Desi Swara:ಹೆಸರಿನ ಹಿಂದಿನ ಅಗಾಧತೆಯ ಹುಡುಕಿ…Pen ಇಲ್ಲದ Drive ಎಂಬುದೇ ಪೆನ್‌ ಡ್ರೈವ್‌!

ಪೆನ್‌ ಡ್ರೈವ್‌ಗೆ ಇರುವ ಸಂಪರ್ಕ ಸಾಧನವೂ ಅದರ ಜೀವಾಳ

Team Udayavani, Sep 9, 2023, 12:55 PM IST

Desi Swara:ಹೆಸರಿನ ಹಿಂದಿನ ಅಗಾಧತೆಯ ಹುಡುಕಿ…Pen ಇಲ್ಲದ Drive ಎಂಬುದೇ ಪೆನ್‌ ಡ್ರೈವ್‌!

ನಮ್ಮ ನಮ್ಮ ಹೆಸರಿಗೆ ಒಂದೊಂದು ಅರ್ಥವಿರುತ್ತದೆ. ಹಾಗೆಯೇ ನಾವು ಮಾಡುವ ಕೆಲಸಕ್ಕೂ, ನಮ್ಮ ಹೆಸರಿಗೂ ಹೋಲಿಕೆ ಇರಬೇಕೆಂದು ಏನಿಲ್ಲ. ಆಧುನಿಕವಾದ ತಂತ್ರಜ್ಞಾನದ ಸಾಧನಗಳು ಹಾಗೂ ಅವು ಮಾಡುವ ಕೆಲಸಗಳನ್ನು ನೋಡಿದರೆ ಕೆಲವೊಮ್ಮೆ ಹೊಂದಾಣಿಕೆ ಕಾಣಿಸಿದರೂ ಇನ್ನು ಕೆಲವೊಮ್ಮೆ ವಿಚಿತ್ರ ಹೆಸರುಗಳು ಎಂದೆನಿಸುತ್ತದೆ. ದೊಡ್ಡ ದೊಡ್ಡ ಗಾತ್ರದ ಫೈಲ್‌ಗ‌ಳನ್ನು ಶೇಖರಿಸಿ ಇಡಲು ನಾವು ಪೆನ್‌ಡ್ರೈವ್‌ ಎನ್ನುವ ಒಂದು ಚಿಕ್ಕ, ಬೆರಳಿನ ಗಾತ್ರದ ಸಾಧನದ ಮೊರೆಹೋಗುತ್ತೇವೆ. ಈ ಪದದ ಜಾಡನ್ನು ಹಿಡಿದು ಪೆನ್‌ಡ್ರೈವ್‌ ಹಾಗೂ ಅದರ ಹಿಂದಿನ ವಿವಿಧ ಅರ್ಥೈಸಿಕೊಳ್ಳುವಿಕೆಯ ಕುರಿತು ಈ ಬಾರಿಯ ಅಂಕಣದಲ್ಲಿ…

ಮೊದಲಿಗೆ ಈ ಪೆನ್‌ ಡ್ರೈವ್‌ ಎಂದರೇನು ಅಂತ ಅರ್ಥೈಸಿಕೊಳ್ಳೋಣ. ಈ ಆಧುನಿಕ ಅಥವಾ ಐಟಿ ಯುಗದಲ್ಲಿ ಪೆನ್‌ ಡ್ರೈವ್‌ ಬಗ್ಗೆ ಯಾರಿಗಾದರೂ ಏಕೆ ಹೇಳಬೇಕು? ಎಲ್ಲರಿಗೂ ಗೊತ್ತಿರುವ ವಿಷಯವೇ ಸರಿ. ಆದರೂ ಇರುವ, ಗೊತ್ತಿರುವ ವಿಷಯವನ್ನೇ ಬೇರೆ ಬೇರೆ ರೀತಿ ಹೇಳಿದಾಗ ವಿಷಯಗಳ ಗಾಢವಾಗಿ ಅರ್ಥವಾಗುತ್ತದೆ, ಆಳಕ್ಕೆ ಇಳಿಯುತ್ತದೆ.

ಇದನ್ನೇ ಹೇಳ್ಳೋದು ಗಾಢ ಅಂತ. ಸರಳವಾಗಿ ಹೇಳಿದಾಗ ವಿಷಯಗಳು ಸಲೀಸಾಗಿ ಇಳಿಯಬೇಕು. ಹೇಳುವುದನ್ನೇ ಭಾಷಾ ಹಿರಿಮೆ ಮೆರೆಯುವಂತೆ ಹೇಳಿದಾಗ ಕೇಳುಗರ ತಲೆ ಕೆಟ್ಟು ಕೆರ ಹಿಡಿಯುತ್ತದೆ. ಇದಕ್ಕೊಂದು ಉದಾಹರಣೆ ಹೇಳುವುದಾದರೆ “Internet’ ಅಥವಾ “ಅಂತರ್ಜಾಲ’. ಹೊರಮೈ ಅಥವಾ ಗೋಚರವಾಗುವಂತೆ ಇರುವುದೇ External ಅಥವಾ ಬಾಹ್ಯ ಎಂಬುದಾದರೆ ಗೋಚರವಾಗದಂತೆ ಇರುವುದು Internal ಅಥವಾ ಅಂತರ‌. ಈ ಅಂತರ ಎಂಬುದು ಅಂತರಾತ್ಮ, ಅಂತರಂಗ, ಅಂತ:ಕರಣ ಎಂದೆಲ್ಲ ರೀತಿ ಜೋಡಿಸಿ, ಹೊಲೆದು ವಿವಿಧ ಸಂದರ್ಭದಲ್ಲಿ ಬಳಸಬಹುದು.

ಮನೆಯೊಳಗಿನ ವಿಷಯ ಎಂಬುದು Internal matter ಎಂದು ಹೇಳಬಹುದು ಎಂದಾದರೆ, ನಾಲ್ಕು ಗೋಡೆಗಳ ಮಧ್ಯೆ ಇರುವುದೇ Internal matter ಎಂಬುದಾದರೆ ಸಾಮಾಜಿಕ ತಾಣದ ಗೋಡೆಗಳ ಅಲಂಕರಿಸಿ ಸಂಬಂಧವಿಲ್ಲದವರಿಗೂ ವಿಷಯ ದಾಟಿಸಿದ ಮೇಲೆ ಅಂದು ಅಂತರ ಹೇಗೆ? ವಿಷಯಗಳನ್ನು ಹೇಗೆ ಗೋಜಲು ಮಾಡಬಹುದು ಅಂತ ಅರ್ಥವಾಗಿರಬಹುದು. ಸರಳವಾದ ವಿಷಯಗಳನ್ನು ಹೀಗೆ ಗೋಜಲು ಮಾಡಿದಾಗ ಈ ಕಿವಿಯಿಂದ ಆ ಕಿವಿಗೆ ದಾಟಿ ಅಡ್ಡವಾಗಿ ಗಾಳಿಗೆ ಹೋಗುತ್ತದೆ. ತಲೆಗೆ ಹೋಗಿ ಅರ್ಥವಾಗದೇ ನಾಭಿಯನ್ನು ದಾಟಿ ಎರಡೂ ಕಾಲುಗಳ ಮೂಲಕ ನೆಲಕ್ಕೆ ಸೇರಿ ground ಆಗಿಬಿಡುತ್ತದೆ. ಅರ್ಥಾತ್‌ ದೇಹದಲ್ಲಿ ವಿಷಯವೇ ನಿಲ್ಲುವುದಿಲ್ಲ. ದೇಹದಲ್ಲಿ ಉದ್ದೂಟಾಗಿ ಸಾಗಿ ಕಳೆದೇ ಹೋಗುತ್ತದೆ.

ಸರಳವಾಗಿ ಮೇಲಿನ ವಿಷಯ ಹೇಳೋದು ಹೇಗೆ? ಮೊದಲಿಗೆ Internet ಎಂಬುದೇ ಬೇರೆ, ಸಾಮಾಜಿಕ ತಾಣ ಎಂದರೇ ಬೇರೆ. ಒಂದು ದೇಹ, ಒಂದು ಆತ್ಮ. ಅಂತರ್ಜಾಲ ಎಂಬುದು ಆತ್ಮ. ಆತ್ಮ ಎಂಬುದು ತಂಪಾದ ಗಾಳಿಯಲ್ಲಿ ಓಡಾಡುತ್ತಿದೆ ಎಂದರೆ ಅದು ಕೂತಿದ್ದ ದೇಹ ಢಮಾರ್‌ ಎಂದೇ ಅರ್ಥ. ಆತ್ಮ ಒಳಗಿದ್ದರೆ ಜೀವ. ಇಲ್ಲವಾದರೆ ಅಜೀವ. ಸಾಮಾಜಿಕ ತಾಣ ಎಂಬುದು ಬಾಹ್ಯ ಹಾಗಾಗಿ ಹೊರಮೈ. ಏನೇ ಹೇಳಿದರೂ ಡಂಗೂರವೇ ಹೌದು. ಈಗ ಪೆನ್‌ ಡ್ರೈವ್‌ ವಿಷಯಕ್ಕೆ ಬರೋಣ.

Pen Drive ಎಂಬುದು ಒಂದು ಸಾಧನ. ಒಂದು ಹೆಬ್ಬೆಟ್ಟಿನ ಆಕಾರ ಅಥವಾ ಗಾತ್ರದಲ್ಲಿ ಇರುವ ಸಾಧನ. ಅದರ ಹೊಟ್ಟೆಯಲ್ಲಿ ಅದೆಷ್ಟು ಶೇಖರಿಸಬಹುದೋ ಅಷ್ಟನ್ನು ಮಾತ್ರ ಅಥವಾ ಅದಕ್ಕಿಂತ ಕಡಿಮೆ ಮಾಹಿತಿ ಹೊತ್ತಿರುತ್ತದೆ. ಒಂದು ಕಂಪ್ಯೂಟರ್‌ನಿಂದ ಮತ್ತೊಂದು ಕಂಪ್ಯೂಟರ್‌ಗೆ ಮಾಹಿತಿಯನ್ನು ವರ್ಗಾಯಿಸಬೇಕಾದಾಗ ಬಳಸುವ ಸಾಧನ. ಎಷ್ಟು ಸರಳ ಅಲ್ಲವೇ? ಎಲ್ಲವೂ ಶುರುವಾಗೋದೇ ಇಷ್ಟು ಸರಳವಾಗಿ, ಹುಟ್ಟಿದ ಮಗುವಿನಂತೆ. ಅನಂತರ ಆಗುವ ಮಾರ್ಪಾಡು ಎಷ್ಟರ ಮಟ್ಟಿಗೆ ಎಂದರೆ ಊಹಿಸಲೂ ಆಗದಷ್ಟು.

ಪೆನ್‌ ಡ್ರೈವ್‌ ವಿಷಯಕ್ಕೂ ದೇವನೊಬ್ಬ ನಾಮ ಹಲವು ಎಂಬುದಕ್ಕೆ ನಿಕಟವಾದ ಸಂಬಂಧ, ಆದರೆ ಮಾನವನಿಗೆ ಹೋಲಿಸೋಣ ಅಷ್ಟೇ. ಪೆನ್‌ ಡ್ರೈವ್‌ ಎಂಬುದು ದೇಹವಿದ್ದಂತೆ, ಅದರೊಳಗಿರುವ ಮಾಹಿತಿ ಅಥವಾ ಡೇಟಾ ಎಂಬುದು ಆತ್ಮ. ಈ ಪೆನ್‌ ಡ್ರೈವ್‌ಗೆ ನಾನಾ ಹೆಸರುಗಳು. ಸಾಮಾನ್ಯವಾಗಿ ಭಾರತದಲ್ಲಿ ಪೆನ್‌ ಡ್ರೈವ್‌ ಎಂದು ಕರೆಸಿಕೊಳ್ಳುವ ಇದನ್ನು UKಯಲ್ಲಿ ಮೆಮೊರಿ ಸ್ಟಿಕ್‌ ಎಂದು ಹೆಸರು. ಅಮೆರಿಕದಲ್ಲಿThumb Drive ಅಥವಾ USB Flash Drive ಎಂಬ ಹೆಸರು. ಈ ಎಲ್ಲ ಹೆಸರಿಗೂ ಅದನ್ನು ಜೋಡಿಸಿರುವ ಪರಿಯೂ ಒಂಥರಾ ಹಾಸ್ಯವೇ ಸರಿ.

Pen Drive ಎಂಬ ಹೆಸರನ್ನು ಬಗೆದರೆ ಈ ಪೆನ್‌-ಡ್ರೈವ್‌ ನಲ್ಲಿ ಪೆನ್ನೂ ಇಲ್ಲ, ಡ್ರೈವೂ ಇಲ್ಲ. ಪೆನ್ನಿನ ಆಕಾರವೂ ಅಲ್ಲ, ಗಾತ್ರವೂ ಅಲ್ಲ. ಡ್ರೈವ್‌ ಅನ್ನಲು ತಂತಾನೇ ವಿಹಾರಕ್ಕೂ ಹೋಗೋದಿಲ್ಲ. ಇದೊಂದು ರೀತಿ ಹೇಗೆ ಎಂದರೆ ಮೈಸೂರು ಪಾಕ್‌ನಲ್ಲಿ ಮೈಸೂರು ನಗರವೂ ಇಲ್ಲ, ಪಾಕ್‌ ದೇಶವೂ ಇಲ್ಲ ಎಂಬಂತೆ. ಇಲ್ಲಿ ವಿಷಯ ಇಷ್ಟೇ Pendrive ಎಂಬುದನ್ನು Pen ಮತ್ತು Drive ಎಂದು ವಿಂಗಡಿಸಿ ಅರ್ಥೈಸಿಕೊಂಡರೆ ಹೀಗೇ ಆಗೋದು.

ಆದರೂ Pendrive ಎಂಬುದಕ್ಕೆ ಸರಿಯಾದ ಅರ್ಥವೇ ಇದೆ. ಒಂದು ಪೆನ್‌ ಎಂದುಕೊಂಡರೆ ಅದಕ್ಕಿರುವ ನಿಬ್‌ ಅದರ ಜೀವಾಳ ಅಥವಾ ಶಿರ. ಇದರಂತೆಯೇ ಒಂದು ಪೆನ್‌ ಡ್ರೈವ್‌ಗೆ ಇರುವ ಸಂಪರ್ಕ ಸಾಧನವೂ ಅದರ ಜೀವಾಳ. ಒಂದು ಪೆನ್‌ಗೆ ಇರುವ ಕ್ಯಾಪ್‌ನಂತೆಯೇ pendriveಗೂ ಕ್ಯಾಪ್‌ ಇರುತ್ತದೆ. ಹೇಗೆ ನಾವು ಕಾರಿನಲ್ಲಿ ಡ್ರೈವ್‌ ಅಂತ ಹೋದರೆ ನಾವೇ ಹೋಗದೇ ಬದಲಿಗೆ ಒಂದು ವಾಹನ ನಮ್ಮನ್ನು ಒಯ್ಯುತ್ತದೋ ಹಾಗೆ Pendrive ಒಳಗೆ ಮಾಹಿತಿಯೂ ಸಹ ಮಾನವನಂತೆ ಜಂ ಅಂತ ಕೂತು ಸಾಗುತ್ತದೆ. ಇದರಿಂದಾಗಿಯೇ Pendrive ಎಂಬ ಹೆಸರು.

ಇನ್ನು Thumbdrive. ಹೆಸರಿನಲ್ಲೇ ಇರುವಂತೆ ಹೆಬ್ಬಟ್ಟಿನ ಆಕಾರದಲ್ಲಿದೆ. ಇದರಲ್ಲಿ ಹೆಬ್ಬೆಟ್ಟೂ ಇಲ್ಲ, ಡ್ರೈವೂ ಇಲ್ಲ ಎನಿಸಿದರೂ, ಮೇಲೆ ಹೇಳಿದ ವಾದವೇ ಇಲ್ಲೂ ನಡೆಸಬಹುದು. ಈಗ ಏಕಲವ್ಯನ ಬಗ್ಗೆ ಆಲೋಚಿಸುವಾ. ನಾಟುವ ಬಾಣದ ಕಲೆಯ ಈ ಏಕಲವ್ಯ ಆಸ್ತಿಯೇ ಹೆಬ್ಬೆಟ್ಟು. ಆ ಹೆಬ್ಬೆಟ್ಟು ಅವನನ್ನು ಅರ್ಜುನನನ್ನೂ ಮೀರಿಸುವಂತೆ drive ಮಾಡಿರೋದು. ಆದರೆ ಅದರ Steering Wheel ಅವನ್ನು ಕಿತ್ತುಕೊಂಡು ಡ್ರೈವ್‌ ಮಾಡಲಾಗದಂತೆ ಆಗಿದ್ದು ವಿಧಿ. ನಾಟುವ ಬಾಣವೇ Pendriveನ ಸಂಪರ್ಕ ಸಾಧನ. ಅದಕ್ಕೆ ಬೇಕಿರುವುದೇ thumb. ಅದನ್ನು ನೂಕುವ ಕ್ರಿಯೆಯೇ ಡ್ರೈವ್‌. ಇಷ್ಟನ್ನೂ ಒಟ್ಟುಗೂಡಿಸಿದರೆ Thumb Drive ಅಂತ ಅಮೆರಿಕನ್ನರು ಆಲೋಚಿಸಲಿಲ್ಲ ಬದಲಿಗೆ ನನ್ನ ಅನಿಸಿಕೆ ಅಷ್ಟೇ.

ಈ ಸಾಧನದ ಹೊಟ್ಟೆಯಲ್ಲಿ ಅದಾವ ಮಾಹಿತಿ ಅಡಗಿರುತ್ತದೋ ಅದು ಕಣ್ಣಿಗೆ ಕಾಣುವುದಿಲ್ಲ. ನಮ್ಮಲ್ಲಿರುವ memoryಯಂತೆ. ಕೆಲವೊಮ್ಮೆ ಪ್ರೈಮರಿ ತರಗತಿಯಲ್ಲಿ ಆಡುತ್ತಿದ್ದ ಆಟಗಳು, ಸ್ನೇಹಿತರು, ಪರಿಸರ, ಘಟನೆ ಇತ್ಯಾದಿಗಳು ನೆನಪಿನಲ್ಲಿ ಇರುತ್ತದೆ. ಆದರೆ ಹತ್ತು ನಿಮಿಷದ ಹಿಂದೆ ಕನ್ನಡಕವನ್ನು ಅದೆಲ್ಲಿ ಇಟ್ಟಿದ್ದೇವೋ ಎಂಬ ನೆನಪು ಜಪ್ಪಯ್ಯ ಎಂದರೂ ತಲೆಗೆ ಬರುವುದೇ ಇಲ್ಲ. ಕೆಲವು ನೆನಪುಗಳೇ ಹಾಗೆ, ಮನಸಿನಲ್ಲಿ ಅಂಟಿಕೊಂಡಿರುತ್ತದೆ. ಕೆಲವು ನೆನಪುಗಳು ಕಮಲದ ಎಲೆಯ ಮೇಲಿನ ಹನಿಯಂತೆ. ಅದಾವಾಗ ಕೂರುತ್ತದೋ, ಅದಾವಾಗ ಸಂಪರ್ಕವಿಲ್ಲದೇ ಜಾರುತ್ತದೋ ಗೊತ್ತೇ ಆಗುವುದಿಲ್ಲ. ಏನನ್ನು ಹೇಳ ಹೊರಟೆ ಎಂದರೆ pendrive ಒಳಗಿರುವ ಮಾಹಿತಿಯೂ ಹಾಗೆಯೇ. ಎಲ್ಲವೂ ಚೆನ್ನ ಎಂದರೆ memory ಎಂಬುದು stick ಆಗಿರುತ್ತದೆ ಅಂದರೆ ಅಂಟಿಕೊಂಡಿರುತ್ತದೆ ಇಲ್ಲವಾದರೆ non&stick ತವದ ಮೇಲಿನ ದೋಸೆ-ಚಪಾತಿಯಂತೆ ಸಂಪರ್ಕವೇ ಇಲ್ಲದಂತೆ ಇರಬಹುದು. ಹೀಗಾಗಿ ಇದಕ್ಕೆ Memory Stick ಎಂಬ ಹೆಸರನ್ನೂ ಕೊಡಬಹುದು. ಒಟ್ಟಾರೆ ಹೇಳ್ಳೋದಾದ್ರೆ ಯಾವುದೇ ಹೆಸರಿನ ಹಿಂದೆಯೂ ಅಗಾಧವಾದ ಅರ್ಥಗಳ ಭಂಡಾರವೇ ಇರುತ್ತದೆ, ಬಗೆದು ನೋಡಿದಾಗ ಮಜಾ ಇರುತ್ತೆ. ಏನಂತೀರಾ?

*ಶ್ರೀನಾಥ್‌ ಭಲ್ಲೆ

 

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.