ಮೆಟ್ರೋ ಪ್ರವೇಶಕ್ಕೆ ಶಂಕಿತನ ಯತ್ನ
ಕೇರಳ ಮೂಲದ ಬಗ್ಗೆ ತನಿಖೆ; ಎನ್‌ಐಎ, ಐಬಿಗೆ ಮಾಹಿತಿ
Team Udayavani, May 11, 2019, 6:00 AM IST
ಬೆಂಗಳೂರು: ಮೆಜೆಸ್ಟಿಕ್ ಮೆಟ್ರೋನಿಲ್ದಾಣ ಪ್ರವೇಶದ್ವಾರದಲ್ಲಿ ಅನುಮಾನಸ್ಪದ ನಡೆತೋರಿ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಪರಾರಿಯಾದ ಶಂಕಾಸ್ಪದ ವ್ಯಕ್ತಿ ಮತ್ತೂಮ್ಮೆ ಮೆಟ್ರೋ ಒಳಗೆ ಹೋಗಲು ಪ್ರಯತ್ನಿಸಿದ್ದ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಅಪರಿಚಿತ ವ್ಯಕ್ತಿಯ ನಡೆಗಳು ತೀರಾ ಅನುಮಾನಾಸ್ಪದವಾಗಿದ್ದು ಹೊರರಾಜ್ಯದ ವ್ಯಕ್ತಿ ಇರಬಹುದೇ ಎಂಬ ಶಂಕೆಯೂ ಪೊಲೀಸರಿಗೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ನೆರೆ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಜತೆಗೆ, ರಾಷ್ಟ್ರೀಯ ತನಿಖಾ ತಂಡ ( ಎನ್‌ಐಎ), ಕೇಂದ್ರ ಗುಪ್ತದಳ ಸೇರಿದಂತೆ ಇನ್ನಿತರೆ ತನಿಖಾ ತಂಡಗಳಿಗೆ ಮಾಹಿತಿ ರವಾನಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸಾಮಾನ್ಯ ವ್ಯಕ್ತಿಗಳಾದರೆ ಬಹುತೇಕ ಭದ್ರತಾ ಸಿಬ್ಬಂದಿಗೆ ಸಹಕರಿಸುತ್ತಿದ್ದರು. ಇಲ್ಲವೇ ತುರ್ತಾಗಿ ಆತ ತೆರಳಬೇಕಾಗಿದ್ದರೂ ಮಾಹಿತಿ ನೀಡಿಯೇ ಹೋಗುತ್ತಿದ್ದರು. ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರು ವರ್ತಿಸುವ ರೀತಿ ನಡೆ ತೋರಿ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಹೀಗಾಗಿ ಹಲವು ಆಯಾಮಗಳಿಂದ ಈ ಪ್ರಕರಣವನ್ನು ನೋಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮೇ 6ರಂದು ರಾತ್ರಿ 7.30ರ ಸುಮಾರಿಗೆ ಮೆಜೆಸ್ಟಿಕ್ ಮೆಟ್ರೋನಿಲ್ದಾಣದ ಪೂರ್ವ ಗೇಟ್ ಬಳಿ ಆಗಮಿಸಿದ ವ್ಯಕ್ತಿ ಲೋಹಶೋಧಕ ಯಂತ್ರ ಪರಿಶೀಲನೆ ವೇಳೆ ಅಲಾರಂ (ಬೀಪ್) ಸದ್ದು ಹೊಡೆದುಕೊಂಡಿತ್ತು. ಆ ವ್ಯಕ್ತಿ ಜುಬ್ಟಾದ ಒಳಗಡೆ ಬೆಲ್r ಹಾಕಿದ್ದು, ಅದನ್ನು ತೆಗೆದು ತೋರಿಸುವಂತೆ ಭದ್ರತಾ ಸಿಬ್ಬಂದಿ ಕೇಳಿದ್ದರು. ಆದರೆ, ಆ ವ್ಯಕ್ತಿ ‘ಮನಿ.. ಮನಿಯಿದೆ’ ಎಂದು ಹೇಳಿ ಬೆಲ್r ತೆರೆಯುವ ಹಾಗೆ ಕೆಲಕಾಲ ನಟಿಸಿದ್ದಾನೆ. ಬಳಿಕ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಅಲ್ಲಿಂದ ತೆರಳಿದ್ದ. ಇದಾದ 10 ನಿಮಿಷಗಳ ಬಳಿಕ ಪಶ್ಚಿಮ ಗೇಟ್ ಬಳಿ ಬಂದು ಕೆಲಕಾಲ ನೋಡಿ ಪುನ: ವಾಪಾಸ್ ಹೊರಟುಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅಪರಿಚಿತ ವ್ಯಕ್ತಿ ಮಾಹಿತಿಯಿದ್ದಲ್ಲಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೋರಿದ್ದಾರೆ.
ಆದರೆ, ಶಂಕಾಸ್ಪದ ವ್ಯಕ್ತಿ ಮೊದಲಬಾರಿ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ತೆರಳಿ, ಮತ್ತೂಮ್ಮೆ ಒಳಪ್ರವೇಶಿಸಲು ಯತ್ನಿಸಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಈ ಬೆನ್ನಲ್ಲೇ ವಿಶೇಷ ತನಿಖಾ ತಂಡಗಳು ಆತನ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಸುತ್ತಿವೆ.
ರೇಖಾಚಿತ್ರ ನೆರವು?
ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ವರ್ತನೆ ತೋರಿ ಪರಾರಿಯಾದ ಶಂಕಾಸ್ಪದ ವ್ಯಕ್ತಿಯ ಪತ್ತೆಗಾಗಿ ಸಿಸಿಟಿವಿಯಲ್ಲಿ ಸೆರೆಯಾಗಿರುವ ಆತನ ಅಸ್ಪಷ್ಟ ಮುಖ ಗುರುತು ಆಧರಿಸಿ ರೇಖಾಚಿತ್ರಗಳನ್ನು ಬಿಡಿಸಲು ಸಿದ್ಧತೆ ನಡೆಸಿದ್ದಾರೆ. ಮೆಟ್ರೋ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ರೈಲ್ವೇನಿಲ್ದಾಣ ಸುತ್ತಮುತ್ತಲ ಸಿಸಿಟಿವಿ ಪೂಟೇಜ್‌ಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಕೆಲವು ಫೂಟೇಜ್‌ಗಳಲ್ಲಿ ಆತನ ಅಸ್ಪಷ್ಟ ಮು ಖಚಿತ್ರಣ ಮಾತ್ರವಿದೆ. ಈಗಾಗಲೇ ಸಂಗ್ರಹಿಸಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಶಂಕಾಸ್ಪದ ವ್ಯಕ್ತಿಯೊಬ್ಬನೇ ಕಾಣಿಸಿಕೊಂಡಿದ್ದಾನೆ. ಆತನ ಜತೆಗೆ ಯಾರೂ ಇಲ್ಲ. ಮೆಜೆಸ್ಟಿಕ್ ಕಡೆಯಿಂದ ಒಬ್ಬನೇ ಬಂದಿದ್ದಾನೆ. ಮೆಟ್ರೋ ನಿಲ್ದಾಣದಿಂದ ವಾಪಸ್ ಆದ ಬಳಿಕ ಆತ ಎಲ್ಲಿಗೆ ತೆರಳಿದ ಎಂಬುದು ಖಚಿತವಾಗಿಲ್ಲ. ಹಲವು ಆಯಾಮಗಳಲ್ಲಿ ಪತ್ತೆಕಾರ್ಯ ನಡೆ ಯುತ್ತಿದ್ದರೂ ಆತನ ಸುಳಿವು ದೊರೆತಿಲ್ಲ. ಆತ ರಾಜ್ಯದವನೇ ಅಥವಾ ಹೊರರಾಜ್ಯದವನೇ ಎಂಬುದು ಖಚಿತವಾಗಬೇಕಿದೆ ಎಂದು ಮೂಲಗಳು ತಿಳಿಸಿವೆ.
ಸಾರ್ವಜನಿಕರು ಮಾಹಿತಿ ನೀಡಲು ಸಂಪರ್ಕಿಸಿ
ಉಪ್ಪಾರಪೇಟೆ ಪೊಲೀಸ್ ಠಾಣೆ: 08022942503
ಉಪ್ಪಾರ ಪೇಟೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ -9480801716
ಪಶ್ಚಿಮ ನಿಯಂತ್ರಣ ಕೊಠಡಿ – 080 22943232, 9480801700
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.