Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ
ಬಸ್ ನಿಲ್ದಾಣದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಚಿವರ ಸಮ್ಮುಖವೇ ವೇದಿಕೆ ಬಳಿ ಹೈಡ್ರಾಮಾ, ಹೊರ ನಡೆದ ಮಾಜಿ ಶಾಸಕ, ಬೆಂಬಲಿಗರು
Team Udayavani, Sep 28, 2024, 11:11 PM IST
ಸಾವಳಗಿ: ರಸ್ತೆ ಸಾರಿಗೆ ಸೇರಿದಂತೆ ಎಲ್ಲ ವಿಧದ ಸಂಪರ್ಕ ಸಾರಿಗೆಗಳು ಉತ್ತಮವಿದ್ದರೆ ದೇಶದ ಆರ್ಥಿಕತೆ ಹೆಚ್ಚಳ ಹಾಗೂ ಅಭಿವೃದ್ದಿಗೆ ಪೂರಕವಾಗುತ್ತದೆ ಈ ನಿಟ್ಟಿನಲ್ಲಿ ದೃಷ್ಟಿಯಿಟ್ಟು ರಾಜ್ಯ ಸರಕಾರ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಮಹತ್ವ ನೀಡಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಸಾವಳಗಿ ಗ್ರಾಮದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಬಸ್ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯರ ರಾಜೀನಾಮೆ ಕೇಳುವ ಬಿಜೆಪಿಯವರು ನಿರ್ಮಲಾ ಸೀತಾರಾಮನ್, ಬಿ.ಎಸ್.ಯಡಿಯೂರಪ್ಪ ಮೇಲೆ ಎಫ್‌ಐಆರ್ ಆಗಿದೆ ಅವರು ರಾಜೀನಾಮೆ ಕೊಟ್ಟಿದ್ದಾರಾ? ಅವರು ಕೊಡದಿರುವಾಗ ಸಿಎಂ ಸಿದ್ದರಾಮಯ್ಯ ಯಾಕೆ ಕೊಡಬೇಕು ಎಂದು ಪ್ರಶ್ನಿಸಿದರು.
ಶಾಸಕ ಜಗದೀಶ ಗುಡಗುಂಟಿ ಮಾತನಾಡಿ ಸಾವಳಗಿ ಭಾಗಕ್ಕೆ ಬಸ್ ಹಾಗೂ ನಿರ್ವಾಹಕರ ಕೊರತೆ ಇದೆ ಹಾಗೂ ಜಮಖಂಡಿ-ಸಾವಳಗಿ ಎಸಿ ಬಸ್ ಪಲ್ಲಕ್ಕಿ ಬಸ್‌ಗಳ ಅವಶ್ಯವಿದೆ ಎಂದರು. ಈ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಕಾಗವಾಡ ಶಾಸಕ ಭರಮಗೌಡ ಕಾಗೆ, ಪೀರಸಾಬ ಕೌತಾಳ, ಕವಿತಾ ಪಾಟೋಳಿ, ಶಶಿಧರ ಕುರೇರ, ಸುಶೀಲ ಬೆಳಗಲಿ ಇದ್ದರು.
ಕಾರ್ಯಕ್ರಮ ನಡುವೆ ಹೈಡ್ರಾಮಾ:
ಬಸ್ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮ ವೇಳೆ ಮಾಜಿ ಶಾಸಕ ಆನಂದ ನ್ಯಾಮಗೌಡರನ್ನು ವೇದಿಕೆ ಬದಲು ಮುಂಭಾಗ ಕೂರಿಸಿದ್ದಕ್ಕೆ ಬೆಂಬಲಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಸಾರ್ವಜನಿಕರು, ಸಚಿವರ ಎದುರಲ್ಲಿ ವೇದಿಕೆ ಮೇಲೆ ಹೈಡ್ರಾಮಾ ನಡೆಯಿತು. ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಜನರ ಸುಮ್ಮನೆ ಕೂರಿಸಲು ಯತ್ನಿಸಿದರು ವಿಫಲವಾಯಿತು . ಮಾಜಿ ಶಾಸಕ ಆನಂದ ನ್ಯಾಮಗೌಡ ಉದ್ಘಾಟನೆ ಸ್ಥಳದ ವೇ ಹೊರ ನಡೆದರು. ಇಲಾಖೆ ಅಧಿಕಾರಿಗಳು ಶಿಷ್ಟಾಚಾರ ಪ್ರಕಾರ ಕಾರ್ಯಕ್ರಮ ನಡೆಸುತ್ತೇವೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.