Desi Swara:ಸಿಟಿ ಆಫ್ ವಿಂಡ್ಸ್ ಕ್ಯಾಸ್ಪಿಯನ್: ಸಮುದ್ರ ಕಿನಾರೆಯ ಪ್ರವಾಸಿ ತಾಣ ಬಾಕು ನಗರ
ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದನ್ನಾಗಿ ಘೋಷಣೆ ಮಾಡಿದೆ.
Team Udayavani, May 4, 2024, 3:25 PM IST
ಏಷ್ಯಾ ಖಂಡ ಮತ್ತು ಯೂರೋಪ್ ಖಂಡದ ಮಧ್ಯ ಭಾಗದಲ್ಲಿರುವ ಕ್ಯಾಸ್ಪಿಯನ್ ಸಮುದ್ರದ ಕಿನಾರೆಯಲ್ಲಿರುವ ಅಝರ್ಬೈಜಾನ್ ದೇಶದ ರಾಜಧಾನಿ ಬಾಕು. ಸಿಟಿ ಆಫ್ ವಿಂಡ್ಸ್ ಎಂದೇ ಪ್ರಸಿದ್ಧವಾದ ಸುಂದರ ನಗರ ಬಾಕು 13ನೇ ಶತಮಾನದಲ್ಲಿ ಓರ್ವ ಯಾತ್ರಿಕನ ಪ್ರವಾಸಿ ಕಥನ ಬರಹದ ಮೂಲಕ ವಿಶ್ವಕ್ಕೆ ಪರಿಚಯವಾದ ನಗರವಾಗಿದೆ. ಪರ್ಶಿಯನ್ ಭಾಷೆಯಲ್ಲಿ ಬಾದ್-ಕುಬೆ ಎಂಬ ಹೆಸರಿದೆ. ಬಾದ್ ಅಂದರೆ ಗಾಳಿ, ಕುಬೆ ಅಂದರೆ ವರ್ತುಲ, ಗಾಳಿಯನ್ನು ಆವರಿಸಿರುವ ನಗರ ಬಾಕು ಆಗಿದೆ.
ಜಗತ್ತಿನ ಪ್ರಥಮ ಪೆಟ್ರೋಲಿಯಂ ನಿಕ್ಷೇಪವನ್ನು ಗುರುತಿಸಿದ ಸ್ಥಳವಾಗಿದೆ. 1837ಕ್ಕೆ ಪ್ರಥಮ ಬಾರಿಗೆ ಡ್ರಿಲ್ಲಿಂಗ್ ಮಾಡಿ ತೈಲವನ್ನು ಹೊರ ತೆಗೆಯಲಾಯಿತು. ಪ್ರಸ್ತುತ ಜಗತ್ತಿಗೆ ಐದು ಪ್ರಮುಖ ತೈಲ ಸರಬರಾಜು ಮಾಡುವ ಸ್ಥಳವಾಗಿದೆ. ಅಂತಾರಾಷ್ಟ್ರೀಯವಾಗಿ ರಫ್ತು ಮಾಡುವ ಬೃಹತ್ ಬಂದರು ಬಾಕು. ವೈಜ್ಞಾನಿಕ, ಸಾಂಸ್ಕೃತಿಕ ಹಾಗೂ ಕೈಗಾರಿಕ ಪ್ರದೇಶವಾಗಿದೆ. 2000ನೇ ಇಸವಿಯಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದನ್ನಾಗಿ ಘೋಷಣೆ ಮಾಡಿದೆ.
ಶ್ರೀಮಂತ ಇತಿಹಾಸ, ಸಂಸ್ಕೃತಿಯು 4ನೇ ಮಿಲಿಯೆನಂ ಬಿ. ಸಿ.ಯಿಂದಲೆ ಇದ್ದು ಶಿರ್ವ ನಶ್ವಸ್ ರಾಜಮನೆತನದ ಅರಮನೆ ಹಾಗೂ ಇನ್ನಿತರ ಆಕರ್ಷಕ ವಾಸ್ತು ವೈವಿಧ್ಯಗಳು ವಿಶ್ವದ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತದೆ. ಅಝರ್ಬೈಜಾನ್ ಇಮಿಗ್ರೇಶನ್‌ನಲ್ಲಿ ಆನ್‌ಲೈನ್ ಮೂಲಕ ಟ್ರಾವೆಲರ್ ವೀಸಾವನ್ನು ಪಡೆದು ವಿಮಾನ ಯಾನದ ಮೂಲಕ ಬಾಕುವಿಗೆ ಪ್ರಯಾಣಿಸಬಹುದಾಗಿದೆ.
ಯೂರೋಪ್ ಏಷ್ಯಾದ ಕಪ್ಪು ಸಮುದ್ರ ಬ್ಲ್ಯಾಕ್ ಸೀ ಮತ್ತು ಕ್ಯಾಸ್ಪಿಯನ್ ಸಮುದ್ರದ ಮದ್ಯಭಾಗದಲ್ಲಿರುವ ಭೂಪ್ರದೇಶದಲ್ಲಿ, ರಷ್ಯಾ, ಅರ್ಮೆನಿಯಾ, ಜಾರ್ಜೀಯಾ ಮುಂತಾದ ದೇಶಗಳ ಸಮೀಪದಲ್ಲಿರುವ ಅಝರ್ಬೈಜಾನ್, ಬಾಕು ಎಪ್ರಿಲ್‌ನಿಂದ ಸೆಪ್ಟಂಬರ್ ವರೆಗೆ ಒಳ್ಳೆಯ ಹವಮಾನವಿದ್ದು ಹದಿನೈದು ಡಿಗ್ರಿ ಸೆಲ್ಸಿಯಸ್ ಉಷ್ಣಾಂಸ ತಾಪಮಾನ ಹೊಂದಿದೆ. ಉತ್ತಮ ಶುದ್ಧ ಗಾಳಿ, ಚಳಿ ಸಹಿತ ಆಹ್ಲಾದಕರ ವಾತಾವರಣ ಪ್ರವಾಸಿಗರಿಗೆ ಮುದ ನೀಡುತ್ತದೆ.
ಪ್ರವಾಸಿಗರು ಭೇಟಿ ನೀಡಲಿರುವ ಸ್ಥಳಗಳನ್ನು ನೋಡುವುದಾದರೆ, ಶಿರ್ವ ನಶ್ವಸ್ ವಂಶದ ಅರಮನೆ, 15ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಪ್ರಾಚಿನ ವಾಸ್ತು ಶಿಲ್ಪದ ಮೇರು ಕೃತಿಯಾಗಿದೆ. ಶ್ರೀಮಂತ ಇತಿಹಾಸ ಸಂಸ್ಕೃತಿಗೆ ಸಾಕ್ಷಿಯಾಗಿದೆ.
ಬಿಲ್ಗಾ ಬೀಚ್: ಅಝರ್ಬೈಜಾನ್ ಬಾಕು ಬಳಿ ಕ್ಯಾಸ್ಪಿಯನ್ ಸಮುದ್ರದ ಸುಂದರ ಕಡಲ ಕಿನಾರೆ, ಚಿನ್ನದ ಮರಳು, ಸ್ಫಟಿಕ ಸ್ಪಷ್ಟ ನೀರು ಪ್ರವಾಸಿಗರ ಮನ ಸೆಳೆಯುವ ಸುಂದರ ಕಡಲ ತೀರವಾಗಿದೆ.
ಫೌಂಟೈನ್ ಸ್ಕ್ವೇರ್: ಅಝರ್ಬೈಜಾನ್, ಬಾಕುವಿನ ಜನಪೀಡಿತ ಪ್ರದೇಶದ ಮದ್ಯಭಾಗದಲ್ಲಿ ಹಚ್ಚ ಹಸುರಿನ ನಡುವೆ ಕಂಗೊಳಿಸುತ್ತಿರುವ ಎತ್ತರದ ನೀರಿನ ಕಾರಂಜಿ ಪ್ರಶಾಂತವಾಗಿ ಜಲಧಾರೆಯನ್ನು ಸುರಿಸುತ್ತಿದೆ.
ಪುಟ್ಟ ವೆನ್ನಿಸ್: ಪ್ರಸಿದ್ಧ ಇಟಾಲಿಯನ್ ನಗರವನ್ನು ಹೋಲುವಂತೆ ನಿರ್ಮಿಸಲಾಗಿರುವ ಪ್ರವಾಸಿ ತಾಣ. ಕಾಲುವೆ, ದೋಣಿ ವಿಹಾರ, ಆಕರ್ಷಕ ಸೇತುವೆಗಳು, ವರ್ಣರಂಜಿತ ಕಟ್ಟಡ ಇಲ್ಲಿನ ವಿಶೇಷತೆಯಾಗಿದೆ.
ಬಾಕು ಬೊಲಿವಾರ್ಡ್: ಕ್ಯಾಸ್ಪಿಯನ್ ಸಮುದ್ರದ ಬದಿಯಲ್ಲಿ ನಿರ್ಮಾಣವಾಗಿರುವ ಸುಂದರ ಉದ್ಯಾನವನ, ವಾಸ್ತು ಶಿಲ್ಪಗಳ ಅದ್ಭುತ ವಾಯು ವಿಹಾರ ಸ್ಥಳವಾಗಿದೆ.
ರಾಷ್ಟ್ರೀಯ ಧ್ವಜ ಚೌಕ: ಅಝರ್ಬೈಜಾನ್ ಬಾಕುವಿನ ರಾಷ್ಟ್ರೀಯ ಧ್ವಜ ಸ್ತಂಭ 162 ಮೀಟರ್ 531 ಅಡಿ ಎತ್ತರದ ಬೃಹತ್ ಧ್ವಜ ಸ್ತಂಭ ಹೊಂದಿರುವ ಚೌಕ, ರಾಷ್ಟ್ರೀಯ ಹೆಮ್ಮೆ ಮತ್ತು ಏಕತೆಯ ಸಂಕೇತವಾಗಿದೆ.
ಮಣ್ಣಿನ ಜ್ವಾಲಮುಖಿ: ಘೋಬಾಸ್ಥಾನ್ ರಾಷ್ಟ್ರೀಯ ಉದ್ಯಾನವನ, ಬಾಕುವಿನಲ್ಲಿರುವ ವಿಶಿಷ್ಟ ಭೂವೈಜ್ಞಾನಿಕ ವಿದ್ಯಾಮಾನಕ್ಕೆ ಸಾಕ್ಷಿ. ಮಣ್ಣಿನ ಜ್ವಾಲಮುಖೀ ಉದ್ಯಾನವನದಲ್ಲಿ 300 ಮಣ್ಣಿನ ಜ್ವಾಲ ಮುಖೀಗಳಿವೆ. ಭೂಗರ್ಭದಿಂದ ಹೊರ ಉಗುಳುವ ಮಣ್ಣಿನ ಲಾವಾರಸ ಆಕರ್ಷಣೆಯ ಕೇಂದ್ರ ಹಾಗೂ ಹೊರ ಹೊಮ್ಮಿದ ಮಣ್ಣು ಚರ್ಮ ರೋಗಕ್ಕೆ ಆರೋಗ್ಯವಾಗಿದೆ.
ಹೈದರ್ ಮಸೀದಿ: ಅಝರ್ಬೈಜಾನ್ ಮತ್ತು ಇಸ್ಲಾಮಿಕ್ ಆರ್ಕಿಟೆಕ್ಟ್ ಮಿಶ್ರಣದ ವಾಸ್ತು ಶಿಲ್ಪದ ಶೈಲಿಯಲ್ಲಿ ಅಧುನಿಕತೆ ಮತ್ತು ಸಾಂಪ್ರದಾಯಿಕತೆಯನ್ನು ಅಳವಡಿಸಲಾಗಿದೆ.
ಇಚೆರಿಶೆಹರ್: ದಿ ಸ್ಮಾಲ್ ಓಲ್ಡ್ ಟೌನ್, ಓಲ್ಡ್ ಸಿಟಿ ಎಂದು ಕರೆಯಲ್ಪಡುವ ಅತ್ಯಂತ ಪುರಾತನ ಐತಿಹಾಸಿಕ ಕೇಂದ್ರ, ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಗುರುತಿಸಲ್ಪಟ್ಟಿದೆ.
ಮಿನಿಯೇಚರ್ ಆಪ್ ಬುಕ್ ಮ್ಯೂಸಿಯಂ: 2002ರಲ್ಲಿ ಪುಸ್ತಕ ಸಂಗ್ರಾಹಕ ಕಲಾವಿದ ಝರಿಪ ಸಲ್ಹೋವಾ ಸ್ಥಾಪಿಸಿದ್ದು, ಪ್ರಪಂಚದಾದ್ಯಂತದಿಂದ ಸಂಗ್ರಹಿಸಿದ ಚಿಕಣಿ ಪುಸ್ತಕಗಳ ಭಂಡಾರವಿದೆ.
ನಿಜಾಮಿ ಸ್ಟ್ರೀಟ್: 12ನೇ ಶತಮಾನದ ನಿಜಾಮಿ ಗಂಜಾವಿ ಪ್ರಸಿದ್ಧ ಪರ್ಸಿಯನ್ ಕವಿ ಹೆಸರಿನಲ್ಲಿರುವ ನಿಜಾಮಿ ಸ್ತೀಟ್ ಎಂದೇ ಪ್ರಸಿದ್ಧಿಯನ್ನು ಪಡೆದಿದೆ.
ಮೇಡನ್ ಟವರ್: ವಿಶ್ವ ಪರಂಪರೆಯ ಪಟ್ಟಿಯಲ್ಲಿರುವ ಐತಿಹಾಸಿಕ ಗೋಪುರ. ನಿರ್ಮಾಣದ ಉದ್ದೇಶ ಸುತ್ತ ಅನೇಕ ದಂತ ಕಥೆಗಳಿದೆ.
ಬಿಬಿ ಹೆಬತ್ ಐತಿಹಾಸಿಕ ಮಸೀದಿ: ಪ್ರವಾದಿ ಮಹ್ಮದ್ ಅವರ ಮೊಮ್ಮಗಳನ್ನು ಇಲ್ಲಿ ಸಮಾಧಿ ಮಾಡಲಾಗಿದೆ. 5,000 ಆರಾಧಕರಿಗೆ ಸ್ಥಳ ಅವಕಾಶ ಕಲ್ಪಿಸಲಾಗಿದೆ.
ಬಾಕು ಕಣ್ಣು: ಫೆರ್ರಿಸ್ ವೀಲ್, ಬಾಕುವಿನ ದೈತ್ಯಾಕಾರದ 60 ಮೀಟರ್ (196 ಅಡಿ) ಎತ್ತರ, 30 ಕ್ಯಾಬಿನ್‌ಗಳು 200 ಪ್ರಯಾಣಿಕರಿಗೆ ಕ್ಯಾಸ್ಮಿಯಾ ಸಮುದ್ರದ ವಿಹಂಗಮ ದೃಶ್ಯ ಸೊಬಗನ್ನು ವೀಕ್ಷಿಸಬಹುದಾಗಿದೆ. ಒಂದು ಸುತ್ತು ಬರಲು 30 ನಿಮಿಷ ತೆಗೆದುಕೊಳ್ಳುತ್ತದೆ.
ತೇಜ್ ಪೀರ್ ಮಸೀದಿ: ವಿಶಿಷ್ಟ ಗುಮ್ಮಟ ಪ್ರಮುಖ ಇಸ್ಲಾಮಿಕ್ ಧಾರ್ಮಿಕ ಕೇಂದ್ರವಾಗಿದೆ.
ಆಟಾಶ ಅಗ್ನಿ ದೇವಾಲಯ: ಪ್ರಾಚೀನ ಝೊರಾಸಿಯನ್ ಧರ್ಮದವರ ಪೂಜಾ ಸ್ಥಳವಾಗಿದೆ. ಅಗ್ನಿಯ ಆರಾಧಕರಾಗಿದ್ದರು.
ಅಝರ್ಬೈಜಾನ್ ಕಾರ್ಪೆಟ್ ಮ್ಯೂಸಿಯಂ: ಕಾರ್ಪೆಟ್ ನೇಯ್ಗೆ ಕಲೆಗೆ ಪ್ರಸಿದ್ಧವಾಗಿದ್ದು ವಿಶ್ವದ ಅತೀ ದೊಡ್ಡ ಕಾಪೆìಟ್ ಸಂಗ್ರಹಾಲಯವಾಗಿದೆ. ವಸ್ತು ಸಂಗ್ರಹಾಲಯದ ಕಟ್ಟಡ ಸುತ್ತಿದ ಕಾಪೆìಟ್ ಆಕಾರದಲ್ಲಿದೆ.
ಫ್ಲೇಮ್ ಟವರ್ಸ್: ಪೂರ್ತಿ ಕಟ್ಟಡವನ್ನು ಎಲ್.ಇ.ಡಿ. ಪರದೆಗಳನ್ನು ಅಳವಡಿಸಿ ರಾತ್ರಿಯ ವೇಳೆ ಅಗ್ನಿಯ ಜ್ವಾಲೆಯಂತೆ ಬೆಳಗುತ್ತಿರುತ್ತದೆ.
ಹೈಲ್ಯಾಂಡ್ ಪಾರ್ಕ್: ಆಕರ್ಷಕ ಉದ್ಯಾನವನವಾಗಿದೆ.
ಶಿರ್ವನಶ್ವಸ್ ಅರಮನೆ: 9ರಿಂದ 16ನೇ ಶತಮಾನದ ವರೆಗೆ ಆಡಳಿತ ನಡೆಸಿರುವ ಶಿರ್ವ ನಶ್ವಸ್ ವಂಶದವರ ಅರಮನೆ ಸಂಕೀರ್ಣ, ಮುಖ್ಯ ಅರಮನೆ, ಮಸೀದಿ, ಸ್ನಾನ ಗ್ರಹ, ಸಮಾದಿ, ಎಲ್ಲ ಅರಮನೆಯ ಆವರಣದಲ್ಲಿದೆ.
ಹೇದರ್ ಅಲಿಯೆವ್ ಕೇಂದ್ರ: ವಿಶಿಷ್ಟ ವಿನ್ಯಾಸದ ವಸ್ತು ಸಂಗ್ರಾಹಲಯ 2012ರಲ್ಲಿ ಲೋಕಾರ್ಪಣೆಯಾಗಿದೆ.
ಡೆನಿಜ್ಮೆನಾರಿ ಪಾರ್ಕ್: ಕ್ಯಾಸ್ಪಿಯನ್ ಸಮುದ್ರದ ಕಿನಾರೆಯ ಉದ್ದಕ್ಕೂ ನಿರ್ಮಿಸಲಾಗಿರುವ ಆಕರ್ಷಣೀಯ ಉದ್ಯಾನವನ. ಹಲವು ಆಕರ್ಷಣೀಯ ಪ್ರವಾಸಿ ತಾಣವಾಗಿರುವ ಬಾಕು ಉತ್ತಮ ಮಟ್ಟದ ಸ್ಟಾರ್ ಹೊಟೇಲ್, ವೈವಿಧ್ಯಮಯ ಉಪಹಾರಗ್ರಹಗಳು ಸಾರಿಗೆ ವ್ಯವಸ್ಥೆ ಇತ್ಯಾದಿ ಪ್ರವಾಸಿಗರಿಗೆ ಉತ್ತಮ ಸೇವೆಯನ್ನು ಒದಗಿಸುವುದರ ಮೂಲಕ ಪ್ರವಾಸೋದ್ಯಮದಲ್ಲಿ ಅತ್ಯಂತ ಹೆಚ್ಚು ಆದಾಯ ಗಳಿಸುತ್ತಿರುವ ನಗರವಾಗಿದೆ.
ಬಿ. ಕೆ. ಗಣೇಶ್ ರೈ, ದುಬೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.