Desi Swara: ಅವ – ಇವ ಎಂಬ ಮಾತುಗಳ ಅವಯವ : ಪದಗಳ ವನ್ಯಲೋಕದಲ್ಲಿ
ಇಲ್ಲಿ ಅವ ಎಂಬ ಪದ ಗುಣಕ್ಕೆ ಸೇರಿದಾಗ ಋಣಾತ್ಮಕವಾಗಿ ಮಾರ್ಪಾಡಾಗುತ್ತದೆ.
Team Udayavani, Nov 30, 2024, 2:34 PM IST
ಮೊದಲಿಗೆ ಈ ಅವಯವ ಅಂದ್ರೇನು? ಸಿಂಪಲ್ ಆಗಿ ಹೇಳಿದರೆ ಕೈಕಾಲುಗಳು. ಚಲನೆಗೆ ಸಹಾಯ ಮಾಡುವ ಅಥವಾ ಚಾಲೆನೆಯುಳ್ಳ ಅಂಗವೇ ಈ ಅವಯವ. ಒಟ್ಟಾರೆ ಚಲನಾಂಗಗಳು. ಈ ಪದಕ್ಕೆ ವನ್ಯಲೋಕದಲ್ಲಿ ಬೇರೆ ಅರ್ಥವೂ ಇದೆ. ಮರದ ಮುಖ್ಯ ಕೊಂಬೆ ಅದರ ಅವಯವ. ಈ ಮುಖ್ಯ ಕೊಂಬೆಯಿಂದಲೇ ಮುಂದಿನ ಬೆಳವಣಿಗೆ ಆಗಿರುವುದರಿಂದ ಅವು ಚಲನಾಂಗಗಳೇ ಸರಿ.
ಅವಯವ ಎಂದರೆ ಚಲನಾಂಗಗಳು ಎಂದಾಗಿರುವಾಗ ಕಸಿ ಮಾಡುವಿಕೆ ಎಂದರೇನು ಎಂದು ತಿಳಿದುಕೊಳ್ಳೋಣ. ನಮ್ಮದೇ ದೇಹದ ಅಂಗಗಳನ್ನು ಕಸಿ ಅಥವಾ ಗ್ರಾಫ್ಟಿಂಗ್ ಮಾಡಬಹುದೇ? ಎರಡು ಗಿಡಗಳನ್ನು ಜೋಡಣೆ ಮಾಡುವಂತೆ ನಮ್ಮಲ್ಲಿನ ಅಂಗಗಳ ಒಂದು ಭಾಗವನ್ನು ಕೊಯ್ದು ಜೋಡಿಸಲಾಗದು ಆದರೆ ಪೂರ್ಣವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಬಹುದು. ಅದೇ transplantation.
ಹೇಳಿದಷ್ಟು ಸುಲಭವಲ್ಲ ಬಿಡಿ. ಈ ವಿಷಯ ಏಕೆ ಹೇಳಿದೆ ಎಂಬುದೇ ವಿಷಯದ ಗ್ರಾಫ್ಟಿಂಗ್. ಅವಯವ ಎಂಬ ಪದವನ್ನು ಗ್ರಾಫ್ಟಿಂಗ್ ಮಾಡಿ ಒಂದೆಡೆ “ಅವ’ ಮಾತ್ರ ಇಟ್ಟುಕೊಂಡು ಮಿಕ್ಕ ಭಾಗಕ್ಕೆ ಬೇರೆಬೇರೆ ಪದಗಳನ್ನು ಜೋಡಿಸಿ ಅಲ್ಲಿ ಮೂಡಿದ ಹೊಸ ಪದವನ್ನು ಕೊಂಚ ಅರ್ಥೈಸಿಕೊಳ್ಳುವ. ಕೊಂಚ ಬೇರೆಡೆ ಎಕ್ಸಿಟ್ ತೆಗೆದುಕೊಂಡು ಮತ್ತೆ ಇಲ್ಲಿಗೇ ಬರೋಣ. “ಅವ’ ಬಗ್ಗೆ ಹೇಳಿದ ಮೇಲೆ “ಇವ’ ಬಗ್ಗೆ ಹೇಳದೇ ಹೋದರೆ ಹೇಗೆ? ಈ “ಅವ’ ಮತ್ತು “ಇವ’ ಎಂಬ ಪದಗಳ ವಿಶೇಷತೆ ಏನೆಂದರೆ ಅವು ಪೂರ್ಣಪದಗಳೂ ಹೌದು, ತುಂಡರಿಸಿದ ಅಥವಾ grafted ಪದಗಳೂ ಹೌದು.
“ಅವ’ ಎಂಬ ತುಂಡಾದ ಪದಕ್ಕೆ ನು, ಳು, ರು ಎಂಬುದನ್ನು ಕಸಿ ಮಾಡಿದಾಗ ಮೂಡುವ ಸುಂದರ ಪದಗಳೇ ಅವನು, ಅವಳು, ಅವರು ಎಂಬ ಪೂರ್ಣಪದಗಳು. “ಇವ’ ಎಂಬ ತುಂಡಾದ ಪದಕ್ಕೆ ನು, ಳು, ರು ಎಂಬುದನ್ನು ಕಸಿ ಮಾಡಿದಾಗ ಮೂಡುವ ಸುಂದರ ಪದಗಳೇ ಇವನು, ಇವಳು, ಇವರು ಎಂಬ ಪೂರ್ಣಪದಗಳು. ಈ ಅವ ಮತ್ತು ಇವ ಪದಗಳು ವ್ಯಕ್ತಿಗಳನ್ನೇ ಸೂಚಿಸಿದರೂ ವ್ಯತ್ಯಾಸ ಬರುವುದು ಅಂತರದಲ್ಲಿ. ಪಕ್ಕದಲ್ಲಿರುವವರು ‘ಇವ, ದೂರದಲ್ಲಿದ್ದರೆ “ಅವ’. ಕನ್ನಡ ಚಲನಚಿತ್ರವಾದ “ಶ್’ ಚಿತ್ರದ ಹಾಡನ್ನು ಗಮನಿಸಿ. “ಅವನಲ್ಲಿ ಇವಳಿಲ್ಲಿ’ ಎಂಬ ಹಾಡಿನಲ್ಲಿನ “ಅವ’ ಮತ್ತು “ಇವ’ ಪದಬಳಕೆ. ಈ ಹಾಡಿನ ಸಾಲುಗಳಿಂದಲೂ, ಅವ ಮತ್ತು ಇವ ಎಂಬುದು ಅಂತರದ ಬಗ್ಗೆಯೇ ಹೇಳಲಾಗುತ್ತದೆ ಎಂಬುದು ಖಚಿತವಾಗುತ್ತದೆ.
“ಅವ’ ಎಂದಾಗ ದೂರದವರೇ ಆಗಿರುವುದರಿಂದ ಅದಕ್ಕೆ ಹೆಚ್ಚು ತಲೆ ಬಿಸಿಯೇ ಬೇಡ ಆದರೆ ಬದಿಯಲ್ಲೇ ಇರುವವರನ್ನು ಅಥವಾ ಬಗಲಲ್ಲೇ ಇರುವವರನ್ನು ದೂರದವರಂತೆ ಕಾಣುವ ಪರಿಯ ಬಗ್ಗೆಯೇ ಅಲ್ಲವೇ ಬಸವಣ್ಣನವರು ಹೇಳಿರೋದು? “ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ’. ಇವನ್ಯಾರೋ ಏನೋ ಎಂಬ ಭಾವ ಎನ್ನಲಿ ಮೂಡದಿರಲಿ, ಎಲ್ಲರೂ ಕೂಡಲ ಸಂಗಮನ ಮಕ್ಕಳೇ ಎಂಬ ಭಾವವೇ ಎನ್ನಲ್ಲಿ ಸದಾ ಮೂಡಲಿ ಎಂಬುದೇ ವಚನದ ಅರ್ಥವಿರಬಹುದೇ?
ಈ ವಚನದ ಮಾತುಗಳನ್ನು ಬಸವಣ್ಣನವರು ಇತರರಿಗೆ ಹೇಳಿರಬಹುದು, “ಎಂದೆಣಿಸದಿರಯ್ಯಾ’ ಎಂದು ಹೇಳುವ “ಮೂಲಕ ಲೋಕವನ್ನು ಎಚ್ಚರಿಸಿದ್ದಾರೆ ಎಂದುಕೊಂಡಿದ್ದೆ ಆದರೆ ಪದ ಬಳಕೆಯು “ಎಂದೆನಿಸದಿರಯ್ಯಾ’ ಎಂದಾಗ ಅವರ ಬಗ್ಗೆಯೇ ಹೇಳಿಕೊಳ್ಳುವ ಮೂಲಕ ಮೊದಲಿಗೆ ಅಂತರಂಗ ಶುದ್ಧಿ ಅನಂತರ ಬಹಿರಂಗ ಶುದ್ಧಿಯಾಗುತ್ತಿದೆ ಎನಿಸತೊಡಗಿತು.
ಈಗ ಅಂತರಂಗ ಎಂಬ ಪದ ಬಳಸಿದೆ.
ಸಾಮಾನ್ಯವಾಗಿ ಕಸಿ ಮಾಡುವಿಕೆಯ ಚಿತ್ರ ನೋಡಿದಾಗ ಅಥವಾ ಚಿತ್ರಣ ಮೂಡಿಸಿಕೊಂಡಾಗ ಅದನ್ನು ಬಲಬದಿಯಲ್ಲಿ ಕತ್ತರಿಸಿದಂತೆ ಕಾಣುತ್ತದೆ. ನಾವು ಎಡಬದಿಯಲ್ಲಿ ಜೋಡಿಸುತ್ತಾ ಸಾಗೋಣ. “ರಂಗ’ ಮೂಲ. “ತ’ ಸೇರಿದಾಗ “ತರಂಗ’. ಇದಕ್ಕೆ “ಅಂ’ ಸೇರಿದಾಗ “ಅಂತರಂಗ’. ಅಂತರಂಗ ಶುದ್ಧಿಯಾಗಬೇಕೆಂದರೆ ರಂಗನೆಂಬ ತರಂಗಗಳು ಹೆಚ್ಚಬೇಕು. ಇಂಥಾ ತರಂಗಗಳು ಅನಂತವಾದಾಗ ಅದು “ಅನಂತರಂಗ’ವಾಗುತ್ತದೆ. ಅವನ ಗುಣಗಳನ್ನು ಸ್ಮರಿಸಿದರೆ ಗುಣಾಂತರಂಗವೂ ಆಗುತ್ತದೆ, ಮುಂದೆ ಅದು ಸುಗುಣಾಂತರಂಗವೂ ಆಗುತ್ತದೆ.
ಒಂದೊಂದೂ ಕೊಂಬೆಯನ್ನು ನಾವು ಹೇಗೆ ಕಸಿ ಮಾಡುತ್ತಾ ಬೆಳೆಸುತ್ತೇವೆಯೋ ಅದರಂತೆ ಭಾಷೆಯೂ ಬೆಳೆಯುತ್ತದೆ, ಬುದ್ಧಿಯೂ ಬೆಳೆಯುತ್ತದೆ. ವಿಷಯಾಂತರವಾಗಿ ಬಹಳ ಸಮಯವಾಯ್ತು. ಮತ್ತೆ ‘ಅವ’ ಎಂಬ ಪದಕ್ಕೆ. ಈ “ಅವ’ದಲ್ಲಿ “ಅ’ ಎಂಬುದು ಸ್ವರ ಎಂಥದ್ದು ಎಂದರೆ, “ವ’ ಎಂಬುದರ ಹಿಂದೆಯೇ ಸೇರಿ ಅದನ್ನು “ಅವರ್ಗೀಯ ವ್ಯಂಜನ’ ಎಂಬ ಪಟ್ಟ ದೊರಕಿಸಿಕೊಟ್ಟಿದೆ. “ಅವ’ ಪದದ ಈ ಮೊದಲ ಕಸಿಯನ್ನು “ಅವರ್ಗೀಯ’ಕ್ಕೆ ನೀಡಬಹುದೇ? ಒಂದರ್ಥದಲ್ಲಿ ಸರಿ, ಮತ್ತೊಂದರ್ಥದಲ್ಲಿ ಇಲ್ಲ. ಹೇಗೆ? “ಅವ’ ಎಂಬುದನ್ನು ಮತ್ತೂ ಕಸಿ ಮಾಡಿ “ಅ’ ಮತ್ತು “ವ’ ಎಂದು ಮಾಡಿದಾಗ ಮಾತ್ರ ಅದು ಸರಿಯಾದ ಕಸಿ. “ಅವ’ ಎಂಬುದಕ್ಕೆ “ರ್ಗೀಯ’ ಎಂಬುದನ್ನು ಸೇರಿಸಲಾಗದು.
“ರ್ಗೀಯ’ ಎಂಬ ಪದವೇ ಇಲ್ಲವಲ್ಲ!
ಈಗ ಮತ್ತೊಂದು ಆಲೋಚನೆ. ಕಸಿ ಮಾಡುವಿಕೆಯ ವಿಚಾರವನ್ನೇ ಪದಗಳನ್ನು ಬೆಳೆಸುವ ವಿಚಾರದಲ್ಲಿ ಚಿಂತನೆ ಮಾಡುವಾಗ, “ಅವ’ ಪದವನ್ನೇ ಉದಾಹರಣೆಯಾಗಿ ತೆಗೆದುಕೊಂಡು ಅದಕ್ಕೆ ಸೇರಿಸುವಾ ಆ ಮಗದೊಂದು ಪದ ಇರಲೇಬೇಕೆ? ಹೌದು ಇರಬೇಕು ಎಂದರೆ ಈಗಾಗಲೇ ವ್ಯಾಕರಣದಲ್ಲಿ ಕಸಿ ಮಾಡಿಯಾಗಿದೆ. ಅದೇ ಅಲ್ಲವೇ ಸಂಧಿ, ಸಮಾಸಗಳು? ಗ್ರಾಫ್ಟಿಂಗ್ ಎಂಬುದು ಗ್ರಾಮರ್‌ನಲ್ಲಿ ಈಗಾಗಲೇ ಹಾಸುಹೊಕ್ಕಾಗಿದೆ. ಹಾಗಾಗಿ “ಅವರ್ಗೀಯ’ ಪದ ಖಂಡಿತ ಸಲ್ಲುತ್ತದೆ. ಪುಷ್ಪದ ಚೆಲುವು ಮತ್ತು ಸುವಾಸನೆಯನ್ನು ಚೆಲ್ಲಬಲ್ಲದು.
“ಅವಕಾಶ’
ಜೀವನದಲ್ಲಿ ಅವಕಾಶಗಳು ಬಂದು ಬಾಗಿಲು ತಟ್ಟುತ್ತದೆ ಆದರೆ ಆಲಿಸುವ ಕಿವಿ ಇಲ್ಲದೇ ಹೋದಾಗ, ಸ್ಪಂದಿಸುವ ಹೃದಯ ನಿಷ್ಕ್ರಿಯವಾದಾಗ ಆ ಅವಕಾಶಗಳು ಹಾಗೆಯೇ ಸಾಗಿಬಿಡುತ್ತದೆ. ಶ್ರೀನಿವಾಸನಿಗೆ ಆ ಶ್ರೀನಿವಾಸ ಮೂಗುತಿಯ ಸಂದರ್ಭವನ್ನು ಸೃಷ್ಟಿಸಿ ಒಂದು ಅವಕಾಶ ನೀಡಿದ್ದೇ ಪುರಂದರದಾಸರಾಗಲು ಸಾಕಿತ್ತು. ಮರಣಾವಸ್ಥೆಯಲ್ಲಿದ್ದ ಕನಕ ನಾಯಕನಿಗೆ ಆ ಆದಿ ಕೇಶವ ನೀಡಿದ್ದು ಒಂದು ಸುವರ್ಣ ಅವಕಾಶ. ಕನಕ ನಾಯಕ “ಕನಕದಾಸರಾದರು. ಅವಕಾಶಗಳು ಟೈಮ್ ಸಿಕ್ಕಾಗಲೆಲ್ಲ ಬಂದೂ ಬಂದೂ ಬಾಗಿಲು ಬಡಿಯೋದಿಲ್ಲ. ಅವ ನೀಡಿದಾದ ಅವಕಾಶ ಬಳಸಿಕೊಳ್ಳಬೇಕು ಮಾಡದೇ ಸಾವಕಾಶ.
ಗುಣಾವಗುಣಗಳ ಬಗ್ಗೆ ಕೇಳಿಯೇ ಇರುತ್ತೀರಾ. ಇಲ್ಲಿ ಅವ ಎಂಬ ಪದ ಗುಣಕ್ಕೆ ಸೇರಿದಾಗ ಋಣಾತ್ಮಕವಾಗಿ ಮಾರ್ಪಾಡಾಗುತ್ತದೆ.
ಗುಣದಲ್ಲಿ ಎಷ್ಟು ಒಳಿತಿದೆಯೋ ಅಷ್ಟೇ ಒಳಿತು ಅವಗುಣದಲ್ಲೂ ಇದೆಯಂತೆ ಆದರೆ ನೋಡುವ ಬಗೆ ಭಿನ್ನವಾಗಿರಬೇಕು. ಜಯವಿಜಯರ ವಿಷಯದಲ್ಲಿ ನಾರಾಯಣನು ನೀಡಿದ್ದು ಎರಡು ಆಯ್ಕೆಗಳು. ಗುಣಭರಿತರಾಗಿದ್ದರೆ ಭಗವಂತನ ಬಳಿ ವಾಪಸ್ ಬಂದು ಸೇರಲು ಏಳು ಜನ್ಮ ಕಾಯಬೇಕಿತ್ತು ಎಂದೇ ಅವರುಗಳು ಅವಗುಣರಾಗಿ ಮೂರೇ ಜನ್ಮಕ್ಕೆ ದ್ವಾರಪಾಲಕ ವೃತ್ತಿಗೆ ಮರಳಿದರು. ಸಂಪೂರ್ಣ ಗುಣಭರಿತವಾದ ಚಿನ್ನ ಟೊಳ್ಳು ಎಂದೇ ಕೊಂಚ ಅವಗುಣ ಗುಣವನ್ನು ಸೇರಿಸಲಾಗುತ್ತದೆ.
ಗುಣದೊಂದಿಗೆ ಅವ ಸೇರಬೇಕೇ ವಿನಃ, ಅವಗುಣವೇ ಗುಣವನ್ನು ನುಂಗಬಾರದು. ಇವ ಬಗಲಲ್ಲೇ ಇರುವುದರಿಂದ ಹೆಚ್ಚು ಹೇಳಿಲ್ಲ. ಅವ ದೂರದಲ್ಲಿ ಇರುವುದರಿಂದ “ಅವ’ನನ್ನ “ಇವ’ನನ್ನಾಗಿಸುವ ಯತ್ನ ಮಾಡೋಣ. ಅವನ ಧ್ಯಾನದಲ್ಲಿ ಅವಧಾನಿಗಳಾಗೋಣ. ಅವನಿಸುತೆಯನಾಥ ಅವನಿಚ್ಛೆಯಂತೆ ನಡೆಸಲಿ.
*ಶ್ರೀನಾಥ್ ಭಲ್ಲೇ, ರಿಚ್ಮಂಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.