96 ಲಕ್ಷ ಕೋಟಿ ರೂ. ಪರಿಹಾರ ನೀಡಿ! ಮಾಲಿನ್ಯದ ದುಷ್ಪರಿಣಾಮ ತಡೆಗೆ ಆರ್ಥಿಕ ಸಹಾಯ ಕೋರಿಕೆ
ಅಭಿವೃದ್ಧಿಗೊಂಡ ರಾಷ್ಟ್ರಗಳಿಗೆ ಅಭಿವೃದ್ಧಿಶೀಲ ರಾಷ್ಟ್ರಗಳ ಮನವಿ
Team Udayavani, Nov 10, 2021, 11:00 PM IST
ನವದೆಹಲಿ: ಜಾಗತಿಕ ಮಾಲಿನ್ಯದ ದುಷ್ಪರಿಣಾಮಗಳನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು ಮಾಡುತ್ತಿರುವ ಪ್ರಯತ್ನಗಳಿಗೆ ಅಭಿವೃದ್ಧಿಗೊಂಡಿರುವ ರಾಷ್ಟ್ರಗಳು 96 ಲಕ್ಷ ಕೋಟಿ ರೂ.ಗಳನ್ನು ಪರಿಹಾರ ರೂಪವಾಗಿ ನೀಡಬೇಕೆಂದು ಭಾರತ ಸೇರಿ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳು ಆಗ್ರಹಿಸಿವೆ.
ಈ ಹಿಂದೆ, ಅಭಿವೃದ್ಧಿಗೊಂಡ ರಾಷ್ಟ್ರಗಳು ಪರಿಹಾರ ಹಣವನ್ನು ನೀಡುವುದಾಗಿ ಭರವಸೆ ನೀಡಿದ್ದವು. ಆದರೆ, ಇಲ್ಲಿಯವರೆಗೆ ಆ ಭರವಸೆ ಈಡೇರಿಲ್ಲ. ಹಾಗಾಗಿ, ಈಗಿನ ಅಂದಾಜಿನ ಪ್ರಕಾರ ನಿಗದಿಪಡಿಸಲಾಗಿರುವ 96 ಲಕ್ಷ ಕೋಟಿ ರೂ. ಹಣವನ್ನು 2025ರಿಂದ 2030ರ ಅವಧಿಯೊಳಗೆ ನೀಡಬೇಕು ಎಂದು ಈ ರಾಷ್ಟ್ರಗಳು ಆಗ್ರಹಿಸಿವೆ.
ಸಮಾನ ಮನಸ್ಕ ಅಭಿವೃದ್ಧಿಶೀಲ ರಾಷ್ಟ್ರಗಳ ಒಕ್ಕೂಟದ (ಎಲ್‌ಎಂಡಿಸಿ) ರಾಷ್ಟ್ರಗಳು ಒಕ್ಕೊರಲಿನ ಬೇಡಿಕೆಯನ್ನು ಮಂಡಿಸಿವೆ. ಸೋಮವಾರದಂದು ಈ ಪ್ರಸ್ತಾವನೆಯನ್ನು ಮಂಡಿಸಿ ಚರ್ಚಿಸಲಾಗಿದ್ದು, ಈಗ ಅದನ್ನು ವಿಶ್ವಸಮುದಾಯದ ಗಮನಕ್ಕೆ ತರಲಾಗಿದೆ.
ಭಾರತ, ಚೀನಾ, ಇಂಡೋನೇಷ್ಯಾ, ಮಲೇಷ್ಯಾ, ಇರಾನ್, ಬಾಂಗ್ಲಾದೇಶ, ಶ್ರೀಲಂಕಾ, ಫಿಲಿಪ್ಪೀನ್ಸ್ ಹಾಗೂ ಇತರ ರಾಷ್ಟ್ರಗಳು ಈ ಒಕ್ಕೂಟದಲ್ಲಿ ಸೇರಿವೆ. ಇತ್ತೀಚೆಗೆ, ಗ್ಲಾಸ್ಗೋದಲ್ಲಿ ನಡೆದಿದ್ದ ಜಾಗತಿಕ ಹವಾಮಾನ ಸಮ್ಮೇಳನದಲ್ಲಿ ಇದೇ ವಿಚಾರವನ್ನು ಭಾರತ ಪ್ರಸ್ತಾಪಿಸಿತ್ತು. ಆಗಲೂ, ಅಭಿವೃದ್ಧಿಶೀಲ ರಾಷ್ಟ್ರಗಳು ಇದಕ್ಕೆ ಅನುಮೋದನೆ ನೀಡಿದ್ದವು. ಆ ಸಭೆಯಲ್ಲಿ ಕೈಗೊಂಡಿದ್ದ ನಿರ್ಣಯಗಳನ್ನು ಎಲ್ಲಾ ಎಲ್‌ಎಂಡಿಸಿ ಸದಸ್ಯ ರಾಷ್ಟ್ರಗಳು ಸೋಮವಾರ ಮತ್ತೂಮ್ಮೆ ಚರ್ಚಿಸಿ ಅನುಮೋದನೆ ನೀಡಿವೆ.
ಇದನ್ನೂ ಓದಿ : ಸಕಲೇಶಪುರ : ಬೈಕ್ ಗಳ ನಡುವೆ ಡಿಕ್ಕಿ, ನಾಲ್ವರಿಗೆ ಗಾಯ, ಇಬ್ಬರ ಪರಿಸ್ಥಿತಿ ಗಂಭೀರ
ಜಾಗತಿಕ ತಾಪಮಾನದ ಮೊದಲ ದುರ್ದೈವಿ?
ಕೆನಡಾದ ಡಾ. ಕೈಲ್ ಮೆರಿಟ್ ಆಫ್ ಕೂಟೆನರಿ ಲೇಕ್ ಆಸ್ಪತ್ರೆಗೆ ದಾಖಲಾಗಿರುವ ಕೆನಡಾದ 70ರ ವೃದ್ಧೆಯೊಬ್ಬರು, ಜಾಗತಿಕ ತಾಪಮಾನ ದುಷ್ಪರಿಣಾಮದಿಂದ ಅನಾರೋಗ್ಯಕ್ಕೀಡಾದ ಮೊದಲ ಮಹಿಳೆಯಾಗಿರಬಹುದು ಎಂದು ವೈದ್ಯರು ಖಚಿತಪಡಿಸಿದ್ದಾರೆ. ಉಷ್ಣ ಹವೆಯಿಂದಾಗಿ ಅವರು ಅನಾರೋಗ್ಯಕ್ಕೆ ಈಡಾಗಿದ್ದು, ಅದರ ಪರಿಣಾಮದಿಂದ ಹಲವು ದೈಹಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.