Desi Swara: ಇದು ವಿಶ್ವದ ಅದ್ಭುತಗಳಲ್ಲಿ ಒಂದು! ಸ್ಟೋನ್‌ ಹೆಂಜ್‌ ಎಂಬ ಒಂದು ವಿಸ್ಮಯ

ಇದನ್ನು ನೋಡಲಿಕ್ಕೆ ಪ್ರತೀ ವರ್ಷ ಲಕ್ಷಗಟ್ಟಲೇ ಜನರು ಬರುತ್ತಾರೆ

Team Udayavani, Nov 18, 2023, 2:46 PM IST

Desi Swara: ಇದು ವಿಶ್ವದ ಅದ್ಭುತಗಳಲ್ಲಿ ಒಂದು! ಸ್ಟೋನ್‌ ಹೆಂಜ್‌ ಎಂಬ ಒಂದು ವಿಸ್ಮಯ

2016ರಲ್ಲಿ ಇಂಗ್ಲೆಂಡಿನ ಬರ್ಮಿಂಗ್‌ಹ್ಯಾಮಿಗೆ ಒಂದು ವರ್ಷದ ಮಟ್ಟಿಗೆ ಕೆಲಸದ ಮೇಲೆ ಹೋಗಿದ್ದಾಗ ಕಣ್ಣು ತುಂಬ ಕನಸುಗಳು. ಮೊದಲ ಬಾರಿಗೆ ವಿಮಾನಯಾನ, ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ಕಾಲಿಟ್ಟ ಆತಂಕದ ಘಳಿಗೆ, ಮೊದಲ ಬಾರಿಗೆ ಮನೆಯವರನ್ನೆಲ್ಲ ತೊರೆದು ಸಾವಿರಾರು ಮೈಲಿಗಳಷ್ಟು ದೂರಕ್ಕೆ ಹೋಗಿದ್ದು. ಹೀಗೆ ಹಲವಾರು ಮೊದಲ ಸಲದ ಪುಳಕಗಳು. ನಾನು ಹೋಗಿದ್ದು ಆಗಸ್ಟ್‌ ತಿಂಗಳಿನಲ್ಲಿ ಆದರೂ ತಣ್ಣಗಿನ ಚಳಿ ಏರ್‌ಪೋರ್ಟ್‌ನಲ್ಲಿಯೇ ಸ್ವಾಗತಿಸಿತ್ತು. ಇಂಗ್ಲಿಷ್‌ ಚೆನ್ನಾಗಿಯೇ ಬರುತ್ತಿದ್ದರೂ ಬ್ರಿಟನ್‌ ಜನ ಕೆಲವೊಂದು ಪದಗಳನ್ನು ಜೋಡಿಸಿಯೂ ಇನ್ನು ಕೆಲವು ಪದಗಳನ್ನು ತೀರಾ ಎಳೆದು ಮಾತನಾಡಿದಾಗ ಏನೋ ಅಸ್ಪಷ್ಟತೆ. ನಿತ್ಯ ಕೆಲಸ ಮಾಡುವ ಟೀಂನ ಪರಿಚಯ ಮತ್ತು ಸ್ನೇಹಿತರು ಜತೆಗಿದ್ದರೂ ಸಹ ಹೊಸ ಜಾಗಕ್ಕೆ ಹೊಂದಿಕೊಳ್ಳಲು ಬಹಳವೇ ಸಮಯ ಬೇಕಾಯಿತು.

ಇಂಗ್ಲೆಂಡಿಗೆ ಈಗಾಗಲೇ ಹೋಗಿ ಬಂದಿದ್ದ ನಮ್ಮ ಟೀಂನ ಸದಸ್ಯರೆಲ್ಲ ಅಲ್ಲಿಗೆ ಹೋದಾಗ ಯಾವಾವ ಜಾಗಕ್ಕೆ ಹೋಗಬೇಕು, ಹೇಗೆ ಆ ಒಂದು ವರ್ಷವನ್ನು ಪ್ರವಾಸದ ದೃಷ್ಟಿಯಿಂದ ಸದುಪಯೋಗ ಪಡಿಸಿಕೊಳ್ಳಬೇಕು ಎಂದೆಲ್ಲ ಕಿವಿಮಾತು ಹೇಳಿದ್ದರು. ತಾವು ಹೋಗಿದ್ದ ಯೂರೋ ಟ್ರಿಪ್‌ ಅನ್ನು ನೆನೆಯುತ್ತ ಸ್ವಿಟ್ಜರ್‌ಲ್ಯಾಂಡ್‌, ಪ್ಯಾರಿಸ್‌, ರೋಮ್‌ ಎಂದೆಲ್ಲ ಅವರು ಬಣ್ಣಮಯವಾಗಿ ಮಾತನಾಡುತ್ತಿದ್ದಾಗ ಅಲ್ಲಿಗೆ ಒಮ್ಮೆಯಾದರೂ ಹೋಗಿ ಬರಬೇಕು ಎಂಬ ಆಸೆ ಗಟ್ಟಿಯಾಗುತ್ತಿತ್ತು. ಅದಲ್ಲದೇ ನಾವು ಇರಬೇಕಾಗಿದ್ದ ಬರ್ಮಿಂಗ್‌ಹ್ಯಾಮ್‌ ಸುತ್ತಮುತ್ತಲೂ ನೋಡಬಹುದಾದಂತಹ ಬಹಳ ಸ್ಥಳಗಳಿದ್ದವು.

ವಿಶ್ವಪ್ರಸಿದ್ಧ ನಗರ ಲಂಡನ್‌ ಕೇವಲ ಎರಡು ಗಂಟೆಗಳ ದಾರಿ. ಅಲ್ಲಿನ ಅರಮನೆ, ಅರಮನೆಯ ಮುಂದೆ ನಡೆಯುತ್ತಿದ್ದ “ಚೆಂಜಿಂಗ್‌ ಆಫ್ ಗಾರ್ಡ್ಸ್‌’ ಎಂಬ ವಿಖ್ಯಾತ ಐತಿಹಾಸಿಕ ಆಚರಣೆ, ಹಾರ್ವರ್ಡ್‌ ವಿಶ್ವವಿದ್ಯಾನಿಲಯ, ಕ್ಯಾಡಬರಿ ವರ್ಡ್‌.. ಬಹುತೇಕರು ಹೇಳುತ್ತಿದ್ದ ಪಟ್ಟಿಯಲ್ಲಿ ಈ ಹೆಸರುಗಳೇ ಖಾಯಂ ಆಗಿರುತ್ತಿದ್ದವು. ಅದರಲ್ಲಿ ಒಂದು ಪ್ರಮುಖವಾಗಿ ಎಲ್ಲರನ್ನು ಆಕರ್ಷಿಸುತ್ತಿದ್ದುದು ಎಂದರೆ ವಿಶ್ವದ ಅದ್ಭುತಗಳಲ್ಲಿ ಸ್ಥಾನ ಪಡೆದ ಸ್ಟೋನ್‌ ಹೆಂಜ್‌ ಎಂಬ ಹೆಸರಿನ ಜಾಗ!

ಅಲ್ಲಿಯವರೆಗೂ ಕರ್ನಾಟಕದ ಆಚೆಗೆ ಕಾಲಿಡದ ನಾನು ಭಾರತದಲ್ಲಿಯೇ ಇದ್ದ ವಿಶ್ವದ ಅದ್ಭುತವಾದ ತಾಜ್‌ಮಹಲ್‌ ಅನ್ನು ನೋಡಿರಲಿಲ್ಲ. ಇಂದಿಗೂ ನೋಡಿಲ್ಲ. ಹೀಗಿರುವಾಗ ವಿಶ್ವದ ಅದ್ಭುತವೊಂದನ್ನು ನೋಡುವ ಅವಕಾಶ ಮತ್ತು ಸಮಯ ಬಂದಿದೆ ಎಂದಾಗ ಬಹಳವೇ ಖುಷಿಯಾಗಿತ್ತು.

ಇಂಗ್ಲೆಂಡಿನ ವಿಲ್ಟಶೈರ್‌ ಎಂಬ ಜಾಗದಲ್ಲಿ ಇರುವ ಈ ಸ್ಟೋನ್‌ ಹೆಂಜ್‌ ಎಂಬುದು ಒಂದು ವಿಸ್ಮಯವೇ ಸರಿ. ವೃತ್ತಾಕಾರದಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನು ಹೂತಿರುವ ಮತ್ತು ವಿಚಿತ್ರ ವಿನ್ಯಾಸದಲ್ಲಿ ಕಲ್ಲುಗಳನ್ನು ಜೋಡಿಸಿರುವ ಈ ಜಾಗದ ಹಿಂದೆ ಅನೇಕ ಕತೆಗಳು, ಕಟ್ಟು ಕತೆಗಳು, ಕಲ್ಪನೆಗಳು ಹೆಣೆದುಕೊಂಡಿವೆ. ಇದು ಹೇಗೆ ಸೃಷ್ಟಿಯಾಯಿತೆಂದು ಇಲ್ಲಿಯವರೆಗೂ ಸ್ಪಷ್ಟವಾದ ನೆಲೆಗಟ್ಟು ಸಿಕ್ಕಿಲ್ಲ. ಒಂದು ಮೂಲದ ಪ್ರಕಾರ – ಕ್ರಿ.ಪೂ 3000 ಸಮಯದಲ್ಲಿ ವೃತ್ತಾಕಾರದಲ್ಲಿ ಕಲ್ಲುಗಳನ್ನು ಜೋಡಿಸಿದರಂತೆ. ಪುರಾತತ್ತ್ವ ಇಲಾಖೆಯ ಪ್ರಕಾರ ಆ ಸಮಯದಲ್ಲಿ ಈ ಜಾಗದಲ್ಲಿ ಹೆಣಗಳನ್ನು ಸುಡುತ್ತಿದ್ದರಂತೆ. ಸುಮಾರು ನೂರಾ ಐವತ್ತಕ್ಕೂ ಹೆಚ್ಚು ಹೆಣಗಳನ್ನು ಇಲ್ಲಿ ಸುಟ್ಟಿದ್ದಾರಂತೆ ಮತ್ತು ಆಗಿನ ಕಾಲಕ್ಕೆ ಒಂದೇ ಜಾಗದಲ್ಲಿ ಇಷ್ಟೊಂದು ಹೆಣಗಳನ್ನು ಸುಟ್ಟಿದ್ದು ಅದೇ ಮೊದಲಂತೆ. ಕೆಲವು ಕಲ್ಲುಗಳು ಈ ಜಾಗಕ್ಕೆ ಅದು ಹೇಗೆ ಬಂದು ಸೇರಿದವು ಎಂಬುದು ಇವತ್ತಿಗೂ ಪ್ರಶ್ನೆಯಾಗಿಯೇ ಉಳಿದಿದೆ ಎಂದು ಇತಿಹಾಸ ತಜ್ಞರು ಹೇಳುತ್ತಾರೆ.

ಇನ್ನೊಂದು ಮೂಲದ ಪ್ರಕಾರ ಈ ಜಾಗವನ್ನು ಸೂರ್ಯ, ಚಂದ್ರ ಮತ್ತು ಗ್ರಹಗಳ ಚಲನೆಯನ್ನು ಅಭ್ಯಾಸ ಮಾಡಲಿಕ್ಕೆ ಬಳಸುತ್ತಿದ್ದರಂತೆ. ಮೋಡಗಳೇ ತುಂಬಿರುವ ದೇಶ ಇಂಗ್ಲೆಂಡ್‌. ಬಚ್ಚಲು ಮನೆಯಲ್ಲಿ ನಿಂತಿದ್ದವೇನೋ ಎಂಬಂತೆ ಸದಾಕಾಲ ಸೋನೆಮಳೆ ಜಿನುಗುತ್ತಲೇ ಇರುತ್ತದೆ. ಹೀಗೆ ಮೋಡಗಳಿಂದ ಆವೃತವಾಗಿರುವ ಆಗಸದಲ್ಲಿ ಸೂರ್ಯ ಚಂದ್ರರನ್ನು ಪತ್ತೆ ಮಾಡುವುದು ಕಷ್ಟದ ಕೆಲಸವೇ. ಹಾಗಾಗಿ ಆಗಿನ ಜನರು ಈ ಜಾಗವನ್ನು ನಿರ್ಮಿಸಿ ಅದರ ಮೂಲಕ ಗ್ರಹಣ, ಆಯನ್‌ ಸಂಕ್ರಾಂತಿ, ವಿಷುವತ್‌ ಸಂಕ್ರಾಂತಿ ಇತ್ಯಾದಿಗಳನ್ನು ಗುರುತು ಮಾಡುತ್ತಿದ್ದರಂತೆ. ಇದರ ಮೂಲಕ ವರ್ಷಕ್ಕೊಮ್ಮೆ ಬರುವ ದೊಡ್ಡ ಹಗಲು ಮತ್ತು ದೊಡ್ಡ ರಾತ್ರಿಯನ್ನು ಅಭ್ಯಸಿಸಿ ಅದರ ಮೂಲಕ ದಿನಗಳನ್ನು ಗುರುತು ಮಾಡುತ್ತಿದ್ದರು ಎಂಬ ಕತೆಯಿದೆ. ಹೀಗೆ ಸ್ಟೋನ್‌ ಹೆಂಜ್‌ ಇತಿಹಾಸವನ್ನು ಹುಡುಕುತ್ತ ಹೋದರೆ ಹಲವಾರು ಕತೆಗಳು ಕಾಣಸಿಗುತ್ತವೆ.

ಈ ಜಾಗದಲ್ಲಿರುವ ಬೃಹತ್‌ ಗಾತ್ರದ ಕಲ್ಲುಗಳು ಮತ್ತು ಶತಮಾನಗಳು ಕಳೆದರೂ ಅವು ಕಿಂಚಿತ್ತೂ ಅಲುಗಾಡದೇ, ಸವೆಯದೇ ನಿಂತಿರುವ ಪರಿ ಇನ್ನೊಂದು ಅಚ್ಚರಿ. ಒಂದೊಂದು ಕಲ್ಲನ್ನು ಅಭ್ಯಸಿಸುತ್ತ ಹೋದರೆ ಅವುಗಳ ನಿಖರತೆ ಬೆರಗುಗೊಳಿಸಿ ಇದೊಂದು ಅದ್ಭುತ ಎಂದೆನ್ನಿಸುವಂತೆ ಮಾಡುತ್ತದೆ ಎಂಬ ಕಾರಣಕ್ಕೆನೇ ಇದನ್ನು ವಿಶ್ವದ ಅದ್ಭುತಗಳ ಪಟ್ಟಿಯಲ್ಲಿ ಸೇರಿಸಿದ್ದು. ಇದನ್ನು ನೋಡಲಿಕ್ಕೆ ಪ್ರತೀ ವರ್ಷ ಲಕ್ಷಗಟ್ಟಲೇ ಜನರು ಬರುತ್ತಾರೆ. ನೂರಾರು ಪುಸ್ತಕಗಳಲ್ಲಿ, ಸಿನೆಮಾಗಳಲ್ಲಿ ಇದು ದಾಖಲಾಗಿ ಹೋಗಿದೆ. ಒಂದು ಕಾಲಕ್ಕೆ ಖಾಸಗಿ ಒಡೆತನದಲ್ಲಿದ್ದ ಈ ಜಾಗ, ಮೊದಲ ಮಹಾಯುದ್ಧದಲ್ಲಿ ಆ ಕುಟುಂಬದವರೆಲ್ಲ ತೀರಿ ಹೋಗಿ, ಇನ್ನೊಬ್ಬರ ಪಾಲಾಗಿ ಕೊನೆಗೆ ಅವರು ಇದನ್ನು ಬ್ರಿಟಿಷ್‌ ಸರಕಾರಕ್ಕೆ ದೇಣಿಗೆಯಾಗಿ ನೀಡಿದರಂತೆ. ಈಗ ಬ್ರಿಟಿಷ್‌ ಸರಕಾರ ಈ ಜಾಗಕ್ಕೆ ಫೀಸ್‌ ಮಾಡಿ ಪ್ರತಿಯೊಬ್ಬರನ್ನು ಟಿಕೆಟ್‌ ಆಧಾರದ ಮೇಲೆ ಒಳಗೆ ಬಿಡುತ್ತದೆ.

ಏಳು ವರ್ಷಗಳ ಹಿಂದೆ ಸ್ಟೋನ್‌ ಹೆಂಜ್‌ ಅನ್ನು ನೋಡಲಿಕ್ಕೆ ಹೋಗುವಾಗ ನನಗೆ ಅದರ ಹಿಂದಿರುವ ಭಿನ್ನ ಕತೆಗಳಾಗಲೀ, ಇತಿಹಾಸವಾಗಲೀ, ವಿಸ್ಮಯವಾಗಲೀ ತಿಳಿದಿರಲಿಲ್ಲ. ನನ್ನ ಪಾಲಿಗೆ ಅದೊಂದು ವಿಶ್ವದ ಅದ್ಭುತವಾಗಿತ್ತು ಮತ್ತು ವಿಶ್ವದ ಅದ್ಭುತ ಹೇಗಿರುತ್ತದೆ ಎಂದು ಮೊದಲ ಬಾರಿಗೆ ನೋಡಲಿಕ್ಕೆ ನಾನು ಕಾತುರಳಾಗಿದ್ದೆ. ಆದರೆ ಆ ಜಾಗಕ್ಕೆ ಹೋದ ಕೂಡಲೇ ನನ್ನ ಉತ್ಸಾಹ ಜರ್ರನೇ ಇಳಿದು ಹೋಗಿತ್ತು. ಸುತ್ತ ಹಸುರು ಹಾಸು ಮತ್ತು ಮಧ್ಯದಲ್ಲಿ ನಿಂತಿರುವ ದೊಡ್ಡ ಕಲ್ಲುಗಳು. ಇಷ್ಟೇ ಆ ಜಾಗದಲ್ಲಿ ಕಂಡಿದ್ದು. ಇದು ವಿಶ್ವದ ಅದ್ಭುತ ಹೇಗಾಯಿತು ಎಂದು ಆ ಸಮಯದಲ್ಲಿ ಉತ್ತರ ಸಿಕ್ಕಿರಲಿಲ್ಲ. ಈಗ ಉತ್ತರ ಸಿಕ್ಕಿದೆಯಾದರೂ ಅದು ಸಮಾಧಾನಕರವಾಗಿಲ್ಲ. ಯಾಕೆಂದರೆ ಅದನ್ನು ನೋಡಿದ ಕೂಡಲೇ ನೆನಪಾಗಿದ್ದು ನಮ್ಮೂರಿನ ದೇವಾಲಯಗಳು. ಕಲ್ಲಿನಲ್ಲಿ ಕಡೆದ ಅದ್ಭುತ ಕೆತ್ತನೆಗಳು. ರಾಜ, ರಾಣಿ, ಅರಮನೆ, ನೃತ್ಯ, ಅಪೂರ್ವ ಸುಂದರಿಯರು, ಅರಮನೆಯ ದರ್ಬಾರು ಇನ್ನೂ ಅನೇಕ ಕತೆಗಳನ್ನು ಕಲ್ಲಿನ ಮೇಲೆಯೇ ನೋಡಬಹುದು. ಅನೇಕ ಜಾಗಗಳಲ್ಲಿ ಒಂದೇ ಕಲ್ಲಿನಲ್ಲಿ ಕಡೆದ ಅದ್ಭುತ ಮೂರ್ತಿಗಳಿವೆ. ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸಂಕ್ರಾಂತಿಯ ದಿನ ಸೂರ್ಯನ ಕಿರಣ ನಂದಿಯ ಕೊಂಬುಗಳ ಮಧ್ಯದಿಂದ ಹಾಯ್ದು ನೇರವಾಗಿ ಶಿವಲಿಂಗದ ಮೇಲೆ ಬೀಳುತ್ತದೆ. ಇಂತಹ ಸಮೃದ್ಧ ನಾಡಿನಿಂದ ಅಲ್ಲಿಗೆ ಹೋದ ನನಗೆ ಅದು ಸಪ್ಪೆಯಾಗಿಯೇ ಕಂಡಿತ್ತು.

ಜತೆಗೆ ಮನಸ್ಸಿಗೆ ತಾಕಿದ ಇನ್ನೊಂದು ವಿಷಯವೆಂದರೆ ಈ ವಿದೇಶಿಗರು ಅವರ ಸಂಪನ್ಮೂಲಗಳನ್ನು ರಕ್ಷಿಸಿಕೊಳ್ಳುವ ಪರಿ. ಅದು ಒಂದೇ ಒಂದು ಕಲ್ಲಾದರೂ ಸರಿ ಅದನ್ನು ಶತಮಾನಗಳವರೆಗೆ ರಕ್ಷಿಸಿಕೊಂಡು ಅದಕ್ಕೆ ವಿಸ್ಮಯ, ಅದ್ಭುತ ಎಂದೆಲ್ಲ ಹೊಗಳಿ ಅದಕ್ಕೆ ಪ್ರಾಮುಖ್ಯ ಕೊಡುತ್ತಾರೆ. ಬರಿ ತಮ್ಮದಷ್ಟೇ ಅಲ್ಲ ಬೇರೆ ದೇಶಗಳಿಂದ ಎತ್ತಿಕೊಂಡು ಹೋಗಿದ್ದನ್ನು ಸಹ ಸಂಗ್ರಹಾಲಯಗಳಲ್ಲಿ ಗ್ಲಾಸಿನ ಒಳಗಿಟ್ಟು ಅದರ ಮೇಲೆ ಬಣ್ಣದ ಲೈಟನ್ನು ತೂಗು ಬಿಟ್ಟು ಹೆಮ್ಮೆಯಿಂದ ತೋರಿಸಿಕೊಳ್ಳುತ್ತಾರೆ. ಹೀಗೆ ವಿದೇಶದ ಸಂಗ್ರಹಾಲಗಳಲ್ಲಿ “From India” ಎಂಬ ಫ‌ಲಕಗಳನ್ನು ನೋಡಿದಾಗಲೆಲ್ಲ ಮನಸ್ಸು ಮುರುಟುತ್ತದೆ. ಯಾವುದೋ ದ್ವೇಷಕ್ಕೆ ದೇವಸ್ಥಾನಗಳನ್ನು ಧ್ವಂಸ ಮಾಡುತ್ತ, ನಮ್ಮಲ್ಲಿರುವ ಕಲಾ ಸಂಪತ್ತಿನ ಬಗ್ಗೆ ಅರಿವೇ ಇಲ್ಲದೇ ಕಾಲಕಸವಾಗಿ ಕಾಣುತ್ತ, ನೈಸರ್ಗಿಕ ಸಂಪನ್ಮೂಲಗಳನ್ನು ನಾಶ ಮಾಡಿ ಸ್ವಾರ್ಥಿಗಳಾಗಿ ಹೋಗಿರುವ ನಮಗೆ ಹೀಗೆ ರಕ್ಷಿಸುವ, ಕಾಪಾಡಿಕೊಳ್ಳುವ ಸ್ವಭಾವ ಯಾವಾಗ ಬರುತ್ತದೋ.. ಈಗಿರುವ ವಿಸ್ಮಯಗಳನ್ನು ಕಾಪಾಡಿಕೊಂಡು ಹೋಗುವುದಲ್ಲದೇ ಅವುಗಳ ಬಗ್ಗೆ ಹೆಮ್ಮೆಯಿಂದ ಎಲ್ಲ ಕಡೆಗೂ ಹೇಳಿಕೊಳ್ಳುತ್ತ ಹೋದರೆ ನಮ್ಮ ದೇಶದ ಶ್ರೀಮಂತಿಕೆಯ ಬಗ್ಗೆ ವಿಶ್ವಮಟ್ಟದಲ್ಲಿ ಇನ್ನೂ ಹೆಚ್ಚಿನ ಅರಿವು ಮೂಡಿಸಲಿಕ್ಕೆ ಸಾಧ್ಯ.

*ಸಂಜೋತಾ ಪುರೋಹಿತ್‌

ಟಾಪ್ ನ್ಯೂಸ್

Chalavadi2

Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

Chalavadi

Ambedkar Row: ಕಾಂಗ್ರೆಸ್‌ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

High-Court

High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chalavadi2

Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ

Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ

Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

Chalavadi

Ambedkar Row: ಕಾಂಗ್ರೆಸ್‌ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.