Desi swara: ಭೂತವನ್ನು ಬಿಡದ ಆಕರ್ಷಕ ನಗರ ಯಾರ್ಕ್‌!

ಯುರೋಪ್‌ನ ಪಿಶಾಚಗ್ರಸ್ತ ನಗರದ ಸುತ್ತ.....

Team Udayavani, Oct 31, 2023, 12:05 PM IST

Desi swara: ಭೂತವನ್ನು ಬಿಡದ ಆಕರ್ಷಕ ನಗರ ಯಾರ್ಕ್‌!

ಇಂಗ್ಲೆಂಡಿನ ಉತ್ತರ ಭಾಗದಲ್ಲಿಯ ಈ ಆಕರ್ಷಕ ನಗರ “ಭೂತ ಇತಿಹಾಸ’ಕ್ಕೆ ಎಷ್ಟು ಪ್ರಸಿದ್ಧವೋ ಯೂರೋಪ್‌ನ ಅತ್ಯಂತ “ಪಿಶಾಚಗ್ರಸ್ತ ನಗರ’ ಅಂತಲೂ ಅಷ್ಟೇ ಕುಪ್ರಸಿದ್ಧ! ವರ್ಷವಿಡೀ ಆಬಾಲ ವೃದ್ಧ ಪ್ರವಾಸಿಗರಿಂದ ತುಂಬಿದ ಈ ಊರಿಗೆ ಪ್ರತೀ ವರ್ಷ ಬಂದ 9 ದಶಲಕ್ಷ ಜನ, ಒಂದು ಬಿಲಿಯನ್‌ ಪೌಂಡ್‌ಗಳಷ್ಟು ಆದಾಯ ತರುತ್ತಾರೆಂದರೆ ಆಶ್ಚರ್ಯವಾಗಬಹುದು (2022ರ ಅಂಕಿಅಂಶ). ಭಾರತದ ಕ್ರಿಕೆಟಾಭಿಮಾನಿಗಳಿಗೆ ಲಂಡನ್‌ನ ಅನಂತರ ಮಹತ್ವದ ಪ್ರವಾಸಿ ತಾಣ ಬಹುಶಃ ತೆಂಡುಲ್ಕರ್‌ ಖ್ಯಾತಿಯ ಯಾರ್ಕ್‌ ಶೈರ್‌ ಇರಬೇಕು. ಈ ಪ್ರಾಂತದ ಒಂದು ಕಾಲದ ಪ್ರಮುಖ ನಗರವೇ ಯಾರ್ಕ್‌.

ಇಂದಿಗೂ ಯಾರ್ಕ್‌ ಅತ್ಯಂತ ಆಕರ್ಷಕ ಸಿಟಿಯಾಗಿ ಉಳಿದಿದೆ. ಅದರಲ್ಲಿಯೂ ಹದಿಮೂರನೆಯ ಶತಮಾನದ ಬೃಹತ್‌ ಕೆಥಿಡ್ರಲ್‌ (ಮಿನ್ಸ್‌ ಟರ್‌ ಎಂದು ಇಲ್ಲಿ ಕರೆಯುತ್ತಾರೆ), ಅದೇ ಸಮಯದಲ್ಲಿ ಊರ ಸುತ್ತ ಕಟ್ಟಿದ ಎರಡು ಮೈಲುದ್ದದ ಸುತ್ತುವರಿ ಗೋಡೆ, ಊರ ಮಧ್ಯದಲ್ಲಿಯ ಚಿಕ್ಕ ಚಿಕ್ಕ ವೈವಿಧ್ಯಮಯ ಅಂಗಡಿಗಳುಳ್ಳ ಶಾಂಬಲ್ಸ್ (Shambles) ಎನ್ನುವ ಓಣಿ, ಈ ನಗರವನ್ನು ಪೂರ್ವ ಪಶ್ಚಿಮವಾಗಿ ವಿಭಜಿಸಿ ಬಳುಕುವ ಊಸ್‌ ನದಿ, ಇವೆಲ್ಲ ಕಾಲ್ನಡಿಗೆಯಲ್ಲೇ ನೋಡಿ ಕಣ್ಣು ತುಂಬಿಸಿಕೊಳ್ಳುವ ಪ್ರೇಕ್ಷಣೀಯ ಟೂರಿಸ್ಟ್‌ ತಾಣಗಳು.

ಎರಡು ರಾಜ್ಯಗಳ ರಾಜಧಾನಿ;
ಕ್ರಿ.ಶ. ನಾಲ್ಕನೆಯ ಶತಮಾನದ ವರೆಗೆ ಯಾರ್ಕ್‌ ರೋಮನ್ನರ ಪ್ರಾಂತದ ರಾಜಧಾನಿಯಾಗಿ ಮತ್ತು ತದನಂತರ ವೈಕಿಂಗ್‌ ರಾಜ್ಯದ ಪ್ರಾದೇಶಿಕ ಪ್ರಮುಖ ನಗರವಾಗಿ ಎರಡೂವರೆ ಶತಮಾನಗಳ ಕಾಲ ಉಳಿಯಿತು. ಈ ನಗರದ ಪೂರ್ವ ಇತಿಹಾಸ ಕ್ರಿ. ಶ. 71ರಿಂದ ಆರಂಭ. ಆಗ ರೋಮನ್‌ ಸಾಮ್ರಾಜ್ಯ ಉತ್ತರ ದಿಕ್ಕಿನಲ್ಲಿ ಇಲ್ಲಿಯವರೆಗೆ ಕೈಚಾಚಿತ್ತು. ಲಂಡನ್‌ನಿಂದ ಉತ್ತರದಲ್ಲಿಯ ತಮ್ಮ ಠಾಣೆ ಲಿಂಕನ್‌ನಿಂದ 5000 ರೋಮನ್‌ ಯೋಧರು ಉತ್ತರಕ್ಕೆ ಹೊರಟು ಮುಂದೆ ಅರ್ಮಿನ್‌ ಸ್ಟ್ರೀಟ್‌ ಅಂತ ಹೆಸರು ಬಂದ ದಾರಿಯಲ್ಲಿ ದಂಡೆತ್ತಿ ನಡೆದು ಎಬೋರಾಕಂ ಎನ್ನುವ ಈ ನಗರವನ್ನು ಸ್ಥಾಪಿಸಿದರು.

ಅಲ್ಲಿಯೂ ಮರಗಳ ಸಮೂಹವಿತ್ತು, ಹಾಗಾಗಿ ಆ ಹೆಸರನ್ನು ಅವರು ಕೊಟ್ಟರೆಂದು ದಾಖಲೆಗಳಿವೆ. ಅವರು ಮುನ್ನೂರು ವರ್ಷಗಳ ವರೆಗೆ ಇಲ್ಲಿ ಆಳಿದರು. ತನ್ನ ತಂದೆಯೊಂದಿಗೆ ಬ್ರಿಟನ್‌ಗೆ ಬಂದ ಕಾನ್ಸ್ಟಂಟೀನ್ ದ ಗ್ರೇಟ್‌ ಎನ್ನುವ ರೋಮನ್‌ ಚಕ್ರವರ್ತಿಯ ಪಟ್ಟಾಭಿಷೇಕ ಕ್ರಿ.ಶ. 306ರಲ್ಲಿ ರೋಮ್‌ನ ಇದೇ ನಗರದ‌ಲ್ಲಾಯಿತು ಎನ್ನುವ ಹೆಗ್ಗಳಿಕೆ ಈ ನಗರಕ್ಕೆ. ಅದರ ಸ್ಮರಣಾರ್ಥ ಠೀವಿಯಿಂದ ಆಸನ್ನನಾದ ಆತನ ಒಂದು ಭವ್ಯ ಮೂರ್ತಿ ಇಂದಿಗೂ ಯಾರ್ಕ್‌ನ ದೊಡ್ಡ ಚರ್ಚ್‌ನ ಮುಂದೆ ನೋಡಲು ಸಿಗುತ್ತದೆ.

ಅತನೇ ಕ್ರಿಶ್ಚಿಯನ್‌ ಮತವನ್ನು ಸ್ವೀಕರಿಸಿದ ಮೊದಲ ರೋಮನ್‌ ಅರಸ. ಮುಂದೆ ನೂರು ವರ್ಷಗಳ ಅನಂತರ ಅವನತಿಯಾಗಿ ಆಂಗ್ಲೋ ಸಾಕ್ಸನ್ನರು ಈ ನಗರವನ್ನು ಆಳಿದರು. ಆ ಕಾಲದಲ್ಲಿ ಧರಿಸುತ್ತಿದ್ದ ಹೆಲ್ಮೆಟ್‌ ರೀತಿಯ ವಸ್ತುವನ್ನು ಇಂದಿಗೂ ಇಲ್ಲಿನ ಮ್ಯೂಸಿಯಂನಲ್ಲಿ ಸುರಕ್ಷಿತವಾಗಿಟ್ಟಿದ್ದಾರೆ. ಇಲ್ಲಿ ರೋಮನ್‌ ಅಂಕಿಗಳು ಇಂದಿಗೂ ಗಡಿಯಾರದ ಮೇಲೆ ಮತ್ತು ರೋಮನ್‌ ಮೂಲದ ಪದಗಳು ಆಂಗ್ಲ ಮತ್ತು ಇತರ ಭಾಷೆಗಳಲ್ಲಿ ಉಪಯೋಗಿಸಲ್ಪಡುತ್ತವೆ. ನೀರಿನ ಸರಬರಾಜು ಮತ್ತು ಗಟಾರಗಳ ವ್ಯವಸ್ಥೆ ಸಹ ಅವರ ಬಳುವಳಿಯೇ. ಈ ಊರಿನಲ್ಲಿ ಮತ್ತು ದೇಶದ ನಾನಾ ಕಡೆ ಬಿಸಿನೀರಿನಿಂದ ಕಾಯಿಸುತ್ತಿದ್ದ ಹೈಪೋಕಾಸ್ಟ್‌ ರೋಮನ್‌ ಸ್ನಾನದ ಮನೆ (ಬಾಥ್‌) ಗಳಿದ್ದವು. ಅದಕ್ಕೇ ಇಂಗ್ಲೆಂಡಿನ ಬಾಥ್‌ ನಗರಕ್ಕೇ ಆ ಹೆಸರನ್ನೇ ನೀಡಲಾಗಿದೆ. ಆದರೂ ರೋಮನ್ನರು ನಮಗೆ ಕೊಟ್ಟದ್ದಾದರೂ ಏನು? ಅಂತ ಕೇಳುವವರಿದ್ದಾ ರೆ. (ಉದಾ: ಮಾಂಟಿ ಪೈಥನ್‌). ಪ್ರತೀ ವರ್ಷ ಜುಲೈ ತಿಂಗಳಲ್ಲಿ ಎಬೋರಾಕಂ ರೋಮನ್‌ ಉತ್ಸವ ಇಲ್ಲಿ ನಡೆಯುತ್ತದೆ.

ರೋಮನ್ನರ ಅನಂತರ ಬ್ರಿಟಿಷ್‌ ನಡುಗಡ್ಡೆಯ ಮೇಲೆ ಪೂರ್ವ ದಿಕ್ಕಿನ ನಾರ್ಥ್ ಸೀ ಸಮುದ್ರದಾಚೆಯಲ್ಲಿರುವ ದೇಶಗಳಾದ ಸ್ಕಾಂಡಿನೇವಿಯದಿಂದ ಭೀಮಕಾಯದ ವೈಕಿಂಗ್‌ ಜನರ ದಾಳಿಯಾಯಿತು. ಸ್ವಲ್ಪ ವರ್ಷಗಳ ಅನಂತರ ಅವರು ಈ ನಾಡಿನಲ್ಲಿಯೇ ತಳವೂರಿ ಈ ನಗರವನ್ನು ವಾಸಕ್ಕೆ ತೆಗೆದುಕೊಂಡು ತಮ್ಮ ನೋರ್ಡಿಕ್‌ (Nordic) ಭಾಷೆಯಲ್ಲಿ ಯೋವಿಕ್‌ (Jorvik) ಎಂದು ಹೆಸರಿಟ್ಟರು.

ಯೋವಿಕ್‌ ಸೆಂಟರ್‌ನಲ್ಲಿ ಎದ್ದು ಕುಳಿತ ಭೂತಕಾಲ !
ಅವರು ತಮ್ಮ ಎರಡೂವರೆ ಶತಮಾನದ ಆಳ್ವಿಕೆಯಲ್ಲಿ ತಮ್ಮ ಜೀವನದ ಕುರುಹುಗಳನ್ನು ಇಲ್ಲಿಯ ಭಾಷೆಯಲ್ಲಷ್ಟೇ ಅಲ್ಲ ಯೋವಿಕ್‌ ಸೆಂಟರ್‌ ಎನ್ನುವ ಭೂಗತ ಪಳೆಯುಳಿಕೆಗಳಲ್ಲಿ ಸಹ ಬಿಟ್ಟುಹೋಗಿದ್ದಾರೆ. ಅದನ್ನು ಕಳೆದ ತಿಂಗಳಷ್ಟೇ ನಾವು ಸಹ ನೋಡಿದೆವು. ಅದೊಂದು ಅದ್ಭುತ ಅನುಭವ. ಯಾರ್ಕ್‌ ನಗರದ ಮಧ್ಯದಲ್ಲಿಯ ಕಾಪರ್ಗೇಟ್‌ ಎನ್ನುವ ಜಾಗದಲ್ಲಿ ಒಂಬತ್ತು ಮೀಟರ್‌ ನೆಲದ ಕೆಳಗೆ ಯಾರ್ಕ್‌ ಅರ್ಕಿಯಾಲಜಿ ಟ್ರಸ್ಟ್‌ ಸಂಸ್ಥೆ ಉತ್ಖನನ ಮಾಡಿ ಕಂಡು ಹಿಡಿದ 1,000 ವರ್ಷಗಳ ಹಿಂದಿನ ಮರದ ಮನೆಗಳ ಪಳೆಯುಳಿಕೆಗಳು, ಬಟ್ಟೆ, ಪಾದರಕ್ಷೆಗಳ ಅವಶೇಷಗಳು, ಬೀಜ, ಪರಾಗ ಮಕರಂದಗಳು, ಹುಳ ಹುಪ್ಪಡಿಗಳ ತುಣುಕುಗಳು, ಮಾನವನ ಕರುಳಿನಲ್ಲಿದ್ದ ಪರಜೀವಿಗಳು – ಇವುಗಳ ಸಹಾಯದಿಂದ ಆಗಿನ ಜನರ ವಸತಿಗೃಹ, ಊಟ, ಉಡುಗೆ, ಜೀವನಕ್ರಮ ಇವೆಲ್ಲವನ್ನು ಪುನರ್‌ನಿರ್ಮಾಣ ಮಾಡಿದ್ದಾರೆ. ಕಾರ್ಬನ್‌ ಡೇಟಿಂಗ್‌ ವೈಜ್ಞಾನಿಕ ತಂತ್ರದಿಂದ ಅವರು ತಿಂದಿರಬಹುದಾದ ಆಹಾರ ಎಲ್ಲಿಂದ ಬಂತು ಎನ್ನುವದನ್ನು ಸಹ ಕಂಡು ಹಿಡಿಯಲು ಸಾಧ್ಯವಾಗಿದೆ.

ತಲೆಯ ಮೇಲಿನ ಕಂಬಿಗಳಿಂದ ತೂಗು ಬಿಟ್ಟ ನಾಲ್ವರು ಕೂರಬಹುದಾದ ಚಲಿಸುವ ಬಂಡಿಯಲ್ಲಿ ನನ್ನೊಂದಿಗೆ ಭಾರತದಿಂದ ಬಂದ ಅತಿಥಿ, ಮಿತ್ರರೊಂದಿಗೆ ಪ್ರಯಾಣಿಸಿದಾಗ ನೆಲದ ಮೇಲೆ ಪುನರ್ರ ಚಿಸಿದ ವಾಸಸ್ಥಾನದಲ್ಲಿ ಮೀನುಗಾರರು, ಕಮ್ಮಾರ, ಬಡಿಗರು ಮುಂತಾದ ಕಸುಬುದಾರ ಬದುಕಿನ ನಿಕಟ ಪರಿಚಯವಾಗುತ್ತಿತ್ತು. ಆ ಅದ್ವಿತೀಯ ಪ್ರಾತ್ಯಕ್ಷಿಕೆಯನ್ನು ದೃಶ್ಯ, ಶ್ರವಣ ಮತ್ತು ಘ್ರಾಣ ಮಾಧ್ಯಮದ ಮೂಲಕ ತಿಳಿದುಕೊಂಡಾಗ ಟೈಮ್‌ ಮಶಿನ್‌ನಲ್ಲಿ ಭೂತಕಾಲಕ್ಕೆ ಪ್ರವಾಸ ಮಾಡಿದಂತೆ ಭಾಸವಾಯಿತೆಂದು ಉದ್ಗಾರ ತೆಗೆದೆವು! ಈ ಊರಿಗೆ ಬಂದವರು ಇಲ್ಲಿಗೆ ಭೇಟಿ ಕೊಡದೆ ತಿರುಗಿ ಹೋಗಬಾರದು. ಇದಕ್ಕೆ ಪೂರಕವಾಗಿ ಪ್ರತೀ ಫೆಬ್ರವರಿ ತಿಂಗಳಿನಲ್ಲಿ ಅತೀ ದೊಡ್ಡ ವೈಕಿಂಗ್‌ ಫೆಸ್ಟಿವಲ್‌ ಸಹ ನಡೆಯುತ್ತದೆ.

ಆಗ ಆ ಕಾಲದ ವೇಷ ಭೂಷಣ, ಕತ್ತಿ, ಈಟಿ, ಗುರಾಣಿ ಸಜ್ಜಿತರಾದ, ಶಿರಸ್ತ್ರಾಣ ಧರಿಸಿದ ಯೋಧರು ಅಣಕು ಯುದ್ಧ ಮಾಡಿ ಮಧ್ಯಯುಗವನ್ನು ಕಣ್ಣಮುಂದೆ ತಂದಿಡುತ್ತಾರೆ! ಅದು ಮಕ್ಕಳಿಗೆ ಶೈಕ್ಷಣಿಕ ಪಾಠ ಸಹ.

ಶಾಂಬಲ್ಸ್‌ ಎನ್ನುವ ಮಾಯಾಲೋಕ!
ನಾವು ಯೋವಿಕ್‌ ಸೆಂಟರ್‌ನಿಂದ ಅಲ್ಲಿನ ಅನತಿ ದೂರದಲ್ಲೇ ಎಲ್ಲರನ್ನು ಮತ್ತೆ ಮತ್ತೆ ಮರಳು ಮಾಡುವ, ಹ್ಯಾರಿ ಪಾಟರ್‌ ಲೋಕಕ್ಕೆ ಒಯ್ಯುವ ಚಿಕ್ಕ ಓಣಿ ಕಣ್ಣಿಗೆ ಬಿತ್ತು. ಅದು ಅತ್ಯಂತ ಇಕ್ಕಟ್ಟಾಗಿದ್ದು ಪಾದಚಾರಿಗಳಿಗಷ್ಟೇ ಇಲ್ಲಿ ಪ್ರವೇಶವಿದೆ. ಇದರ ಹೆಸರು ಬಂದಿದ್ದು ಇಲ್ಲಿದ್ದ ಹೊರಬೈಲಿನ ಕಸಾಯಿ ಖಾನೆಯ ಪರ್ಯಾಯ ಪದದಿಂದ (slaughter house) ಎಂಬುವುದು ಪಂಡಿತರ ವಾದ. ಒಂದು ಕಾಲಕ್ಕೆ ಇಲ್ಲಿ ಮಾಂಸವನ್ನು ಮಾರುವ ಅಂಗಡಿಗಳೆ ಇದ್ದಿರಬೇಕೆಂದು ಊಹೆ. ಈಗ ಇಕ್ಕೆಲಗಳಲ್ಲಿ ಸುಂದರವಾದ ಎರಡಂತಸ್ತಿನ ಪುಟ್ಟಪುಟ್ಟ ಮರದ ಕಟ್ಟಡಗಳೆಲ್ಲ ಈಗ ಅಂಗಡಿಗಳಾಗಿವೆ. ಮೇಲಿನ ಅಂತಸ್ತು ಇನ್ನೇನು ಎದುರಿನ ಮನೆಗೆ ಹ್ಯಾಂಡ್‌ ಶೇಕ್‌ ಮಾಡುತ್ತಾವೇನೋ ಅನ್ನುವಷ್ಟು ಹತ್ತಿರಕ್ಕಿವೆ. ಕೆಳಗೆ ಗುಂಡಾದ ಹಾಸುಗಲ್ಲುಗಳು (ಕಾಬಲ್‌ ಸ್ಟೋನ್ಸ್‌). ಒಂದು ಅಂಗಡಿಯ ಹೆಸರೇನೋ “ಅನಾಮಿಕ’ ವಿರಬಹುದು (The Shop That Must Not Be Named) ಎಂದು ಇತ್ತು. ಆದರೆ ಅದರ ತುಂಬ ಕಿಕ್ಕಿರಿದ ಹ್ಯಾರಿ ಪಾಟರ್‌ ಅನುಯಾಯಿಗಳು.

ಪ್ರಸಿದ್ಧ ಡೈಗೋನ್‌ ವೇಗ ಸ್ಫೂರ್ತಿ ಈ ಶಾಂಬಲ್ಸ್‌ ಅಂತವೇ ಇದು ಪ್ರತೀತಿ. ಇಲ್ಲಿ ಅದಕ್ಕೆ ಸಂಬಂಧಿಸಿದ ಎಲ್ಲ ವಸ್ತುಗಳು ದೊರಕುತ್ತವೆ. ಅದರ ಎದುರುಗಡೆ ಒಂದು ಅಪರೂಪದ ಅಂಗಡಿ, The Ghost Merchants ಎನ್ನುವ ಭೂತದಂಗಡಿ. ಅದರ ದ್ವಾರದ ಮುಂದೆ “ಮೈಲುದ್ದದ ಸಾಲಿನಲ್ಲಿ ‘ ವೇಟಿಂಗ್‌ ಟೈಮ್‌ ಮೂರು ತಾಸು ಎನ್ನುವ ಫ‌ಲಕ ಇದ್ದರೂ ಯುವಕ ಯುವತಿಯರು ಉತ್ಸಾಹ ಕುಂದದೆ ಕಾಯುತ್ತ ನಿಂತಿದ್ದಾರೆ! ಅವರು ಕೊಳ್ಳಲಿಚ್ಛಿಸುವ ಭೂತ ಪ್ರತಿಮೆಗಳ ಬೆಲೆ ಪ್ರತಿಯೊಂದನ್ನೂ ಕೈಯಿಂದ ಮಾಡಿದ್ದೆಂದು ದುಬಾರಿ. 5 ರಿಂದ 8 ಸೆಂ. ಮೀಟರ್‌ ಪ್ರತಿಮೆಗಳಿಗೆ 9 ರಿಂದ 17 ಪೌಂಡುಗಳು. ಸ್ಪೆಶಲ್‌ ಆವೃತ್ತಿಗೆ ದುಪ್ಪಟ್ಟು. ಆ ಡೆತ್‌ ಮರ್ಚೆಂಟ್ಸ್‌ ಅಂಗಡಿಯನ್ನು ಅಲ್ಲೇ ಬಿಟ್ಟು ಪಕ್ಕದಲ್ಲೇ ಇರುವ ಭವ್ಯ ಕೆಥಿಡ್ರಲ್‌ ಕಡೆ ಹೊರಟೆವು. ಕತ್ತಲೆ ಅಡರುತ್ತಿದ್ದಂತೆ ಕೆಥಿಡ್ರಲ್‌ ಮುಂದೆಯೂ ಕಿಕ್ಕಿರಿದ ಜನಸ್ತೋಮ ಅದರ ಮುಖ್ಯ ಭಿತ್ತಿಯ ಮೇಲೆ ಪ್ರತಿಫ‌ಲಿಸಿ ಓಡಾಡುತ್ತಿದ್ದ ಲೇಸರ್‌ ಲೈಟ್‌ ವಿನ್ಯಾಸವನ್ನು ನೋಡುತ್ತ ಸಮಯ ಕಳೆಯುತ್ತಿದ್ದರು. ಕ್ಷಣ ಕ್ಷಣಕ್ಕೆ ಕಲೈಡೋಸ್ಕೋಪಿನಂತೆ ಬಣ್ಣ ಬಣ್ಣಗಳ ಆಕಾರಗಳೊಂದಿಗೆ ಚರ್ಚ್‌ನಂತರಾಳದಲ್ಲಿ ಮಿಂದೆದ್ದು ಬಂದ ಅದೆಷ್ಟು ಪ್ರೇತಗಳೂ ನರ್ತಿಸುತ್ತಿವೆಯೋ ಅಂತ ಯೋಚಿಸುತ್ತ ಮನೆಯ ದಾರಿ ಹಿಡಿದೆವು.

*ಶ್ರೀವತ್ಸ ದೇಸಾಯಿ, ಡೋಂಕಾಸ್ಟರ್‌

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.