ಬ್ರಿಟಿಷರಿಗೆ ಸಾಧ್ಯವಾದಷ್ಟು ತೊಂದರೆ ಕೊಡಬೇಕು ಎನ್ನುವ ಛಲ ಇತ್ತು: ನಾಗಭೂಷಣ ರಾವ್
ಶಾಲೆಗೆ ಗುಡ್‌ಬೈ ಹೇಳಿ, ಚಳವಳಿಗೆ ಸೇರಿಕೊಂಡೆವು.
Team Udayavani, Aug 15, 2022, 11:25 AM IST
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಆಡಳಿತ ಇತ್ತು. ಅದು ಬೇರೆಯವರ ಆಡಳಿತ ಅನಿಸಿದರೂ ಅಲ್ಲಿ ನ್ಯಾಯ-ನಿಷ್ಠೆ ಇತ್ತು. ಇಂದು ನಮ್ಮವರದ್ದೇ ಆಡಳಿತ ಇದೆ. ಆದರೂ ಬೇಸರ, ದುಃಖ ಅನಿಸುತ್ತಿದೆ. -ಇದು ಅಮೃತ ಮಹೋತ್ಸವದ ವೇಳೆ ಅದೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಹುಲಿಕಲ್ ನಾಗಭೂಷಣ ರಾವ್ ಅವರ ಬೇಸರದ ನುಡಿಗಳು.
ಅನ್ಯರ ಆಡಳಿತದಲ್ಲಿ ಕಂದಾಯ, ತೆರಿಗೆ, ಲೆಕ್ಕಾಚಾರ ಸೇರಿದಂತೆ ಸರ್ಕಾರಿ ಕೆಲಸದಲ್ಲಿ ಪ್ರಾಮಾಣಿಕತೆ ಇತ್ತು. ಮರ್ಯಾದೆಗೆ ಅಂಜಿ ಹೆಚ್ಚಿನವರು ನಿಷ್ಠೆಯಿಂದ ಇರುತ್ತಿದ್ದರು. ಆ ಸಮಾಜವನ್ನು ಕಂಡ ನನಗೆ ಇಂದಿನ ಆಡಳಿತದ ಬಗ್ಗೆ ದುಃಖವಾಗುತ್ತದೆ. ಇಲ್ಲಿ ಒಬ್ಬರದ್ದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಸಂಪೂರ್ಣ ಸಮಾಜ ಒಂದಕ್ಕೊಂದು ಕೊಂಡಿಯಂತೆ ಬದಲಾಗಿದೆ. ರಾಜರು ಪ್ರಜೆಗಳನ್ನು ತಮ್ಮ ಮಕ್ಕಳಂತೆ ಕಾಣುತ್ತಿದ್ದರು. ಈಗ ಎಲ್ಲೆಡೆ ರಾಜಕೀಯವೇ ತುಂಬಿತುಳುಕುತ್ತಿದೆ.
ಮುಂಬೈನಲ್ಲಿ ಗಾಂಧೀಜಿ ಕ್ವಿಟ್ ಇಂಡಿಯಾ ಚಳವಳಿಗೆ ಕರೆಕೊಟ್ಟಿದ್ದರು. ಅದು ಕಾಳ್ಗಿಚ್ಚಿನಂತೆ ಹಬ್ಬಿತ್ತು. ಅದು ನಾನು ಓದುತ್ತಿದ್ದ ತೀರ್ಥಹಳ್ಳಿಯ ಶಾಲೆಯ ಮಕ್ಕಳನ್ನೂ ತಟ್ಟಿ ಎಬ್ಬಿಸಿತ್ತು. ಹಿಂದೆ ಮುಂದೆ ನೋಡದೆ, ಶಾಲೆಗೆ ಗುಡ್‌ಬೈ ಹೇಳಿ, ಚಳವಳಿಗೆ ಸೇರಿಕೊಂಡೆವು. ಹೀಗೆ ಸೇರಿಕೊಂಡಿದ್ದರಿಂದ ಜೈಲಿಗೆ ಹಾಕಿದರು. ಆ ಜೈಲಿನಲ್ಲೂ ಒಂದು ರೀತಿ ಸುಖ, ಹೆಮ್ಮೆ ಇತ್ತು. ಆ ದಿನಗಳಲ್ಲಿ ಶಾಂತವೇರಿ ಗೋಪಾಲಗೌಡ, ಕಡಿದಾಳು ಮಂಜಪ್ಪ ಇನ್ನಿತರರು ನನ್ನ ಸಹಪಾಠಿಗಳಾಗಿದ್ದರು.
ನಾವು ಆಗಿನ್ನೂ ವಿದ್ಯಾರ್ಥಿಗಳು. ಆದರೂ, ಬ್ರಿಟಿಷರಿಗೆ ಸಾಧ್ಯವಾದಷ್ಟು ತೊಂದರೆ ಕೊಡಬೇಕು ಎನ್ನುವ ಹುಚ್ಚು ಇತ್ತು. ಅದಕ್ಕಾಗಿ ಆಗ ಅವರ ಸಂಪರ್ಕ ಸಾಧನವಾಗಿದ್ದ ಟೆಲಿಗ್ರಾಂ, ವಿದ್ಯುತ್ ವೈಯರ್‌ಗಳನ್ನು ಕಡಿತಗೊಳಿಸುತ್ತಿದ್ದೆವು. ನಮ್ಮ ಕಾಟ ತಡೆಯಲಾಗದೆ ಬ್ರಿಟಿಷರು ನಮ್ಮೆಲ್ಲರನ್ನು ಜೈಲಿಗೆ ಅಟ್ಟುತ್ತಿದ್ದರು. ಜೈಲಿನಲ್ಲಿದ್ದಾಗ ಹೋರಾಟಗಾರ ದೊರೆಸ್ವಾಮಿ ಅವರೊಂದಿಗೆ ಇದ್ದೆ. ಸ್ವಾತಂತ್ರ್ಯ ಬಂದ ದಿನವಂತೂ ಎಂದೂ ಮರೆಯಲು ಸಾಧ್ಯವಿಲ್ಲ. ಅದು ಬರೀ ಮಾತುಗಳಲ್ಲಿ ಹೇಳಲಾಗದ ಅನುಭವ. ಊರಿಗೆ ಊರೇ ಹಬ್ಬದ ವಾತಾವಣದಲ್ಲಿ ಮುಳುಗಿತ್ತು. ಆನಂದದಲ್ಲಿ ಮಿಂದೆದ್ದಿತ್ತು. ಅದಕ್ಕೆ ನಾವು ಸಾಕ್ಷಿಯಾಗಿದ್ದೆವು ಎನ್ನುವುದೇ ನಮ್ಮ ಭಾಗ್ಯ ಎಂದರು.
ವಿದೇಶಿ ಕೋಟು ಕಂಡರೆ ಗಲಾಟೆ ಆಗ್ತಿತ್ತು…
ಅದು ನನ್ನ ಹೈಸ್ಕೂಲು ದಿನಗಳು. ನಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬ ಅರಿವು ನನಗೆ ಸ್ಪಷ್ಟವಾಗಿ ಇರಲಿಲ್ಲ. ಆದರೆ, ಹೋರಾಟ, ಜೈಲು, ಜೈಲು ಚಳವಳಿಯಂತಹ ಮಾತುಗಳು ಮಾತ್ರ ಆಗಾಗ್ಗೆ ಕಿವಿಗೆ ಬಂದು ಬಡಿಯುತ್ತಿದ್ದವು. ಒಂದು ದಿನ ಸಹಪಾಠಿಗಳು ಶಾಲೆಯಿಂದ ಬರುವಾಗ ಯಾವುದೋ ಚಳವಳಿ ಗುಂಪಿನಲ್ಲಿ ಸೇರಿಕೊಳ್ಳಲು ಹೋದರು. ಅವರೊಂದಿಗೆ ನಾನೂ ಸೇರಿಕೊಂಡೆ. ನಂತರ ಶಾಲೆ ಅಪರೂಪವಾಯ್ತು. ಹೋರಾಟ ನಿರಂತರ ಕಾಯಕವಾಯಿತು.
-ಸ್ವಾತಂತ್ರ್ಯ ಹೋರಾಟಕ್ಕೆ ತಾವು ಸೇರಿಕೊಂಡ ದಿನಗಳನ್ನು ಹಲಸೂರಿನ ನಾರಾಯಣಪ್ಪ ವಿವರಿಸಿದ್ದು ಹೀಗೆ.
ನಗರ, ಹೊರ ವಲಯಗಳಲ್ಲಿ ಆಗ ನಡೆಯುತ್ತಿದ್ದ ಚಳವಳಿಗಳು, ಜೈಲುವಾಸಗಳ ಬಗ್ಗೆ ಅಸ್ಪಷ್ಟವಾಗಿಯೇ ಚಿತ್ರಣಗಳನ್ನು ಬಿಚ್ಚಿಟ್ಟರು. “ಗೋವಾದಲ್ಲಿ ನಡೆದ ಹೋರಾಟದಲ್ಲಿ ಭಾಗವಹಿಸಿದ್ದೆ. ಆ ಚಳವಳಿಯಲ್ಲಿ ಸ್ನೇಹಿತರೊಂದಿಗೆ ಹೋಗಿದ್ದೆವು. ವಿದೇಶಿ ಕೋಟು ಕಂಡರೆ, ಅವರೊಂದಿಗೆ ಗಲಾಟೆಗಳು ನಡೆಯುತ್ತಿದ್ದವು’ ಎಂದು ನೆನಪಿಸಿಕೊಂಡರು. “ಸ್ವಾತಂತ್ರ್ಯ ಬರುವಷ್ಟರಲ್ಲಿ ನನಗೆ 20 ವರ್ಷ ಆಗಿದ್ದವು. ಅಷ್ಟೊತ್ತಿಗೆ ಹೋರಾಟದ ಸ್ಪಷ್ಟ ಉದ್ದೇಶ ತಿಳಿದಿತ್ತು. ಅಷ್ಟೊತ್ತಿಗೆ ಮದುವೆಯೂ ಆಗಿತ್ತು. ಮತ್ತೆ ಮನೆ ಜವಾಬ್ದಾರಿ ಹೊಣೆ ತೊಡಗಿಕೊಂಡಿದ್ದೆ. ಹೋರಾಟದ ಅವಧಿಯಲ್ಲಿ ಯಾವುದೇ ನಾಯಕರನ್ನು ಭೇಟಿಯಾದ ನೆನಪು ನನಗಿಲ್ಲ. ಆದರೆ, ಅವರ ಕರೆಗಳಿಗೆ ಓಗೊಟ್ಟು ಪಾಲ್ಗೊಂಡಿದ್ದು ಮಾತ್ರ ಸ್ಪಷ್ಟವಾಗಿ ನೆನಪಿದೆ’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.