Desi Swara: ಸ್ಟಾಚ್ಯೂ ಆಫ್ ಲಿಬರ್ಟಿ- ಸ್ವಾತಂತ್ರ್ಯದ ಅವಿಸ್ಮರಣೀಯ ಚಿಹ್ನೆ
ಬರ್ಥೋಲ್ಡಿ ಅವರ ಶಿಲ್ಪ ವಿನ್ಯಾಸವು ಗಾಢವಾದ ಸಂಕೇತವನ್ನು ಹೊಂದಿತ್ತು
Team Udayavani, Jul 13, 2024, 12:18 PM IST
ಸ್ಟಾಚ್ಯೂ ಆಫ್ ಲಿಬರ್ಟಿ ಒಂದು ಪ್ರಣಯ ಕಲ್ಪನೆಯಾಗಿ ಪ್ರಾರಂಭವಾಗಿ, ಅಮೆರಿಕದ ಇತಿಹಾಸದಲ್ಲಿ ವಿಶ್ವ ವಿಖ್ಯಾತ ಅವಿಸ್ಮರಣೀಯ ಸ್ವಾತಂತ್ರ್ಯದ ಚಿಹ್ನೆಯಾಗಿ ಸ್ಮಾರಕದ ಕೊಡುಗೆಯಾಗಿದೆ. ಇಂದು ಇದು ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಅಂತಾರಾಷ್ಟ್ರೀಯ ಸ್ನೇಹ, ಸ್ಫೂರ್ತಿ, ಭರವಸೆ ಮತ್ತು ಅಮೆರಿಕನ್ನರ ಆತ್ಮದ ಏಕೈಕ ಸಂಕೇತವಾಗಿ ನಿಂತಿದೆ. ಮೂಲತಃ ಫ್ರಾನ್ಸ್ ಮತ್ತು ಅಮೆರಿಕ ನಡುವಿನ ಸ್ನೇಹದ ಲಾಂಛನ ಮತ್ತು ಸ್ವಾತಂತ್ರ್ಯದ ಪರಸ್ಪರ ಬಯಕೆಯ ಸಂಕೇತವಾಗಿ ಕಲ್ಪಿಸಲಾಗಿತ್ತು.
ಇದು ಅನೇಕ ಅಂತರ್ಯುದ್ಧದ ಅನಂತರ ಗುಲಾಮಗಿರಿಯ ನಿರ್ಮೂಲನೆಯನ್ನು ಆಚರಿಸಲು ಉದ್ದೇಶಿಸಲಾಯಿತು. ಅಕ್ಟೋಬರ್ 28, 1886 ರಂದು ಸಮರ್ಪಿಸಲ್ಪಟ್ಟ ಈ ಶಿಲ್ಪವು ಸಮುದ್ರದ ಮೂಲಕ ಬರುವ ಲಕ್ಷಾಂತರ ವಲಸಿಗರಿಗೆ ಸ್ವಾಗತವನ್ನು ಕೋರುತ್ತಾ, ಹೊಸ ಜೀವನದ ನಿರೀಕ್ಷೆಯ ಬೆಳಕು ಮತ್ತು ಭರವಸೆಯನ್ನು ನೀಡುತ್ತದೆ.
ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವ
ಸ್ವಾತಂತ್ರ್ಯದ ಪ್ರತಿಮೆಯ ಚಿಂತನೆ 1865ರಲ್ಲಿ ಫ್ರಾನ್ಸ್‌ನಲ್ಲಿ ಹುಟ್ಟಿಕೊಂಡಿತು. ಫ್ರೆಂಚ್ ರಾಜಕೀಯ ಚಿಂತಕ ಮತ್ತು ದಾಸ್ಯ ನಿರಾಕಾರಕ ಎಡ್ವರ್ಡ್ ಡಿ ಲ್ಯಾಬೌಲೇ ಅವರು ಪ್ರತಿಮೆಯನ್ನು ಕನಸು ಕಂಡ ವ್ಯಕ್ತಿ, ಮತ್ತು ಶಿಲ್ಪಿ ಫ್ರೆಡ್ರಿಕ್-ಆಗಸ್ಟ್ ಬಾತೊìಲ್ಡಿ ಇದನ್ನು ವಿನ್ಯಾಸಗೊಳಿಸಿದರು. ಆದರೆ ಅವಿಭಾಜ್ಯ ಲೋಹದ ಚೌಕಟ್ಟನ್ನು ಪ್ಯಾರಿಸ್‌ನ ಐಫೆಲ್ ಟವರ್ ಅನ್ನು ನಿರ್ಮಿಸಿದ ವ್ಯಕ್ತಿಯಿಂದ ಮಾಡಲ್ಪಟ್ಟಿದೆ. ಶಿಲ್ಪವನ್ನು 1876ರಲ್ಲಿ ಅಮೆರಿಕದ ಸ್ವಾತಂತ್ರ್ಯ ಸಂಭ್ರಮಾಚರಣೆಯ ಸ್ಮರಣಾರ್ಥವಾಗಿ, ಫ್ರಾನ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ಇದ್ದ ಶಾಶ್ವತ ಸ್ನೇಹವನ್ನು ಆಚರಿಸಲು ತಯಾರಿಸಲಾಯಿತು.
ವಿನ್ಯಾಸ ಮತ್ತು ನಿರ್ಮಾಣ
ಬರ್ಥೋಲ್ಡಿ ಅವರ ಶಿಲ್ಪ ವಿನ್ಯಾಸವು ಗಾಢವಾದ ಸಂಕೇತವನ್ನು ಹೊಂದಿತ್ತು. ಲೇಡಿ ಲಿಬರ್ಟಿಯ ಆಕೃತಿಯು ಲಿಬರ್ಟಾಸ್ ಎಂಬ ರೋಮನ್ ಸ್ವಾತಂತ್ರ್ಯ ದೇವತೆಯನ್ನು ಪ್ರತಿನಿಧಿಸುತ್ತದೆ. ಗಣರಾಜ್ಯವನ್ನು ಬೆಂಬಲಿಸುವ ಜೂಲಿಯಸ್ ಸೀಸರ್‌ನ ಹತ್ಯೆಯ ಅವಧಿಯ ರೋಮನ್ ನಾಣ್ಯಗಳಲ್ಲಿ ಲಿಬರ್ಟಾಸ್ ಕಾಣಿಸಿತ್ತದೆ. ಈ ಶಿಲ್ಪವು ಬಲಗೈಯಲ್ಲಿ ಬೆಳಕು ನೀಡುವ ಮೆಣಗೆಯನ್ನು ಹಿಡಿದುಕೊಂಡಿದ್ದು, ಎಡಗೈಯಲ್ಲಿ ಅಮೆರಿಕದ ಸ್ವಾತಂತ್ರ್ಯ ಘೋಷಣೆಯ ದಿನವಾದ ಜುಲೈ 4, 1776 ಅನ್ನು ಕೆತ್ತಿರುವ ಟ್ಯಾಬುಲಾ ಅಂಸಾಟವನ್ನು ಹಿಡಿದಿದೆ.
ಪಾದಗಳಲ್ಲಿ ಮುರಿದ ಸರಪಳಿಗಳು ದಾಸ್ಯತೆಯ ಮುಕ್ತಿಯ ಸಂಕೇತವನ್ನು ಸೂಚಿಸುತ್ತವೆ. ಕಿರೀಟದ ಸುತ್ತಲೂ ಕಾಣುವ ಏಳು ಮೊನಚುಗಳು ಸಾಗರಗಳು ಮತ್ತು ಖಂಡಗಳನ್ನು ಪ್ರತಿನಿಧಿಸುತ್ತವೆ ಮತ್ತು ವಿಶ್ವದ ಸ್ವಾತಂತ್ರ್ಯ ಸಂದೇಶವನ್ನು ಒತ್ತಿಹೇಳುತ್ತದೆ. ಶಿಲ್ಪದ ನಿರ್ಮಾಣವು ಆ ಕಾಲದ ತಾಂತ್ರಿಕತೆಯಲ್ಲಿ ಒಂದು ಅದ್ಭುತವಾಗಿತ್ತು.
ಈ ನಿರ್ವಾಹಕ ಸ್ಥಾಪನೆಯ ಯೋಜನೆ ಐಫೆಲ್ ಟವರ್‌ನ ನಿರ್ಮಾಣಕಾರ ಗಸ್ಟವ್ ಐಫೆಲ್ ಅವರಿಂದ ರೂಪಿಸಲ್ಪಟ್ಟಿತ್ತು. ಆಂತರಿಕ ಸ್ಥಾಪನೆ ಕಬ್ಬಿಣದಿಂದ ಮಾಡಲ್ಪಟ್ಟಿದ್ದು, ಹೊರಗಿನ ಮೇಲ್ಭಾಗವು ತಾಮ್ರದ ಚಹರೆಗಳಿಂದ ಮಾಡಲ್ಪಟ್ಟಿದೆ, ಕಾಲಕ್ರಮೇಣ ಆಕ್ಸಿಡೀಕೃತವಾಗಿ(ಆಕ್ಸಿಡೈಸಾಗಿ) ಶಿಲ್ಪವು ವಿಶಿಷ್ಟ ಹಸುರು ಮಸುಕಿನ ಬಣ್ಣವನ್ನು ಪಡೆದುಕೊಂಡಿದೆ. 225 ಟನ್ ತೂಕದ ಮೂಲ ಶಿಲ್ಪವು 151 ಅಡಿ ಎತ್ತರವಿದ್ದು, ವೇದಿಕೆ ಮತ್ತು ತಳಹದಿಯನ್ನು ಸೇರಿಸಿ 305 ಅಡಿ ಎತ್ತರಕ್ಕೆ ತಲುಪುತ್ತದೆ.
ಹಣಕಾಸಿನ ಸವಾಲು
ಈ ಯೋಜನೆಗೆ ಹಣಕಾಸಿನ ಸವಾಲುಗಳು ಎದುರಾದವು. ಫ್ರಾನ್ಸ್ ಮತ್ತು ಅಮೆರಿಕ ಸಾರ್ವಜನಿಕ ಶುಲ್ಕ, ಮನೋರಂಜನ ಕಾರ್ಯಕ್ರಮ ಮತ್ತು ಲಾಟರಿ ಮೂಲಕ ನಿಧಿಸಂಗ್ರಹ ಮಾಡಲಾಯಿತು. ಶಿಲ್ಪವು 1884ರಲ್ಲಿ ಫ್ರಾನ್ಸ್‌ನಲ್ಲಿ ಪೂರ್ಣಗೊಂಡು, 350 ವಿಭಜಿತ ತುಂಡುಗಳಾಗಿ, 214 ಪೆಟ್ಟಿಗೆಯಲ್ಲಿ ರವಾನಿಸಲಾಯಿತು. ಇಂದಿನ ಲಿಬರ್ಟಿ ದ್ವೀಪ, ಹಿಂದಿನ ಹೆಸರಿನ ಬೆರ್ಡೋಸ್ ದ್ವೀಪದಲ್ಲಿ, ನಾಲ್ಕು ತಿಂಗಳುಗಳಲ್ಲಿ ಮರು ಜೋಡಣೆ ಮಾಡಲಾಯಿತು. ಪೀಠವು ಎಪ್ರಿಲ್ 1886ರಲ್ಲಿ ಪೂರ್ಣಗೊಂಡಿತು. ಅಂತಿಮವಾಗಿ, ಅಕ್ಟೋಬರ್ 28, 1886 ರಂದು ಅಧ್ಯಕ್ಷ ಗ್ರೋವರ್ ಕ್ಲೀವ್‌ಲ್ಯಾಂಡ್ ಸಾವಿರಾರು ಪ್ರೇಕ್ಷಕರ ಮುಂದೆ ಲಿಬರ್ಟಿ ಪ್ರತಿಮೆಯನ್ನು ಸಮರ್ಪಿಸಿದರು.
ಶತಮಾನಗಳ ವರೆಗೆ ಈ ದ್ವೀಪವು ಲೆನಾಪೆ ಸ್ಥಳೀಯ ಜನರಿಗೆ ಮತ್ತು ಅನಂತರದ ಡಚ್ ವಸಾಹತುಗಾರರಿಗೆ ಆಹಾರದ ಪ್ರಮುಖ ಮೂಲವಾಗಿತ್ತು. 1807ರಲ್ಲಿ, ಯುಎಸ್ ಸೈನ್ಯವು ದ್ವೀಪವನ್ನು ಮಿಲಿಟರಿ ಪೋಸ್ಟ್ ಎಂದು ಪರಿಗಣಿಸಿತು. ನ್ಯೂಯಾರ್ಕ್ ಬಂದರನ್ನು ರಕ್ಷಿಸಲು 11 ಪಾಯಿಂಟ್ ಕೋಟೆಯನ್ನು ನಿರ್ಮಿಸಿತು. ಅನಂತರ ಫೋರ್ಟ್ ವುಡ್ ಎಂದು ಮರುನಾಮಕರಣ ಮಾಡಲಾಯಿತು, ಈ ರಚನೆಯು ಈಗ ಪ್ರತಿಮೆಯ ಪೀಠಕ್ಕೆ ಆಧಾರವಾಗಿ ಕಾರ್ಯನಿರ್ವಹಿಸುತ್ತದೆ.
1903ರಲ್ಲಿ, “ದಿ ನ್ಯೂ ಕೊಲೋಸಸ್’ ಅನ್ನು ಹೊಂದಿರುವ ಫಲಕವನ್ನು ಪೀಠದಲ್ಲಿ ಇರಿಸಲಾಯಿತು. ಅದರೊಂದಿಗೆ ಲೇಡಿ ಲಿಬರ್ಟಿಯ ಮಹತ್ವವು ಅಮೆರಿಕಕ್ಕೆ ಹೋಗುವ ದಾರಿಯಲ್ಲಿ ಸಾಗಿದ ವಲಸಿಗರಿಗೆ ಸ್ಫೂರ್ತಿಯಾಗಿ ಬೆಳೆಯಿತು.
ಸಾವಿರಾರು ವರ್ಷಗಳ ಕಾಲ, ಶಿಲ್ಪವು ರಚನಾತ್ಮಕ ಹವಾಮಾನದ ಸಮಸ್ಯೆಗಳನ್ನು ಅನುಭವಿಸಿದೆ. ಲೇಡಿ ಲಿಬರ್ಟಿಗೆ ಪ್ರತೀ ವರ್ಷ ಸುಮಾರು 600 ಬಾರಿ ಸಿಡಿಲು ಮತ್ತು ಮಿಂಚುಗಳನ್ನು ತಡೆದುಕೊಳ್ಳಬೇಕು. ಹೆಚ್ಚಿನ ಗಾಳಿಯಲ್ಲಿ, ದೀವಟಿಗೆ ಸುಮಾರು 5 ಇಂಚುಗಳಷ್ಟು ಅಕ್ಕಪಕ್ಕದಲ್ಲಿ ಚಲಿಸುತ್ತದೆ!
1980ರ ದಶಕದಲ್ಲಿ ಪ್ರತಿಷ್ಠಾನವು ತನ್ನ ಶತಮಾನೋತ್ಸವದ ಆಚರಣೆಗಾಗಿ ಪ್ರತಿಮೆಯನ್ನು ಮರುಸ್ಥಾಪಿಸುತ್ತಿರುವಾಗ, ತಜ್ಞರ ತಂಡವು ಮೂಲ ಜ್ಯೋತಿಯನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿತು. ಒಂದು ಶತಮಾನದ ಮಾರ್ಪಾಡುಗಳು ಬಾರ್ಥೋಲ್ಡಿಯ ಘನ ತಾಮ್ರದ ಜ್ವಾಲೆಯನ್ನು ಮುಖ್ಯವಾಗಿ ಗಾಜಿನಂತೆ ಆಮೂಲಾಗ್ರವಾಗಿ ಬದಲಾಯಿಸಿದವು.
ಮಳೆಯಿಂದ ಸೋರಿಕೆ ಮತ್ತು ಅಂಶಗಳಿಂದ ಸವೆತವು ಹ್ಯಾಂಡಲ್‌ನ ಮೇಲಿರುವ ಮೂಲ ಟಾರ್ಚ್ ಅನ್ನು ಸರಿಪಡಿಸಲಾಗದಷ್ಟು ಹಾನಿಗೊಳಿಸಿದೆ. ಇದನ್ನು ಜುಲೈ 4, 1984ರಂದು ತೆಗೆದುಹಾಕಲಾಯಿತು ಮತ್ತು ಬಾರ್ತೋಲ್ಡಿಯ ವಿನ್ಯಾಸವನ್ನು ಅನುಸರಿಸಿದ ಪ್ರತಿಕೃತಿಯೊಂದಿಗೆ ಬದಲಾಯಿಸಲಾಯಿತು. ಇಂದು, ರಾಷ್ಟ್ರೀಯ ಉದ್ಯಾನ ಸೇವಾಸಂಸ್ಥೆ ಶಿಲ್ಪವನ್ನು ಭವಿಷ್ಯದ ತಲೆಮಾರಿಗಾಗಿ ರಕ್ಷಣೆ ಮಾಡುತ್ತಿದೆ.
ಇಂದು, ಸ್ಟಾಚ್ಯೂ ಆಫ್ ಲಿಬರ್ಟಿ ಮ್ಯೂಸಿಯಂನ ಸ್ಫೂರ್ತಿ ಗ್ಯಾಲರಿಯಲ್ಲಿ ಮೂಲ ಟಾರ್ಚ್ ಅನ್ನು ಪ್ರದರ್ಶಿಸಲಾಗುತ್ತದೆ. ಅನೇಕ ವಲಸಿಗರಿಗೆ, ಸ್ವಾತಂತ್ರ್ಯದ ಪ್ರತಿಮೆ ಅಮೆರಿಕದ ಮೊದಲ ದೃಶ್ಯವಾಗಿದ್ದು, ಹೊಸ ಅವಕಾಶಗಳು ಮತ್ತು ಸ್ವಾತಂತ್ರ್ಯದ ಭರವಸೆಗಳನ್ನು ಸೂಚಿಸುತ್ತದೆ.
*ಡಾ| ಬ. ರಾ. ಸುರೇಂದ್ರ, ನ್ಯೂಯಾರ್ಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Tollywood: ಲೋಕೇಶ್, ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್ ಎಂಟ್ರಿ?
UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.