Desi Swara: ಬಣ್ಣಬಣ್ಣದ ಬೆಳಕು, ಸಂತಾ ಕ್ಲಾಸ್‌ನ ಉಡುಗೊರೆಯ ಹುರುಪು

ಡಿಸೆಂಬರ್‌ ಎಂಬುದು ಕ್ರಿಸ್ಮಸ್‌ ಸಂಭ್ರಮವೂ ಹೌದು

Team Udayavani, Dec 24, 2023, 10:15 AM IST

Desi Swara: ಬಣ್ಣಬಣ್ಣದ ಬೆಳಕು, ಸಂತಾ ಕ್ಲಾಸ್‌ನ ಉಡುಗೊರೆಯ ಹುರುಪು

ವರ್ಷದ ಕೊನೆಯಲ್ಲಿದ್ದೇವೆ. ಈ ವರ್ಷಾಂತ್ಯದಲ್ಲಿ ಉತ್ಸಾಹ, ಖುಷಿಯನ್ನು ದುಪ್ಪಟ್ಟು ಮಾಡುವುದು ಕ್ರಿಸ್‌ಮಸ್‌ ಹಬ್ಬವೇ. ಡಿಸೆಂಬರ್‌ ತಿಂಗಳು ಬಂತೆಂದರೆ ಕಣ್ಣು ಕ್ಯಾಲೆಂಡರ್‌ನಲ್ಲಿ ಕ್ರಿಸ್‌ಮಸ್‌ ಯಾವ ವಾರ ಬಂದಿದೆ ಎಂದೇ ನೋಡುವುದು. ಕ್ರಿಸ್‌ಮಸ್‌ ಬೀದಿಬೀದಿಗಳಲ್ಲಿ ಬಣ್ಣಬಣ್ಣದ ಬೆಳಕಿನ ಓಕುಳಿಯನ್ನೇ ಸೃಷ್ಟಿಸುತ್ತದೆ. ಇನ್ನು ಬಾಯಲ್ಲಿ ನೀರುತರಿಸುವ ಕೇಕ್‌ಗಳು. ವ್ಹಾವ್‌….! ಈ ಹಬ್ಬದ ಖುಷಿಗೆ ಇನ್ನೊಂದು ಕಾರಣ ಕೇಕ್‌ಗಳು ಹೌದು. ಜತೆಗೆ ಈ ಭಾರಿ ಹಬ್ಬಕ್ಕೆ ಸಂತಾ ನಮಗೇನು ಉಡುಗೊರೆಯನ್ನು ನೀಡಬಹುದು ಎಂಬ ಕುತೂಹಲದ ಹುರುಪು ಜತೆಗಯಾಗುತ್ತೆ….

ಡಿಸೆಂಬರ್‌ ಬಂತು ಎಂದರೆ ಎಲ್ಲರಲ್ಲೂ ನಾನಾ ವಿಧವಾದ ಉತ್ಸಾಹ. ಅದರಲ್ಲೊಂದು ಕ್ರಿಸ್ಮಸ್‌ ಹಬ್ಬ. ಇಂದಿನ ಬರಹದಲ್ಲಿ ಡಿಸೆಂಬರ್‌ ಮತ್ತು ಕ್ರಿಸ್ಮಸ್‌ ಬಗ್ಗೆ ಮಾತನಾಡೋಣ. ಕ್ರಿಸ್ಮಸ್‌ ಎಂದು ಹೇಳಿದ್ದರೂ ಆಚರಣೆಯನ್ನು ಧಾರ್ಮಿಕವಾಗಿ ನೋಡದೇ ಬರೀ ಸಂಭ್ರಮದ ದೃಷ್ಟಿಯಿಂದ ಮಾತ್ರ ನೋಡುವ ಇರಾದೆ ಈ ಬರಹದ್ದು. ಜತೆಗೆ ಹಲವಾರು ಅನುಭವಗಳು ಈ ದೇಶದಲ್ಲಿ ನಾ ಕಂಡಂತೆ ನಿಮಗೆ ತಿಳಿಸುತ್ತಾ ಸಾಗುತ್ತೇನೆ. ನಿಮ್ಮ ಅನುಭವವನ್ನೂ ಹಂಚಿಕೊಳ್ಳಿ ಆಯ್ತಾ?

ಡಿಸೆಂಬರ್‌ ಎಂದರೆ ಕನ್ನಡದ ಕಿವಿಗೆ “ದಶ ಅಂಬರ’ ಎಂದೇ ಕೇಳಿಸುತ್ತದೆ. ಪದಗಳು ಸಂಸ್ಕೃತ ಮೂಲದ್ದೇ ಇದ್ದರೂ ಕನ್ನಡದಲ್ಲೂ ಬಳಸುತ್ತೇವೆ ಬಿಡಿ. ಈ ಬರಹದಲ್ಲಿ ಭಾಷೆ, ಜಾತಿ, ಮತದ ವಿಷಯವನ್ನು ಬದಿಗೆ ಹಾಕೋಣ. ಡಿಸೆಂಬರ್‌ ಅಮೆರಿಕದಲ್ಲಿ ಕಂಡಂತೆ ತ್ವರಿತ ಮಾಸ. ಅಲ್ಲಾ, ವರುಷದ ಕೊನೆ ಎಂದಾದಾಗ ವಿಶ್ರಾಂತ ಮಾಸ ಆಗಬೇಕಲ್ಲವೇ? ಯಾಕೋ ವಿಷಯ ಉಲ್ಟಾ ಹೊಡೀತಿದೆಯಲ್ಲ ಎನಿಸಿದರೆ ನಿಮ್ಮ ಅನಿಸಿಕೆ ಸತ್ಯ. ಈ ಎರಡೂ ವಿಷಯಗಳು ಒಂದೇ ಮಾಸದಲ್ಲಿ ಅಡಕವಾಗಿದೆ ಎಂಬುದೇ ಮೊದಲ ವಿಷಯ.

ನಮ್ಮ ಐಟಿ ಕ್ಷೇತ್ರದಲ್ಲಿ ಡಿಸೆಂಬರ್‌ ಮಧ್ಯದವರೆಗೆ ಏನೇನು ಸಾಧ್ಯವೋ ಎಲ್ಲ ಕೆಲಸಗಳನ್ನೂ ಮುಗಿಸಲೇಬೇಕು ಎಂಬುದೇ ತ್ವರಿತ. ದಶದಿಕ್ಕಿನಿಂದಲೂ ಒತ್ತಡ ಹೆಚ್ಚಿರುವ ಸಮಯವೇ ಈ ಮೊದಲ ಹದಿನೈದು ದಿನಗಳು. ಹಾಗಾಗಿ ಈ ಮಾಸ ತ್ವರಿತ ಮಾಸ. ಡಿಸೆಂಬರ್‌ ಹದಿನೈದರಿಂದ ಹೆಚ್ಚು ಕಮ್ಮಿ ಜನವರಿ ಮೊದಲ ವಾರದವರೆಗೆ ಕೊಂಚ ನಿಧಾನಗತಿ. ಹಾಗಾಗಿ ಈ ಮಾಸ ವಿಶ್ರಾಂತ ಸಮಯ.

ವರ್ಷದುದ್ದಕ್ಕೂ ರಜೆಯನ್ನು ಉಳಿಸಿಕೊಂಡವರು, ಡಿಸೆಂಬರ್‌ ಹದಿನೈದರ ಅನಂತರ ಅರ್ಥಾತ್‌ ವಿಶ್ರಾಂತ ಮಾಸದ ಸಮಯದಲ್ಲಿ ರಜೆ ಹಾಕಿ ಹೊರಟುಬಿಡುತ್ತಾರೆ. ಇಂಥವರು ವಾಪಸ್‌ ಬರುವುದೇ ಜನವರಿ ಎರಡನೆಯ ತಾರೀಖು ಅಥವಾ ಜನವರಿಯ ಮೊದಲ ವಾರದಲ್ಲಿ. ಈ ವಿಶ್ರಾಂತ ಸಮಯದಲ್ಲಿ ಕಂಡು ಬರುವುದೇ ಕ್ರಿಸ್ಮಸ್‌ ಮತ್ತು ಹೊಸವರ್ಷದ ಆಗಮನ. ಈ ಸಂದರ್ಭದಲ್ಲಿ, ಹೆಚ್ಚುಕಮ್ಮಿ ಬೀದಿ ಬೀದಿಗಳ ಮನೆಯ ಮುಂದೆ ಒಂದಲ್ಲ ಒಂದು ರೀತಿ ದೀಪಾಲಂಕಾರಗಳು ಇರುತ್ತದೆ. ಕನಿಷ್ಠಪಕ್ಷ ಸೀರಿಯಲ್‌ ಸೆಟ್‌ ದೀಪಾಲಂಕಾರವಾದರೂ ಇರುತ್ತದೆ. ದೀಪಾವಳಿಗೆಂದು ಬೆಳಗಿಸಿದ್ದ ಸೀರಿಯಲ್‌ ಸೆಟ್‌ ದೀಪಾಲಂಕಾರವನ್ನು ಬೆಳಗಿಸಿದ ನಾವು ದೀಪದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಸೀರಿಯಲ್‌ ಲೈಟ್‌ ಅಲಂಕಾರವನ್ನು ಹಾಗೆಯೇ ಮುಂದುವರೆಸುವುದೂ ಉಂಟು.

ಕ್ರಿಸ್ಮಸ್‌ ಹಬ್ಬದ ಅವಿಭಾಜ್ಯ ಅಂಗ ಎಂದರೆ ಕ್ರಿಸ್ಮಸ್‌ ಮರ. ಇದು ನೈಜ ಮರವೂ ಇರಬಹುದು, ಕೃತಕವೂ ಆಗಬಹುದು. ಆಗಲೇ ಹೇಳಿದಂತೆ, ಕ್ರಿಸ್ಮಸ್‌ ಮರವನ್ನು ನಿಲ್ಲಿಸುವುದು, ಅದನ್ನು ವಿವಿಧ ಆಭರಣಗಳಿಂದ ಅಲಂಕರಿಸುವುದು ಒಂದು ಸಂಭ್ರಮವೇ ಹೌದು. ಹಿರಿಯರು ಮರವನ್ನು ನಿಲ್ಲಿಸುವುದನ್ನು ಮಾಡಿದರೆ, ಮಕ್ಕಳು ಆಭರಣ ತೊಡಿಸುವ ಕ್ರಿಯೆಯಲ್ಲಿ ತೊಡಗುತ್ತಾರೆ. ಇದೊಂದು ರೀತಿ ನಮ್ಮ ನವರಾತ್ರಿ ಹಬ್ಬದಲ್ಲಿ ಗೊಂಬೆ ಕೂರಿಸುವ ಸಂಭ್ರಮದಂತೆ. ಕ್ರಿಸ್ಮಸ್‌ ಮರದ ಅವಿಭಾಜ್ಯ ಅಂಗವೆಂದರೆ ಗಿಡ ಬುಡದಲ್ಲಿ ಹಾಸುವ ಕೆಂಪು ವಸ್ತ್ರ, ಕ್ಯಾಂಡಿ ಕೇನ್‌, ಮತ್ತು ಗಿಡದ ತುಟ್ಟತುದಿಯಲ್ಲಿ ನಕ್ಷತ್ರ.

ಕ್ರಿಸ್ಮಸ್‌ ಎಂದರೆ ಉಡುಗೊರೆ ಎಂಬುದೂ ಸಮಾನಾರ್ಥಕ ಪದ ಎನ್ನಬಹುದು. ಮಕ್ಕಳ ನಂಬಿಕೆಯ ಪ್ರಕಾರ, ಕ್ರಿಸ್ಮಸ್‌ ಹಬ್ಬದ ಹಿಂದಿನ ರಾತ್ರಿ ಅಥವಾ ಹಬ್ಬದ ಬೆಳ್ಳಂಬೆಳಿಗ್ಗೆ ಸಂತಾ ಚಿಮಣಿಯಿಂದ ಇಳಿದು ಬಂದು ನಮಗೆಂದು ಆ ಕೆಂಪು ಹಾಸಿನ ಮೇಲೆ ಉಡುಗೊರೆ ಇಟ್ಟು ಹೋಗುತ್ತಾನೆ ಎಂಬುದು. ಲೋಕಾದ್ಯಂತ ಓಡಾಡುವ ಸಂತನಿಗೆ ಹಸಿವಾಗಿರುತ್ತದೆ ಎಂದು ಮಕ್ಕಳು ಆ ಕೆಂಪು ಹಾಸಿನ ಮೇಲೆ ಒಂದು ಲೋಟ ಹಾಲು ಮತ್ತು Cookie ಕೂಡಾ ಇಟ್ಟಿರುತ್ತಾರೆ. ಯಾವುದೇ ಮತವು ನಿಂತಿರುವುದು ನಂಬಿಕೆಯ ಮೇಲೇ ತಾನೇ?

ದೀಪಾಲಂಕಾರದ ಜತೆಗೆ ಮನೆಯ ಮುಂದಿನ ಅಂಗಳದಲ್ಲಿ ನೂರಾರು ರೀತಿಯ ಕ್ರಿಸ್ಮಸ್‌ ಸಂಬಂಧೀ Ornamentsಗಳನ್ನೂ ಅಲಂಕರಿಸುತ್ತಾರೆ. ಸಂಜೆ ಮೂಡುತ್ತಿದ್ದಂತೆಯೇ ಝಗಮಗಿಸುವ ದೀಪಗಳು ಹೊತ್ತಿಕೊಂಡು ಸಂಭ್ರಮದ ಆರಂಭ ಸೂಚಿಸುತ್ತದೆ. ಈ ಖುಷಿಯೂ ಹೆಚ್ಚುಕಮ್ಮಿ ಒಂದು ತಿಂಗಳೇ ಇರುತ್ತದೆ. ಆ ಒಂದು ತಿಂಗಳು ಆ ಮನೆಯವರ ವಿದ್ಯುತ್‌ ಬಿಲ್‌ ಕೊಂಚ ದೊಡ್ಡದಾಗಿಯೇ ಇರುತ್ತದೆ. ಚಳಿಯಲ್ಲಿ ತಮ್ಮ ತಮ್ಮ ಕಾರುಗಳಲ್ಲಿ ಅಥವಾ ಬಂಧುಬಳಗದವರೊಡನೆ ಕೂಡಿಕೊಂಡು ಲಿಮೋಸೀನ್‌ ಕಾರಿನಲ್ಲಿ ಈ ಅಲಂಕಾರವನ್ನು ವೀಕ್ಷಿಸಲು ಬರುವ ಮಂದಿಯು ಕಾಣಿಕೆಯ ರೂಪದಲ್ಲಿ ನೀಡುವ ಹಣವು ವಿದ್ಯುತ್‌ ಬಿಲ್‌ಗೆ ಸಹಾಯವಾಗುತ್ತದೆ.

ಹಣ ನೀಡಲೇಬೇಕು ಎಂದು ತಾಕೀತು ಮಾಡುವುದಿಲ್ಲ ಬಿಡಿ. ಚಳಿಯಲ್ಲಿ ಬಂದವರಿಗೆ ಚಾಕೋಲೇಟ್‌ ಮಿಲ್ಕ್ ಕೂಡಾ ಕೊಡುವ ಪದ್ಧತಿ ಕೆಲವು ಮನೆಯವರು ಮಾಡುತ್ತಾರೆ. ಇಲ್ಲೂ ಸಹ ಒಂದು ಹುಂಡಿಯನ್ನು ಇಟ್ಟಿರುತ್ತಾರೆ ಆದರೆ ಹಣ ನೀಡಲೇಬೇಕು ಎಂಬ ಒತ್ತಾಯ ಇಲ್ಲ. ದೀಪಾಲಂಕಾರ ನೋಡಲು ಬರುವವರು ಭಾಗವಹಿಸಲೆಂಬ ಇರಾದೆಯಿಂದ ಸಾಮಾನ್ಯ ಜ್ಞಾನದ ಫ‌ಲಕಗಳನ್ನೂ ಇರಿಸಿರುತ್ತಾರೆ.

ಬರೀ ದೀಪಾಲಂಕಾರವಲ್ಲದೇ ಆಯಾ ಕಮ್ಯುನಿಟಿಯ ಆಡಳಿತ ವರ್ಗದವರು ನಡೆಸುವ ದೀಪಾಲಂಕಾರ ಸ್ಪರ್ಧೆಯಲ್ಲೂ ಹೆಸರು ನೋಂದಾಯಿಸದೇ ಪಾಲ್ಗೊಳ್ಳುವ ಮತ್ತು ಬಹುಮಾನ ಗೆಲ್ಲುವ ಅವಕಾಶವೂ ಇರುತ್ತದೆ. ಇದು ಕೇವಲ ಒಂದು ಕಮ್ಯುನಿಟಿಗೆ ಸೀಮಿತವಾಗದೆ ಕೌಂಟಿ ಮಟ್ಟದ ಸ್ಪರ್ಧೆಗೂ ಅರ್ಹತೆ ದೊರೆಯುತ್ತದೆ. ಆ ಮಟ್ಟದಲ್ಲಿ ಗೆದ್ದವರ ಮನೆಯು ಸ್ಥಳೀಯ ಟಿವಿ ಚಾನೆಲ್‌ ಪ್ರಸಾರದಲ್ಲೂ ನೋಡುವ ಭಾಗ್ಯ ಪಡೆಯುತ್ತದೆ.

ಕ್ರಿಸ್ಮಸ್‌ ಸಂಭ್ರಮದ ಮಗದೊಂದು ಅವಿಭಾಜ್ಯ ಅಂಗವೆಂದರೆ Donation. ಅಂಗಡಿಮುಂಗಟ್ಟಿನಿಂದ ಹಿಡಿದು ಎಲ್ಲ ಕಚೇರಿಗಳಲ್ಲೂ ಡೊನೇಷನ್‌ ಸ್ವೀಕರಿಸುವ Angel Tree ಪದ್ಧತಿ ಇರುತ್ತದೆ. ಕ್ರಿಸ್ಮಸ್‌ಗಿಂತ ಮುಂಚಿನ ಕೆಲವು ದಿನಗಳವರೆಗೆ ಡೊನೇಷನ್‌ ಸ್ವೀಕರಿಸಿ ಅನಂತರ ದೀನ ಮಕ್ಕಳಿಗೆ ಬಟ್ಟೆಬರೆ ಮತ್ತು ಆಟಿಕೆಗಳನ್ನು ನೀಡಲಾಗುತ್ತದೆ. ಆವಶ್ಯಕತೆ ಇರುವವರಿಗೆ ಎಂದೇ Canned ಆಹಾರಗಳನ್ನೂ ಸ್ವೀಕರಿಸಿ ನೀಡಲಾಗುತ್ತದೆ. ಒಟ್ಟಾರೆ ಹೇಳ್ಳೋದಾದರೆ ಕ್ರಿಸ್ಮಸ್‌ ಹಬ್ಬವು ಒಂದು ಮತದವರಿಗೆ ಹಬ್ಬವೇ ಆದರೂ, ಸಾಮಾನ್ಯವಾಗಿ ಒಂದು ವಿಭಿನ್ನ ಸಂಭ್ರಮವೂ ಹೌದು.

*ಶ್ರೀನಾಥ್‌ ಭಲ್ಲೆ

ಟಾಪ್ ನ್ಯೂಸ್

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Archana, abhishekam in ancestral village for Kamala’s victory!

US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.