಿಂಚಿ ಚಿತ್ರಿಸಿರುವ ಮೊನಾಲಿಸಾ ಚಿತ್ರ ಇರುವುದು ಇಲ್ಲೇ. ಬಹುಶ ಇಲ್ಲಿನ ಎಲ್ಲ ಚಿತ್ರಗಳು, ಶಿಲ್ಪಕಲೆಗಳು, ವಸ್ತುಗಳನ್ನು ಸಂಪೂರ್ಣ ನೋಡಬೇಕೆಂದರೆ 100ಕ್ಕೂ ಹೆಚ್ಚು ದಿನ ಬೇಕಾಗುತ್ತದೆಯಂತೆ. ಅರಮನೆಯಾಗಿದ್ದ ಲೌವೆÅ ಕಾಲಾಂತರದಲ್ಲಿ ಅರಮನೆಯ ರಾಯಲ್ ಕಲೆಕ್ಷನ್ಸ್ ಮತ್ತು ಗ್ರೀಕ್ ಹಾಗೂ ರೋಮನ್ ಶಿಲ್ಪಕಲೆಗಳ ಸಂಗ್ರಹಗಳ ಪ್ರದರ್ಶನಕ್ಕಾಗಿ ಬಳಸಲಾಗುತ್ತಿದೆ. ಸಾವಿರಾರು ಚಿತ್ರಗಳು, ಶಿಲ್ಪಕಲೆಗಳನ್ನು ಒಳಗೊಂಡ ಇಲ್ಲಿ ಮೊನಾಲಿಸಾ ಚಿತ್ರಕ್ಕೆ ವಿಶೇಷವಾಗಿ ಕಾವಲಿದ್ದು ಜನರನ್ನು ಸಾಲಾಗಿ ಬಿಡುತ್ತಾರೆ ಮತ್ತು ಅದೊಂದು ಪುಟ್ಟ ಚಿತ್ರಕ್ಕೆ ಬುಲೆಟ್ ಪ್ರೂಫ್ನ ಗಾಜಿನಿಂದ ಸಂರಕ್ಷಿಸಲಾಗಿದೆ. ಹಲವಾರು ಕೊಠಡಿಗಳಲ್ಲಿರುವ ಮೇಲ್ಛಾವಣಿಯ ವರ್ಣ ಚಿತ್ರಗಳು ಮೈಸೂರು ಅರಮನೆಯ ಛಾವಣಿಗಳಲ್ಲಿರುವ ಚಿತ್ರಗಳನ್ನು ಸ್ಮತಿ ಪಟಲದಲ್ಲಿ ತೇಲಿಸಿತ್ತು. 3ನೇ ನೆಪೋಲಿಯನ್‌ನ ಕಾಲದ ಕೋಣೆ ಹಾಗೂ ಹತ್ತು ಹಲವು ಅತ್ಯಮೂಲ್ಯ ವಸ್ತುಗಳು ಇಲ್ಲಿ ಕಣ್ಣು ಕೋರೈಸುತ್ತದೆ.
ಸಾಕ್ರೆ ಕೋಯರ್ (sacre coeur ) ಬಾಸಿಲಿಕಾ: ಇದೊಂದು ಐತಿಹಾಸಿಕ ಸ್ಮಾರಕ. ಐಫೆಲ್ ಟವರ್‌ನ ಅನಂತರ 2ನೇ ಅತ್ಯಂತ ಪ್ರಸಿದ್ಧ ಹಾಗೂ ಪ್ರೇಕ್ಷಕರು ಭೇಟಿ ನೀಡುವ ಸ್ಥಳ. ಇದರ ಮೇಲ್ಭಾಗದಿಂದ ಇಡೀ ಪ್ಯಾರಿಸ್‌ನ ಅವಲೋಕಿಸುವುದೊಂದು ಅದ್ಭುತ ಅನುಭವ.
ಡಿಸ್ನಿ ಲ್ಯಾಂಡ್ ಪ್ಯಾರಿಸ್ ಮತ್ತು ವಾಲ್ಟ್ ಡಿಸ್ನಿ ಸ್ಟುಡಿಯೋ ಪಾರ್ಕ್: ಮಕ್ಕಳಿಗಾಗಿಯೇ ಡಿಸ್ನಿ ಲ್ಯಾಂಡ್ ಮತ್ತು ವಾಲ್ಟ್ ಡಿಸ್ನಿ ಮತ್ತೂಂದು ಮಾಯಾಲೋಕವನ್ನೇ ತೆರೆದಿಡುತ್ತದೆ. ಮಿಕ್ಕಿ ಮತ್ತು ಮಿನಿ ಮೌಸ್‌ಗಳಂತಹ ವೇಷಧಾರಿಗಳು, ಮಿನಿ ಟ್ರೈನ್, ಆಕರ್ಷಕ ಗೊಂಬೆ ಲೋಕ , ಫಜಲ್ ಮಾದರಿಯ ಆಟದ ಪಾರ್ಕ್‌ಗಳು ಇನ್ನು ಬಗೆ ಬಗೆಯ ಮಕ್ಕಳೊಂದಿಗೆ ದೊಡ್ಡವರು ಬೆರಗುಗೊಳ್ಳುವಂತ ಹಲವಾರು ಆಟಗಳು ಎಲ್ಲವು ನೋಡಲು 2-3 ದಿನಗಳಾದರೂ ಸಾಲದು. ಈ ಆವರಣದೊಳಗೆ ಇರುವ ಹೊಟೇಲ್ ಕೊಠಡಿಗಳ ಗೋಡೆಗಳೂ ಸಹ ವಿಶೇಷ ಚಿತ್ರಗಳೊಂದಿಗೆ ಮಕ್ಕಳನ್ನು ಖುಷಿಗೊಳಿಸುತ್ತದೆ. ಪ್ಯಾರಿಸ್ ಕೆಲವೇ ದಿನಗಳಲ್ಲಿ ನೋಡಿ ಬಿಡಬಹುದಾದಂತಹ ನಗರವಲ್ಲ. ಪುಟಗಟ್ಟಲೆ ಬರೆದರೂ ಮುಗಿಯದ ಅಚ್ಚರಿ, ಆಕರ್ಷಣ,ಸೌಂದರ್ಯ. ಪ್ಯಾರಿಸ್ ನೆವರ್ ಸ್ಲಿಪ್ಸ್ ಎನ್ನುವಂತೆ ಪ್ಯಾರಿಸ್ ನಗರವು ಯಾವಾಗಲೂ ಜನನಿಬಿಡ. ಲ್ಯಾಂಡ್ ಆಫ್ ಲವ್, ಲ್ಯಾಂಡ್ ಆಫ್ ಲೈಟ್ಸ್ ನೋಡಿದವರಿಗೆ ಪ್ರೀತಿಳರಳಿಸಿ ಮತ್ತೆ ಮತ್ತೆ ನೋಡಿ ಕಣ್ತುಂಬಿಕೊಳ್ಳುವ ಹಂಬಲ ಉಳಿಸಿಬಿಡುತ್ತದೆ.
*ಶೋಭಾ ಚೌಹಾಣ್ ಫ್ರಾಂಕ್‌ಫರ್ಟ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.