Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನ
Team Udayavani, Nov 30, 2024, 12:14 AM IST
ಬೆಳ್ತಂಗಡಿ: ಶಿಕ್ಷಣ ಪಡೆದು ಪದವಿ ಗಳಿಸಿ ವೃತ್ತಿಯಲ್ಲಷ್ಟೆ ಶಕ್ತರಾಗದೆ, ಪ್ರತಿಯೊಂದು ಪ್ರಜೆಯೂ ಶಾಂತಿಯಿಂದ ಬಾಳುವಂತಾಗಬೇಕಿದೆ. ಪ್ರಪಂಚದ ಇತಿಹಾಸದಲ್ಲೇ ಇಷ್ಟೊಂದು ಧರ್ಮಗಳನ್ನು ಹೊಂದಿದ ಬೇರೆ ದೇಶವಿಲ್ಲ. ಭಾರತ ಸರ್ವಧರ್ಮ ಶಾಂತಿಯ ತೋಟವಾ ಗುವಲ್ಲಿ ಇಂಥ ಸಮ್ಮೇಳನಗಳು ಮಹತ್ವದ್ದು ಎಂದು ಗೃಹಸಚಿವ ಡಾ| ಜಿ.ಪರಮೇಶ್ವರ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಪ್ರಯುಕ್ತ ನ.29ರಂದು ಅಮೃತವರ್ಷಣಿ ಸಭಾಂಗಣದಲ್ಲಿ ಜರಗಿದ ಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನವನ್ನು ಉದ್ಘಾಟಿಸಿ ದ ಅವರು, ಸರಕಾರಕ್ಕೂ ಮಿಗಿಲಾಗಿ ಕರ್ನಾಟಕದ ಹಳ್ಳಿ ಹಳ್ಳಿಗೆ ತಲುಪಿದ ಯೋಜನೆಯೊಂದಿದ್ದರೆ ಅದು ಕ್ಷೇತ್ರದ ಗ್ರಾಮಾಭಿವೃದ್ಧಿ ಯೋಜನೆ. ಇದು ದೇಶದೆಲ್ಲೆಡೆ ವಿಸ್ತರಣೆಯಾಗುವ ಮೂಲಕ ಸರ್ವಧರ್ಮದ ಆರ್ಥಿಕ ಮತ್ತು ಮೌಲ್ಯಾಧಾರಿತ ಪ್ರಗತಿಗೆ ಸಾಕ್ಷಿಯಾಗಬೇಕು ಎಂದರು.
1933 ಈ ಭಾಗದಲ್ಲಿ ಚರಿತ್ರಾರ್ಹ ಇಸವಿ. ಅಂದು ಸಂವಿಧಾನ ಇರದಿದ್ದಾಗ ಕೀರ್ತಿಶೇಷ ಮಂಜಯ್ಯ ಹೆಗ್ಗಡೆಯವರು ಸರ್ವಧರ್ಮದ ಮಾತುಗಳನ್ನು ಆಡಿದ್ದರು. ಬಳಿಕ ರತ್ನವರ್ಮ ಹೆಗ್ಗಡೆಯವರು ಮುಂದುವರಿಸಿದ್ದರು. ಅನಂತರ ದೇಶಕ್ಕೆ ಸ್ವಾತಂತ್ರ್ಯ ಬಂದಿತು. ಸಂವಿಧಾನ 4ನೇ ಅಧ್ಯಾಯದಲ್ಲಿ ಸರ್ವಧರ್ಮ ಸಮಾನತೆಯನ್ನೇ ಉಲ್ಲೇಖಿಸಿದೆ. ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಸರ್ವ ಧರ್ಮದಲ್ಲೂ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸುವ ಮೂಲಕ ನಾಡಿಗೆ ಸಂದೇಶ ಸಾರಿದ್ದಾರೆ ಎಂದರು.
ಗೃಹ ಸಚಿವರು ಹಾಗೂ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿಯನ್ನು ಸಮ್ಮಾನಿಸಿ ಗೌರವಿಸಲಾಯಿತು. ಸ್ವಾಮೀಜಿಗಳು ಡಾ| ಹೆಗ್ಗಡೆ, ಗೃಹಸಚಿವರನ್ನು ಪ್ರಸಾದ ನೀಡಿ ಗೌರವಿಸಿದರು.
ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನದ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಉತ್ತಮ ಬಾಳ್ವೆಯನ್ನು ಭೂಮಿಯ ಪ್ರತಿಯೊಂದು ಮತವೂ ಪ್ರತಿನಿಧಿಸುತ್ತದೆ. ಜ್ಞಾನದ ಕೊರತೆ, ಸಂಕುಚಿತ ಭಾವನೆಗಳಿಂದ ಹೊರಬಂದರೆ ಮಾತ್ರ ಯಾವದೇ ದೇಶ ಅದ್ಭುತ ಗುಣಮಟ್ಟ ತಲುಪಲು ಸಾಧ್ಯವಿದೆ ಎಂದರು. ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಡಿ.ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಿ.ಅನಿತಾ ಸುರೇಂದ್ರ ಕುಮಾರ್, ಶ್ರದ್ಧಾ ಅಮಿತ್, ಶ್ರೇಯಸ್ ಡಿ.ಕುಮಾರ್, ಪುತ್ತೂರು ಶಾಸಕ ಅಶೋಕ್ ಕುಮಾರ್‌ರೈ, ಮಾಜಿ ಸಚಿವ ಅಭಯಚಂದ್ರ ಜೈನ್, ವಿ.ಪ. ಮಾಜಿ ಸದಸ್ಯ ಹರೀಶ್ ಕುಮಾರ್, ರಕ್ಷಿತ್ ಶಿವರಾಮ್ ಸಹಿತ ಪ್ರಮುಖ ಗಣ್ಯರು ಉಪಸ್ಥಿತರಿದ್ದರು. ಉಜಿರೆ ರುಡ್ ಸೆಟ್ ನಿರ್ದೇಶಕ ಅಜಯ್ ವಂದಿಸಿದರು. ಪ್ರಾಧ್ಯಾಪಕ ಡಾ| ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಎಸ್.ಡಿ.ಎಂ. ಆಸ್ಪತ್ರೆಯಿಂದ ಉಚಿತ ಡಯಾಲಿಸಿಸ್
ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಮುಂದಿನ ಜನವರಿಯಿಂದ ಉಜಿರೆ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆ ಒದಗಿಸಲಾಗುವುದು. ವರ್ಷಕ್ಕೆ 10 ಸಾವಿರ ಮಂದಿಗೆ ಉಪಯೋಗವಾಗುವಂತೆ ಸುಮಾರು 1.50 ಕೋ.ರೂ. ನೀಡುವುದಾಗಿ ಪ್ರಕಟಿಸಿದರು.
ಒಂದು ಧರ್ಮದ ವಿಶೇಷತೆಯನ್ನು ಮತ್ತೊಂದು ಧರ್ಮ ಅರಿತಾಗಷ್ಟೆ ಸಮಾಜದಲ್ಲಿ ಶಾಂತಿ-ನೆಮ್ಮದಿ ನೆಲೆಸಲು ಸಾಧ್ಯ. ಆದರೆ ಧರ್ಮ ಅಥವಾ ಆಚರಣೆಗಳನ್ನು ಸಂಕುಚಿತಗೊಳಿಸಿದಾಗ ಜಾತಿ, ಮತ, ಪಂಥ, ಪಂಗಡಗಳ ನಡುವೆ ಭಿನ್ನಾಭಿಪ್ರಾಯ, ತಿಕ್ಕಾಟ, ಘರ್ಷಣೆ ಉಂಟಾಗಿ ಸಮಾಜದ ಸ್ವಾಸ್ಥ್ಯ ಹದಗೆಡುತ್ತದೆ. ಧರ್ಮವನ್ನು ವಿಶಾಲ ಅರ್ಥದಲ್ಲಿ ಕಾಣುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು ಎಂದರು.
ಧರ್ಮವು ನಮ್ಮ ಎಲ್ಲ ಚಟುವಟಿಕೆಯಲ್ಲಿ ಹಾಸುಹೊಕ್ಕಾಗಿರಬೇಕು. ನಡೆ, ನುಡಿ, ನೈತಿಕತೆಗಳು ಧರ್ಮದ ನೆಲೆಗಟ್ಟಿನಲ್ಲಿ ಇರಬೇಕು. ಆಗ ಧೀಮಂತ ಸಮಾಜ ನಿರ್ಮಾಣವಾಗುತ್ತದೆ. ಒಬ್ಬನ ನೈತಿಕ ಪತನವಾದರೆ ಜಗತ್ತಿನ ಪತನವೂ ಆಗಬಲ್ಲದು, ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಧರ್ಮನಿಷ್ಠೆಯಲ್ಲಿ ನಡೆಯಬೇಕು ಎಂದು ಸಂದೇಶ ನೀಡಿದರು.
ಇತ್ತೀಚೆಗೆ ಧರ್ಮಸ್ಥಳದ ಆಯುರ್ವೇದ ಕಾಲೇಜುಗಳು, ಆಸ್ಪತ್ರೆಗಳು ದೇಶದಲ್ಲೇ ಮೊದಲ 10 ಸ್ಥಾನಗಳಲ್ಲಿವೆ. ಧಾರವಾಡದ ವೈದ್ಯಕೀಯ ವಿವಿಯು ತನ್ನ ಅತ್ಯುತ್ತಮ ಸೇವೆಗಾಗಿ ಖ್ಯಾತಿಗಳಿಸಿದೆ. ಈ ಎಲ್ಲ ಸಂಸ್ಥೆಗಳಲ್ಲಿ ಎಲ್ಲ ಮತದವ ರಿಗೂ ಅವಕಾಶ ನೀಡಲಾಗಿದೆ ಎಂದರು.
ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ
ಓರ್ವ ವ್ಯಕ್ತಿ 50 ವರ್ಷಗಳಿಂದ ಸಂಗ್ರಹಿಸಿದ ತಾಳೆ ಗರಿ ಬರಹ, ಹಳೆ ಪುಸ್ತಕ, ವಿಂಟೇಜ್ ಕಾರು ಸಹಿತ 75 ಸಾವಿರಕ್ಕೂ ಅಧಿಕ ಪ್ರಾಚೀನ ವಸ್ತುಗಳ ಸಂಗ್ರಹಕಾರ ಡಾ| ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮಂಜೂಷಾ ವಸ್ತುಸಂಗ್ರಹಾಲಯಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವವನ್ನು ಗೃಹಸಚಿವರ ಸಮ್ಮುಖದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನ ಮುಖ್ಯ ತೀರ್ಪುಗಾರ ಡಾ|ಪ್ರದೀಪ್ ಭಾರದ್ವಾಜ್ ಪದಕ ಹಾಗೂ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.
ಸವಾಲು ಸ್ವೀಕರಿಸುವ ಮನಃಸ್ಥಿತಿ ಇಂದಿನ ಅಗತ್ಯ: ಡಾ| ಜಿ. ಪರಮೇಶ್ವರ
ಭಾರತ ಎಲ್ಲ ರಂಗದಲ್ಲೂ ಸಮಾನತೆ ಬಯಸುತ್ತದೆ. ಇದು ಭವಿಷ್ಯದ ಪೀಳಿಗೆಗೆ ಅತ್ಯಾ ವಶ್ಯಕವಾಗಿದೆ. ಭವಿಷ್ಯ ಸವಾಲಾಗಿದೆ, ಆದರೆ ಅಷ್ಟೇ ಅವಕಾಶಗಳನ್ನು ತೆರೆದಿಟ್ಟಿದೆ. ಭವಿಷ್ಯವನ್ನು ಎದುರಿಸಿ ಸವಾಲುಗಳನ್ನು ಸ್ವೀಕರಿಸುವ ಮನಸ್ಥಿತಿ
ಯುವ ಪೀಳಿಗೆಗೆ ಬರಬೇಕಿದೆ. ನಾನು ಸರಕಾರ ದವನಾಗಿ, ಸ್ವತಃ ಪರಮೇಶ್ವರನಾಗಿ ಬಂದಿರುವೆ. ಸರ್ವ ಧರ್ಮ ಸಮ್ಮೇಳನ ಅರ್ಥಪೂರ್ಣ ಎಂದು ಡಾ| ಜಿ.ಪರಮೇಶ್ವರ ಅಭಿಪ್ರಾಯಪಟ್ಟರು.
ಉಪನ್ಯಾಸ
ಸಂಶೋಧಕ ಮತ್ತು ಸಂವಹನಕಾರ ಡಾ| ಜಿ.ಬಿ.ಹರೀಶ, ನಿವೃತ್ತ ಪ್ರಾಂಶುಪಾಲ ಡಾ| ಜೋಸೆಫ್ ಎನ್.ಎಂ., ರಾಷ್ಟ್ರೀಯ ಬಸವ ಭೂಷಣ ಪ್ರಶಸ್ತಿ ಪುರಸ್ಕೃತ ಕಾಗವಾಡ ಮೆಹತಾಬ ಇಬ್ರಾಹಿಂ ಸಾಬ ಉಪನ್ಯಾಸ ನೀಡಿದರು. ಬಳಿಕ ರಾತ್ರಿ 8.30ರಿಂದ ಸಾಂಸ್ಕೃತಿಕ ಕಾರ್ಯಕ್ರಮದಡಿ ಚೆನ್ನೈಯ ಶೀಜಿತ್ ಮತ್ತು ಪಾರ್ವತಿ ತಂಡ ಭರತನಾಟ್ಯ ಪ್ರಸ್ತುತಪಡಿಸಿತು. ನ.30ರಂದು ಸಾಹಿತ್ಯ ಸಮ್ಮೇಳನ ಜತೆಗೆ ಲಕ್ಷದೀಪೋತ್ಸವ ಸಮಾಪನಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.