Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

ಸವಿರುಚಿಯೊಂದಿಗೆ ಸದವಕಾಶ ಸೃಷ್ಟಿಸುತ್ತಿರುವ "ಶ್ರೀರುಚಿ'

Team Udayavani, Nov 16, 2024, 3:00 PM IST

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

ವಿದೇಶದಲ್ಲಿ ನೆಲೆಸಿದ ನಮಗೆ ನಮ್ಮ ಸ್ವದೇಶದ ನೆನಪು ಪ್ರತೀಕ್ಷಣವೂ ಮೂಡುತ್ತಲೇ ಇರುತ್ತದೆ. ಅದರಲ್ಲೂ ನಮ್ಮ ಸಂಪ್ರದಾಯದ ಅಡುಗೆಯ ರುಚಿ ಮತ್ತು ಖಾದ್ಯ ವಸ್ತುಗಳ ಬಗೆಗಿನ ನೆನಪುಗಳು ಇನ್ನೂ ಹೆಚ್ಚು ಹೊಮ್ಮುತ್ತವೆ.
ಕೆಲವರಿಗೆ ತಮ್ಮ ಊರಿನ ಅಡುಗೆಯ ಹಂಬಲ ಎಷ್ಟು ತೀವ್ರವಾಗಿರುತ್ತದೆಯೆಂದರೆ, ತಮ್ಮ ಊರಿಗೆ ಹೋದಾಗ ಅಲ್ಲಿಂದ ಸರಕುಪೆಟ್ಟಿಗೆಯಲ್ಲಿ ಆ ವಸ್ತುಗಳನ್ನು ತಂದೂ ಬಿಡುತ್ತಾರೆ ಅಥವಾ ಅಂಚೆ ಮೂಲಕ ವಿದೇಶಕ್ಕೆ ತಲುಪಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಅನಿವಾಸಿಗಳು ಭಾರತದ ಸಣ್ಣ ಕೈಗಾರಿಕೆಗಳ ಸಹಾಯದಿಂದ, ತಮ್ಮ ತವಕದ ಖಾದ್ಯ ವಸ್ತುಗಳನ್ನು ವಿದೇಶದಲ್ಲಿ ಸರಬರಾಜು ಮಾಡಿಸಿಕೊಳ್ಳುತ್ತಿದ್ದಾರೆ.

ಕರ್ನಾಟಕದ ನಾನಾ ಪ್ರದೇಶಗಳಲ್ಲಿ ತಿನಿಸುಗಳ ವೈಶಿಷ್ಟ್ಯತೆಯು ಕಂಡುಬರುತ್ತದೆ. ಜನಪ್ರಿಯ ಖಾದ್ಯ ವಸ್ತುಗಳನ್ನು ಆಮದು ಮಾಡುವ ಸಣ್ಣ ಪ್ರಮಾಣದ ವ್ಯಾಪಾರಗಳು ಕೋವಿಡ್‌ ಅನಂತರದ ಅವಧಿಯಲ್ಲಿ ವೇಗವಾಗಿ ಬೆಳೆಯುತ್ತಿವೆ. ಇಂಗ್ಲೆಂಡಿನಲ್ಲಿ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಖಾದ್ಯ ವಸ್ತುಗಳಿಗೆ ಸಾಕಷ್ಟು ಅಂಗಡಿಗಳು ಮತ್ತು ಉಪಹಾರ ಕೇಂದ್ರಗಳಿವೆ. ಆದರೆ ಕರ್ನಾಟಕದ, ವಿಶೇಷವಾಗಿ ಉತ್ತರ ಕರ್ನಾಟಕದ ಜೋಳದ ರೊಟ್ಟಿ, ನಾನಾ ಚಟ್ನಿ ಪುಡಿಗಳಂತಹ ಖಾದ್ಯ ವಸ್ತುಗಳಿಗೆ ವ್ಯಾಪಕ ಅಂಗಡಿಗಳು ಇಲ್ಲ.

ಮತ್ತೊಂದು ಮುಖ್ಯ ವಿಚಾರವೆಂದರೆ, ಗ್ರಾಹಕರಿಗೆ ತಮ್ಮ ಇಷ್ಟದ ಖಾದ್ಯ ವಸ್ತುಗಳ ಮಾರುಕಟ್ಟೆ ಹೆಸರು (ಬ್ರ್ಯಾಂಡ್‌) ತಿಳಿದಿರಬಹುದು, ಆದರೆ ಭಾರತೀಯ ಖಾದ್ಯ ಉತ್ಪಾದಕರಿಗೆ ರಫ್ತು ಮಾಡಲು ಸುಲಭ ಸಂಪರ್ಕವಿಲ್ಲ. ಈ ಅಂತರವನ್ನು ಅವಕಾಶವನ್ನಾಗಿ ಗುರುತಿಸಿದ ಮಹೇಶ್‌ ಮಲಕಣ್ಣವರ್‌, ತಮ್ಮ ಪತ್ನಿ ಪ್ರಭಾ ಮಲಕಣ್ಣವರ್‌ ಅವರೊಂದಿಗೆ, ಖಾದ್ಯ ವಸ್ತುಗಳ ಸರಬರಾಜು ಸರಪಳಿಯನ್ನು ನಿರ್ಮಿಸಿದ್ದಾರೆ.

ಮಲಕಣ್ಣವರ್‌ ದಂಪತಿ, “ಶ್ರೀರುಚಿ’ ಎಂಬ ಆನ್‌ಲೈನ್‌www.shreeruchi.co.uk ಜಾಲತಾಣದ ಮೂಲಕ, ಭಾರತೀಯ ಮೂಲದ ಖಾದ್ಯ ಉತ್ಪಾದಕರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರವೇಶಿಸಲು ಅವಕಾಶ ಒದಗಿಸಿದ್ದಾರೆ. ಈ ಪೋರ್ಟಲ್‌ ಒಂದು ಕೇಂದ್ರೀಕೃತ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮಾರಾಟಗಾರರು ಮಾರುಕಟ್ಟೆ ಒಳನೋಟಗಳನ್ನು ಪಡೆಯಲು, ಸಂಪರ್ಕಗಳನ್ನು ಮಾಡಿಕೊಳ್ಳಲು ಮತ್ತು ಸುಗಮ ರಫ್ತು ಕಾರ್ಯಾಚರಣೆಗೆ ಅಗತ್ಯ ಸಂಪನ್ಮೂಲಗಳ ಪ್ರವೇಶವನ್ನು ಹೊಂದಲು ಸಹಾಯಮಾಡುತ್ತದೆ. ಉತ್ಪನ್ನ ಪಟ್ಟಿ, ಮಾರ್ಗದರ್ಶನ, ಲಾಜಿಸ್ಟಿಕ್ಸ್‌ ಬೆಂಬಲದಂತಹ ಪರಿಕರಗಳು ಪೋರ್ಟಲ್‌ ಮೂಲಕ ರಫ್ತು ಮಾಡುವವರಿಗೆ ಗೋಚರತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತವೆ.

ಈ ಹೊಸ ಮಾರುಕಟ್ಟೆಗೆ ಪ್ರವೇಶಿಸಿದ ಮೊದಲ ವ್ಯಾಪಾರ ದಾವಣಗೆರೆಯ ಪ್ರಸಿದ್ಧ ಶರಭೇಶ್ವರ ಹೊಟೇಲ್‌ ಖಾನಾವಳಿ. ದಶಕಗಳಿಂದ ಜವಾರಿ ಶೈಲಿಯ ಅಡುಗೆಯನ್ನು ಗ್ರಾಹಕರಿಗೆ ಉಣಬಡಿಸುತ್ತಿರುವ ಈ ಸಂಸ್ಥೆ, ಉತ್ತರ ಕರ್ನಾಟಕದ ರುಚಿಕರ ಮತ್ತು ಆರೋಗ್ಯಕರ ಪದಾರ್ಥಗಳ ಸರಪಳಿಯನ್ನು ಪ್ರಾರಂಭಿಸಲು ಶ್ರೀರುಚಿಯೊಂದಿಗೆ ಸಹಯೋಗದೊಂದಿಗೆ ಮುಂದಾಗಿದೆ. ಅವರ ಚಟ್ನಿ ಪುಡಿ ಮತ್ತು ಕಷಾಯ ಪುಡಿಗಳು ಈಗಾಗಲೇ ಬೇಡಿಕೆಯಲ್ಲಿವೆ. ಮಹೇಶ್‌ ಕೇವಲ ಉತ್ತರ ಕರ್ನಾಟಕದ ಖಾದ್ಯವಸ್ತುಗಳನ್ನಷ್ಟೇ ಅಲ್ಲದೆ, ವಿವಿಧ ರೀತಿಯ ಉಪಹಾರಗಳಿಗೆ ಸಹ ಅವಕಾಶ ಒದಗಿಸುತ್ತಿದ್ದಾರೆ.

ಅವರು ಖುದ್ದಾಗಿ ಆಹಾರ ಉತ್ಪಾದನೆ ನಡೆಯುವ ಕಾರ್ಖಾನೆಗಳಿಗೆ ಭೇಟಿ ನೀಡಿ, ಗುಣಮಟ್ಟ, ತಾಜಾ ಕಚ್ಚಾ ವಸ್ತುಗಳ ಬಳಕೆ ಮತ್ತು ಕಾರ್ಮಿಕರ ಪರಿಸ್ಥಿತಿಯ ಪರಿಶೀಲನೆ ನಡೆಸಿದ ಅನಂತರವೇ, ಆ ಉತ್ಪಾದಕರಿಗೆ ತಮ್ಮ ಜಾಲತಾಣ “ಶ್ರೀರುಚಿ’ ಮೂಲಕ ಉತ್ಪನ್ನ ಮಾರಾಟದ ಅವಕಾಶವನ್ನು ಒದಗಿಸುತ್ತಾರೆ. ಕರ್ನಾಟಕದ ಶುದ್ಧ ರುಚಿಯನ್ನು ನಿಮ್ಮ ಮನೆಗೆ ತರುವದು ಶ್ರೀರುಚಿಯ ಉದ್ದೇಶ. ಕರ್ನಾಟಕದಿಂದ ಸ್ಥಳೀಯ ಮೂಲದ ಪದಾರ್ಥಗಳನ್ನು ಬಳಸಿಕೊಂಡು, ಸಾಂಪ್ರದಾಯಿಕ ವಿಧಾನದಲ್ಲಿ ರುಚಿಕರ ಮತ್ತು ಆರೋಗ್ಯಕರ ಉತ್ಪನ್ನಗಳನ್ನು ತಯಾರಿಸಲು ನಾವು ಬದ್ಧರಾಗಿದ್ದೇವೆ.

ಕರ್ನಾಟಕದ ಪಾಕಶಾಲೆಯ ಪರಂಪರೆಯನ್ನು ಸಂರಕ್ಷಿಸುತ್ತಾ, ಭಿನ್ನತೆಯ ಆಹಾರವಸ್ತುಗಳ ಪೂರೈಕೆಯನ್ನು ಈಡೇರಿಸುವ ಸಾಮರ್ಥ್ಯವಿರುವ ಎಲ್ಲ ಉತ್ಪಾದಕರಿಗೆ ಯುನೈಟೆಡ್‌ ಕಿಂಗ್‌ಡಮ್‌ ಮಾರುಕಟ್ಟೆಗೆ ಪ್ರವೇಶಿಸುವ ಅವಕಾಶವನ್ನು ಒದಗಿಸಲು ಮಹೇಶ್‌ ಅವರ ಶ್ರೀರುಚಿ ವ್ಯಾಪಾರವು ಉತ್ಸುಕವಾಗಿದೆ.

*ರಾಧಿಕಾ ಜೋಶಿ, ಲಂಡನ್‌

ಟಾಪ್ ನ್ಯೂಸ್

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

Tim-Southee

NZ vs ENG Test: ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್‌ಗೆ 423 ರನ್‌ ಜಯಭೇರಿ

Winter Session: ಸೋಮವಾರ 14.18 ಗಂಟೆ ಕಲಾಪ: ನೂತನ ದಾಖಲೆ

Winter Session: ಸೋಮವಾರ 14.18 ಗಂಟೆ ಕಲಾಪ: ನೂತನ ದಾಖಲೆ

ಕೆಳಮನೆಯಲ್ಲಿ ಕರ್ನಾಟಕ ಭೂ ಕಂದಾಯ ಮಸೂದೆ ಅಂಗೀಕಾರ

ಕೆಳಮನೆಯಲ್ಲಿ ಕರ್ನಾಟಕ ಭೂ ಕಂದಾಯ ಮಸೂದೆ ಅಂಗೀಕಾರ

Assembly Session: 5,317 ಕೋಟಿ ರೂ. ಧನ ವಿನಿಯೋಗ ಮಸೂದೆಗೆ ಒಪ್ಪಿಗೆ

Assembly Session: 5,317 ಕೋಟಿ ರೂ. ಧನ ವಿನಿಯೋಗ ಮಸೂದೆಗೆ ಒಪ್ಪಿಗೆ

Karnataka ಅಂತರ್ಜಲ ತಿದ್ದುಪಡಿ ಮಸೂದೆಗೆ ವಿಧಾನ ಪರಿಷತ್‌ ಅಂಗೀಕಾರ

Karnataka ಅಂತರ್ಜಲ ತಿದ್ದುಪಡಿ ಮಸೂದೆಗೆ ವಿಧಾನ ಪರಿಷತ್‌ ಅಂಗೀಕಾರ

Yashpal Suvarna: ಪ್ರಥಮ ಬಾರಿಗೆ ಆಯ್ಕೆಯಾದ ಶಾಸಕರಿಗೆ ವಿಶೇಷ ಅನುದಾನಕ್ಕೆ ಮನವಿ

Yashpal Suvarna: ಪ್ರಥಮ ಬಾರಿಗೆ ಆಯ್ಕೆಯಾದ ಶಾಸಕರಿಗೆ ವಿಶೇಷ ಅನುದಾನಕ್ಕೆ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

Tim-Southee

NZ vs ENG Test: ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್‌ಗೆ 423 ರನ್‌ ಜಯಭೇರಿ

Winter Session: ಸೋಮವಾರ 14.18 ಗಂಟೆ ಕಲಾಪ: ನೂತನ ದಾಖಲೆ

Winter Session: ಸೋಮವಾರ 14.18 ಗಂಟೆ ಕಲಾಪ: ನೂತನ ದಾಖಲೆ

ಕೆಳಮನೆಯಲ್ಲಿ ಕರ್ನಾಟಕ ಭೂ ಕಂದಾಯ ಮಸೂದೆ ಅಂಗೀಕಾರ

ಕೆಳಮನೆಯಲ್ಲಿ ಕರ್ನಾಟಕ ಭೂ ಕಂದಾಯ ಮಸೂದೆ ಅಂಗೀಕಾರ

Assembly Session: 5,317 ಕೋಟಿ ರೂ. ಧನ ವಿನಿಯೋಗ ಮಸೂದೆಗೆ ಒಪ್ಪಿಗೆ

Assembly Session: 5,317 ಕೋಟಿ ರೂ. ಧನ ವಿನಿಯೋಗ ಮಸೂದೆಗೆ ಒಪ್ಪಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.