ಸ್ವಾವಲಂಬನೆ ಬದುಕಿಗೆ ಶ್ರೀಕಾರ ಹಾಕಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

ಅತಿ ಸಣ್ಣ ರೈತರ ಆರ್ಥಿಕ ಸಬಲೀಕರಣದೊಂದಿಗೆ ಆರಂಭ

Team Udayavani, Feb 8, 2023, 5:33 PM IST

ಸ್ವಾವಲಂಬನೆ ಬದುಕಿಗೆ ಶ್ರೀಕಾರ ಹಾಕಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

– ಇಂದು ದೇಶದ ಪ್ರಮುಖ ಸ್ವಯಂ ಸೇವಾ ಸಂಸ್ಥೆಗಳಲ್ಲೊಂದು
– ಪ್ರತಿ ಕುಟುಂಬದ ಆರ್ಥಿಕ, ಸೌಕರ್ಯದ ಅಭಿವೃದ್ಧಿಗೆ ಒತ್ತು
– ಕೃಷಿಯೇತರ ಚಟುವಟಿಕೆ, ಇತರೆ ಕಾರ್ಯಕ್ರಮ ಸಂಘಟನೆ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಯಶಸ್ವಿಯಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ (ರಿ)ಇದೀಗ ಧಾರವಾಡ ಜಿಲ್ಲೆಯಲ್ಲಿ ವಿಸ್ತರಣೆ ಆಗಿ 14ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.

ಅತಿ ಸಣ್ಣ ರೈತರ ಆರ್ಥಿಕ ಸಬಲೀಕರಣದೊಂದಿಗೆ ಆರಂಭಗೊಂಡ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂದು ದೇಶದ ಪ್ರಮುಖ ಸ್ವಯಂ ಸೇವಾ ಸಂಸ್ಥೆಗಳಲ್ಲೊಂದಾಗಿದೆ. ಸುಮಾರು 40 ವರ್ಷಗಳ ಸುದೀರ್ಘ‌ ಪ್ರಯಾಣದಲ್ಲಿ ಹತ್ತು ಹಲವಾರು ಕಾರ್ಯಕ್ರಮ ಆಯೋಜಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮ ಆಯೋಜಿಸುತ್ತ ಬಂದಿದ್ದು, ಮಹಿಳಾ ಸಬಲೀಕರಣದೊಂದಿಗೆ ಸ್ವಾವಲಂಬನೆಯ ಬದುಕು, ಪಾಲುದಾರರ ಕುಟುಂಬಗಳ ಏಳ್ಗೆಗೆ ಕಾರಣವಾಗಿದೆ.

2009ರಲ್ಲಿ ಧಾರವಾಡ ಜಿಲ್ಲೆಯಲ್ಲಿ ಪಾದಾರ್ಪಣೆ ಮಾಡಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ (ರಿ)ಧಾರವಾಡ ಜಿಲ್ಲೆ ಪ್ರತಿ ಗ್ರಾಮದ ಮೂಲೆ ಮೂಲೆಯಲ್ಲಿ ಬಡವರ ಸರ್ವತೋಮುಖ ಬೆಳವಣಿಗೆಗೆ, ಸ್ವ-ಸಹಾಯ ಸಂಘ ಹಾಗೂ ಪ್ರಗತಿ ಬಂಧು ಗುಂಪುಗಳ ಮೂಲಕ ಪ್ರತಿ ಕುಟುಂಬದ ಆರ್ಥಿಕ ಹಾಗೂ ಮೂಲ ಸೌಕರ್ಯದ ಅಭಿವೃದ್ಧಿಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಕಳೆದ 14 ವರ್ಷಗಳಿಂದ ಆಯೋಜಿಸಿದೆ.

ಧರ್ಮಸ್ಥಳ ಧರ್ಮಾಧಿಕಾರಿಗಳಾದ ಪೂಜ್ಯ ಡಾ|ಡಿ. ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ನೇತೃತ್ವದಲ್ಲಿ ಪೂಜ್ಯರ ಕರ್ಮಭೂಮಿ ಎಂದೇ ಕರೆಯಲ್ಪಡುವ ಧಾರವಾಡ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ಏಳ್ಗೆಗೆ ತನ್ನದೇ ಆದ ರೂಪುರೇಷೆಗಳನ್ನು ಗ್ರಾಮಮಟ್ಟದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ಸಿನ ಪಥದಲ್ಲಿದೆ.

ಯೋಜನೆಯ ಮಾನ್ಯ ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿ ಡಾ|ಎಲ್‌.ಹೆಚ್‌. ಮಂಜುನಾಥರವರ ಮಾರ್ಗದರ್ಶನ, ಮಾನ್ಯ ಮುಖ್ಯ ನಿರ್ವಹಣಾಧಿ ಕಾರಿ ಅನಿಲಕುಮಾರ ಅವರ ಸೂಕ್ತ ಸಲಹೆ, ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾದ ದುಗ್ಗೆಗೌಡ ಅವರ ಮುಂದಾಳತ್ವದಲ್ಲಿ ಜಿಲ್ಲಾ ನಿರ್ದೇಶಕರ ತಂಡ ಹಾಗೂ ಸಿಬ್ಬಂದಿ ಗ್ರಾಮೀಣ ಮಟ್ಟದ ಕುಟುಂಬಸ್ಥರ ಸಬಲೀಕರಣಕ್ಕೆ ಪೂರಕವಾದ ಕೃಷಿಯೇತರ ಚಟುವಟಿಕೆಯೊಂದಿಗೆ ಇತರೆ ಕಾರ್ಯಕ್ರಮಗಳನ್ನು ಸಂಘಟಿಸಿದ್ದು, ಇದರ ಪಕ್ಷಿನೋಟ ಇಲ್ಲಿದೆ.

ಸ್ವಸಹಾಯ ಸಂಘಗಳ ಬಲವರ್ಧನೆ: ದುರ್ಬಲ ವರ್ಗದ ಕುಟುಂಬಗಳಿಗೆ ಕುಟುಂಬ ನಿರ್ವಹಣೆಗೆ ಸಹಾಯ ಹಸ್ತ ನೀಡುವ‌ ಉದ್ದೇಶದಿಂದ ಗ್ರಾವå ಮಟ್ಟದಲ್ಲಿ ಸ್ವ-ಸಹಾಯ ಮತ್ತು ಪ್ರಗತಿ ಬಂಧು ಗುಂಪುಗಳನ್ನು ರಚಿಸಲಾಗಿದ್ದು, ಪ್ರಸ್ತುತ 17510 ಸಂಘದಲ್ಲಿ 164199 ಕುಟುಂಬ ಸದಸ್ಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಾಗಿದ್ದು, ಯೋಜನೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಆರ್ಥಿಕ ಸಬಲೀಕರಣ: ಯೋಜನೆಯ ಪಾಲುದಾರ ಕುಟುಂಬಗಳಿಗೆ ಅಗತ್ಯವಿರುವ ಹಣಕಾಸು ಸೌಲಭ್ಯ ಪಡೆಯಲು ಪ್ರಗತಿನಿಧಿ  ಕಾರ್ಯಕ್ರಮ ಮೂಲಕ ಅತಿ ಸಣ್ಣ ಉಳಿತಾಯ ಮೊತ್ತದಲ್ಲಿ ಶಿಸ್ತುಬದ್ಧವಾದ ಆರ್ಥಿಕ ವ್ಯವಹಾರವನ್ನು ಗುಂಪಿನ ಎಲ್ಲಾ ಸದಸ್ಯರ ಒಮ್ಮತದ ಮೇರೆಗೆ ವ್ಯವಹರಿಸಲಾಗುತ್ತಿದೆ.

ಬ್ಯಾಂಕ್‌ನ ಪ್ರತಿನಿಧಿ ಯಾಗಿ ಸಾಲದ ವಿನಿಯೋಗ: ಆರ್ಥಿಕ ವ್ಯವಹಾರವನ್ನು IDBI Bank ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ BC/BC Trust ಆಗಿ ಕರ್ತವ್ಯ ನಿರ್ವಹಿಸುತ್ತಿದೆ. ಸ್ವ-ಸಹಾಯ ಸಂಘದ ಕುಟುಂಬ ಸದಸ್ಯರ ಬೇಡಿಕೆ ಮೇರೆಗೆ ಬ್ಯಾಂಕ್‌ನ ಸಹಕಾರದೊಂದಿಗೆ ಸಮಯಕ್ಕೆ ಸರಿಯಾಗಿ ಸಾಲದ ವ್ಯವಸ್ಥೆ ಕಲ್ಪಿಸಲಾಗಿದೆ. ಇದೀಗ 320.91 ಕೋಟಿ ರೂ. ಮೊತ್ತದ ಸಾಲ ನೀಡಲಾಗಿದ್ದು, 451.08 ಕೋಟಿ ರೂ. ಮೊತ್ತ ಚಾಲ್ತಿಯಲ್ಲಿದ್ದು, 126984 ಸದಸ್ಯರಿಗೆ ಬ್ಯಾಂಕ್‌ನಿಂದ ಸಾಲ ಒದಗಿಸಲಾಗಿದೆ. ಸಾಲದ ಉದ್ದೇಶ, ಸಾಲ ವಿತರಣೆ, ಮರುಪಾವತಿ ಅನುಪಾಲನೆ, ಗುಂಪಿನ ಶ್ರೇಣೀಕರಣ ಕುರಿತಂತೆ ವಿಮರ್ಶಿಸಿ, ಗುಂಪಿನ ಸದಸ್ಯರ ಸಾಲದ ಉದ್ದೇಶ ಪರಿಗಣಿಸಿ ಆರ್ಥಿಕ ವ್ಯವಹಾರ ಮಾಡಲಾಗುತ್ತಿದೆ.

ಗುಂಪಿನ ಸದಸ್ಯರ ಬಯೋಮೆಟ್ರಿಕ್‌ ಎನ್ರೊàಲ್‌ಮೆಂಟ್‌ ಪ್ರಕ್ರಿಯೆ: ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಸಂಘದ ಎಲ್ಲಾ ಸದಸ್ಯರಿಗೆ ಮುಂದಿನ ದಿನಗಳಲ್ಲಿ ಪ್ರಗತಿನಿಧಿ  ವಿತರಣೆಯ ಸರಳೀಕರಣದ ಉದ್ದೇಶದಿಂದ ಬಯೋಮೆಟ್ರಿಕ್‌ ಮೂಲಕ ಸದಸ್ಯರ ಬೆರಳಚ್ಚು ಸಂಗ್ರಹಿಸುತ್ತಿದ್ದು, 162371 ಸದಸ್ಯರ ಬಯೋಮೆಟ್ರಿಕ್‌ ಎನ್ರೊಲ್‌ಮೆಂಟ್‌ ಮಾಡುವ ಪೈಕಿ ಇದುವರೆಗೂ 114476 ಸದಸ್ಯರ ಬಯೋಮೆಟ್ರಿಕ್‌ ಎನ್ರೊಲ್‌ಮೆಂಟ್‌ ಮಾಡಲಾಗಿರುತ್ತದೆ. ಗುಂಪಿನಲ್ಲಾಗುವ ಆರ್ಥಿಕ ವ್ಯವಹಾರಕ್ಕೆ ಸಂಘದ ಸದಸ್ಯರೆಲ್ಲರೂ ಸೇರಿ ನೀಡುವ ಭದ್ರತೆಗೆ ಬೆರಳಚ್ಚು ಪ್ರಕ್ರಿಯೆ ಪಾರದರ್ಶಕವಾಗಿದೆ.

ತಂತ್ರಜ್ಞಾನ ಅಳವಡಿಕೆ, ಶ್ರೇಣೀಕರಣ: ಸ್ವಸಹಾಯ ಸಂಘದ ಸದಸ್ಯರ ಉಳಿತಾಯ ಸಾಲ ವಿತರಣೆ ಮರುಪಾವತಿಯನ್ನು ತಂತ್ರಜ್ಞಾನ ಅಳವಡಿಕೆ ಮೂಲಕ ಅನುಪಾಲನೆ ಮಾಡಲಾಗುತ್ತಿದೆ. ಈ ಎಲ್ಲಾ ಒದಗಿಸಲಾದ ಮಾಹಿತಿಗಳನ್ನು ಗಣಕೀಕರಣ ಮೂಲಕ ಸಂಗ್ರಹಿಸಿ ಪ್ರತಿ ತಿಂಗಳು ಸದಸ್ಯರು ಮಾಡಲಾದ ಆರ್ಥಿಕ ವ್ಯವಹಾರ ವರದಿಯನ್ನು ಗುಂಪಿನ ಸದಸ್ಯರಿಗೆ ತಲುಪಿಸಲಾಗುತ್ತಿದೆ. ಅರ್ಥಿಕ ವ್ಯವಹಾರದ ಸಮರ್ಪಕತೆಗೆ ಎಲ್ಲಾ ಸದಸ್ಯರ ಬೆರಳಚ್ಚು ಸಂಗ್ರಹಣೆಯನ್ನು ತಂತ್ರಾಂಶ ಮೂಲಕ ಸಂಗ್ರಹಣೆ ಮಾಡಿ ಸಂಘದ ಗುಣಮಟ್ಟವನ್ನು ಬಿಂಬಿಸುವ ಸಂಘಗಳ ಶ್ರೇಣೀಕರಣ(ಗ್ರೇಡಿಂಗ್‌) ಪ್ರಕ್ರಿಯೆಯನ್ನು ಸಂಪೂರ್ಣವಾಗಿ ತಂತ್ರಜ್ಞಾನ ಮೂಲಕ ಹೊರಹೊಮ್ಮುವಂತೆ ವರದಿ ತಯಾರಿಸಿ, ಪ್ರತಿ ತಿಂಗಳು ಗುಂಪಿಗೆ ನೀಡಲಾಗುತ್ತಿದೆ. ಸಂಘದ ಗುಣಮಟ್ಟಕ್ಕೆ ಈ ವರದಿ ಪಾರದರ್ಶಕವಾದ ಕನ್ನಡಿಯಾಗಿದೆ.

ಧಾರವಾಡದಲ್ಲಿ ಸಿರಿಧಾನ್ಯ ಮೌಲ್ಯವರ್ಧನ ಕೇಂದ್ರ: ರಾಜ್ಯದ ಪಾರಂಪರಿಕ ಬೆಳೆಗಳಾದ ಸಿರಿಧಾನ್ಯಗಳ ಉತ್ಪಾದನೆ ಹಾಗೂ ಉತ್ಪಾದನಾ ಬಳಕೆ ಹೆಚ್ಚಿಸುವ ದೃಷ್ಟಿಯಿಂದ ಧಾರವಾಡದಲ್ಲಿ ಸಿರಿಧಾನ್ಯ ಮೌಲ್ಯವರ್ಧನ ಘಟಕ ತಯಾರಿಸಲಾಗಿದ್ದು, ರಾಜ್ಯಾದ್ಯಂತ ಮಾರುಕಟ್ಟೆ ಘಟಕ ರಚಿಸಿ ಸಿರಿಧಾನ್ಯ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಸಿರಿಧಾನ್ಯ ಉತ್ಪನ್ನಗಳು ಡಯಾಬಿಟಿಸ್‌, ನರ ಸಂಬಂಧಿ ತ ಕಾಯಿಲೆಗಳಿಗೆ ಆರೋಗ್ಯಕರ ಆಹಾರವಾಗಿವೆ.

CHSC ಕಾರ್ಯಕ್ರಮ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕರ್ನಾಟಕ ಸರಕಾರದ ಸಹಭಾಗಿತ್ವದಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರು ತಮ್ಮ ಕೃಷಿ ಕೆಲಸಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ರೈತ ಯಂತ್ರೋಪಕರಣ ಬಾಡಿಗೆ ಕೇಂದ್ರ(ಸಿಎಚ್‌ಎಸ್‌ಸಿ) ಆರಂಭಿಸಲಾಗಿದೆ. ಪ್ರತಿಯೊಂದು ಕೇಂದ್ರದಲ್ಲೂ ಟ್ರಾಕ್ಟರ್‌, ಟಿಲ್ಲರ್‌, ನಾಟಿಯಂತ್ರ, ಕಟಾವು ಯಂತ್ರ, ಇತರೆ ಅಗತ್ಯ ಯಂತ್ರಗಳನ್ನು ಖರೀದಿಸಿ ಬಾಡಿಗೆಗೆ ಇರಿಸಲಾಗಿದೆ. ಪ್ರತಿಯೊಂದು ಕೇಂದ್ರಕ್ಕೂ ಕರ್ನಾಟಕ ಸರಕಾರ 55 ಲಕ್ಷ ರೂ.ದಂತೆ 90 ಕೋಟಿ ರೂ. ಹಾಗೂ ಯೋಜನೆ ವತಿಯಿಂದ 64 ಕೋಟಿ ರೂ. ಪಾಲು ಬಂಡವಾಳ ಒದಗಿಸಲಾಗಿದೆ. ಯಂತ್ರೋಪಕರಣಗಳ ಬಾಡಿಗೆ ದರವನ್ನು ಜಿಲ್ಲಾಮಟ್ಟದಲ್ಲಿ ಸರಕಾರದಿಂದ ರಚಿಸಲಾಗಿರುವ ಸ್ಥಾಯಿ ಸಮಿತಿ ನಿರ್ಧರಿಸುತ್ತದೆ.

ಮಾರುಕಟ್ಟೆಯ ಬಾಡಿಗೆ ದರಕ್ಕಿಂತ ಶೇ. 30 ಕಡಿಮೆ ಇದೆ. ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 5 CHSC ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಇದುವರೆಗೂ 7069 ಗಂಟೆಗಳ ಕೆಲಸ ಆಗಿರುತ್ತದೆ.

ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ: ದುರ್ಬಲ ವರ್ಗದ ಮಹಿಳೆಯರಲ್ಲಿ ಕುಟುಂಬ ನಿರ್ವಹಣಾ ಜಾಣ್ಮೆ, ಹಣಕಾಸು ವ್ಯವಹಾರ ಜ್ಞಾನ, ಮಕ್ಕಳ ಶಿಕ್ಷಣ, ಪೌಷ್ಟಿಕ ಆಹಾರ ಮತ್ತು ವೈಯಕ್ತಿಕ ಶುಚಿತ್ವ, ಪರಿಸರ ಪ್ರಜ್ಞೆ, ನಾಗರಿಕ ಸೌಲಭ್ಯಗಳ ಬಳಕೆ ಇತ್ಯಾದಿ ಉದ್ದೇಶಗಳನ್ನಿಟ್ಟುಕೊಂಡು ಯೋಜನೆಯು ಶ್ರೀಮತಿ ಹೇಮಾವತಿ ವೀ. ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ ಆರಂಭಿಸಲಾಯಿತು. ಕೇಂದ್ರದಲ್ಲಿ ಮಹಿಳಾ ಸದಸ್ಯರಿಗೆ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದ್ದು, ಮಹಿಳೆಯರಿಗೆ ಜ್ಞಾನಾರ್ಜನೆ ಮಾಡಲು ಸಹಕಾರಿಯಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಸ್ತುತ ವರ್ಷ 59990 ಮಹಿಳೆಯರಿಗೆ 1029 ಕಾರ್ಯಕ್ರಮಗಳ ಮೂಲಕ ಪ್ರೇರಣೆ ನೀಡಲಾಗಿದ್ದು, ಒಟ್ಟು 173 ಕೇಂದ್ರಗಳ, 888 ಸ್ವ-ಸಹಾಯ ಸಂಘಗಳಲ್ಲಿ, 8660 ಸದಸ್ಯರು ಒಳಗೊಂಡಿರುತ್ತಾರೆ.

Youtube Channel Subscibe: ಪ್ರಸ್ತುತ ವರ್ಷದಲ್ಲಿ ಸದಸ್ಯರು 797 Subscibe ಮಾಡಿಸಿದ್ದು, ಇದುವರೆಗೂ ಒಟ್ಟು 3157 ಸದಸ್ಯರನ್ನು Subscibe ಆಗಿರುತ್ತವೆ.

ಉದ್ಯಮಶೀಲ ತರಬೇತಿ ಕಾರ್ಯಗಾರ: ಪ್ರಸ್ತುತ ವರ್ಷ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಸ್ವ ಉದ್ಯೋಗ ಮಾಡುತ್ತಿರುವ ಹಾಗೂ ಸ್ವ ಉದ್ಯೋಗ ಮಾಡಲು ಆಸಕ್ತಿ ಇರುವ 600 ಮಹಿಳೆಯರನ್ನು ಗುರುತಿಸಿ ಆ ಸದಸ್ಯರಿಗೆ 2 ದಿನದ ಉದ್ಯಮಶೀಲ ತರಬೇತಿ ಕಾರ್ಯಾಗಾರವನ್ನು ರುಡ್‌ಶೆಟ್‌ ತರಬೇತಿ ಸಂಸ್ಥೆ ಸಹಯೋಗದಲ್ಲಿ 7 ತಾಲೂಕಿನಲ್ಲಿ ಹಮ್ಮಿಕೊಂಡು 600 ಜನರಿಗೆ ತರಬೇತಿ ನೀಡಿದ್ದು, ತರಬೇತಿ ಪರಿಣಾಮದಿಂದ 550 ಜನ ಸ್ವ ಉದ್ಯೋಗ ಮಾಡುತ್ತಿದ್ದಾರೆ. ಪ್ರಸ್ತುತ ವರ್ಷ ಜಿಲ್ಲಾ ವ್ಯಾಪ್ತಿಯಲ್ಲಿ 118 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ವಾತ್ಸಲ್ಯ ಕಿಟ್‌ ವಿತರಿಸಲಾಗಿದೆ. ಪ್ರತಿ ತಿಂಗಳು ಫಲಾನುಭವಿಗಳಿಗೆ ಮಿಕ್ಸ್‌ ವಿತರಿಸಲಾಗುತ್ತಿದೆ.

ವಾತ್ಸಲ್ಯ ಮನೆ ರಿಪೇರಿ ಶೌಚಾಲಯ ರಚನೆ: ವಾತ್ಸಲ್ಯ ಮನೆ ರಚನೆ ಕಾರ್ಯಕ್ರಮದಡಿ ಯಲ್ಲಿ ತೀರಾ ಬಡ ಕುಟುಂಬಗಳನ್ನು ಪರಿಗಣಿಸಿ ಮೂಲ ಸೌಕರ್ಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರಸ್ತುತ ವರ್ಷ ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ 3 ಶೌಚಾಲಯ ರಚನೆ, 1 ಮನೆ ರಿಪೇರಿ ಕಾಮಗಾರಿ ಮುಗಿದಿರುತ್ತದೆ. 3ಮನೆ ರಿಪೇರಿ ಕಾಮಗಾರಿ ಹಂತದಲ್ಲಿರುತ್ತದೆ.

ಸುಜ್ಞಾನನಿ ಧಿ ಶಿಷ್ಯವೇತನ ಕಾರ್ಯಕ್ರಮ: ಜಿಲ್ಲಾ ವ್ಯಾಪ್ತಿಯಲ್ಲಿ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣಕ್ಕೆ ಅನುಕೂಲವಾಗುವಂತೆ ಇದುವರೆಗೂ ಒಟ್ಟು 620 ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುತ್ತಿದ್ದು ಒಟ್ಟು 4.96 ಲಕ್ಷ ರೂ. ಮೊತ್ತ ವಿತರಿಸಲಾಗಿದೆ.

ಸಮುದಾಯ ಭವನ-ದೇವಸ್ಥಾನ ಜೀರ್ಣೋದ್ಧಾರ: ಜಿಲ್ಲಾ ವ್ಯಾಪ್ತಿಯಲ್ಲಿ ಇದುವರೆಗೆ 42 ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡಗಳಿಗೆ 63.00 ಲಕ್ಷ ರೂ.ಅನುದಾನ ನೀಡಲಾಗಿದೆ. ಪ್ರಸ್ತುತ ವರ್ಷ 12 ದೇವಸ್ಥಾನಗಳಿಗೆ 17.50 ಲಕ್ಷ ರೂ. ಹಾಗೂ ಇದುವರೆಗೆ ಒಟ್ಟು 78 ದೇವಸ್ಥಾನಗಳಿಗೆ 116.50 ಲಕ್ಷ ರೂ. ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನ ನೀಡಲಾಗಿದೆ. ಸಮುದಾಯ ಭವನ ಕಟ್ಟಡಗಳಿಗೆ 17.00 ಲಕ್ಷ ರೂ. ಪ್ರಸ್ತುತ ವರ್ಷದಲ್ಲಿ ನೀಡಿದ್ದು ಇದುವರೆಗೆ ಒಟ್ಟು 65.00 ಲಕ್ಷ ರೂ. ಅನುದಾನ ನೀಡಲಾಗಿದೆ.

ಮಾಶಾಸನ: ಪ್ರಸ್ತುತ ವರ್ಷ 271 ನಿರ್ಗತಿಕ ಕುಟುಂಬಗಳಿಗೆ ಒಟ್ಟು 2.09 ಲಕ್ಷ ರೂ. ಮೊತ್ತ ವಿತರಿಸಲಾಗಿದೆ. ಇದುವರೆಗೂ ಒಟ್ಟು 872 ನಿರ್ಗತಿಕ ಕುಟುಂಬಗಳಿಗೆ ತಲಾ 750 ರೂ.ಗಳಿಂದ 1000 ರೂ.ವರೆಗೆ ಮಾಶಾಸನ ನೀಡಲಾಗುತ್ತಿದ್ದು ಇದುವರೆಗೆ ಒಟ್ಟು 7.42 ಕೋಟಿ ರೂ. ಮೊತ್ತ ವಿತರಿಸಲಾಗಿದೆ.

ಖಐಈಆಐ ಸಾಲ ವಿತರಣೆ: ಪ್ರಸ್ತುತ ವರ್ಷದಲ್ಲಿ 258 ಕುಂಟುಂಬಗಳಲ್ಲಿ 7.68 ಕೋಟಿ ರೂ. ಖಐಈಆಐ ಸಾಲ ವಿತರಿಸಲಾಗಿದೆ. ಇದುವರೆಗೂ ಒಟ್ಟು 19056 ಕುಟುಂಬಗಳಿಗೆ 66 ಕೋಟಿ ರೂ. ಸಾಲ ವಿತರಿಸಲಾಗಿದೆ. ಇವುಗಳ ಪೈಕಿ 858 ಕುಂಟುಂಬಗಳು ಖಐಈಆಐ ಸಾಲದ ಬಳಕೆ ಮಾಡಿಕೊಂಡು ಸ್ವ-ಉದ್ಯೋಗ ಮಾಡಿ ಸಾಲದಿಂದಾಗಿ ತಮ್ಮ ಬದುಕು ಕಟ್ಟಿಕೊಂಡಿರುತ್ತಾರೆ.

ಜನಜಾಗೃತಿ ಕಾರ್ಯಕ್ರಮ: ದುಶ್ಚಟ ಮುಕ್ತ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಪೂಜ್ಯ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಕೈಗೊಂಡಿರುವ ಬಹು ಮುಖ್ಯ ಕಾರ್ಯಕ್ರಮ ಜನಜಾಗೃತಿ. ಜನಜಾಗೃತಿ ಕಾರ್ಯಕ್ರಮ ಮೂಲಕ ಮದ್ಯವ್ಯಸನಿಗಳಿಗೆ ಚಿಕಿತ್ಸೆಗಾಗಿ ಮದ್ಯವರ್ಜನ ಶಿಬಿರಗಳನ್ನು ನಡೆಸಲಾಗುತ್ತಿದೆ. ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಇದುವರೆಗೆ 18 ಮದ್ಯವರ್ಜನ ಶಿಬಿರ ನಡೆಸಿದ್ದು, 250 ಶಿಬಿರಾರ್ಥಿಗಳು ಮದ್ಯವರ್ಜಿಸಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.

ಶುದ್ಧಗಂಗಾ ಯೋಜನೆ: ನಮ್ಮ ರಾಜ್ಯದ ಜನತೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಾಗಿ ಹಲವಾರು ಶುದ್ಧಜಲ ಘಲಕಗಳನ್ನು ರಚಿಸಲಾಗಿದೆ. ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 2 ಶುದ್ಧಜಲ ಘಟಕಗಳನ್ನು ರಚಿಸಿದ್ದು, ಒಟ್ಟು 250 ಕುಟುಂಬಗಳು ಪ್ರತಿದಿನ 5000 ಲೀಟರ್‌ ಶುದ್ಧ ಕುಡಿಯುವ ನೀರು ಬಳಸುತ್ತಿದ್ದಾರೆ.

ನಮ್ಮೂರು ನಮ್ಮ ಕೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರ ನೇತೃತ್ವದಲ್ಲಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮ ಆರಂಭಿಸಿದ್ದು, ಸ್ಥಳೀಯರ ಸಹಭಾಗಿತ್ವದಲ್ಲಿ ಕೆರೆಗಳನ್ನು ಪುನಶ್ಚೇತನಗೊಳಿಸಲಾಗುತ್ತಿದೆ. ಇದುವರೆಗೂ ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 25 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದ್ದು, ಕೆರೆ ಹಸ್ತಾಂತರ ಮಾಡಲಾಗಿದೆ.

ಸಾಮಾನ್ಯ ಸೇವಾ ಕೇಂದ್ರ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೇಜನೆಯು ಕೇಂದ್ರ ಸರಕಾರದ ಇ-ಗವರ್ನೆನ್ಸ್‌ ಇಂಡಿಯಾ ಲಿಮಿಟೆಡ್‌ (ಮಿನಿಸ್ಟ್ರಿ ಆಫ್‌ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಇನಾ ರ್ಮೇಶನ್‌ ಟೆಕ್ನಾಲಜಿ)ಜತೆ ಒಪ್ಪಂದ ಮಾಡಿಕೊಂಡು ಸರಕಾರದ ಸೌಲಭ್ಯಗಳನ್ನು ಜನರಿಗೆ ಮುಟ್ಟಿಸಲು ರಾಜ್ಯಾದ್ಯಂತ ಸಾಮಾನ್ಯ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ. ಸರಕಾರದ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಂತ್ರಜ್ಞಾನ ಮೂಲಕ ಅತ್ಯಂತ ಪಾರದರ್ಶಕತೆಯಿಂದ ಅತೀ ಕಡಿಮೆ ಅವ ಧಿಯಲ್ಲಿ ದೊರಕಿಸಿಕೊಡುವ ವ್ಯವಸ್ಥೆಯಾಗಿದೆ. ಒಂದು ಗ್ರಾಮ ಒಂದು ಸಿಎಸ್‌ಸಿ ಪರಿಕಲ್ಪನೆಯಲ್ಲಿ ಪ್ರತಿ ಗ್ರಾಮಗಳಲ್ಲೂ ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ಸರಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಈ ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಈ ಸೇವಾಕೇಂದ್ರದ ಮೂಲಕ ಸರಕಾರದ 700 ಸೇವೆಗಳನ್ನು ಪಡೆಯಲು ಅವಕಾಶ ಇರುತ್ತದೆ. ಪ್ರಸ್ತುತ ಜಿಲ್ಲಾ ವ್ಯಾಪ್ತಿಯ 7 ತಾಲೂಕಿನಲ್ಲಿ 246 ಸಾಮಾನ್ಯ ಸೇವಾ ಕೇಂದ್ರಗಳಿದ್ದು, 239 ಸೇವಾ ಕೇಂದ್ರಗಳಲ್ಲಿ ಹಣ ಸಂಗ್ರಹಿಸಲಾಗುತ್ತಿದೆ. ಪ್ರಸ್ತುತ ವರ್ಷದಲ್ಲಿ ಇದುವರೆಗೂ ಒಟ್ಟು 255119 ಸರಕಾರದ ಸೇವೆ ಜನಸಾಮಾನ್ಯರಿಗೆ ಒದಗಿಸಲಾಗಿದೆ.

1968ನೇ ಅಕ್ಟೋಬರ್‌ 24ರಂದು ಪೂಜ್ಯ ವೀರೇಂದ್ರ ಹೆಗ್ಗಡೆಯವರು ತಮ್ಮ 20ನೇ ವರ್ಷದ ಪ್ರಾಯದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿಯಾಗಿ ಪಟ್ಟವನ್ನೇರಿರುತ್ತಾರೆ. ಕ್ಷೇತ್ರದ ಧರ್ಮಾಧಿ ಕಾರಿಯಾಗಿ ನಾಡಿನ ಹಿತ ಗಮನದಲ್ಲಿರಿಸಿಕೊಂಡು ಅವಿಶ್ರಾಂತವಾಗಿ ದುಡಿಯುತ್ತಿರುವ ಪೂಜ್ಯರು, ಐದು ದಶಕಗಳಷ್ಟು ದೀರ್ಘ‌ ಕಾಲ ಮನುಕುಲಕ್ಕೆ ಹಲವಾರು ವಿನೂತನ ಯೋಜನೆಗಳನ್ನು ನೀಡಿರುತ್ತಾರೆ. ಅವುಗಳನ್ನು ಅನುಷ್ಠಾನಗೊಳಿಸಲು ಸ್ವಯಂ ಪ್ರಯತ್ನಪಟ್ಟಿರುತ್ತಾರೆ. ಇದರಿಂದ ಕೋಟ್ಯಂತರ ಜನರ ಬದುಕು ಬದಲಾಗಿರುತ್ತದೆ.
– ಸತೀಶ ನಾಯ್ಕ, ಜಿಲ್ಲಾ ನಿರ್ದೇಶಕರು, ಧಾರವಾಡ ಜಿಲ್ಲೆ

ಸಂಪೂರ್ಣ ಸುರಕ್ಷಾ
ಪಾಲುದಾರ ಕುಟುಂಬಗಳ ಆರೋಗ್ಯ ಮತ್ತಿತರೆ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಉದ್ದೇಶದಿಂದ ಸಂಪೂರ್ಣ ಸುರûಾ ಯೋಜನೆ ಆರಂಭಗೊಳಿಸಲಾಯಿತು. ಸಂಪೂರ್ಣ ಸುರಕ್ಷಾ ಯೋಜನೆಯಲ್ಲಿ ಪ್ರತಿ ವರ್ಷ ಹತ್ತು ಲಕ್ಷಕ್ಕೂ ಮಿಕ್ಕಿದ ಸದಸ್ಯರು ನೋಂದಾಯಿಸುತ್ತಿದ್ದು, ಈ ವರ್ಷ 190730 ಸದಸ್ಯರು ನೋಂದಾಯಿಸಿರುತ್ತಾರೆ. ನಿಗದಿತ ವಂತಿಗೆ ನೀಡಿ ಸದಸ್ಯರಾದವರಿಗೆ ವಿಮಾ ಕಂಪನಿಗಳಿಂದ ಚಿಕಿತ್ಸಾ ವೆಚ್ಚ ಮರುಪಾವತಿ, ಹೆರಿಗೆ ವೆಚ್ಚ ಮರುಪಾವತಿ, ಅಪಘಾತ ವಿಮೆ, ಮರಣ ಸಾಂತ್ವನ ಸೌಲಭ್ಯ ಒದಗಿಸಲಾಗುತ್ತಿದೆ. ಇದರಿಂದ ಜನರ ಬದುಕಿನಲ್ಲಿ ವಿಶೇಷ ಭದ್ರತೆ ಮೂಡಿರುತ್ತದೆ.

ಜ್ಞಾನದೀಪ ಶಾಲಾ ಶಿಕ್ಷಣ ಕಾರ್ಯಕ್ರಮ
ಕರ್ನಾಟಕದ ರಾಜ್ಯದ ವಿವಿಧೆಡೆಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದ್ದು, ಶಿಕ್ಷಕರ ಕೊರತೆಯಿರುವ ಶಾಲೆಗಳಿಂದ ಸ್ವಯಂ ಸೇವಾ ನೆಲೆಯಲ್ಲಿ ಶಿಕ್ಷಕರ ಒದಗಿಸಲಾಗಿದೆ. ಶಾಲಾ ಕಟ್ಟಡ ರಚನೆ, ಆವರಣ ರಚನೆ, ಆಟದ ಮೈದಾನ, ಶೌಚಾಲಯ ಮೂತ್ರದೊಡ್ಡಿಗಳ ರಚನೆ, ಶುದ್ಧ ಕುಡಿಯುವ ನೀರಿನ ಪೂರೈಕೆ, ಶಾಲಾ ಕಟ್ಟದ ದುರಸ್ತಿ ಕ್ರೀಡಾ ಹಾಗೂ ಬೋಧನಾ ಸಾಮಗ್ರಿ ಪೂರೈಕೆ, ಡೆಸ್ಕ್ ಬೆಂಚುಗಳ ಒದಗಿಸುವುದು ಇತ್ಯಾದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ತನಕ ಧಾರವಾಡ ಜಿಲ್ಲೆಯಲ್ಲಿ ಸರಕಾರಿ, ಖಾಸಗಿ ಶಾಲೆಗಳ ಅಭಿವೃದ್ಧಿಗಾಗಿ 250 ಶಿಕ್ಷಣ ಸಂಬಂಧಿ  ಕಾಮಗಾರಿಗಳಿಗೆ ಮತ್ತು ಕಾರ್ಯಕ್ರಮಗಳಿಗೆ 1.56 ಕೋಟಿ ರೂ.ಅನುದಾನ ಒದಗಿಸಲಾಗಿದೆ.

ವಿಮಾ ಕಾರ್ಯಕ್ರಮ
ಜಿಲ್ಲಾ ವ್ಯಾಪ್ತಿಯಲ್ಲಿ 16796 ಸದಸ್ಯರಿಗೆ ಮೈಕ್ರೋಬಚತ್‌ ಪಾಲಸಿ ಮಾಡಿಸಲಾಗಿದೆ. 2088 ಸದಸ್ಯರಿಗೆ ಪ್ರಗತಿ ರûಾ ವಿಮಾ ಸೌಲಭ್ಯ ಒದಗಿಸಲಾಗಿದೆ. ಪ್ರಸ್ತುತ ವರ್ಷ ಭೀಮಾಜ್ಯೋತಿ ಹೊಸ ಪಾಲಿಸಿ ಆರಂಭವಾಗಿದ್ದು, 799 ಭೀಮಾಜ್ಯೋತಿ ಹೊಸ ಪಾಲಸಿಗಳ ರಚನೆ ಆಗಿರುತ್ತದೆ.

ನೆರೆಹಾವಳಿ
ನೆರೆಹಾವಳಿ ಸಂದರ್ಭ ಯೋಜನೆಯು ವಿಪತ್ತು ನಿರ್ವಹಣೆ ತಂಡಗಳೊಂದಿಗೆ ಜನರ, ಪ್ರಾಣಿಗಳ ಸಂರಕ್ಷಣೆ ಮಾಡಿ, ಆಹಾರ, ಬಟ್ಟೆ, ರಗ್ಗು, ಚಾದರ್‌ ಹಾಗೂ ಬ್ಲ್ಯಾಂಕೆಟ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 26 ವಿಪತ್ತು ನಿರ್ವಹಣಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ.

ಕೋವಿಡ್‌-19
ಕೋವಿಡ್‌-19 ರೋಗ ತೀವ್ರಗತಿಯಲ್ಲಿ ಹರಡುತ್ತಿರುವ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಎಲ್ಲಾ ರೋಗಿಗಳಿಗೂ ಚಿಕಿತ್ಸೆ ನೀಡುವ ಉದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧಾರವಾಡ ಜಿಲ್ಲಾ ವ್ಯಾಪ್ತಿಯ ಆಸ್ಪತ್ರೆಗಳಿಗೆ 9 ಟನ್‌ ಆಮ್ಲಜನಕ, 20 ಕಾನ್ಸಂಟ್ರೇಟರ್‌, 3 ವೆಂಟಿಲೇಟರ್, 6 ಹೈ-ಪೊÉà ಮಷಿನ್‌ ವಿತರಿಸಲಾಯಿತು. ಕೋವಿಡ್‌ ರೋಗಿಗಳಿಗೆ ಹಾಗೂ ಮನೆಯವರಿಗೆ ಮನೆಯಿಂದ ಆಸ್ಪತ್ರೆಗೆ ಹಾಗೂ ಆಸ್ಪತ್ರೆಯಿಂದ ಮನೆಗೆ ತೆರಳಲು ವಾಹನದ ವ್ಯವಸ್ಥೆ ಮಾಡಲಾಯಿತು. ಯೋಜನೆಯ ಕಾರ್ಯಕರ್ತರಿಗೆ ಐಸೋಲೇಶನ್‌ ವಾರ್ಡ್‌ ವ್ಯವಸ್ಥೆ ಮಾಡಲಾಯಿತು. ಸಾರ್ವಜನಿಕರಿಗೆ ಆಹಾರ ಕಿಟ್‌ ವಿತರಿಸಲಾಯಿತು. ಕಾರ್ಯಕರ್ತರಿಗೆ ಕೋವಿಡ್‌ ಪರಿಹಾರನಿಧಿ  ಸೌಲಭ್ಯ ಒದಗಿಸಲಾಯಿತು. ಧಾರವಾಡ ಜಿಲ್ಲೆಯ ಎಲ್ಲಾ ಕಾರ್ಯಕರ್ತರಿಗೆ ವ್ಯಾಕ್ಸಿನೇಶನ್‌ ಹಾಕಿಸಲಾಯಿತು.

ನಿರಂತರ ಮಾಸಪತ್ರಿಕೆ
ರಾಜ್ಯದೆಲ್ಲೆಡೆ ನಡೆದ ಗ್ರಾಮಾಭಿವೃದ್ಧಿ ಚಟುವಟಿಕೆಗಳು, ಹೊಸ ಹೊಸ ಯೋಜನೆ, ತಂತ್ರಜ್ಞಾನ, ಸಮುದಾಯ ಕಾರ್ಯಕ್ರಮ, ಕೃಷಿಯೇತರ ಚಟುವಟಿಕೆ, ಬ್ಯಾಂಕೇತರ ಕಾರ್ಯಕ್ರಮಗಳನ್ನು ಬಿಂಬಿಸುವ ಪತ್ರಿಕೆಯಾಗಿದೆ. ಪತ್ರಿಕೆಯು ಅತೀ ಹೆಚ್ಚು ಪ್ರಾಮುಖ್ಯತೆ ಪಡೆದಿದ್ದು, ಓದುಗರ ಮೆಚ್ಚುಗೆ ಪಡೆದಿದೆ. ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಇದುವರೆಗೂ ಒಟ್ಟು 3500 ಸದಸ್ಯರು ನಿರಂತರ ಓದುಗರಾಗಿದ್ದಾರೆ.

ಪ್ರಗತಿ ರಕ್ಷಾ ಕವಚ ವಿಮಾ ಕಾರ್ಯಕ್ರಮ
ಭಾರತಿಯ ಜೀವ ವಿಮಾ ನಿಗಮದ ಸಹಭಾಗಿತ್ವದೊಂದಿಗೆ ಗ್ರಾಮಾಭಿವೃದ್ಧಿ ಯೋಜನೆ ತನ್ನ ಸ್ವಸಹಾಯ ಸಂಘದ ಸದಸ್ಯರಿಗೆ, ಅವರು ಪಡೆಯುವ ಪ್ರಗತಿನಿ ಧಿ ಸಾಲಕ್ಕೆ ಸದಸ್ಯರು ಮತ್ತು ವಿನಿಯೋಗದಾರರಿಗೆ ಸಾಲ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ವಿಮಾ ಕಾರ್ಯಕ್ರಮದನ್ವಯ ಅವರು ಪಡೆದ ಸಾಲಕ್ಕೆ ಮುಂದಿನ ಒಂದು ವರ್ಷದ ಅವ ಧಿಗೆ ವಿಮೆ ಲಭ್ಯವಿರುತ್ತದೆ. ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ 3 ವರ್ಷಗಳಿಂದ 1524 ಸದಸ್ಯರ ಮತ್ತು ಅವರ ಕುಟುಂಬದವರ ಮರಣಾರ್ಥ 8.25 ಕೋಟಿ ರೂ. ಸಾಲವನ್ನು ವಿಮಾ ಕಂಪನಿಯಿಂದ ಪಾವತಿಸಲಾಗಿದೆ.

ಜ್ಞಾನವಿಕಾಸ ತರಬೇತಿ ಕೇಂದ್ರ
ಯೋಜನೆಯು ತನ್ನ ಸಿಬ್ಬಂದಿಗಳಿಗೆ, ಪಾಲುದಾರರಿಗೆ ವಯಸ್ಸಿನ ಮಿತಿ, ಶಿಕ್ಷಣದ ಮಿತಿ ನೀಡದೇ ಅಧ್ಯಯನಾಸಕ್ತರಿಗೆ ಅಗತ್ಯ ಮಾಹಿತಿ ತರಬೇತಿ ನೀಡಲು ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಜ್ಞಾನವಿಕಾಸ ತರಬೇತಿ ಕೇಂದ್ರ ಸ್ಥಾಪಿಸಿದ್ದು, ಇದುವರೆಗೂ ತರಬೇತಿ ಕೇಂದ್ರದಲಿ ಬ್ಯುಟಿಶಿಯನ್‌, ವಿದ್ಯುತ್‌ ಚಾಲಿತ ಹೊಲಿಗೆ ಮಶಿನ್‌ನಲ್ಲಿ ಹೊಲಿಗೆ ತರಬೇತಿ, ಕಂಪೂÂಟರ್‌, ಸ್ವ-ಉದ್ಯೋಗ, ಬಟ್ಟೆ ಬ್ಯಾಗ್‌ ತಯಾರಿ, ಬೇಕರಿ, ಹೈನುಗಾರಿಕೆ, ಕೋಳಿ-ಕುರಿ ಸಾಕಣೆ, ಸಾವಯವ ಕೃಷಿ, ಬೇಡಿಕೆ ಆಧಾರಿತ ತರಬೇತಿ, ಸಿಬ್ಬಂದಿಗಳಿಗೆ ಸಾಮಥ್ಯಾìಭಿವೃದ್ಧಿ ತರಬೇತಿ, ಯೋಜನೆ ಸದಸ್ಯರನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಒಟ್ಟು 3461 ತರಬೇತಿಗಳನ್ನು ನಡೆಸಲಾಗಿದ್ದು, 138028 ಸದಸ್ಯರು ಭಾಗವಹಿಸಿರುತ್ತಾರೆ.

ಶ್ರದ್ಧಾ ಕೇಂದ್ರಗಳ ಸ್ವತ್ಛತಾ ಕಾರ್ಯಕ್ರಮ
ಪ್ರತಿ ವರ್ಷ ಆಗಸ್ಟ್‌ ತಿಂಗಳ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಹಾಗೂ ಜನವರಿ ತಿಂಗಳಿನಲ್ಲಿ ಮಕರ ಸಂಕ್ರಾಂತಿ ನಿಮಿತ್ತ ಊರಿನ ದೇವಸ್ಥಾನ, ಮಸೀದಿ, ಬಸದಿ, ಚರ್ಚ್‌ ಗಳನ್ನು ಸ್ವತ್ಛತೆಗೊಳಿಸಿ ಜನರಲ್ಲಿ ಸ್ವತ್ಛತಾ ಜಾಗೃತಿ ಮೂಡಿಸಲಾಗುತ್ತಿದೆ. ಇದುವರೆಗೂ ಒಟ್ಟು 5000 ಶ್ರದ್ಧಾ ಕೇಂದ್ರಗಳ ಸ್ವತ್ಛತಾ ಕಾರ್ಯಕ್ರಮ ಮಾಡಲಾಗಿದೆ.

ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳು
ಪರಿಸರ ಸಂರಕ್ಷಣೆಗಾಗಿ ಗೋಬರ್‌ಗ್ಯಾಸ್‌ ಬಳಕೆ, ಕುಗ್ರಾಮಗಳಲ್ಲಿ ವಿದ್ಯುತ್‌ ದೊರೆಯದ ಕುಟುಂಬಗಳಿಗೆ ಸೋಲಾರ್‌ ದೀಪ, ಬಡಜನರು ಅಡುಗೆ ಮಾಡಲು ಬಡ್ಡಿ ರಹಿತವಾದ ಕಡಿಮೆ ವೆಚ್ಚದ ಕುಕ್‌ಸ್ಟೋವ್‌ ಒದಗಿಸಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 15357 ಗ್ರೀನ್‌ವೇ ಕುಕ್‌ಸ್ಟೌವ್‌ ವಿತರಿಸಿದ್ದು, 9956 ಕುಟುಂಬಗಳಿಗೆ ಸೋಲಾರ್‌ ದೀಪ, ವಾಟರ್‌ ಹೀಟರ್‌ ಅಳವಡಿಸಲಾಗಿದ್ದು, 560.07 ಲಕ್ಷ ಅನುದಾನ ನೀಡಲಾಗಿದೆ. ಪ್ರಸ್ತುತ ವರ್ಷ ಜನಮಂಗಳ ಕಾರ್ಯಕ್ರಮದಡಿ ವಿಕಲಚೇತನರಿಗೆ 28 ವೀಲ್‌ಚೇರ್‌, 5 ವಾಕಿಂಗ್‌ ಸ್ಟಿಕ್‌, 21 ವಾಟರ್‌ ಬೆಡ್‌ ಇನ್ನಿತರೆ ಸಲಕರಣೆಗಳನ್ನು ವಿತರಿಸಲಾಗಿದೆ.

ಟಾಪ್ ನ್ಯೂಸ್

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

13-

Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ

AV-Bellad

Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್‌

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

2

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.