ಮಂಗಳೂರಿನಲ್ಲಿ ಪ್ರತ್ಯೇಕ ಬೆಂಕಿ ಅವಘಡ : ಬ್ಯಾಂಕ್ ಕಚೇರಿ , 5 ಬೈಕುಗಳು ಬೆಂಕಿಗಾಹುತಿ
Team Udayavani, Sep 30, 2020, 10:06 AM IST
ಮಂಗಳೂರು :ನಗರದಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಎರಡು ಕಡೆ ಬೆಂಕಿ ಅವಘಡ ಸಂಭವಿಸಿದ್ದು ಘಟನೆಯಿಂದ ಒಂದು ಕಡೆ ಐದು ಬೈಕುಗಳು ಬೆಂಕಿಗಾಹುತಿಯಾದರೆ ಇನ್ನೊಂದು ಕಡೆ ಬ್ಯಾಂಕ್ ಕಚೇರಿ ಒಳಗೆ ಬೆಂಕಿ ಅವಘಡ ಸಂಭವಿಸಿದೆ.
ಘಟನೆ ಒಂದು : ನಗರದ ಸಿ.ವಿ.ನಾಯಕ್ ಹಾಲ್ ಬಳಿಯ ಭುವನೇಂದ್ರ ಅಪಾರ್ಟ್ಮೆಂಟ್ ನಲ್ಲಿ ಬುಧವಾರ ಮುಂಜಾನೆ ಪಾರ್ಕ್ ಮಾಡಲಾಗಿದ್ದ 5 ದ್ವಿಚಕ್ರ ವಾಹನಗಳು ಬೆಂಕಿಗಾಹುತಿಯಾಗಿದ್ದು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಂದಿಸಲು ಸಹಕರಿಸಿದ್ದಾರೆ, ಆದರೆ ಬೈಕ್ ಪಾರ್ಕಿಂಗ್ ಏರಿಯಾದಲ್ಲಿ ಅಗ್ನಿ ಅವಘಡ ಹೇಗೆ ಸಂಭವಿಸಿತ್ತು ಎಂದು ತಿಳಿದುಬಂದಿಲ್ಲ, ಈ ಘಟನೆಯಲ್ಲಿ ಒಟ್ಟು ಐದು ಬೈಕ್ ಗಳು ಬೆಂಕಿಗಾಹುತಿಯಾಗಿವೆ.
ಇದನ್ನೂ ಓದಿ:Live Update: ಬಾಬ್ರಿ ಅಂತಿಮ ತೀರ್ಪು:ಮಧ್ಯಾಹ್ನ 12ಗಂಟೆಗೆ ತೀರ್ಪು ಘೋಷಣೆ; ಸಿಬಿಐ ಕೋರ್ಟ್
ಘಟನೆ ಎರಡು : ಬ್ಯಾಂಕ್ ಒಫ್ ಬರೋಡ ಹಂಪನ್ಕಟ್ಟ ಶಾಖೆಯಲ್ಲಿ ಬುಧವಾರ ಮುಂಜಾನೆ ಸುಮಾರು ಐದು ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ಸಿಬ್ಬಂದಿಗಳು ತಕ್ಷಣ ಬೆಂಕಿ ನಡಿಸಿದ ಪರಿಣಾಮ ಹೆಚ್ಚಿನ ಅವಘಡಗಳು ಸಂಭವಿಸಿಲ್ಲ ಎನ್ನಲಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.